ಜಾತಿ ಭೇದವಿಲ್ಲದ, ಶೈಕ್ಷಣಿಕ ಪ್ರಗತಿಹೊಂದಿದ ಕರ್ನಾಟಕ ಬೇಕು: ರಾಜು ತಲ್ಲೂರ
Recommended Video

My Dream Of Karnataka : ಶೈಕ್ಷಣಿಕ ಪ್ರಗತಿಹೊಂದಿದ ಕರ್ನಾಟಕ ಬೇಕು: ರಾಜು ತಲ್ಲೂರ | Oneindia Kannada
ಸಾಗರ, ಮೇ 07: ಕರ್ನಾಟಕದಲ್ಲಿ ಎಲ್ಲಕ್ಕಿಂತಲೂ ಮೊದಲಿಗೆ ಎಲ್ಲ ಜನರಿಗೆ ಒಳ್ಳೆಯ ಶಿಕ್ಷಣ ಒದಗಬೇಕು ಎಂಬುದು ಸೊರಬದ ಕಾಂಗ್ರೆಸ್ ಅಭ್ಯರ್ಥಿ ರಾಜು ತಲ್ಲೂರ ಅವರ ಕನಸು.
ನನ್ನ ಕನಸಿನ ಕರ್ನಾಟಕ ಹೇಗಿರಬೇಕು ಎಂದು 'ಒನ್‌ಇಂಡಿಯಾ ಕನ್ನಡ'ದೊಂದಿಗೆ ಮಾತನಾಡಿದ ಅವರು, ಸಧೃಡ, ಪ್ರಗತಿಪರ, ಸಾಮಾಜಿಕ ನ್ಯಾಯ ಹೊಂದಿದ ಕರ್ನಾಟಕ ನಮ್ಮದಾಗಬೇಕು ಎಂಬ ಕನಸನ್ನು ಮುಂದಿಟ್ಟಿದ್ದಾರೆ.
ರೈತ ಹಾಗೂ ಬಡವರ ಕಷ್ಟಗಳು ನಿವಾರಣೆ ಆಗಿ ಅವರು ನೆಮ್ಮದಿಯ ಜೀವನ ಜೀವಿಸುವ ಕರ್ನಾಟಕ ನಿರ್ಮಾಣವಾಗಬೇಕು ಎಂಬ ಕನಸು ಕಂಡಿರುವ ಅವರು. ಜಾತಿ, ಭೇದ ಇಲ್ಲದ ಸಮಾಜಿಕ ನ್ಯಾಯ ಸಮಪರ್ಕವಾಗಿ ಹಂಚಿಕೆ ಆಗಿರುವ ಕರ್ನಾಟಕ ನನ್ನದಾಗಬೇಕು ಎನ್ನುತ್ತಾರೆ.

ಶೋಷಿತ ಸಮುದಾಯದ ಜನರೂ ಸಮಾಜದ ಮುಖ್ಯವಾಹಿನಿಯಲ್ಲಿ ಯಾವುದೇ ಅಳುಕಿಲ್ಲದೆ ಜೀವಿಸಲು ಸಾಧ್ಯವಿರುವ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಬೇಕು ಎಂಬುದು ಅವರ ಆಸೆ.












Click it and Unblock the Notifications