keyboard_backspace

ಪ್ರಧಾನಿ ಮೋದಿ ಜನ್ಮದಿನದಂದೇ 'ರಾಷ್ಟ್ರೀಯ ನಿರುದ್ಯೋಗ ದಿನಾಚರಣೆ'

Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 16: ಕಳೆದ ವರ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಹುಟ್ಟು ಹಬ್ಬದಂದೇ ರಾಷ್ಟ್ರೀಯ ನಿರುದ್ಯೋಗ ದಿನವನ್ನು ಆಚರಣೆ ಮಾಡಿತ್ತು. ಅದರಂತೆ ಈ ವರ್ಷವೂ ಕೂಡಾ ಕಾಂಗ್ರೆಸ್‌ ಸೆಪ್ಟೆಂಬರ್‌ 17 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನದಂದು ರಾಷ್ಟ್ರೀಯ ನಿರುದ್ಯೋಗ ದಿನವನ್ನು ಆಚರಣೆ ಮಾಡುತ್ತಿದೆ. ಈ ದಿನಕ್ಕೆ ಕಳೆದ ಬಾರಿಯಂತೆ ಈ ಬಾರಿಯೂ ಅಧಿಕ ಉತ್ತಮ ಪ್ರತಿಕ್ರಿಯೆ ಲಭಿಸುವ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ಮಾತ್ರವಲ್ಲದೇ ಎಲ್ಲಾ ವಿರೋಧ ಪಕ್ಷಗಳು ಇದೆ.

ಬಿಜೆಪಿಯು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಹಿನ್ನೆಲೆ ಹ್ಯಾಪಿ ಬರ್ತ್‌‌ಡೇ ಪಿಎಂ ಲಸಿಕೆ ಬೂಸ್ಟರ್‌ ಅನ್ನು ನಡೆಸಲು ಈಗಾಗಲೇ ಸಿದ್ದತೆ ನಡೆಸಿದೆ. ಇದರಂತೆ ಸೆಪ್ಟೆಂಬರ್‌ 17 ರಿಂದ ಅಕ್ಟೋಬರ್‌ವರೆಗೂ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಹಿನ್ನೆಲೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಿದೆ. ಬಿಜೆಪಿಯು ಸುಮಾರು 20 ದಿನಗಳ ಸೇವಾ ಸಪ್ತಾಹ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಇದಕ್ಕೆ ಕಾಂಗ್ರೆಸ್‌ನ ತಿರುಗೇಟು ಎಂಬಂತೆ ನಿರುದ್ಯೋಗ ದಿನಾಚರಣೆಯನ್ನು ನರೇಂದ್ರ ಮೋದಿ ಜನ್ಮದಿನದಂದೇ ಆಚರಣೆ ಮಾಡುತ್ತಿದೆ.

ಪ್ರಧಾನಿ ಹುಟ್ಟು ಹಬ್ಬದ ಹಿನ್ನೆಲೆ ಬಿಜೆಪಿಯಿಂದ 'ಹ್ಯಾಪಿ ಬರ್ತ್‌ಡೇ ಪಿಎಂ' ಲಸಿಕೆ ಬೂಸ್ಟರ್‌ಪ್ರಧಾನಿ ಹುಟ್ಟು ಹಬ್ಬದ ಹಿನ್ನೆಲೆ ಬಿಜೆಪಿಯಿಂದ 'ಹ್ಯಾಪಿ ಬರ್ತ್‌ಡೇ ಪಿಎಂ' ಲಸಿಕೆ ಬೂಸ್ಟರ್‌

