Get Updates
Get notified of breaking news, exclusive insights, and must-see stories!

ಕ್ಷೇತ್ರ ಪರಿಚಯ: ಶಾಂತಿನಗರದಲ್ಲಿ ಬದಲಾವಣೆ ಸಾಧ್ಯವೇ?

ಬೆಂಗಳೂರಿನ ಪ್ರಮುಖ ವಿಧಾನಸಭಾ ಕ್ಷೇತ್ರ ಶಾಂತಿನಗರ ಸದ್ಯಕ್ಕೆ ಭಾರಿ ಸುದ್ದಿಯಲ್ಲಿದೆ. ಹೇಗಾದರೂ ಮಾಡಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮುರಿಯಬೇಕು ಎಂದು ಹವಣಿಸುತ್ತಿರುವ ಬಿಜೆಪಿಗೆ ಯಶ ದಕ್ಕುವುದೇ? ಮತದಾರರು ಕ್ಷೇತ್ರದಲ್ಲಿ ಬದಲಾವಣೆ ಬಯಸುವರೇ? ಕಾದು ನೋಡಬೇಕಿದೆ.

ಮೀಸಲು ಕ್ಷೇತ್ರವಾಗಿದ್ದ ಶಾಂತಿನಗರ ನಂತರ ಸಾಮಾನ್ಯ ಕ್ಷೇತ್ರವಾದ ಬಳಿಕ ಕಾಂಗ್ರೆಸ್ ಇಲ್ಲಿ ಅಧಿಪತ್ಯ ಸ್ಥಾಪಿಸುತ್ತಾ ಬಂದಿದೆ. ಹಾಲಿ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರೀಸ್ ವಿರುದ್ಧ ಕಳೆದ ಬಾರಿ ಜೆಡಿಎಸ್ ನ ಕೆ ವಾಸುದೇವ ಮೂರ್ತಿ ಸೋಲು ಕಂಡಿದ್ದರು. ಪರಭಾಷಿಕ ಮತದಾರರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಹ್ಯಾರೀಸ್ ಸಫಲರಾಗಿದ್ದರು.

ಆದರೆ, ಈ ಬಾರಿ ಪುತ್ರನ ಪುಂಡಾಟಿಕೆಯಿಂದ ಜನರ ಮುಂದೆ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಮಗ ಮಾಡಿದ ತಪ್ಪಿಗೆ ಅಪ್ಪನಿಗೆ ಏಕೆ ಶಿಕ್ಷೆ ಎಂಬಂತೆ ಕಾಂಗ್ರೆಸ್ ಕೂಡಾ ಹ್ಯಾರೀಸ್ ಗೆ ಟಿಕೆಟ್ ಭಾಗ್ಯ ನೀಡುತ್ತಿದೆ.

ಟ್ರಾಫಿಕ್ ಸಮಸ್ಯೆ ತಕ್ಕಮಟ್ಟಿಗೆ ಸುಧಾರಿಸಿದೆ. ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿಲ್ಲ. ಎಲ್ಲಾ ವರ್ಗದ ಜನರ ಆಶೋತ್ತರಕ್ಕೆ ತಕ್ಕಂತೆ ಹ್ಯಾರೀಸ್ ಸ್ಪಂದಿಸುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬಂದಿದೆ.

ಹೇಳಿ ಕೇಳಿ ಇದು ಬ್ರಿಟಿಷರ ಕಾಲದ ಬಡಾವಣೆ

ಹೇಳಿ ಕೇಳಿ ಇದು ಬ್ರಿಟಿಷರ ಕಾಲದ ಬಡಾವಣೆ

ಹೇಳಿ ಕೇಳಿ ಇದು ಬ್ರಿಟಿಷರ ಕಾಲದ ಬಡಾವಣೆ, ಅನಾದಿ ಕಾಲದಿಂದಲೂ ರಾಜಕಾಲುವೆ, ಕೊಳಚೆ ಪ್ರದೇಶಗಳನ್ನು ಜತೆಯಲ್ಲೇ ಹೊಂದಿದೆ. ಕೊಳಗೇರಿ ನಿರ್ಮೂಲನೆ, ಈಜಿಪುರ ನಿವಾಸಿಗಳ ಪುನರ್ವಸತಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ.

ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆಗಳನ್ನೊಳಗೊಂಡ ಪ್ರತಿಷ್ಟಿತ ಅಸೆಂಬ್ಲಿಯಲ್ಲಿ ಕೊಳಚೆ ಪ್ರದೇಶ, ಸ್ಲಂ ಕೂಡಾ ಇದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಐಷಾರಾಮಿ ಹೋಟೆಲ್ ಗಳು, ಪಬ್ ಗಳು, ರಸ್ತೆ ಬದಿ ದೋಸೆ ಮಾರುವ ಕೇಂದ್ರಗಳಿವೆ. ಬಿಎಂಟಿಸಿ ಕೇಂದ್ರ ಕಚೇರಿ ಸೇರಿದಂತೆ ವೈವಿಧ್ಯತೆಯನ್ನು ಮೈಗೂಡಿಸಿಕೊಂಡಿದೆ.

