ಕೋಲಾರ ಜಿಲ್ಲೆ, ಶ್ರೀನಿವಾಸಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೆಂಕಟಶಿವ ರೆಡ್ಡಿ ಸಂದರ್ಶನ

ಕೋಲಾರ ಜಿಲ್ಲೆ, ಶ್ರೀನಿವಾಸಪುರ ಕ್ಷೇತ್ರ ರಾಜ್ಯದ ಇತರ ಅಸೆಂಬ್ಲಿ ಕ್ಷೇತ್ರದಂತಲ್ಲ. ಕಳೆದ ಸುಮಾರು 25ವರ್ಷಗಳಿಂದ ಒಮ್ಮೆ ಗೆದ್ದು ಬಂದ ಅಭ್ಯರ್ಥಿ ಇನ್ನೊಂದು ಚುನಾವಣೆಯಲ್ಲಿ ಸೋಲುವುದು ನಿಶ್ಚಿತ. ಈಗ ಮತ್ತೆ ಚುನಾವಣೆ ಎದುರಾಗಿದೆ.
ಆರೋಗ್ಯ ಸಚಿವ ರಮೇಶ್ ಕುಮಾರ್ ಮತ್ತು ಜೆಡಿಎಸ್ ಅಭ್ಯರ್ಥಿ ಜಿ ಕೆ ವೆಂಕಟಶಿವ ರೆಡ್ಡಿ ನಡುವೆ ಇಲ್ಲಿ ನೇರ ಸ್ಪರ್ಧೆ. 1983ರಿಂದ 2018ರ ವರೆಗೆ ಕಾಂಗ್ರೆಸ್ ಆಗಲಿ ಜೆಡಿಎಸ್ ಆಗಲಿ, ಬೇರೆ ಅಭ್ಯರ್ಥಿಗಳನ್ನು ಆಯ್ಕೆಮಾಡುವ ಗೋಜಿಗೇ ಹೋಗಿಲ್ಲ, ಇವರೇ ಅಭ್ಯರ್ಥಿಗಳು.
ಕೆಸಿ ವ್ಯಾಲಿ, ಪೈಪ್ ದುಡ್ಡು ಹೊಡೆಯೋ ಯೋಜನೆ: ಜೆಡಿಎಸ್ ಅಭ್ಯರ್ಥಿ ಬಚ್ಚೇಗೌಡ ಸಂದರ್ಶನ
ಹೋದ ಬಾರಿ ರಮೇಶ್ ಕುಮಾರ್ ಜಯಗಳಿಸಿದ್ದರು, ಈ ಬಾರಿಯ ಚುನಾವಣೆಯಲ್ಲಿ ಏನಾಗುತ್ತೋ.. ನೂರಾರು ಕಾರ್ಯಕರ್ತರನ್ನು ಕಟ್ಟಿಕೊಂಡು ಪ್ರಚಾರದ ವೇಳೆ, ಜೆಡಿಎಸ್ ಅಭ್ಯರ್ಥಿ ವೆಂಕಟಶಿವ ರೆಡ್ಡಿಯವರು ಮಾತಿಗೆ ಸಿಕ್ಕಿದ್ದಾರೆ. ಅವರ ಸಂದರ್ಶನದ ಆಯ್ದಭಾಗ ಇಂತಿದೆ..
ಪ್ರ: ಕಳೆದ ಐದು ವರ್ಷದ ಅವಧಿಯಲ್ಲಿ ರಮೇಶ್ ಕುಮಾರ್ ಅವರು ಅಭಿವೃದ್ದಿ ಕೆಲಸವನ್ನು ಮಾಡಲಿಲ್ಲವೇ?
