ಸಿ ವೋಟರ್ ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ
ಬೆಂಗಳೂರು, ಜನವರಿ 6 : ಸಿ ವೋಟರ್ ನ ಕರ್ನಾಟಕ ವಿಧಾನಸಭಾ ಚುನಾವಣೆ ಪೂರ್ವ ಸಮೀಕ್ಷೆ ಹೊರಬಂದಿದ್ದು, ಅದರ ಪ್ರಕಾರ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣ ಆಗಲಿದೆ. ಸಮೀಕ್ಷೆಯಲ್ಲಿ ಬಂದಿರುವ ಸಂಖ್ಯೆಯ ವಿವರ ಹೀಗಿದೆ.
ಕಾಂಗ್ರೆಸ್- 102
ಬಿಜೆಪಿ- 96
ಜೆಡಿಎಸ್- 25
ಇತರೆ- 1
2013ರಲ್ಲಿ ಪಕ್ಷಗಳು ಪಡೆದಿದ್ದ ಸ್ಥಾನಗಳು
ಕಾಂಗ್ರೆಸ್- 122
ಬಿಜೆಪಿ- 40
ಜೆಡಿಎಸ್- 40
ಕೆಜೆಪಿ-6
ಇತರೆ- 16

ಸಿ ವೋಟರ್ ಸಮೀಕ್ಷೆಯ ಪ್ರಕಾರ ವಿಧಾನಸಭೆ ಚುನಾವಣೆ ಫಲಿತಾಂಶ ಬಂದರೆ ಜೆಡಿಎಸ್ ನಿರ್ಣಾಯಕ ಆಗುತ್ತದೆ. ಆ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಳ್ಳದೆ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಕಷ್ಟವಾಗುತ್ತದೆ. ಇದು ಚುನಾವಣಾ ಪೂರ್ವ ಸಮೀಕ್ಷೆಯಾಗಿದ್ದು, ವಿವಿಧ ಸಂಸ್ಥೆಗಳು ಒಂದೊಂದು ರೀತಿಯ ಭವಿಷ್ಯ ನುಡಿದಿವೆ.
ಶನಿವಾರವಷ್ಟೇ ವಿಶ್ವವಾಣಿ ದಿನಪತ್ರಿಕೆಯು ಇತರ ಸಂಸ್ಥೆ ಜತೆಗೂಡಿ ನಡೆಸಿದ ಸಮೀಕ್ಷೆ ಬಯಲು ಮಾಡಿತ್ತು. ಆ ಪ್ರಕಾರ ಕಾಂಗ್ರೆಸ್ ಸರಳ ಬಹುಮತ ಅಥವಾ ಸರಕಾರ ರಚನೆಗೆ ಮೂರು ಸ್ಥಾನಗಳ ಕೊರತೆ ಬೀಳಬಹುದು ಎಂದು ತಿಳಿಸಿದೆ.











Click it and Unblock the Notifications