ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣದಲ್ಲಿರುವ ಕಾಂಗ್ರೆಸ್ಸಿನ ಭಾರೀ ಕೋಟಿ ಕುಳಗಳು

|
Google Oneindia Kannada News

ಬೆಂಗಳೂರು, ಏ 20: ವಿಧಾನಸಭಾ ಚುನಾವಣಾ ಕಣದಲ್ಲಿರುವ ಬೆಂಗಳೂರು ನಗರ ವ್ಯಾಪ್ತಿಯ, ಬಳ್ಳಾರಿ ನಗರ ಮತ್ತು ಭದ್ರಾವತಿಯಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಕೊಟ್ಟ ಲೆಕ್ಕದ ವಿವರ.

ರಾಜರಾಜೇಶ್ವರಿ ನಗರದಿಂದ ಸ್ಪರ್ಧಿಸುತ್ತಿರುವ ಮುನಿರತ್ನ ಅವರ ಆಸ್ತಿ ವಿಚಾರಕ್ಕೆ ಬಂದಾಗ ನಿಜವಾಗಲೂ ಅವರು 'ಕುಬೇರನೇ'. ತನ್ನ ಮತ್ತು ತನ್ನ ಮಡದಿಯ ಹೆಸರಿನಲ್ಲಿ ಮುನಿರತ್ನ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಸುಮಾರು 47 ಸೈಟುಗಳನ್ನು ಹೊಂದಿದ್ದಾರೆ.

1998 ರಿಂದ ಈಚೆಗೆ ಮುನಿರತ್ನ ಅತಿ ಹೆಚ್ಚು ಸೈಟುಗಳನ್ನು ಖರೀದಿಸಿದ್ದಾರೆ. ಪತ್ನಿಯ ಹೆಸರಿನಲ್ಲಿ 24 ನಿವೇಶನಗಳಿವೆ. ಅಲ್ಲದೇ, ಬೆಂಗಳೂರು ಹೊರವಲಯದಲ್ಲಿ ತನ್ನ ಹೆಸರಿನಲ್ಲಿ ಮೂವತ್ತು ಕಡೆ ಕೃಷಿಯೇತರ ಜಮೀನು, ಪತ್ನಿ ಹೆಸರಿನಲ್ಲಿ ವಾಣಿಜ್ಯ ಸಂಕೀರ್ಣ ಹೊಂದಿದ್ದಾರೆ.

ಇತರ ಅಭ್ಯರ್ಥಿಗಳ ವಿವರವನ್ನು ಸ್ಲೈಡಿನಲ್ಲಿ ನೋಡಿ

ಮುನಿರತ್ನ

ಮುನಿರತ್ನ

ಬ್ಯಾಂಕ್ ಖಾತೆಯಲ್ಲಿ ನಾಲ್ಕು ಕೋಟಿ ಠೇವಣಿ, 1.70 ಕೋಟಿ ಮೌಲ್ಯದ ವಾಹನ ತನ್ನ ಹೆಸರಿನಲ್ಲಿ 8.67 ಕೋಟಿ ಸ್ಥಿರಾಸ್ಥಿ, ಪತ್ನಿ ಹೆಸರಿನಲ್ಲಿ 13.46 ಕೋಟಿ ಸ್ಥಿರಾಸ್ಥಿ. ಬರಬೇಕಾಗಿರುವ ಸಾಲದ ಮೊತ್ತ 2.75 ಕೋಟಿ. ಒಟ್ಟು ಆಸ್ತಿ ಇಪ್ಪತ್ತು ಕೋಟಿ.

ತೇಜಸ್ವಿನಿ ಗೌಡ

ತೇಜಸ್ವಿನಿ ಗೌಡ

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ. ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಯಲ್ಲಿ ಕೃಷಿಭೂಮಿ. ಬೆಂಗಳೂರು ಸದಾಶಿವ ನಗರದಲ್ಲಿ ವಸತಿ ಸಂಕೀರ್ಣ. ಪತಿಯ ಹೆಸರಿನಲ್ಲಿ ನವದೆಹಲಿಯಲ್ಲಿ ಫ್ಲಾಟ್ ಮತ್ತು ಚಿನ್ನಾಭರಣ. ಎಲ್ಲಾ ಒಟ್ಟು ಆಸ್ತಿ 1.31 ಕೋಟಿ.