ವೆಂಕಟಶಿವ ರೆಡ್ಡಿ: ಏನೇನೋ ಹೇಳಿಕೊಳ್ಳುತ್ತಿದ್ದಾರೆ, ಅಷ್ಟು ಮನವಿ ಕೊಟ್ಟಿದ್ದೇನೆ. ಶಾಸ್ವತ ನೀರಾವರಿಯನ್ನು ಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ಅವರು ಏನು ಅಭಿವೃದ್ದಿ ಕೆಲಸ ಮಾಡಿದ್ದೇನೆಂದು ಹೇಳುತ್ತಿದ್ದಾರೋ, ಅದಕ್ಕೆ ಜನ ಉತ್ತರ ನೀಡುತ್ತಾರೆ. ಶಾಸ್ವತ ನೀರಾವರಿ ಕೊಟ್ಟಿಲ್ಲ, ಕೋಚ್ ಫ್ಯಾಕ್ಟರಿ ಕೊಟ್ಟಿಲ್ಲ. ರೈತರ ಸಾಲವನ್ನು ಮನ್ನಾ ಮಾಡಲಿಲ್ಲ.
ನನಗೆ ಮುಜರಾಯಿ ಖಾತೆ ಸಾಕಪ್ಪಾ: ಕೃಷ್ಣಯ್ಯ ಶೆಟ್ಟಿ ಸಂದರ್ಶನ
ಮನೆ ಕೊಟ್ಟಿದ್ದೇನೆಂದು ಹೇಳುತ್ತಾರೆ, ಆದರೆ ಅವರು ಮನೆ ಕೊಟ್ಟಿದ್ದು ಅವರ ಪಕ್ಷದ ಕಾರ್ಯಕರ್ತರಿಗೆ ಮಾತ್ರ. ಕೊತ್ತಪ್ಪಲ್ಲಿ ಎನ್ನುವ ಗ್ರಾಮದಲ್ಲಿ 25ಜನ ಸೂರಿಲ್ಲದವರು ಇದ್ದಾರೆ. ಅವರಿಗೆ ಮನೆ ಕೊಡದೇ ಅವರ ಆಪ್ತರಿಗೆ ಐದೈದು ಮನೆ ಕೊಟ್ಟಿದ್ದಾರೆ. ತಾಲೂಕಿನ ಜನರನ್ನು ರಮೇಶ್ ಕುಮಾರ್ ವಂಚನೆ ಮಾಡಿದ್ದಾರೆ. ಸುಳ್ಳು ಸುಳ್ಳು ಹೇಳಿ..ಹೇಳುತ್ತಾ ಬರುತ್ತಿರುವುದರಿಂದ ಈಗ ಜನ ಅವರ ವಿರುದ್ದವಾಗಿದ್ದಾರೆ.

ರಮೇಶ್ ಕುಮಾರ್ ಶಪಥ ಮಾಡಿದ್ರಲ್ವಾ? ಅದರ ಕಥೆ ಏನಾಯಿತು?
ಪ್ರ: ಕೆ ಸಿ ವ್ಯಾಲಿ ತರಲಾಗದಿದ್ದರೆ ಮತ್ತೆ ನಿಲ್ಲುವುದಿಲ್ಲ ಎಂದು ರಮೇಶ್ ಕುಮಾರ್ ಶಪಥ ಮಾಡಿದ್ರಲ್ವಾ?
ವೆಂಕಟಶಿವ ರೆಡ್ಡಿ: ಕೆ ಸಿ ವ್ಯಾಲಿ ಅಂದರೆ ಏನು, ಆ ಕಕ್ಕಸು ನೀರನ್ನು ಹೋಗಿ ಜನತೆಗೆ ಕೊಡುವುದಾ? ಕುಡಿಯುವುದಕ್ಕೆ ಒಳ್ಲೆ ನೀರು ಕೊಡುತ್ತೇನೆಂದು ವಾಗ್ದಾನ ಮಾಡಿ ಮೋಸ ಮಾಡಿದ್ದಾರೆ. ಒಂದುವರೆ ಸಾವಿರ ಕೋಟಿ ಯೋಜನೆಯನ್ನು ಫ್ಯಾಕ್ಟರಿಯಿಂದ ಹೊರಬೀಳುವ ತಾಜ್ಯ ಒಂದು ಕೆರೆಗೆ ಬಂದು ಬೀಳುತ್ತದೆ.
