ಇಂಡಿಯಾ ಟುಡೇ ಸಮೀಕ್ಷೆ : ಸಿದ್ದರಾಮಯ್ಯ ಸರ್ಕಾರದ ಆಡಳಿತ ಹೇಗಿದೆ?
Recommended Video

ಬೆಂಗಳೂರು, ಏಪ್ರಿಲ್ 13 : ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಬಗ್ಗೆ ಇಂಡಿಯಾ ಟುಡೇ ಮತ್ತು ಕಾರ್ವಿ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಬಹಿರಂಗವಾಗಿದೆ.
ಶುಕ್ರವಾರ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅತ್ಯುತ್ತಮ ಆಡಳಿತ ನೀಡಿದೆ ಎಂದು ಶೇ 8ರಷ್ಟು ಜನರು ಅಭಿಪ್ರಾಯಪಟ್ಟದ್ದಾರೆ.
ಮೇ 12ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 15ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಗೆ ಒಂದು ತಿಂಗಳು ಬಾಕಿ ಇರುವಾಗ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. 27, 919 ಜನರನ್ನು ಸಂದರ್ಶಿಸಿ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಲಾಗಿದೆ.

ಸಮೀಕ್ಷೆಯ ಫಲಿತಾಂಶ
* ಅತ್ಯುತ್ತಮ ಆಡಳಿತ ಶೇ 8
* ಉತ್ತಮ ಆಡಳಿತ ಶೇ 27
* ತೃಪ್ತಿದಾಯಕ ಶೇ 31
* ಉತ್ತಮವಾಗಿಲ್ಲ ಶೇ 21
10 ರಲ್ಲಿ 7 ಅಂಕ : ಕಳೆದ ವಾರ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ದಕ್ಷ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಬಗ್ಗೆ ಸಮೀಕ್ಷೆ ನಡೆಸಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಜನರು 10ರಲ್ಲಿ 7 ಅಂಕಗಳನ್ನು ನೀಡಿದ್ದರು.












Click it and Unblock the Notifications