ಕರ್ನಾಟಕದಲ್ಲಿ ಓಮಿಕ್ರಾನ್ ಭೀತಿ ನಡುವೆ ಕೊರೊನಾವೈರಸ್ ಮೂರೂವರೆ ಪಟ್ಟು ಹೆಚ್ಚಳ!
ಬೆಂಗಳೂರು, ಡಿಸೆಂಬರ್ 31: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರಲೇ ಅಲೆ ಭೀತಿ ಕರ್ನಾಟಕಕ್ಕೂ ಕಾಡುತ್ತಿದೆ. ನೆರೆಯ ಮಹಾರಾಷ್ಟ್ರದಲ್ಲಿ ಈಗಾಗಲೇ ಕೊವಿಡ್-19 ಮೂರನೇ ಅಲೆ ಶುರುವಾಗಿದ್ದು, ಓಮಿಕ್ರಾನ್ ಆತಂಕವನ್ನೂ ಹುಟ್ಟು ಹಾಕುತ್ತಿದೆ. ಕರ್ನಾಟಕದಲ್ಲೂ ಅಂಥದ್ದೇ ಪರಿಸ್ಥಿತಿ ಸೃಷ್ಟಿ ಆಗುತ್ತಿರುವಂತೆ ಕಾಣುತ್ತಿದೆ.
ಭಾರತದಲ್ಲಿ ಒಂದೇ ದಿನ 16,764 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 220 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದು, ಇದೇ ಅವಧಿಯಲ್ಲಿ 7,585 ಸೋಂಕಿತರು ಗುಣಮುಖರಾಗಿದ್ದಾರೆ. ಡಿಸೆಂಬರ್ 31ರ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಈವರೆಗೂ ಕೊವಿಡ್-19 ಸೋಂಕಿನಿಂದ 4,81,080 ಮಂದಿ ಪ್ರಾಣ ಬಿಟ್ಟಿದ್ದು, 91,361 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದ ಕೊವಿಡ್-19 ಪ್ರಕರಣಗಳಲ್ಲಿ ಕರ್ನಾಟಕದ ಪಾಲು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಕಳೆದ ಒಂದೇ ವಾರದಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆ ಮೂರೂವರೆ ಪಟ್ಟು ಹೆಚ್ಚಾಗಿರುವುದು ಅಂಕಿ-ಅಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಜ್ಯದಲ್ಲಿ ಕೊರೊನಾವೈರಸ್ ಮತ್ತು ಓಮಿಕ್ರಾನ್ ಹರಡುವಿಕೆ ವೇಗ ಮತ್ತು ಭೀತಿ ಹೆಚ್ಚಾಗುವುದಕ್ಕೆ ಅಂಕಿ-ಸಂಖ್ಯೆಗಳು ಹೇಗೆ ಕಾರಣವಾಗುತ್ತಿವೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.
Koo AppWe have further strengthened #Vaccination efforts in Namma Malleshwara. On Jan 01, 2022, the MEGA VACCINATION CENTRE opposite KC General Hospital, Malleshwara, will open. It will be a 24*7 vaccination centre for the benefit of all. Stay Safe. Get Vaccinated. - Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 31 Dec 2021

ಕಳೆದ ವಾರಕ್ಕೂ, ಈ ವಾರಕ್ಕೂ ಅಂತರ ಅಜಗಜಾಂತರ
ರಾಜ್ಯದಲ್ಲಿ ಕ್ರಿಸ್ ಮಸ್ ಹಬ್ಬಕ್ಕೂ ಮೊದಲು ಅಂದರೆ ಡಿಸೆಂಬರ್ 24ರಂದು 200 ರಿಂದ 300ರ ಆಸುಪಾಸಿನಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 29ರ ಹೊತ್ತಿಗೆ 700ರ ಗಡಿ ದಾಟಿದೆ. ಕಳೆದ ಆರೇಳು ದಿನಗಳಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಮೂರೂವರೆ ಪಟ್ಟು ಹೆಚ್ಚಳವಾಗಿರುವುದು ಪರಿಸ್ಥಿತಿಯ ಬೆಳವಣಿಗೆಗೆ ಹಿಡಿದ ಕೈಗನ್ನಡಿ ಆಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೇಗೆ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆ ಆಯಿತು ಎಂಬುದಕ್ಕೆ ಈ ಕೆಳಗಿನ ಚಿತ್ರವೇ ಸಾಕ್ಷಿ ಆಗಿದೆ.

ಡಿ.24ರಂದು 270 ಕೊರೊನಾವೈರಸ್ ಪ್ರಕರಣ ಪತ್ತೆ
ಕರ್ನಾಟಕದಲ್ಲಿ ಕ್ರಿಸ್ ಮಸ್ ಹಬ್ಬಕ್ಕೂ ಮೊದಲು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 300ಕ್ಕಿಂತ ಕಡಿಮೆಯಾಗಿತ್ತು. ಕಳೆದ ಡಿಸೆಂಬರ್ 24ರಂದು ರಾಜ್ಯದಲ್ಲಿ ಒಂದು ದಿನದಲ್ಲಿ 270 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಇದೇ ಅವಧಿಯಲ್ಲಿ ನಾಲ್ವರು ಸೋಂಕಿತರು ಮೃತಪಟ್ಟಿದ್ದು, 246 ಮಂದಿ ಗುಣಮುಖರಾಗಿದ್ದರು. ಅಂದಿನ ಮಟ್ಟಿಗೆ ರಾಜ್ಯದಲ್ಲಿ ಒಟ್ಟು 7,721 ಸಕ್ರಿಯ ಪ್ರಕರಣಗಳಿದ್ದವು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿತ್ತು.

ಡಿ.25ರಂದು 348 ಕೊರೊನಾವೈರಸ್ ಪ್ರಕರಣ ಪತ್ತೆ
ರಾಜ್ಯದಲ್ಲಿ ಮರುದಿನವೇ ಸೋಂಕಿತ ಪ್ರಕರಣಗಳ ಸಂಖ್ಯೆ 300ರ ಗಡಿ ದಾಟಿತು. ಡಿಸೆಂಬರ್ 25ರಂದು ರಾಜ್ಯದಲ್ಲಿ ಒಂದು ದಿನದಲ್ಲಿ 348 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಇದೇ ಅವಧಿಯಲ್ಲಿ ಮೂವರು ಸೋಂಕಿತರು ಮೃತಪಟ್ಟಿದ್ದು, 198 ಮಂದಿ ಗುಣಮುಖರಾಗಿದ್ದರು. ಅಂದಿನ ಮಟ್ಟಿಗೆ ರಾಜ್ಯದಲ್ಲಿ ಒಟ್ಟು 7,418 ಸಕ್ರಿಯ ಪ್ರಕರಣಗಳಿದ್ದವು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿತು.

ರಾಜ್ಯದಲ್ಲಿ ಡಿ.26ರಂದು 289 ಜನರಿಗೆ ಕೊರೊನಾವೈರಸ್
300ರ ಗಡಿ ದಾಟಿದ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಮತ್ತೆ ಕೊಂಚ ಇಳಿಕೆ ಕಂಡಿತು. ಡಿಸೆಂಬರ್ 26ರಂದು ರಾಜ್ಯದಲ್ಲಿ ಒಂದು ದಿನದಲ್ಲಿ 289 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಇದೇ ಅವಧಿಯಲ್ಲಿ ನಾಲ್ವರು ಸೋಂಕಿತರು ಮೃತಪಟ್ಟಿದ್ದು, 254 ಮಂದಿ ಗುಣಮುಖರಾಗಿದ್ದರು. ಅಂದಿನ ಮಟ್ಟಿಗೆ ರಾಜ್ಯದಲ್ಲಿ ಒಟ್ಟು 7,449 ಸಕ್ರಿಯ ಪ್ರಕರಣಗಳಿದ್ದವು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿತು.

ಕೊರೊನಾವೈರಸ್ ಭಯ ಹೆಚ್ಚಿಸಿದ ಸೋಮವಾರ
ಕೊರೊನಾವೈರಸ್ ಏರಿಕೆ ಇಳಿಕೆಯು ಜನರಲ್ಲಿ ಸೋಮವಾರದಿಂದ ಅತಿಹೆಚ್ಚು ಭಯವನ್ನು ಹುಟ್ಟಿಸುವುದಕ್ಕೆ ಶುರುವಾಯಿತು. ಡಿಸೆಂಬರ್ 27ರಂದು ರಾಜ್ಯದಲ್ಲಿ ಒಂದು ದಿನದಲ್ಲಿ 356 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಇದೇ ಅವಧಿಯಲ್ಲಿ ಇಬ್ಬರು ಸೋಂಕಿತರು ಮೃತಪಟ್ಟಿದ್ದು, 347 ಮಂದಿ ಗುಣಮುಖರಾಗಿದ್ದರು. ಅಂದಿನ ಮಟ್ಟಿಗೆ ರಾಜ್ಯದಲ್ಲಿ ಒಟ್ಟು 7,456 ಸಕ್ರಿಯ ಪ್ರಕರಣಗಳಿದ್ದವು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿತು.

ಕರ್ನಾಟಕದಲ್ಲಿ 500ರ ಗಡಿ ದಾಟಿದ ಕೊವಿಡ್-19
ಕರ್ನಾಟಕದಲ್ಲಿ ಮಂಗಳವಾರ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಒಂದೇ ದಿನದಲ್ಲಿ 500 ಗಡಿ ದಾಟಿತು. ಡಿಸೆಂಬರ್ 28ರಂದು ರಾಜ್ಯದಲ್ಲಿ ಒಂದು ದಿನದಲ್ಲಿ 566 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಇದೇ ಅವಧಿಯಲ್ಲಿ ಆರು ಸೋಂಕಿತರು ಮೃತಪಟ್ಟಿದ್ದು, 245 ಮಂದಿ ಗುಣಮುಖರಾಗಿದ್ದರು. ಅಂದಿನ ಮಟ್ಟಿಗೆ ರಾಜ್ಯದಲ್ಲಿ ಒಟ್ಟು 7,771 ಸಕ್ರಿಯ ಪ್ರಕರಣಗಳಿದ್ದವು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿತು.

ಒಂದು ದಿನದಲ್ಲಿ 700ಕ್ಕೂ ಹೆಚ್ಚು ಕೊವಿಡ್ ಪ್ರಕರಣ
ರಾಜ್ಯದಲ್ಲಿ ಬುಧವಾರ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 700 ಗಡಿ ದಾಟಿತು. ಡಿಸೆಂಬರ್ 29ರಂದು ಕರ್ನಾಟಕದಲ್ಲಿ ಒಂದು ದಿನದಲ್ಲಿ 707 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಇದೇ ಅವಧಿಯಲ್ಲಿ ಮೂವರು ಸೋಂಕಿತರು ಮೃತಪಟ್ಟಿದ್ದು, 252 ಮಂದಿ ಗುಣಮುಖರಾಗಿದ್ದರು. ಅಂದಿನ ಮಟ್ಟಿಗೆ ರಾಜ್ಯದಲ್ಲಿ ಒಟ್ಟು 8,223 ಸಕ್ರಿಯ ಪ್ರಕರಣಗಳಿದ್ದವು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿತು.












Click it and Unblock the Notifications