ಬಿಜೆಪಿಯು ನರೇಂದ್ರ ಮೋದಿಯ 71 ನೇ ಜನ್ಮದಿನದ ಹಿನ್ನೆಲೆ ನರೇಂದ್ರ ಮೋದಿಯ ಎಲ್ಲಾ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಪ್ರಚಾರ ಮಾಡುವ ತಯಾರಿ ಮಾಡಿಕೊಂಡಿದೆ. ಈಗಾಗಲೇ ಪ್ರಚಾರ ಕಾರ್ಯವನ್ನು ಆರಂಭ ಮಾಡಿದೆ. ಆದರೆ ಕಾಂಗ್ರೆಸ್‌ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆದ ಬಳಿಕ ದೇಶದಲ್ಲಿ ಎಷ್ಟು ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಹಾಗೂ ಎಷ್ಟು ಮಂದಿಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ, ನಿರುದ್ಯೋಗ ಪ್ರಮಾಣ ಎಷ್ಟು ಮಟ್ಟಿಗೆ ಅಧಿಕವಾಗಿದೆ ಎಂಬುವುದನ್ನು ನರೇಂದ್ರ ಮೋದಿ ಹುಟ್ಟು ಹಬ್ಬದಂದೇ ಪ್ರಚಾರ ಮಾಡಲಿದ್ದಾರೆ.

 ಕಾಂಗ್ರೆಸ್‌ನಿಂದ ರಾಷ್ಟ್ರೀಯ ನಿರುದ್ಯೋಗ ದಿನ ಆಚರಣೆ

ಕಾಂಗ್ರೆಸ್‌ನಿಂದ ರಾಷ್ಟ್ರೀಯ ನಿರುದ್ಯೋಗ ದಿನ ಆಚರಣೆ

ಈ ಬಗ್ಗೆ ಮಾಹಿತಿ ನೀಡಿರುವ ಯೂತ್‌ ಕಾಂಗ್ರೆಸ್‌, "ಮಿಲಿಯನ್‌ ಗಟ್ಟಲೆ ಯುವಜನರಲ್ಲಿ ಈ ನಿರುದ್ಯೋಗ ಸಮಸ್ಯೆ ಹೆಚ್ಚಳವು ಒತ್ತಡವನ್ನು ಸೃಷ್ಟಿ ಮಾಡಿದೆ. ಈ ಕಾರಣದಿಂದಾಗಿ ಯೂತ್‌ ಕಾಂಗ್ರೆಸ್‌ ಪ್ರಧಾನಿ ನರೇಂದ್ರ ಮೋದಿ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಣೆ ಮಾಡುತ್ತದೆ," ಎಂದು ತಿಳಿಸಿದೆ. ಈ ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಸುಮಾರು 32 ಲಕ್ಷದಷ್ಟು ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿರುವಾಗ ಪ್ರಧಾನಿ ಮೋದಿಯ ಬಂಡವಾಳಗಾರ ಸ್ನೇಹಿತರು ಮಾತ್ರ ಇನ್ನಷ್ಟು ತಮ್ಮ ಸಂಪತ್ತನ್ನು ಹೆಚ್ಚಳ ಮಾಡಿಕೊಳ್ಳುತ್ತಿದ್ದಾರೆ ಎಂದು ಯುವ ಕಾಂಗ್ರೆಸ್‌ ಆರೋಪ ಮಾಡಿದೆ.

 ಈ ಪಕೋಡ ಆರ್ಥಿಕತೆ ನಮಗೆ ಸಾಕು

ಈ ಪಕೋಡ ಆರ್ಥಿಕತೆ ನಮಗೆ ಸಾಕು

ಹಾಗೆಯೇ "ಈ ಪಕೋಡ ಆರ್ಥಿಕತೆಯು ನಮಗೆ ಸಾಕು, ಈ ರಾಷ್ಟ್ರದ ಯುವ ಜನರು ಸಾಮಾನ್ಯವಾದ ಉದ್ಯೋಗವನ್ನು ಬಯಸುತ್ತಾರೆ," ಎಂದು ಹೇಳುವ ಮೂಲಕ ಕಾಂಗ್ರೆಸ್‌, ನಿರುದ್ಯೋಗಿಗಳು ಪಕೋಡ ಮಾರಬಹುದು ಎಂದು ಹೇಳಿದ್ದ ಪ್ರಧಾನಿ ಮೋದಿಯ ಕಾಲೆಳೆದಿದೆ. ನಿರುದ್ಯೋಗದ ಸಮಸ್ಯೆಯನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್‌ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನಡೆಸಲಿದೆ. ಇನ್ನು ಈ ಬಗ್ಗೆ ಮಾತನಾಡಿರುವ, ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ, "ಯುವ ಜನರು ಈಗ ಉದ್ಯೋಗವಿದಲ್ಲದೆ ಅಲೆದಾಡುವಂತೆ ಆಗಿದೆ. ವರ್ಷಕ್ಕೆ ಸುಮಾರು ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿಕೊಂಡ ಬಿಜಪಿ ಸರ್ಕಾರ ಈ ನಿರುದ್ಯೋಗ ಸಮಸ್ಯೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಸೆಪ್ಟೆಂಬರ್‌ 17 ಅಂದರೆ ರಾಷ್ಟ್ರೀಯ ನಿರುದ್ಯೋಗ ದಿನವಾಗಿದೆ. ಈ ದಿನವನ್ನು ಕೋಟ್ಯಾಂತರ ಯುವಜನರನ್ನು ನಿರುದ್ಯೋಗ ಸಮಸ್ಯೆಗೆ ದೂಡಿದ ಯುವ ಜನ ವಿರೋಧಿ ಪ್ರಧಾನಿ ಹುಟ್ಟು ಹಬ್ಬವಾಗಿ ಆಚರಣೆ ಮಾಡಲಾಗುತ್ತದೆ," ಎಂದು ತಿಳಿಸಿದ್ದಾರೆ.

ನೂತನ ರಕ್ಷಣಾ ಸಚಿವಾಲಯದ ಕಚೇರಿ ಉದ್ಘಾಟನೆ: ಸೆಂಟ್ರಲ್‌ ವಿಸ್ತಾ ಟೀಕಾಕಾರರ ವಿರುದ್ದ ಮೋದಿ ಕಿಡಿನೂತನ ರಕ್ಷಣಾ ಸಚಿವಾಲಯದ ಕಚೇರಿ ಉದ್ಘಾಟನೆ: ಸೆಂಟ್ರಲ್‌ ವಿಸ್ತಾ ಟೀಕಾಕಾರರ ವಿರುದ್ದ ಮೋದಿ ಕಿಡಿ

 ಕಳೆದ ವರ್ಷ ಟ್ಟಿಟ್ಟರ್‌ನಲ್ಲಿ ಟ್ರಂಡ್‌ ಆಗಿತ್ತು #National Unemployment Day

ಕಳೆದ ವರ್ಷ ಟ್ಟಿಟ್ಟರ್‌ನಲ್ಲಿ ಟ್ರಂಡ್‌ ಆಗಿತ್ತು #National Unemployment Day

ಪ್ರಧಾನ ಮಂತ್ರಿ ನರೇಂದ್ರ ಮೋದಿಯು ಕಳೆದ ವರ್ಷ 70 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ದಿನ ಹಲವಾರು ಮಂದಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಜನ್ಮದಿನದ ಶುಭಾಶಯವನ್ನು ಕೋರಿದ್ದರು. ಆದರೆ ಈ ನಡುವೆ ಟ್ವಿಟ್ಟರ್‌ನಲ್ಲಿ ಪ್ರಧಾನಿ ಮೋದಿ ಹುಟ್ಟು ಹಬ್ಬದಂದೇ #NationalUnemploymentDay ಕೂಡಾ ಟ್ರೆಂಡ್‌ ಆಗಿತ್ತು. ಕಳೆದ ವರ್ಷ ಬಿಜೆಪಿ ಮೋದಿಯ 70 ನೇ ವರ್ಷದ ಹಿನ್ನೆಲೆ ರಾಷ್ಟ್ರೀಯ ಸಪ್ತಾಹವನ್ನು ಆಚರಿಸಿತ್ತು. ಅದರಂತೆ ವಿರೋಧ ಪಕ್ಷಗಳು ಕಳೆದ ವರ್ಷ ಒಂದು ವಾರ ಪೂರ್ತಿ ರಾಷ್ಟ್ರೀಯ ನಿರುದ್ಯೋಗ ಸಪ್ತವಾಗಿ ಆಚರಿಸಿದ್ದು, ಸೆಪ್ಟೆಂಬರ್‌ 17 ರಂದು ನಿರುದ್ಯೋಗ ದಿನವನ್ನು ಆಚರಣೆ ಮಾಡಿದೆ. ಈ ದಿನದಂದು ಟ್ವಿಟ್ಟರ್‌ನಲ್ಲಿ #NationalUnemploymentDay ಬಾರೀ ಸದ್ದು ಮಾಡಿತ್ತು. ದೇಶದಲ್ಲಿ ತೀವ್ರವಾಗಿ ಕಾಡುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು ಬೊಟ್ಟು ಮಾಡಿ ತೋರಿಸಿರುವ ಟ್ವೀಟಿಗರು ಪ್ರಧಾನಿ ಮೋದಿಯವರು ಉದ್ಯೋಗ ಸೃಷ್ಟಿಸಲು ವಿಫಲರಾಗಿದ್ದಾರೆ. ಬದಲಾಗಿ ಉದ್ಯೋಗವನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ್ದರು.

