ಕಾಂಗ್ರೆಸ್ ಅಂತಿಮ ಪಟ್ಟಿ : ಇಬ್ರಾಹಿಂಗೆ ಟಿಕೆಟ್

ಮಂಗಳವಾರ ಬೆಳಗ್ಗೆ ಅಂತಿಮ ಪಟ್ಟಿಯನ್ನು ಪಕ್ಷದ ಕಚೇರಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಹೆಬ್ಬಾಳ ಕ್ಷೇತ್ರದಿಂದ ಜಾಫರ್ ಷರೀಫ್ ಅವರ ಮೊಮ್ಮಗ ರೆಹಮಾನ್ ಷರೀಫ್ ಟಿಕಟ್ ಪಡೆದಿದ್ದಾರೆ. ಕಾಂಗ್ರೆಸ್ ಚುನಾವಣೆಗೆ 222 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ, ದಾವಣಗೆರೆ ಉತ್ತರ ಮತ್ತು ಕಾಪು ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಬಾಕಿ ಉಳಿಸಿಕೊಂಡಿದೆ.
ಅಭ್ಯರ್ಥಿಗಳ ಪಟ್ಟಿ
ಹೆಬ್ಬಾಳ - ರೆಹಮಾನ್ ಷರೀಫ್
ರಾಜರಾಜೇಶ್ವರಿ ನಗರ - ಮುನಿರತ್ನ
ಪುತ್ತೂರು - ಶಕುಂತಲಾ ಶೆಟ್ಟಿ
ಭದ್ರಾವತಿ - ಸಿ.ಎಂ.ಇಬ್ರಾಹಿಂ
ಚಿಕ್ಕಬಳ್ಳಾಪುರ - ಡಾ.ಕೆ.ಸುಧಾಕರ್
ಮಾಲೂರು - ಚನ್ನಕೇಶವ
ಬೆಳಗಾವಿ ದಕ್ಷಿಣ - ಅನಿಲ್ ಪೊದ್ದಾರ್
ದಾವಣಗೆರೆ ಉತ್ತರ - ಎಸ್.ಎಸ್. ಮಲ್ಲಿಕಾರ್ಜುನ್
ಕಾಪು - ವಿನಯ್ ಕುಮಾರ್ ಸೊರಕೆ
ಪಟ್ಟಿಯ ಬದಲಾವಣೆ : ಶ್ರೀರಂಗಪಟ್ಟಣದಲ್ಲಿ ಹಿರಿಯ ನಟ ಅಂಬರೀಶ್ ಅವರ ವಿರೋಧದಿಂದಾಗಿ ರವೀಂದ್ರ ಶ್ರೀಕಂಠಯ್ಯ ಅವರಿಗೆ ನೀಡಿದ್ದ ಟಿಕೆಟ್ ಹಿಂಪಡೆಯಲಾಗಿದೆ. ಅವರ ಬದಲು ಎಸ್.ಎಲ್.ಲಿಂಗರಾಜು ಅವರಿಗೆ ಟಿಕೆಟ್ ನೀಡಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications