ಡಿಬೇಟ್ : ಉಪೇಂದ್ರ ಹೊಸ ರಾಜಕೀಯ ಪಕ್ಷ ಘೋಷಣೆ ಸರಿಯೇ?
ಬೆಂಗಳೂರು, ಮಾರ್ಚ್ 06 : ನಟ, ನಿರ್ದೇಶಕ ಉಪೇಂದ್ರ ಅವರು ಕೆಪಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 2017ರ ಅಕ್ಟೋಬರ್ 31ರಂದು ರಾಜಕೀಯಕ್ಕೆ ಪ್ರವೇಶ ಮಾಡುವುದಾಗಿ ಉಪೇಂದ್ರ ಘೋಷಣೆ ಮಾಡಿದ್ದರು. ನವೆಂಬರ್ 2ರ ಮಂಗಳವಾರ ಉಪೇಂದ್ರ ಕೆಪಿಜೆಪಿ ಹೆಸರನ್ನು ಘೋಷಣೆ ಮಾಡಿದ್ದರು.
ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)ಯಲ್ಲಿ ಸಾಕಷ್ಟುಗೊಂದಲಗಳು ಉಂಟಾಗಿದ್ದವು. ಮಂಗಳವಾರ ಬೆಂಬಲಿಗರ, ಅಭ್ಯರ್ಥಿಗಳ ಸಭೆ ನಡೆಸಿದ ಉಪೇಂದ್ರ ಅವರು ಕೆಪಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು.
'ಪ್ರಜಾಕೀಯ' ಎಂಬ ನೂತನ ಪಕ್ಷವನ್ನು ಸ್ಥಾಪನೆ ಮಾಡುವುದಾಗಿ ಉಪೇಂದ್ರ ಘೋಷಣೆ ಮಾಡಿದರು. ನವೆಂಬರ್ 2ರಂದು ಹೊಸ ಪಕ್ಷದ ಹೆಸರು ಘೋಷಣೆ ಮಾಡಿದ್ದ ಉಪೇಂದ್ರ, ಮಾರ್ಚ್ 6ರಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಹೊಸ ಪಕ್ಷ ಕಟ್ಟಿದ 5 ತಿಂಗಳಿನಲ್ಲಿಯೇ ಉಪೇಂದ್ರ ಅವರು ಪಕ್ಷದಿಂದ ಹೊರ ಬಂದಿದ್ದಾರೆ. ಉಪೇಂದ್ರ ಅವರ ರಾಜಕೀಯ ನಡೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂಬದು ಕಮೆಂಟ್ ಬಾಕ್ಸ್‌ನಲ್ಲಿ ತಿಳಿಸಿ...











Click it and Unblock the Notifications