'ಡಬಲ್‌ ಇಂಜಿನ್‌ ಸರ್ಕಾರ': ಯೋಗಿ ಸರ್ಕಾರವನ್ನು ಶ್ಲಾಘಿಸಿದ ಮೋದಿ'ಡಬಲ್‌ ಇಂಜಿನ್‌ ಸರ್ಕಾರ': ಯೋಗಿ ಸರ್ಕಾರವನ್ನು ಶ್ಲಾಘಿಸಿದ ಮೋದಿ

 ಈ ವರ್ಷ ಬಿಜೆಪಿಯಿಂದ 'ಹ್ಯಾಪಿ ಬರ್ತ್‌ಡೇ ಪಿಎಂ' ಲಸಿಕೆ ಬೂಸ್ಟರ್‌

ಈ ವರ್ಷ ಬಿಜೆಪಿಯಿಂದ 'ಹ್ಯಾಪಿ ಬರ್ತ್‌ಡೇ ಪಿಎಂ' ಲಸಿಕೆ ಬೂಸ್ಟರ್‌

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿಯು ಮೂರು ವಾರಗಳ ಹ್ಯಾಪಿ ಬರ್ತ್‌ಡೇ ಪಿಎಂ ಲಸಿಕೆ ಬೂಸ್ಟರ್‌ ಅನ್ನು ನಡೆಸಲಿದೆ. ಬೂತ್‌ ಮಟ್ಟದಲ್ಲಿ ಸುಮಾರು ಐದು ಕೋಟಿ ಅಂಚೆ ಚೀಟಿಗಳಲ್ಲಿ ಧನ್ಯವಾದ ಮೋದಿಜೀ ಎಂದು ಬರೆದು ಪೋಸ್ಟ್‌ ಮಾಡುವುದು, ಹಾಗೆಯೇ ಸುಮಾರು 14 ಕೋಟಿ ರೇಷನ್‌ ಕಿಟ್‌ಗಳನ್ನು ನೀಡುವುದು, 71 ನದಿ ತೀರಗಳನ್ನು ಸ್ವಚ್ಛಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಮುಂಚಿತವಾಗಿ ಮಾಡಿರುವ ಕಾರ್ಯಕ್ರಮಗಳು ಆಗಿದೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಲಸಿಕೆಯ ಬಗ್ಗೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಜೀವನ ಹಾಗೂ ಕಾರ್ಯಗಳನ್ನು ಪ್ರಚಾರ ಮಾಡುವುದು ಕೂಡಾ ಈ ಅಭಿಯಾನದ ಭಾಗವಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ 71 ವರ್ಷ ಆಗುತ್ತಿರುವ ಹಿನ್ನೆಲೆ 71 ನದಿ ತೀರಗಳಲ್ಲಿ ಸ್ವಚ್ಛ ಕಾರ್ಯಕ್ರಮ ನಡೆಸುವುದು, ಸ್ಥಳೀಯ ಮಾಧ್ಯಮಗಳಲ್ಲಿ ಅಥವಾ ಭಾಷೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ಸಾಹಿತಿಗಳ ಮಾತನ್ನು ಪ್ರಚಾರ ಮಾಡುವುದು ಮೊದಲಾದ ಕಾರ್ಯಕ್ರಮಗಳನ್ನು ಬಿಜೆಪಿ ಆಯೋಜಿಸಿದೆ.

(ಒನ್‌ ಇಂಡಿಯಾ ಸುದ್ದಿ)

English summary
Congress to observe National Unemployment Day on Narendra Modi birthday to counter to BJP’s Seva Samarpan Abhiyan. Read on.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X