ಕೃಷ್ಣ ಭೈರೇಗೌಡ

ಕೃಷ್ಣ ಭೈರೇಗೌಡ

ಬ್ಯಾಟರಾಯನಪುರ ಕ್ಷೇತ್ರದ ಅಭ್ಯರ್ಥಿ. ಮೂರು ವಾಹನಗಳು, 400 ಗ್ರಾಂ ಚಿನ್ನಾಭರಣ, ನೆಲಮಂಗಲದಲ್ಲಿ ನಿವೇಶನ, ಕೊಡಿಗೆಹಳ್ಳಿ, ವೈಟ್ ಫೀಲ್ಡಿನಲ್ಲಿ ವಸತಿ ಸಂಕೀರ್ಣ. ಗರುಡಾಪಾಳ್ಯ ಮತ್ತು ಕುರ್ಕಿಹಳ್ಲಿಯಲ್ಲಿ ಜಮೀನು. ಒಟ್ಟು ಆಸ್ತಿ 10.12 ಕೋಟಿ

ಬಿ ಎಲ್ ಶಂಕರ್

ಬಿ ಎಲ್ ಶಂಕರ್

ದಾಸರಹಳ್ಳಿ ಕ್ಷೇತ್ರದ ಅಭ್ಯರ್ಥಿ, ಪತ್ನಿ ಹೆಸರಿನಲ್ಲಿ 44.65 ಲಕ್ಷ ಮೌಲ್ಯದ ಸ್ಥಿರಾಸ್ಥಿ, 2.10 ಲಕ್ಷ ನಗದು, 16.83 ಲಕ್ಷ ಬ್ಯಾಂಕ್ ಠೇವಣಿ, 212 ಎಕರೆ ಕೃಷಿ ಭೂಮಿ. ಒಟ್ಟು ಆಸ್ತಿ 23.44 ಕೋಟಿ.

ಅನಿಲ್ ಲಾಡ್

ಅನಿಲ್ ಲಾಡ್

ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ, 2.66 ಕೋಟಿ ರೂಪಾಯಿ ಮೌಲ್ಯದ ಷೇರು, 35.97 ಕೋಟಿ ಹೂಡಿಕೆ, 120 ಕೋಟಿ ರೂಪಾಯಿ ಇತರಿರಿಗೆ ಸಾಲ, 6.82 ಕೋಟಿ ಮೌಲ್ಯದ ಕೃಷಿ ಭೂಮಿ, 18.89 ಕೋಟಿ ಮೌಲ್ಯದ ವಾಣಿಜ್ಯ ಸಂಕೀರ್ಣ. ಒಟ್ಟು ಆಸ್ತಿ 289 ಕೋಟಿ.

ಸಿ ಎಂ ಇಬ್ರಾಹಿಂ

ಸಿ ಎಂ ಇಬ್ರಾಹಿಂ

ಭದ್ರಾವತಿಯಿಂದ ಸ್ಪರ್ಧಿಸುತ್ತಿರುವ ಇಬ್ರಾಹಿಂ ಇನ್ನೂ 4.6 ಲಕ್ಷ ತೆರಿಗೆ ಕಟ್ಟಿಲ್ಲವಂತೆ. 4.86 ಲಕ್ಷ ರೂಪಾಯಿ ಷೇರು, 1.42 ಬಾಂಡ್. ಪತ್ನಿ ಮತ್ತು ತನ್ನ ಹೆಸರಿನಲ್ಲಿ ಮಂಗಳೂರು, ಭದ್ರಾವತಿ ಮತ್ತು ಬೆಂಗಳೂರಿನಲ್ಲಿ ಸ್ಥಿರಾಸ್ಥಿ. ಒಟ್ಟು ಆಸ್ತಿ ಘೋಷಣೆ 20.6 ಕೋಟಿ ರೂಪಾಯಿ.

English summary
Asset announced by the Congress candidates from Bangalore city constituency, Bellary City and Bhadravati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X