ಅದು ವಿಷಪೂರಿತ, ಕುಡಿಯಲು ಯೋಗ್ಯವಲ್ಲದ ನೀರು ಎಂದು ಸೈಂಟಿಸ್ಟ್ ಹೇಳಿದ್ದಾರೆ. ಆದರೂ ಅದರ ಅಭಿವೃದ್ದಿಗೆ ಕಾಂಗ್ರೆಸ್ ಸರಕಾರ ಕೈಹಾಕಿದೆ. ಇದು ದೊಡ್ಡ ಹೊಡೆಯುವ ಯೋಜನೆ.

ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲಮನ್ನಾ ಎನ್ನುವ ಎಚ್ಡಿಕೆ ಹೇಳಿಕೆ
ಪ್ರ: ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲಮನ್ನಾ ಮಾಡುತ್ತೇವೆ ಎನ್ನುವ ಎಚ್ಡಿಕೆ ಹೇಳಿಕೆಗೆ ನಿಮ್ಮ ಪಕ್ಷ ಬದ್ದವಾಗಿರುತ್ತಾ?
ವೆಂಕಟಶಿವ ರೆಡ್ಡಿ: ನಮ್ಮ ನಿಲುವಿಗೆ ನಾವು ಬದ್ದರಾಗಿರುತ್ತೇವೆ. ಶಾಸ್ವತ ನೀರಾವರಿ, ರೈತರ ಸಾಲಮನ್ನಾ, ಸ್ತ್ರೀಶಕ್ತಿ ಸಾಲಮನ್ನಾ, ಪೆನ್ಸನ್, ಐನೂರು ರೂಪಾಯಿ ಪೆನ್ಸನ್ ಕೊಡುತ್ತಿದ್ದ ಜಾಗದಲ್ಲಿ ಎರಡುವರೆ ಸಾವಿರ, ಗರ್ಭಿಣಿಯರಿಗೆ ಆರು ತಿಂಗಳು ಸಹಾಯಧನ, ಯುವಕರಿಗೆಲ್ಲಾ ಉದ್ಯೋಗ ಈ ರೀತಿಯ ಎಲ್ಲಾ ಒಳ್ಳೆಯ ಕಾರ್ಯಕ್ರಮವನ್ನು ನಾವು ಮಾಡುತ್ತೇವೆ.
ಪ್ರ: 1983ಯಿಂದ ರಮೇಶ್ ಕುಮಾರ್ ನಿಮ್ಮ ಪ್ರತಿಸ್ಪರ್ಧಿ, ಈ ಬಾರಿ ಹೇಗಿದೆ ಚುನಾವಣೆ?
ವೆಂಕಟಶಿವ ರೆಡ್ಡಿ: ಹಿಂದಿನ ಎಲ್ಲಾ ಚುನಾವಣೆಗಿಂತ ಇದು ಬೆಸ್ಟ್ ಇಲೆಕ್ಷನ್.

ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಲುತ್ತಿದ್ದಾರೆ
ಪ್ರ: ಕಳೆದ ಐದು ವರ್ಷಗಳಲ್ಲಿ ಶ್ರೀನಿವಾಸಪುರ ಕ್ಷೇತ್ರದ ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿದೆಯಾ?
ವೆಂಕಟಶಿವ ರೆಡ್ಡಿ: ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಲುತ್ತಿದ್ದಾರೆ, ಕಾಂಗ್ರೆಸ್ ಸರಕಾರಕ್ಕೆ ಇದನ್ನೆಲ್ಲಾ ನೋಡಿಕೊಳ್ಳಲು ಸಮಯವಿದೆಯಾ? ಬಿಜೆಪಿ ಮತ್ತು ಕಾಂಗ್ರೆಸ್ ಜಗಳವಾಡಿಕೊಂಡು ಸಮಯ ವ್ಯರ್ಥ ಮಾಡಿಕೊಳ್ಳುತ್ತಿವೆಯಲ್ಲಾ.. ಸಾವಿರಾರು ಕೋಟಿ ಲೂಟಿ ಹೊಡೆಯುವ ಕೆಲಸವನ್ನು ಸರಕಾರ ಮಾಡುತ್ತಿದೆಯಷ್ಟೇ..

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಷ್ಟು ಸ್ಥಾನ ಜೆಡಿಎಸ್ ಪಡೆಯಬಹುದು?
