ಕ್ಷೇತ್ರ ಪರಿಚಯ : ಕಾಂಗ್ರೆಸ್‌ ಭದ್ರಕೋಟೆ ಗುರುಮಿಠಕಲ್‌

ಯಾದಗಿರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರ ಗುರುಮಿಠಕಲ್. ಇದೊಂದು ಪ್ರವಾಸಿ ತಾಣ, ಬೆಂಗಳೂರು ನಗರದಿಂದ ಸುಮಾರು 650 ಕಿ.ಮೀ.ದೂರದಲ್ಲಿದೆ. ಕ್ಷೇತ್ರದ ಜನರು ಕೃಷಿಯನ್ನು ಅವಲಂಬಿಸಿದ್ದಾರೆ.

ಗುರುಮಿಠಕಲ್ ಜಲಪಾತ ಪ್ರಸಿದ್ಧ ಪ್ರವಾಸಿತಾಣ. ಸುಮಾರು 30 ಅಡಿ ಎತ್ತರದಿಂದ ನೀರು ಧುಮ್ಮುಕ್ಕುವುದನ್ನು ನೋಡಲು ಚಳಿಗಾಲ ಸೂಕ್ತ. ಸಾರಿಗೆ ಸಂಚಾರದ ಸಮಸ್ಯೆ ಹೆಚ್ಚಿಲ್ಲ. ಹೈದರಾಬಾದ್ ವಿಮಾನ ನಿಲ್ದಾಣ, ಯಾದಗಿರಿ ರೈಲು ನಿಲ್ದಾಣ ಕ್ಷೇತ್ರಕ್ಕೆ ಹತ್ತಿರವಾಗಿವೆ.

ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಗುರುಮಿಠಕಲ್‌ನಿಂದ 8 ಬಾರಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದು ಕ್ಷೇತ್ರ ಹೆಸರು ಪಡೆದಿದೆ.

Karnataka assembly election 2018 : Gurmitkal constituency profile

ಮಲ್ಲಿಕಾರ್ಜುನ ಖರ್ಗೆ ಅವರು ಈಗ ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾರೆ. 2008, 2013ರ ಚುನಾವಣೆಯಲ್ಲಿ ಗುರುಮಿಠಕಲ್ ಕ್ಷೇತ್ರದಿಂದ ಕಾಂಗ್ರೆಸ್‌ನ ಬಾಬುರಾವ್ ಚಿಂಚನಸೂರು ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಸಚಿವರೂ ಆಗಿದ್ದರು.

2013ರ ಚುನಾವಣೆ ಫಲಿತಾಂಶ : 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಾಬೂರಾವ್ ಚಿಂಚನಸೂರು ಅವರು 36,051 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್‌ನ ನಾಗಣ್ಣ ಗೌಡ ಅವರು 34,401 ಮತ, ಬಿಜೆಪಿಯ ಗಿರೀಶ್ ಮಟ್ಟಣ್ಣನವರ್ 9,795 ಮತಗಳನ್ನು ಪಡೆದಿದ್ದರು.

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಾಬೂರಾವ್ ಚಿಂಚನಸೂರು ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಿಂದ ಸಾಯಿಬಣ್ಣ, ಜೆಡಿಎಸ್‌ ಪಕ್ಷದಿಂದ ನಾಗನಗೌಡ ಅವರು ಅಭ್ಯರ್ಥಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+