ಉಡುಪಿ ಕ್ಷೇತ್ರ flashback : ಮಧ್ವರಾಜ್ ಕುಟುಂಬ ರಾಜಕೀಯ
ಉಡುಪಿ, ಏಪ್ರಿಲ್ 04: ಕರಾವಳಿಯಲ್ಲಿ ಅಪರೂಪಕ್ಕೆ ಎಂಬಂತೆ ಕುಟುಂಬ ರಾಜಕೀಯ ಕಂಡು ಬರುವುದು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಎನ್ನಬಹುದು.
ಉಡುಪಿ ಕ್ಷೇತ್ರದಲ್ಲಿ ತಂದೆ, ತಾಯಿ, ಮಗ, ಒಂದೇ ಕ್ಷೇತ್ರದಲ್ಲಿ ಶಾಸಕರಾದ ನಿದರ್ಶನ ಕಾಣಬಹುದು. ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಎಂ.ಮಧ್ವರಾಜ್, ಅವರ ಪತ್ನಿ ಮನೋರಮಾ ಮಧ್ವರಾಜ್, ಪುತ್ರ ಪ್ರಮೋದ್ ಮಧ್ವರಾಜ್ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. 1957 ರಿಂದ 2013 ರ ತನಕದ ಚುನಾವಣಾ ಕದನಲ್ಲಿ ಈ ಕುಟುಂಬದ ಸದಸ್ಯರು ಒಟ್ಟು ಆರು ಬಾರಿ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ಮನೋರಮಾ ಮಧ್ವರಾಜ್ ಮತ್ತು ಪ್ರಮೋದ್ ಮಧ್ವರಾಜ್ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

* 1962ರಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ, ಉದ್ಯಮಿ ಎಂ.ಮಧ್ವರಾಜ್(17,511 ಮತಗಳು) ಅವರು ಪಿಎಸ್ಪಿಯ ಉಪೇಂದ್ರ ನಾಯಕ್(8003 ಮತಗಳು) ಅವರನ್ನು ಸೋಲಿಸಿ, ವಿಧಾನಸಭೆ ಪ್ರವೇಶಿಸಿದ್ದರು.
* 1972ರಲ್ಲಿ ಮಧ್ವರಾಜ್ ಪತ್ನಿ ಮನೋರಮಾ ಮಧ್ವರಾಜ್ (26,020 ಮತಗಳು) ಅವರು ವಿ.ಎಸ್ ಆಚಾರ್ಯ (ಬಿಜೆಎಸ್) (11076) ಮೊದಲ ಬಾರಿಗೆ ಕಣಕ್ಕಿಳಿದು, 15 ಸಾವಿರ ಮತಗಳ ಅಂತರದ ಜಯ ಸಾಧಿಸಿ ಶಾಸಕಿಯಾದರು.
* 1978ರಲ್ಲಿ ಕಾಂಗ್ರೆಸ್ ಐ ನಿಂದ ಸ್ಪರ್ಧಿಸಿ 30899 ಮತಗಳನ್ನು ಗಳಿಸಿ ಪುನರಾಯ್ಕೆಯಾಗಿ, ಗುಂಡೂರಾವ್ ಸರ್ಕಾರದಲ್ಲಿ ಸಚಿವೆಯಾಗಿದ್ದರು.

* 1983ರ ಚುನಾವಣೆಯಲ್ಲಿ ವಿಎಸ್ ಆಚಾರ್ಯ ವಿರುದ್ಧ ಮನೋರಮಾ ಸೋಲು ಅನುಭವಿಸಿದರು.
* ಮನೋರಮಾ ಅವರು 1985 ಹಾಗೂ 1989ರ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
* 1994ರಲ್ಲಿ ಕೆಸಿಪಿಯ ಯು. ಆರ್ ಸಭಾಪತಿ ವಿರುದ್ಧ ಮನೋರಮಾ ಸೋಲುಕಂಡರು.
* 2008ರಲ್ಲಿ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್(56441) ಅವರು ಕೆ ರಘುಪತಿ ಭಟ್(58920) ವಿರುದ್ಧ ಸೋಲು ಕಂಡರು.
*. 2013ರಲ್ಲಿ ಪ್ರಮೋದ್ ಮಧ್ವರಾಜ್ ಉಡುಪಿ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾದರು.
ಈ ನಡುವೆ ಮನೋರಮಾ ಅವರು 2004ರಲ್ಲಿ ಬಿಜೆಪಿ ಸೇರಿ ಉಡುಪಿ ಕ್ಷೇತ್ರದ ಸಂಸದೆಯಾಗಿ ಚುನಾಯಿತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications