ಕ್ಷೇತ್ರ ಪರಿಚಯ : ಮಸ್ಕಿಯಲ್ಲಿ ಗೆಲುವಿನ ಸಿಹಿ ಯಾರಿಗೆ?
ಅಶೋಕ ಚಕ್ರವರ್ತಿ ಶಿಲಾ ಶಾಸನ ಹೊಂದಿರುವ ಐತಿಹಾಸಿಕ ಕ್ಷೇತ್ರ ಮಸ್ಕಿ. ಮಸ್ಕಿಯನ್ನು ತಾಲೂಕು ಕೇಂದ್ರವಾಗಿ ಮಾಡಬೇಕು ಎನ್ನುವ ಬೇಡಿಕೆ 2018ರ ಜನವರಿ 1ರಂದು ಈಡೇರಿದೆ.
ದೇವನಾಂಪಿಯ ಅಶೋಕ ಎಂಬ ಶಾಸನವು ಕ್ಷೇತ್ರದಲ್ಲಿದೆ. 1951ರಲ್ಲಿ ಗಣಿ ಇಂಜಿನಿಯರ್ ಆಗಿದ್ದ ಸಿ.ಬಿಡನ್ ಅವರು ಶಾಸನ ಪತ್ತೆ ಹಚ್ಚಿದ್ದರು. ಬ್ರಾಹ್ಮಿಲಿಪಿಯಲ್ಲಿ ಕೆತ್ತಲಾಗಿರುವ ಶಾಸನವಿದಾಗಿದೆ.
ಅನೇಕ ವೀರಗಲ್ಲುಗಳು, ಶಾಸನಗಳು ಕ್ಷೇತ್ರದಲ್ಲಿ ಕಾಣಸಿಗುತ್ತವೆ. ಮಸ್ಕಿಯ ಬೆಟ್ಟದ ಮೇಲಿನ ಮಲ್ಲಿಕಾರ್ಜುನ ದೇವಸ್ಥಾನದ ಗೋಡೆ ಮೇಲೆ ಮೂರು ಮುಖವುಳ್ಳ ಹಂಸದ ಚಿತ್ರ ಕೆತ್ತಲಾಗಿದೆ. ದೆಹಲಿಯ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಕೇಂದ್ರ ಇದನ್ನು ಲಾಂಛನವನ್ನಾಗಿ ಮಾಡಿಕೊಂಡಿದೆ.

ರಾಜಕೀಯವಾಗಿ ಹೊಸದಾಗಿ ರಚನೆಯಾದ ವಿಧಾನಸಭಾ ಕ್ಷೇತ್ರ ಮಸ್ಕಿ. 2008ರಲ್ಲಿ ಬಿಜೆಪಿಯ ಪ್ರತಾಪ ಗೌಡ ಪಾಟೀಲರು ಗೆಲುವು ಕಂಡಿದ್ದರು. 2013ರಲ್ಲಿ ಪಕ್ಷಾಂತರ ಮಾಡಿ, ಕಾಂಗ್ರೆಸ್ ಸೇರಿ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.
ಈ ಬಾರಿ ಅವರು ಪುನಃ ಬಿಜೆಪಿಗೆ ಮರಳಲು ಪ್ರಯತ್ನ ನಡೆಸಿದ್ದಾರೆ. ಆದರೆ, ಇದಕ್ಕೆ ಅಡ್ಡಿಯಾಗಿರುವುದು ಬಿಜೆಪಿಯ ಮಹಾದೇವಪ್ಪ ಗೌಡ. ಎಸ್‌ಸಿ ಮತ್ತು ಲಿಂಗಾಯತ ಮತದಾರರು ಶಾಸಕರು ಯಾರು? ಎಂಬುದನ್ನು ತೀರ್ಮಾನಿಸುತ್ತಾರೆ.
ಮಸ್ಕಿ ಎಸ್ಟಿ ಮೀಸಲು ಕ್ಷೇತ್ರ. ಆದ್ದರಿಂದ, ಆ ಸಮಯದಾಯದ ಮತಗಳು ಹಂಚಿಕೆಯಾದರೆ, ಯಾರು ಗೆಲ್ಲುತ್ತಾರೆ? ಎಂಬುದನ್ನು ಲೆಕ್ಕಾಚಾರ ಹಾಕುವುದು ಕಷ್ಟವಾಗಲಿದೆ.
ಈ ಬಾರಿಯ ಚುನಾವಣೆಯಲ್ಲಿಯೂ ಪ್ರತಾಪಗೌಡ ಪಾಟೀಲ್, ಬಿಜೆಪಿಯ ಮಹಾದೇವಪ್ಪ ಗೌಡ ನಡುವೆ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ. ಜೆಡಿಎಸ್‌ನಿಂದ ರಾಜಾ ಸೋಮನಾಥ ನಾಯಕ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
2013ರ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ್ ಅವರು 45,552 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಶಂಕರಕುಮಾರ ಮೇದಾರ ಅವರು 18,197 ಮತ, ಜೆಡಿಎಸ್‌ನ ಅಮರೀಶ್ 3,488 ಮತಗಳನ್ನು ಪಡೆದಿದ್ದಾರೆ.












Click it and Unblock the Notifications