'ಬೆಂಗಳೂರು ಉದ್ಧಾರವಾಗಬೇಕಿದ್ದರೆ ಇವರನ್ನು ಗೆಲ್ಲಿಸಿ'
ಬೆಂಗಳೂರು, ಏ. 27 : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ಜಿಲ್ಲೆಯಲ್ಲಿರುವ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ 14 ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ, ಬೆಂಗಳೂರು ಅಭಿವೃದ್ಧಿಗಾಗಿ ಹುಟ್ಟುಹಾಕಲಾಗಿರುವ BPAC (Bangalore Political Action Committee) ಸಂಸ್ಥೆ ಶನಿವಾರ, ಏ. 27ರಂದು ಪ್ರಕಟಿಸಿದೆ.
ಬೆಂಗಳೂರಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಿಪ್ಯಾಕ್ ಸಂಸ್ಥೆಯ ಅಧ್ಯಕ್ಷೆ, ಬಯೋಕಾನ್ ಚೀಫ್ ಕಿರಣ್ ಮಜುಂದಾರ್ ಷಾ ಅವರು ಮಧ್ಯಾಹ್ನ 2.18ರ ಸುಮಾರಿಗೆ, ಬಿಪ್ಯಾಕ್ ಬೆಂಬಲಿಸುತ್ತಿರುವ 14 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿರುವುದಾಗಿ ಟ್ವೀಟ್ ಮಾಡಿದ್ದರು.
ಕುಲಗೆಟ್ಟು ಹೋಗಿರುವ ಬೆಂಗಳೂರು ನಗರ ಅಭಿವೃದ್ಧಿ ಕಾಣಬೇಕಿದ್ದರೆ, ಕಳಂಕವಿಲ್ಲದ ಸ್ವಚ್ಛ ರಾಜಕೀಯ ಸಿಗಬೇಕಿದ್ದರೆ, ಬೆಂಗಳೂರಿನಲ್ಲಿ ಭ್ರಷ್ಟಾಚಾರ ತಡೆಗಟ್ಟಬೇಕಿದ್ದರೆ, ನಮ್ಮ ಬೆಂಗಳೂರು ಸುಂದರವಾಗಬೇಕಿದ್ದರೆ ಈ ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಡಿ ಎಂದು ಬಿಪ್ಯಾಕ್ ಸಂಸ್ಥೆ ಹೇಳಿದೆ.
ಬೆಂಗಳೂರು ಜಿಲ್ಲೆಯ 12 ವಿಧಾನಸಭೆ ಕ್ಷೇತ್ರಗಳಿಂದ ಒಟ್ಟು 14 ಅಭ್ಯರ್ಥಿಗಳನ್ನು ಬಿಪ್ಯಾಕ್ ಸಂಸ್ಥೆ ಆಯ್ದುಕೊಂಡಿದೆ. ಬಸವನಗುಡಿ ಮತ್ತು ಮಲ್ಲೇಶ್ವರ ಕ್ಷೇತ್ರದಲ್ಲಿ ಎರಡು ಪಕ್ಷಗಳ ಇಬ್ಬರು ಅಭ್ಯರ್ಥಿಗಳನ್ನು ಬೆಂಬಲಿಸುತ್ತಿರುವುದು ಅನೇಕ ಟ್ವೀಟಿಗರನ್ನು ಗೊಂದಲಕ್ಕೀಡು ಮಾಡಿತ್ತು. ಇದೇಕೆ ಹೀಗೆ ಎಂದು ಪ್ರಶ್ನಿಸಿದಾಗ, ನಾವು ಯಾವುದೇ ಪಕ್ಷವನ್ನು ಬೆಂಬಲಿಸುತ್ತಿಲ್ಲ, ಉತ್ತಮ ಅಭ್ಯರ್ಥಿಗಳನ್ನು ಮಾತ್ರ ಬೆಂಬಲಿಸುತ್ತಿರುವುದಾಗಿ ಕಿರಣ್ ಮಜುಂದಾರ್ ಷಾ ಅವರು ಉತ್ತರಿಸಿದ್ದರು. [ಬೆಂಗಳೂರಿನ ಅಭ್ಯರ್ಥಿಗಳು]

ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು ಇವರು
ಡಾ. ತೇಜಸ್ವಿನಿ ಗೌಡ, ಬೆಂಗಳೂರು ದಕ್ಷಿಣ, ಕಾಂಗ್ರೆಸ್. 2004ರ ಲೋಕಸಭೆ ಚುನಾವಣೆಯಲ್ಲಿ ಕನಕಪುರದಲ್ಲಿ ದೇವೇಗೌಡರನ್ನು ಸೋಲಿಸಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ತೇಜಸ್ವಿನಿ ಸೋತಿದ್ದರು.

ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು ಇವರು
ಪ್ರೊ. ಬಿಕೆ ಚಂದ್ರಶೇಖರ್, ಬಸವನಗುಡಿ, ಕಾಂಗ್ರೆಸ್. ಐಐಎಂ-ಬೆಂಗಳೂರಿನಲ್ಲಿ ಕಾನೂನು ಪ್ರೊಫೆಸರಾಗಿದ್ದ ಬಿಕೆಸಿ ವಿಧಾನಪರಿಷತ್ ಸದಸ್ಯರು ಮತ್ತು ವಿಧಾನಪರಿಷತ್ ಅಧ್ಯಕ್ಷರೂ ಆಗಿದ್ದರು.

ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು ಇವರು
ಶಾಂತಲಾ ದಾಮ್ಲೆ, ಬಸವನಗುಡಿ, ಲೋಕ ಸತ್ತಾ. ಅಮೆರಿಕದಲ್ಲಿ ಸಾಫ್ಟ್ ವೇರ್ ಇಂಜಿನಿಯರಾಗಿ ಹಲವಾರು ವರ್ಷ ದುಡಿದಿರುವ ಶಾಂತಲಾ ದಾಮ್ಲೆ, ಭ್ರಷ್ಟಾಚಾರದ ವಿರುದ್ಧ 'ವಿಷಲ್' ಹೊಡೆಯುತ್ತಿದ್ದು, ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. [ಪರಿಚಯ]

ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು ಇವರು
ಡಾ. ಅಶ್ವಿನ್ ಮಹೇಶ್, ಬೊಮ್ಮನಹಳ್ಳಿ, ಲೋಕ ಸತ್ತಾ. ಬೆಂಗಳೂರಿನ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿರುವ ಅಶ್ವಿನ್ ಮಹೇಶ್, ಬೆಂಗಳೂರಿನಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರವನ್ನೇ ಸಾರಿದ್ದಾರೆ. ಐಐಎಂಬಿಯಲ್ಲಿ ಪ್ರೊಫೆಸರಾಗಿದ್ದ ಇವರು ಕೂಡ ಮೊದಲ ಬಾರಿಗೆ ಕಣಕ್ಕೆ ಇಳಿದಿದ್ದಾರೆ.

ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು ಇವರು
ಕೃಷ್ಣ ಭೈರೇಗೌಡ, ಬ್ಯಾಟರಾಯನಪುರ, ಕಾಂಗ್ರೆಸ್. ವಿದ್ಯಾವಂತರು, ವಿನಯವಂತರು ಮತ್ತು ಶುದ್ಧಹಸ್ತರು ಎಂದು ಹೆಸರಾಗಿರುವ ಕೃಷ್ಣ ಭೈರೇಗೌಡ 2008ರ ವಿಧಾನಸಭೆ ಚುನಾವಣೆಯಲ್ಲಿ ಜಯಶಾಲಿಯಾಗಿದ್ದರು. [ಕೃಷ್ಣಪರ ಬುಲೆಟ್ ಪ್ರಚಾರ]

ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು ಇವರು
ದಿನೇಶ್ ಗುಂಡೂರಾವ್ (42), ಗಾಂಧಿನಗರ, ಕಾಂಗ್ರೆಸ್. ಮಾಜಿ ಮುಖ್ಯಮಂತ್ರಿ ಗುಂಡೂ ರಾವ್ ಅವರ ಮಗ ದಿನೇಶ್ ಯೂತ್ ಕಾಂಗ್ರೆಸ್ ನಾಯಕರಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಮೂರು ಬಾರಿ ಸ್ಪರ್ಧಿಸಿ ಗೆದ್ದಿದ್ದಾರೆ.

ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು ಇವರು
ಅಬ್ದುಲ್ ಅಜೀಮ್, ಹೆಬ್ಬಾಳ, ಜೆಡಿಎಸ್. ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಅಬ್ದುಲ್ ಅಜೀಮ್, ಈ ಬಾರಿ ಹೆಬ್ಬಾಳದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು ಇವರು
ಬಿ.ಎನ್. ವಿಜಯ್ ಕುಮಾರ್, ಜಯನಗರ, ಬಿಜೆಪಿ. ಬ್ರಹ್ಮಚಾರಿಯಾಗಿರುವ ವಿಜಯ್ ಕುಮಾರ್ ಅವರು ತಮ್ಮ ಜೀವನವನ್ನು ಜಯನಗರದ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಜಯನಗರದಲ್ಲಿ ನಿರ್ಮಿಸಲಾಗಿರುವ, ಆದರೆ ಬಳಸಲಾರದ ಸೈಕಲ್ ಟ್ರಾಕ್ ರೂವಾರಿ ಇವರೆ.

ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು ಇವರು
ಎನ್.ಎಲ್. ನರೇಂದ್ರ ಬಾಬು, ಮಹಾಲಕ್ಷ್ಮಿ ಲೇಔಟ್, ಕಾಂಗ್ರೆಸ್. ಮೂರು ಬಾರಿ ಬೆಂಗಳೂರು ನಗರದ ಕಾರ್ಪೊರೇಟರಾಗಿ, ಎರಡು ಬಾರಿ ಎಂಎಲ್ಎ ಆಗಿರುವ ನರೇಂದ್ರ ಬಾಬು ಅವರು ಅನೇಕ ಸಮಾಜ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು ಇವರು
ಡಾ. ಅಶ್ವತ್ಥನಾರಾಯಣ (42), ಮಲ್ಲೇಶ್ವರ, ಬಿಜೆಪಿ. 2004 ಚುನಾವಣೆಯಲ್ಲಿ ಸೋತು, 2008ರಲ್ಲಿ ಮಲ್ಲೇಶ್ವರದಿಂದ ಗೆದ್ದಿದ್ದರು.

ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು ಇವರು
ಡಾ. ಮೀನಾಕ್ಷಿ ಭರತ್, ಮಲ್ಲೇಶ್ವರ, ಲೋಕ ಸತ್ತಾ. ಅಪ್ಪಟ ಪರಿಸರವಾದಿಯಾಗಿರುವ ಮೀನಾಕ್ಷಿ ಭರತ್, ಮಲ್ಲೇಶ್ವರದಲ್ಲಿ ಮರಗಳ ಮಾರಣಹೋಮ ನಡೆದಾಗ ಹೋರಾಟದ ನೇತೃತ್ವ ವಹಿಸಿದ್ದರು. ಈಗ ಭ್ರಷ್ಟಾಚಾರದ ವಿರುದ್ಧ ಕಹಳೆ ಮೊಳಗಿಸುತ್ತಿದ್ದಾರೆ.

ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು ಇವರು
ಡಾ. ಎಮ್.ಆರ್.ವಿ. ಪ್ರಸಾದ್, ಪದ್ಮನಾಭನಗರ, ಜೆಡಿಎಸ್. ವೈದ್ಯರಾಗಿ ಅಪಾರ ಜನಪ್ರಿಯತೆ ಗಳಿಸಿರುವ ಡಾ. ಪ್ರಸಾದ್ ಅವರು ಆರ್ ಅಶೋಕ್ ವಿರುದ್ಧ ಸೆಣಸಾಟಕ್ಕಿಳಿಸಿದ್ದಾರೆ. ತಮ್ಮ ಮೊದಲ ಹೋರಾಟದಲ್ಲಿ ಗೆಲ್ತಾರಾ?

ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು ಇವರು
ಎಸ್. ಸುರೇಶ್ ಕುಮಾರ್, ರಾಜಾಜಿನಗರ, ಬಿಜೆಪಿ. ಅಧಿಕಾರ ಕೈಯಲ್ಲಿದ್ದರೂ ದುರುಪಯೋಗ ಪಡಿಸಿಕೊಳ್ಳದ ಅಪರೂಪದ ರಾಜಕಾರಣಿಗಳಲ್ಲಿ ಸುರೇಶ್ ಕೂಡ ಒಬ್ಬರು. ತಮ್ಮ ವಿರುದ್ಧ ಭ್ರಷ್ಟಾಚಾರದ ಕೂಗು ಬಂದಾಗ ಮುಲಾಜಿಲ್ಲದೆ ರಾಜೀನಾಮೆ ಬಿಸಾಕಿ ಆದರ್ಶವನ್ನು ಮೆರೆದಿದ್ದರು. ಇವರ ವಿರುದ್ಧ ಈ ಬಾರಿ ಕೆಜೆಪಿಯಿಂದ ಶೋಭಾ ಕರಂದ್ಲಾಜೆ ಕಣಕ್ಕಿಳಿದಿದ್ದಾರೆ.

ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು ಇವರು
ಮೈಕೆಲ್ ಬಿ. ಫರ್ನಾಂಡಿಸ್, ಸರ್ವಜ್ಞನಗರ, ಕೆಜೆಪಿ
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications