ಮದ್ದೂರು ಕ್ಷೇತ್ರ ಪರಿಚಯ : ಜೆಡಿಎಸ್ ಪ್ರಾಬಲ್ಯ ಮುರಿಯಲು ಕೈ ಸಜ್ಜು

ಮಂಡ್ಯ ಜಿಲ್ಲೆ ಮದ್ದೂರು ಅನೇಕ ಕಾರಣಗಳಿಗೆ ಪ್ರಸಿದ್ಧ ಕ್ಷೇತ್ರ. ಇಲ್ಲಿನ ವಡೆ ಜಗತ್ ಪ್ರಸಿದ್ಧಿ. 1938ರಲ್ಲಿ ಇಲ್ಲಿನ ಶಿವಪುರದಲ್ಲಿ ನಡೆದ ಧ್ವಜ ಸತ್ಯಾಗ್ರಹ, ಮೈಸೂರು ಕಾಂಗ್ರೆಸ್ಸಿನ ಪ್ರಥಮ ಅಧಿವೇಶನ ನಡೆದಿದ್ದನ್ನು ಉಲ್ಲೇಖಿಸಬಹುದು.

ಮದ್ದೂರಿನಲ್ಲಿ ಮದ್ದೂರಮ್ಮ ದೇವಸ್ಥಾನ, ಉಗ್ರ ನರಸಿಂಹ ದೇವಸ್ಥಾನ ಹಾಗೂ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಗಳು ಪ್ರಸಿದ್ಧಿ ಹೊಂದಿವೆ. ವೈದ್ಯನಾಥೇಶ್ವರ, ಆಲೂರು ಚಾಮುಂಡೇಶ್ವರಿ, ಚಿಕ್ಕ ಅರಸಿನಕೆರೆ ಬಸವ, ಭೈರವೇಶ್ವರ ದೇಗುಲ, ಕೊಕ್ಕರೆ ಬೆಳ್ಳೂರು ಪ್ರಸಿದ್ಧ ದೇಗುಲ ತಾಣಗಳು.

ಮದ್ದೂರು ವಡೆಯಷ್ಟೇ ಇಲ್ಲಿನ ರಾಜಕೀಯ ಕ್ಷೇತ್ರ ಸ್ವಾದಿಷ್ಟವೆಂದರೆ ತಪ್ಪಾಗಲಾರದು. ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಅವರ ಸೋಮನಹಳ್ಳಿ ಮದ್ದೂರು ಕ್ಷೇತ್ರದಲ್ಲಿದೆ. ನಟ ಅಂಬರೀಷ್, ಶಿಕ್ಷಣ ತಜ್ಞ ಜಿ ಮಾದೇಗೌಡ, ಎಚ್ ಸ್ವಾತಂತ್ರ್ಯ ಹೋರಾಟಗಾರರಾದ ಕೆ ವೀರಣ್ಣಗೌಡ ಕ್ಷೇತ್ರದ ಜನಪ್ರಿಯ ವ್ಯಕ್ತಿಗಳು.

ಮಂಡ್ಯ ಜಿಲ್ಲೆಯ ಅತಿದೊಡ್ಡ ಕೈಗಾರಿಕಾ ಪ್ರದೇಶವೂ ಸೋಮನಹಳ್ಳಿಯಲ್ಲಿದೆ. ಗೆಜ್ಜಲಗೆರೆಯಲ್ಲಿ ಮತ್ತೊಂದು ಕೈಗಾರಿಕಾ ಪ್ರದೇಶ ಹಾಗೂ ಗ್ರಾನೈಟ್ ಕೈಗಾರಿಕೆ , ಗಾರ್ಮೆಂಟ್ಸ್ ಇದೆ. ಇದಲ್ಲದೆ, ಮದ್ದೂರು ಹಾಲು ಉತ್ಪಾದನಾ ಕ್ಷೇತ್ರದಲ್ಲೂ ಮುಂದಿದೆ.

ದೇವೇಗೌಡರ ಬೀಗರು ಇಲ್ಲಿನ ಶಾಸಕರು

ದೇವೇಗೌಡರ ಬೀಗರು ಇಲ್ಲಿನ ಶಾಸಕರು

ಮದ್ದೂರು ಎಂದ ಕೂಡಲೇ ನೆನಪಾಗುವುದು ಮದ್ದೂರು ವಡೆ. ಈ ಮದ್ದೂರು ವಡೆಯಷ್ಟೇ ಇಲ್ಲಿನ ರಾಜಕೀಯ ಕ್ಷೇತ್ರ ಸ್ವಾದಿಷ್ಟವೆಂದರೆ ತಪ್ಪಾಗಲಾರದು. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್ ಧುರೀಣ ಎಚ್.ಡಿ. ದೇವೇಗೌಡರ ಬೀಗರಾದ ಡಿ.ಸಿ. ತಮ್ಮಣ್ಣ ಅವರು, ಕಾಂಗ್ರೆಸ್ ನ ಮಧು ಮಾದೇಗೌಡ ವಿರುದ್ಧ 30 ಸಾವಿರಕ್ಕೂ ಅಧಿಕ ಮತಗಳಿಂದ ಪರಾಭವಗೊಳಿಸಿದ್ದರು. ಈ ಬಾರಿಯೂ ಇಲ್ಲಿ ಜೆಡಿಎಸ್ ಅಲೆ ಜೋರಾಗಿರುವುದರಿಂದ ಇತರ ಪಕ್ಷಗಳ ಅಭ್ಯರ್ಥಿಗಳಿಗೆ ಈ ಕ್ಷೇತ್ರ ಸವಾಲಿನದ್ದೇ ಆಗಿದೆ.

ಮದ್ದೂರಿನ ಮತದಾರರು

ಮದ್ದೂರಿನ ಮತದಾರರು

ಮಂಡ್ಯ ಜಿಲ್ಲೆ ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಏಳು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 14,61,031 ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಮದ್ದೂರಿನಲ್ಲಿ 2,02,326 (1,00,105 ಪುರುಷ, 1,02,221 ಮಹಿಳೆ) ಮತದಾರರಿದ್ದಾರೆ.

2013ರ ಫಲಿತಾಂಶ

2013ರ ಫಲಿತಾಂಶ

2013ರಲ್ಲಿ ಒಟ್ಟು 12 ಮಂದಿ ನಾಮಪತ್ರ ಸಲ್ಲಿಸಿದ್ದರು. ಒಬ್ಬರು ನಾಮಪತ್ರ ಹಿಂಪಡೆದುಕೊಂಡಿದ್ದರು. 11 ಮಂದಿ ಪೈಕಿ 9 ಜನರು ಠೇವಣಿ ಕಳೆದುಕೊಂಡಿದ್ದರು.

ಶೇ 79.45ರಷ್ಟು ಮತದಾನವಾಗಿತ್ತು. ಸುಮಾರು 156272 ಮತಗಳ ಪೈಕಿ ಜೆಡಿಎಸ್ ಅಭ್ಯರ್ಥಿ ಡಿ.ಸಿ ತಮ್ಮಣ್ಣ 80,926ಮತಗಳನ್ನು ಗಳಿಸಿ ಜಯಭೇರಿ ಬಾರಿಸಿದ್ದರು. ಕಾಂಗ್ರೆಸ್ಸಿನ ಮಧು ಜಿ ಮಾದೇಗೌಡ ಅವರು 48,968 ಮತಗಳನ್ನು ಗಳಿಸಿ ಸೋಲು ಕಂಡಿದ್ದರು. ತಮ್ಮಣ್ಣ ಅವರು 31958 ಮತಗಳ (ಶೇ 20.45 ) ಅಂತರದಿಂದ ಮಾದೇಗೌಡ ಅವರನ್ನು ಸೋಲಿಸಿದ್ದರು.

ಮತ್ತೊಮ್ಮೆ ಜೆಡಿಎಸ್ ಗೆಲ್ಲುವ ನಿರೀಕ್ಷೆ

ಮತ್ತೊಮ್ಮೆ ಜೆಡಿಎಸ್ ಗೆಲ್ಲುವ ನಿರೀಕ್ಷೆ

ಬಿಜೆಪಿಯಿಂದ ಸತೀಶ್, ಕಾಂಗ್ರೆಸ್ಸಿನಿಂದ ಜಿ.ಎ ಮಧು ಮಾದೇಗೌಡ ಹಾಗೂ ಜೆಡಿಎಸ್ ನಿಂದ ಮತ್ತೊಮ್ಮೆ ಡಿ. ಸಿ ತಮ್ಮಣ್ಣ ಕಣಕ್ಕಿಳಿದಿದ್ದು, ತಮ್ಮಣ್ಣ ಅವರು ಮತ್ತೊಮ್ಮೆ ಜಯ ಗಳಿಸುವ ನಿರೀಕ್ಷೆಯಿದೆ. ಮಾಜಿ ಶಾಸಕ, ದಿವಂಗತ ಸಿದ್ದರಾಜು ಅವರ ಪತ್ನಿ ಕಲ್ಪನಾ ಸಿದ್ದರಾಜು ಅವರು ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು 15750 ಮತಗಳನ್ನು ಗಳಿಸಿದ್ದರು. ಈ ಬಾರಿ ಜೆಡಿಎಸ್ ಸೇರ್ಪಡೆಗೊಂಡು ಪಕ್ಷದ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ಸಿನ ಮಧು ಶೇ 31.34ರಷ್ಟು ಮತ, ತಮ್ಮಣ್ಣ ಅವರು ಶೇ51.79ರಷ್ಟು ಮತಗಳನ್ನು ಗಳಿಸಿದ್ದರು. ಸದ್ಯಕ್ಕಂತೂ ಫಲಿತಾಂಶದಲ್ಲಿ ಏರುಪೇರಾಗುವ ಸಾಧ್ಯತೆ ಕಡಿಮೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+