ಹ್ಯಾರೀಸ್ ಶಾಂತಿನಗರ ಕ್ಷೇತ್ರದಿಂದ ಎರಡು ಬಾರಿ ಆಯ್ಕೆ

ಹ್ಯಾರೀಸ್ ಶಾಂತಿನಗರ ಕ್ಷೇತ್ರದಿಂದ ಎರಡು ಬಾರಿ ಆಯ್ಕೆ

ಎನ್.ಎ.ಹ್ಯಾರೀಸ್ ಶಾಂತಿನಗರ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದಾರೆ. 2008ರ ಚುನಾವಣೆಯಲ್ಲಿ 42,423 ಮತ, 2013ರ ಚುನಾವಣೆಯಲ್ಲಿ 54,342 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದಾರೆ.

ಪುತ್ರ ಮೊಹಮ್ಮದ್ ನಲಪಾಡ್ ಮಾಡಿದ ರಂಪಾಟದಿಂದಾಗಿ ಹ್ಯಾರೀಸ್‌ಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ. ಹ್ಯಾರೀಸ್ ಅವರ ಬದಲು ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ನೀಡಿ ಎಂದು ಒತ್ತಾಯಿಸಲಾಗಿತ್ತು. ಆದರೆ, ಈ ಬಾರಿ ಟಿಕೆಟ್ ಖಾತ್ರಿಯಾಗಿದೆ.

ಈ ಬಾರಿಯೂ ಗೆಲುವು ನಿರಾಯಾಸವಲ್ಲ?

ಈ ಬಾರಿಯೂ ಗೆಲುವು ನಿರಾಯಾಸವಲ್ಲ?

ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿದ ಕಾಸರಗೋಡು ಮೂಲದ ಬ್ಯಾರಿ ಎನ್.ಎ ಹ್ಯಾರೀಸ್ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. 85 ಕೋಟಿ ರು ಆಸ್ತಿ ಘೋಷಿಸಿದ್ದರು. ಈಗ 135 ಪ್ಲಸ್ ಕೋಟಿ ರು ಒಡೆಯ. ಸರಕಾರಿ ಶಾಲೆಗಳ ಕಟ್ಟಡ ನಿರ್ಮಾಣ, ವ್ಯಾಯಾಮ ಶಾಲೆ, ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ. ನಲಪಾಡ್ ಹೊಟೆಲ್ ಸಮೂಹದ ಅಧ್ಯಕ್ಷರಾಗಿರುವ ಹ್ಯಾರೀಸ್ ಅವರ ಕುಟುಂಬ ರಿಯಲ್ ಎಸ್ಟೇಟ್ ಉದ್ಯಮಿ ಕೂಡಾ ಹೌದು. ಹ್ಯಾರೀಸ್ ಅವರು ಮಗನ ತಪ್ಪಿಗೆ ನನಗೆ ಶಿಕ್ಷೆ ಏಕೆ? ಎಂಬ ಪ್ರಶ್ನೆಯೊಂದಿಗೆ ಮತಯಾಚಿಸಬಹುದು. ಆದರೆ, ಬಿಜೆಪಿ ಈ ಬಾರಿ ಈ ಕ್ಷೇತ್ರ ಕಸಿಯಲು ಶತಪ್ರಯತ್ನ ಮಾಡುತ್ತಿದೆ.

ವಿಧಾನಸಭಾ ಕ್ಷೇತ್ರ ಸಂಖ್ಯೆ 163

ವಿಧಾನಸಭಾ ಕ್ಷೇತ್ರ ಸಂಖ್ಯೆ 163

* ವಿಧಾನಸಭಾ ಕ್ಷೇತ್ರ ಸಂಖ್ಯೆ 163
* ಹಾಲಿ ಶಾಸಕ- ಎನ್ಎ ಹ್ಯಾರಿಸ್ (49 ವರ್ಷ)- ಕಾಂಗ್ರೆಸ್. ಸೋತ ಅಭ್ಯರ್ಥಿ ಡಿಯು ಮಲ್ಲಿಕಾರ್ಜುನ- ಬಿಜೆಪಿ

* ವಾರ್ಡ್: ಜೌಗುಪಾಳ್ಯ, ಶಾಂತಲಾ ನಗರ, ದೊಮ್ಮಲೂರು, ಅಗರ, ವನ್ನಾರ್ ಪೇಟೆ, ನೀಲಸಂದ್ರ, ಶಾಂತಿನಗರ

2008ರ ಮತದಾರರ ಸಂಖ್ಯೆ: 1,84,138. ಕಳೆದ ಬಾರಿ ವೋಟ್ ಮಾಡಿದವರು ಶೇ. 44ರಷ್ಟು ಮಂದಿ. ಅದರಲ್ಲಿ ಎನ್ಎ ಹ್ಯಾರಿಸ್ ಮತ ಗಳಿಕೆ ಪ್ರಮಾಣ ಶೇ. 53.

2013ರ ಫಲಿತಾಂಶ: 2013ರಲ್ಲಿ ಶೇ 57.80ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ಸಿನ ಹ್ಯಾರೀಸ್ 54,342 ಮತಗಳಿಸಿದರೆ, ಸೋತ ಅಭ್ಯರ್ಥಿ ಕೆ ವಾಸುದೇವ ಮೂರ್ತಿ 34,155 ಮತ ಗಳಿಸಿದ್ದರು. 20,187 ಮತ( ಶೇ 19.48) ಅಂತರದಿಂದ ಹ್ಯಾರೀಸ್ ಗೆಲುವು ಸಾಧಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+