Debate: ಬೆಂಗಳೂರಿನ ಬಿಜೆಪಿ ನಾಯಕರಿಂದ ಹೊಂದಾಣಿಕೆ ರಾಜಕೀಯ?
ಚುನಾವಣಾ ಹೊಸ್ತಿಲಲ್ಲಿರುವ ಕರ್ನಾಟದಲ್ಲಿ ಮೂರೂ ಪಕ್ಷಗಳು ಭರ್ಜರಿ ಪೂರ್ವತಯಾರಿಯನ್ನು ನಡೆಸುತ್ತಿವೆ. ಎರಡು ದಿನಗಳ ಹಿಂದೆ ಮೋದಿ ಬಂದು ಹೋದರೆ, ಅಮಿತ್ ಶಾ ಕೂಡಾ ರಾಜ್ಯ ಪ್ರವಾಸದಲ್ಲಿದ್ದಾರೆ. ಕಾಂಗ್ರೆಸ್ಸಿನವರು ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಜೆಡಿಎಸ್ಸಿನ ಪಂಚರತ್ನ ರಥಯಾತೆ ನಿನ್ನೆ ಭರ್ಜರಿಯಾಗಿ ಮೈಸೂರಿನಲ್ಲಿ ಸಂಪನ್ನಗೊಂಡಿದೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರಾಜ್ಯ ಪ್ರವಾಸದಲ್ಲಿದ್ದಾರೆ. ಈ ವೇಳೆ ಬೆಂಗಳೂರು ನಗರ ಮತ್ತು ಗ್ರಾಮೀಣ ಭಾಗದ ಅಸೆಂಬ್ಲಿ ಕ್ಷೇತ್ರಗಳ ಮೇಲೆ ಇನ್ನೂ ಹೆಚ್ಚಿನ ಗಮನ ಹರಿಸುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ. ಈ ವೇಳೆ, ಹೊಂದಾಣಿಕೆ ರಾಜಕಾರಣವನ್ನು ಈ ಚುನಾವಣೆಯಿಂದಲೇ ನಿಲ್ಲಿಸಿ ಎನ್ನುವ ಫರ್ಮಾನನ್ನು ನೀಡಿದ್ದಾರೆಂದು ವರದಿಯಾಗಿದೆ.

ಬೆಂಗಳೂರು ನಗರದ ರಾಜಕೀಯದ ವಿಚಾರಕ್ಕೆ ಬರುವುದಾದರೆ ಈ ಹಿಂದೆಯೂ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ ಎಂದು ವರದಿಯಾಗಿತ್ತು. ಈ ವಿಚಾರದಲ್ಲಿ ಹಲವು ಬಾರಿ ಬಿಜೆಪಿ ಹೈಕಮಾಂಡ್, ಬೆಂಗಳೂರು ಮೂಲದ ಪ್ರಬಾವೀ ಮುಖಂಡರಿಗೆ ಎಚ್ಚರಿಕೆಯನ್ನು ನೀಡಿದ್ದಾರೆಂದೂ ಸುದ್ದಿಯಾಗಿತ್ತು.
ಬೆಂಗಳೂರು ನಗರ/ಗ್ರಾಮೀಣ ಸೇರಿದಂತೆ ಒಟ್ಟು 32 ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಇಲ್ಲಿಂದ ಹನ್ನೊಂದು ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಹಾಗಾಗಿ, ಅಮಿತ್ ಶಾ ಎಚ್ಚರಿಕೆ ಮಹತ್ವವನ್ನು ಪಡೆದುಕೊಂಡಿದೆ. ಹಾಗಾದರೆ, ಬೆಂಗಳೂರು ವ್ಯಾಪ್ತಿಯಲ್ಲಿ ಬಿಜೆಪಿ ನಾಯಕರು ಹೊಂದಾಣಿಕೆ ಪಾಲಿಟಿಕ್ಸ್ ನಡೆಸುತ್ತಿದ್ದಾರಾ? ಒಂದು ಚರ್ಚೆ..












Click it and Unblock the Notifications