ತಲೆ ಹತ್ತಿದ ತೆನೆಹೊತ್ತ ಮಹಿಳೆ! ಇದು ಅಭಿಮಾನವೋ? ಹುಚ್ಚೋ?!

Recommended Video

      ಜೆಡಿಎಸ್ ಬಗ್ಗೆ ಇವರು ತೋರಿಸುತ್ತಿರೋದು ಅಭಿಮಾನವೋ ಅಥವಾ ಹುಚ್ಚೋ? | Oneindia Kannada

      "ಇಲ್ಲೊಬ್ಬ ವ್ಯಕ್ತಿಯ ತಲೆ ಮೇಲೆ ತೆನೆ ಹೊತ್ತ ಮಹಿಳೆ ಹತ್ತಿ ನಿಂತಿದ್ದಾಳೆ!" ಜೆಡಿಎಸ್, ಕಾಂಗ್ರೆಸ್ ನೊಂದಿಗೆ ಸೇರಿ ಸರ್ಕಾರ ರಚಿಸಿದ್ದಕ್ಕೆ ಜೆಡಿಎಸ್ ಅಭಿಮಾನಿಯೊಬ್ಬರು ತಮ್ಮ ಸಂತಸವನ್ನು ಈ ರೀತಿಯ ಹೇರ್ ಸ್ಟೈಲ್ ಮೂಲಕ ವ್ಯಕ್ತಪಡಿಸಿದ್ದಾರೆ!

      ಕರ್ನಾಟಕದಲ್ಲಿ ರಾಜಕೀಯದ ನಾಟಕ ಇನ್ನೂ ಮುಗಿದಿಲ್ಲ. ಸಚಿವ ಸಂಪುಟ ವಿಸ್ತರಣೆಯ ಕುರಿತಂತೆ ಇನ್ನೂ ಸಾಕಷ್ಟು ಚರ್ಚೆ ನಡೆಯುತ್ತಲೇ ಇದೆ. ಆದರೆ ಹಲವರ ಪಾಲಿಗೆ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂಬುದು ಕನಸಾಗಿತ್ತು.

      ಅದಕ್ಕೆಂದೇ ದೇವರಿಗೆ ಹರಕೆ ಇಟ್ಟವರು ಎಷ್ಟು ಜನರೋ, ಇದೀಗ ಆ ಕನಸು ನನಸಾಗಿದೆ. ತಮ್ಮ ನೆಚ್ಚಿನ ನಾಯಕ ಮುಖ್ಯಮಂತ್ರಿಯಾಗಿದ್ದಕ್ಕಾಗಿ ತಮ್ಮ ಖುಷಿಯನ್ನು ತರಹೇವಾರಿ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

      ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಹಲವು ಚಿತ್ರಗಳು ಓಡಾಡುತ್ತಿದ್ದು, ಹಲವರು ಇದನ್ನು ಹುಚ್ಚು ಎಂದಿದ್ದರೆ ಮತ್ತೆ ಕೆಲವರು ಅಭಿಮಾನದ ಪರಾಕಾಷ್ಠೆ ಎಂದಿದ್ದಾರೆ.

      ತಲೆ ಹತ್ತಿದ ತೆನೆಹೊತ್ತ ಮಹಿಳೆ!

      ತಲೆ ಹತ್ತಿದ ತೆನೆಹೊತ್ತ ಮಹಿಳೆ!

      ಜೆಡಿಎಸ್ ಅಭಿಮಾನಿಯೊಬ್ಬ 'ತೆನೆ ಹೊತ್ತ ಮಹಿಳೆಯ ರೀತಿಯಲ್ಲಿ ಹೇರ್ ಸ್ಟೈಲ್ ಮಾಡಿಕೊಂಡಿದ್ದಾನೆ. ಇದಕ್ಕೆ ಪ್ರತಿಯಾಗಿ 'ಜೆಡಿಎಸ್ ಪಕ್ಷಕ್ಕೆ ನಿಮ್ಮಂಥ ಅಭಿಮಾನಿಗಳೇ ಶ್ರೀರಕ್ಷೆ. ನಿಮ್ಮ ಅಭಿಮಾನಕ್ಕೆ ಮನಸೋತಿದ್ದೇವೆ ಬ್ರದರ್ ಎಂದು ಜೆಡಿಎಸ್ ಕಾರ್ಯಕರ್ತರೊಬ್ಬರು ಬರೆದು, ಈ ಚಿತ್ರದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ವೀಟ್ ಮಾಡಿದ್ದಾರೆ.

      ಜೆಡಿಎಸ್ ಹೇರ್ ಸ್ಟೈಲ್!

      ಜೆಡಿಎಸ್ ಹೇರ್ ಸ್ಟೈಲ್!

      ಜೆಡಿಎಸ್- ಕಾಂಗ್ರೆಸ್ಸಿನೊಂದಿಗೆ ಸೇರಿ ಸರ್ಕಾರ ರಚಿಸಿದ್ದನ್ನು ಕಂದು ಸಂತಸ ಪಟ್ತ ಅಭಿಮಾನಿಯೊಬ್ಬ ತನ್ನ ಸಂತಸವನ್ನೂ, ಜೆಡಿಎಸ್ ಬಗೆಗಿನ ಅಭಿಮಾನವನ್ನು ತೋರಿಸಿದ್ದು ಈ ಹೇರ್ ಸ್ಟೈಲ್ ಮೂಲಕ!

      ಮೈಮೇಲೆ ಬಂದ ನಾಯಕರು!

      ಮೈಮೇಲೆ ಬಂದ ನಾಯಕರು!

      ಜೆಡಿಎಸ್ ಅಭಿಮಾನಿಯೊಬ್ಬರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಮತ್ತು ಎಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ ಚಿತ್ರದೊಂದಿಗೆ, ಜೆಡಿಎಸ್ ಚಿಹ್ನೆಯನ್ನು ಹಚ್ಚೆ ಹಾಕಿಕೊಂಡಿದ್ದಾರೆ.

      ಮಕ್ಕಳನ್ನೂ ಬಿಡದ ಅಭಿಮಾನದ ಪರಾಕಾಷ್ಠೆ

      ಮಕ್ಕಳನ್ನೂ ಬಿಡದ ಅಭಿಮಾನದ ಪರಾಕಾಷ್ಠೆ

      ಪುಟ್ಟ ಮಗುವೊಂದಕ್ಕೆ ಜೆಡಿಎಸ್ ಪಕ್ಷದ ಶಾಲುಗಳನ್ನು ಹೊದೆಸಿ, ರಾಜಕೀಯ ಅಂದರೇನು ಎಂಬುದೇ ಗೊತ್ತಿಲ್ಲದ ಮಗುವಿನ ಮೂಲಕ ತಮ್ಮ ಜೆಡಿಎಸ್ ಬಗೆಗಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ ಅಭಿಮಾನಿಯೊಬ್ಬರು.

      ಕುಮಾರಣ್ಣ ಅಂದ್ರೆ ಸಾಯ್ತೀವಿ!

      ಕುಮಾರಣ್ಣ ಅಂದ್ರೆ ಸಾಯ್ತೀವಿ!

      ಹುಡುಗ್ರು ಅಲ್ವಾ? ಬಿಸಿ ರಕ್ತ. ಕುಮಾರಣ್ಣ ಅಂದ್ರೆ ಸಾಯ್ತೀವಿ ಎಂಬ ಪೋಸ್ಟರ್ ವೊಂದನ್ನು ರಸ್ತೆಯ ಪಕ್ಕ ಹಾಕಲಾಗಿದೆ. ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+