ಪ್ರ: ಸಮೀಕ್ಷೆಗಳ ಪ್ರಕಾರ ಅತಂತ್ರ ಫಲಿತಾಂಶ ಬರುತ್ತಿದೆ, ನಿಮ್ಮ ಪ್ರತಿಕ್ರಿಯೆ? ವೆಂಕಟಶಿವ ರೆಡ್ಡಿ: ಇಂಪಾಸಿಬಲ್.. ನಮ್ಮೆಲ್ಲರ ಸಮೀಕ್ಷೆಯ ಪ್ರಕಾರ ಜೆಡಿಎಸ್ ನಂಬರ್ ಒನ್ ಬರುತ್ತದೆ. ಸಿಂಗಲ್ ಪಾರ್ಟಿ ಮೆಜಾರಿಟಿ ಬರುತ್ತದೆ, ಸರಕಾರ ನಾವೇ ರಚಿಸುತ್ತೇವೆ.
ಪ್ರ: ನಿಮ್ಮ ರಾಜಕೀಯ ಲೆಕ್ಕಾಚಾರದ ಪ್ರಕಾರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಷ್ಟು ಸ್ಥಾನ ಜೆಡಿಎಸ್ ಪಡೆಯಬಹುದು?
ವೆಂಕಟಶಿವ ರೆಡ್ಡಿ: ಆರೇಳು ಸ್ಥಾನವನ್ನು ಜೆಡಿಎಸ್ ಗೆಲ್ಲಬಹುದು. ಪ್ರ: ಒಂದು ಬಾರಿ ಗೆದ್ದವರು, ಇನ್ನೊಂದು ಬಾರಿ ಶ್ರೀನಿವಾಸಪುರದಲ್ಲಿ ಗೆದ್ದಿದ್ದು ಕಮ್ಮಿಯಲ್ಲವಾ? ವೆಂಕಟಶಿವ ರೆಡ್ಡಿ: ಇದುವರೆಗಿನ ಎಲ್ಲಾ ಇಲೆಕ್ಷನ್ ನಲ್ಲಿ ಆ ರೀತಿ ಆಗಿದೆ.

ಶ್ರೀನಿವಾಸಪುರ ಕ್ಷೇತ್ರದ ಮತದಾರರಲ್ಲಿ ನಿಮ್ಮ ಮನವಿಯೇನು?
ಪ್ರ: ಮುಂದಿನ ಐದು ವರ್ಷ ಕ್ಷೇತ್ರದ ಅಭಿವೃದ್ದಿಗೆ ಏನು ಕನಸನ್ನು ಕಟ್ಟುಕೊಂಡಿದ್ದೀರಾ?
ವೆಂಕಟಶಿವ ರೆಡ್ಡಿ: ಶಾಸ್ವತ ನೀರಾವರಿ ಯೋಜನೆಯಿಂದ ಹಿಡಿದು, ಪ್ರಣಾಳಿಕೆಯಲ್ಲಿ ಏನೇನು ಭರವಸೆಯನ್ನು ಕೊಟ್ಟಿದ್ದೀವೋ, ಅದನ್ನೆಲ್ಲಾ ಪೂರೈಸುತ್ತೇವೆ. ನಮ್ಮ ಪ್ರಣಾಳಿಕೆಗೆ ಹಂಡ್ರೆಡ್ ಪರ್ಸೆಂಟ್ ಬದ್ದರಾಗಿರುತ್ತೇವೆ.
ಪ್ರ: ಶ್ರೀನಿವಾಸಪುರ ಕ್ಷೇತ್ರದ ಮತದಾರರಲ್ಲಿ ನಿಮ್ಮ ಮನವಿಯೇನು?
ವೆಂಕಟಶಿವ ರೆಡ್ಡಿ: ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಕುಮಾರಸ್ವಾಮಿಯವರನ್ನು ಸಿಎಂ ಮಾಡಬೇಕು. ನಮ್ಮ ಪ್ರಣಾಳಿಕೆಗೆ ನಾವು ಬದ್ದರಾಗಿರುತ್ತೇವೆ.