ಚಿತ್ರದುರ್ಗ : ಅಖಾಡದಲ್ಲಿರುವ ಅಂತಿಮ ಅಭ್ಯರ್ಥಿಗಳು

ಎಸ್.ಕೆ.ಬಸವರಾಜನ್, ಗೂಳಿಹಟ್ಟಿ ಶೇಖರ್, ಡಿ.ಸುಧಾಕರ್, ಎಂ.ಚಂದ್ರಪ್ಪ ಮುಂತಾದ ನಾಯಕರು ಈ ಬಾರಿಯ ಅಖಾಡದಲ್ಲಿದ್ದಾರೆ. ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಡಿ.ಸುಧಾಕರ್ ಈ ಬಾರಿ ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣೆಗೆ ಧುಮುಕಿದ್ದಾರೆ.
ವಿಧಾನಸಭೆ ಕಲಾಪದ ಮೇಲೆ ಅಂಗಿ ಹರಿದುಕೊಂಡು ಗೂಳಿಟ್ಟಿದ್ದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮತ್ತೊಮ್ಮೆ ಪಕ್ಷೇತರರಾಗಿಯೇ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಳ್ಳಾರಿ ಜಿಲ್ಲೆಯ ಬಿಎಸ್ಆರ್ ಪಕ್ಷದ ಫ್ಯಾನ್ ಗಾಳಿ ಚಿತ್ರದುರ್ಗ ಕಡೆಗೂ ಬೀಸುತ್ತಿದ್ದು, ಯಾವ ಪಕ್ಷಗಳು ಗೆಲುವು ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
ಚಳ್ಳಕೆರೆ ಕುದಾಪುರ ಮತ್ತು ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಅಮೃತ ಮಹಲ್ ಕಾವಲು ಭೂಮಿಯನ್ನು ಇಸ್ರೋ, ಭಾರತೀಯ ವಿಜ್ಞಾನ ಕೇಂದ್ರ, ಬಾಬಾ ಅಣು ಸಂಶೋಧನಾ ಕೇಂದ್ರಗಳಿಗೆ ನೀಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದಾರೆ.
ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿ ಹೀಗಿದೆ
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ ಆರ್ ಸಿಪಿ /ಪಕ್ಷೇತರರು /ಇತರೆ |
| 97 | ಮೊಳಕಾಲ್ಮೂರು (ಎಸ್ ಟಿ) | ದಾಸರಿ ಕೀರ್ತಿ ಕುಮಾರ್ | ಎನ್.ವೈ.ಗೋಪಾಲಕೃಷ್ಣ | ಡಾ.ಓಬಣ್ಣ ಕೆ.ಪೂಜಾರ್ | ದಾಕ್ಷಾಯಣಮ್ಮ | ನೇರಗುಂಟ್ಲೆ ತಿಪ್ಪೇಸ್ವಾಮಿ (ಬಿಎಸ್ಆರ್) |
| 98 | ಚಳ್ಳಕೆರೆ (ಎಸ್ ಟಿ) | ಜಯಪಾಲ್ | ರಘುಮೂರ್ತಿ ಟಿ. | ಪಿ.ತಿಪ್ಪೇಸ್ವಾಮಿ | ಕೆ.ಟಿ.ಕುಮಾರಸ್ವಾಮಿ | ಎಲ್.ನಾಗರಾಜ್ (ಬಿಎಸ್ಆರ್) |
| 99 | ಚಿತ್ರದುರ್ಗ | ಜಿ.ಎಚ್.ತಿಪ್ಪಾರೆಡ್ಡಿ | ಜಿ.ಎಸ್.ಮಂಜುನಾಥ್ | ಎಸ್.ಕೆ.ಬಸವರಾಜನ್ | ಎ.ವಿ.ಉಮಾಪತಿ | ಕೆ.ಎಸ್. ಫಯಾಜುದ್ದೀನ್ (ಬಿಎಸ್ಆರ್) |
| 100 | ಹಿರಿಯೂರು | ಎಸ್.ಸಿದ್ದೇಶ್ ಯಾದವ್ | ಡಿ.ಸುಧಾಕರ್ | ಎ.ಕೃಷ್ಣಪ್ಪ | ಎಂ.ತಿಪ್ಪೇಸ್ವಾಮಿ | ಎಂ.ಜಯಣ್ಣ (ಬಿಎಸ್ಆರ್) |
| 101 | ಹೊಸದುರ್ಗ | ಡಿ.ಲಕ್ಷ್ಮಣ್ | ಬಿ.ಜಿ.ಗೋವಿಂದಪ್ಪ | ಸುಧಾಬಾಯಿ | ಲಿಂಗಮೂರ್ತಿ | ಜಿ.ಗೋವಿಂದರಾಜು (ಬಿಎಸ್ಆರ್), ಗೂಳಿಹಟ್ಟಿ ಶೇಖರ್ (ಪಕ್ಷೇತರ) |
| 102 | ಹೊಳಲ್ಕೆರೆ (ಎಸ್ ಸಿ) | ದೇವೇಂದ್ರ ನಾಯ್ಕ್ | ಎಚ್.ಆಂಜನೇಯ | ಕೆ.ಇ.ಬಿ.ಮಹದೇವಪ್ಪ | ಎಂ.ಚಂದ್ರಪ್ಪ | ಎಚ್.ಶ್ರೀನಿವಾಸ್ (ಬಿಎಸ್ಆರ್) |












Click it and Unblock the Notifications