ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರಾಟದ ಸರಕಾಗುತ್ತಿರುವ ಯೋಗದ ಬಗ್ಗೆ ಎಚ್ಚರದಿಂದಿರಿ!

By ವಿವೇಕ ಬೆಟ್ಕುಳಿ, ಕುಮಟಾ
|
Google Oneindia Kannada News

ಯೋಗಕ್ಕೆ ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ. ಅನೇಕ ಸಾಧುಗಳು, ಸನ್ಯಾಸಿಗಳು ಹಾಗೂ ಇತರೆ ವ್ಯಕ್ತಿಗಳು ಸಹಾ ಯೋಗ ಕ್ಷೇತ್ರದ ಬಗ್ಗೆ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ನಮ್ಮ ದೇಶದಲ್ಲಿ ಕಳೆದ ಮೂರು ವರ್ಷಗಳಿಂದ ಯೋಗಕ್ಕೆ ಸಿಕ್ಕ ಜನಪ್ರಿಯತೆ ಎಂದಿಗೂ ಸಿಕ್ಕಿರಲಿಲ್ಲ.

ನಮ್ಮ ಪೂರ್ವ ಪ್ರಧಾನ ಮಂತ್ರಿಗಳಲ್ಲಿ ಅನೇಕರು ಯೋಗಾಭ್ಯಾಸ ಮಾಡುತ್ತಿದ್ದರು. ಆದರೆ ಅದನ್ನು ಸಾರ್ವತ್ರಿಕಗೊಳಿಸರಲಿಲ್ಲ. ನಮ್ಮ ಇಂದಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ತಾವೇ ಸ್ವತ: ಯೋಗಾಭ್ಯಾಸ ಮಾಡುವುದರ ಜೊತೆಗೆ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದರು. ಇದರ ಪರಿಣಾಮವೇ ಜೂನ್ 21ನ್ನು ಅಂತಾರಾಷ್ಟೀಯ ಯೋಗ ದಿನವನ್ನಾಗಿ ಜಗತ್ತಿನ ಎಲ್ಲಡೆ ಆಚರಿಸಲಾಗುತ್ತಿದೆ.

ಯೋಗದ ಬಗೆಗಿನ ಸತ್ಯ ಮತ್ತು ಅನಂತತೆಯ ಅನುಭವಯೋಗದ ಬಗೆಗಿನ ಸತ್ಯ ಮತ್ತು ಅನಂತತೆಯ ಅನುಭವ

ಯೋಗ ಎಂಬುದು ಒಂದು ಧರ್ಮವಲ್ಲ, ಒಂದು ಧರ್ಮಕ್ಕೆ ಸೀಮಿತವೂ ಅಲ್ಲ. ತತ್ವಜ್ಞಾನವೂ ಅಲ್ಲ, ಅದೊಂದು ಶುದ್ಧ ವಿಜ್ಞಾನ. ಯೋಗ ಒಂದು ನಂಬಿಕೆಯೂ ಅಲ್ಲ. ವಿಜ್ಞಾನ ಹೇಗೆ ಪ್ರಯೋಗ ಮಾಡಿ ಎಂದು ಹೇಳುತ್ತದೆಯೋ, ಹಾಗೇ ಯೋಗ ಅನುಭವಿಸಿ ಎಂದು ಹೇಳುವುದು. ಇವೆರಡರ ಅರ್ಥ ಒಂದೇ ಆಗಿರುವುದು.

Beware about the kind of Yoga which has become business

ಪ್ರಯೋಗ ಎಂದರೇ ಬಾಹ್ಯದಲ್ಲಿ ಪ್ರಯೋಗಿಸುವುದು, ಅನುಭವ ಎಂದರೆ ಆಂತರಿಕವಾಗಿ ಅನುಭವಿಸುವುದಾಗಿದೆ. ಬೇರೆ ಯಾರದೋ ಅನುಭವ ಎಲ್ಲರಿಗೂ ಆಗಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಪ್ರತ್ಯೇಕ ಅನುಭವ ಆಗುವುದು ಪಥವನ್ನು ಮಾತ್ರ ತಿಳಿದವರು ಸೂಚಿಸಬಹುದಾಗಿದೆ.

ಇಂತಹ ಯೋಗ ಕ್ಷೇತ್ರವನ್ನು ನಾವಿಂದು ವ್ಯಾಪಾರದ ವಸ್ತುವನ್ನಾಗಿಸಿದ್ದೇವೆ. ಒಂದು ಧರ್ಮಕ್ಕೆ ಸೀಮಿತಗೊಳಿಸಿದ್ದೇವೆ. ರಾಜಕೀಯ ಆಟಗಳಿಗೆ ಬಳಸಿಕೊಳ್ಳುತ್ತಿದ್ದೇವೆ. ಇದು ಯೋಗ ಕ್ಷೇತ್ರಕ್ಕೆ ನಾವು ಮಾಡುವ ಅಪಮಾನವಲ್ಲವೆ?

ಬೆಂಗಳೂರಿನ ನಾಗೇಂದ್ರ-ಇವರೇ ಪ್ರಧಾನಿ ಮೋದಿಯ ಯೋಗ ಗುರು..ಬೆಂಗಳೂರಿನ ನಾಗೇಂದ್ರ-ಇವರೇ ಪ್ರಧಾನಿ ಮೋದಿಯ ಯೋಗ ಗುರು..

ಇಂದು ಹಿಂದೂ ಧಾಮಿ೯ಕ ಕ್ಷೇತ್ರಗಳಲ್ಲಿ ಎಲ್ಲಾ ಕಡೆ ನಾಯಿ ಕೊಡೆಗಳಂತೆ ಯೋಗ ಕಲಿಸುವ ಕೇಂದ್ರಗಳು ತಲೆ ಎತ್ತುತ್ತಿವೆ. ಕೇಸರಿ ಅಥವಾ ಶ್ವೇತ ವರ್ಣದ ಬಟ್ಟೆ ಧರಿಸಿರುವ ಹಣೆಯ ಮೇಲೆ ತಿಲಕವಿಟ್ಟಿರುವ ಗಡ್ಡದಾರಿ ಗುರುಗಳೆನೇಕರು ಬೀದಿ ಬೀದಿಯಲ್ಲಿ ಕಾಣ ಸಿಗುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಯೋಗದ ನಾಲ್ಕಾರು ಆಸನಗಳನ್ನು ಕಲಿತ, ಇಂಗ್ಲಿಷನ್ನು ಮಾತನಾಡುವ ವ್ಯಕ್ತಿಗಳು ತುಂಬಾ ಜನರು ವಿದೇಶಿಗರಿಗೆ ಯೋಗ ಕಲಿಸುವ ಗುರುಗಳಾಗಿದ್ದಾರೆ. ಹಠ ಯೋಗ, ಕುಂಡಲಿನ ಯೋಗ, ಡಾನ್ಸ್ ಯೋಗ, ಧ್ಯಾನ ಯೋಗ ಹೀಗೆ ಹಲವಾರು ಬ್ರಾಂಡ್ ಗಳ ಮೂಲಕ ಯೋಗದ ವ್ಯಾಪ್ಯಾರ ನಡೆಸುತ್ತಿದ್ದಾರೆ. ಇಂಥವರ ಬಗ್ಗೆ ಜನರು ಎಚ್ಚರದಿಂದಿರಬೇಕು.

Beware about the kind of Yoga which has become business

ಇತೀಚೀನ ದಿನಗಳಲ್ಲಿ ಟಿವಿ ನೋಡಿ ಯೋಗ ಮಾಡುವವರೇ ಹೆಚ್ಚಾಗಿದ್ದಾರೆ. ಪತಂಜಲಿ ಬಾಬಾ ರಾಮದೇವ, ನಟಿ ಶಿಲ್ಪಾ ಶೆಟ್ಟಿ ಇವರುಗಳ ಸಿಡಿಗಳಿಗೆ ಹೆಚ್ಚಿನ ಬೇಡಿಕೆ ಇರುವುದು. ಸಾಮೂಹಿಕ ಯೋಗ ಮಾಡುವುದು ಫ್ಯಾಷನ್ ಆಗಿದೆ. ಬಯಲಿನಲ್ಲಿ ಮೈಯನ್ನು ಬಗಿಸುವ ಹತ್ತಾರು ಆಸನಗಳನ್ನು ಮಾಡುತ್ತಾ ಪೋಟೋ ತೆಗೆಸಿಕೊಂಡು ತಾವು ಸಹ ಯೋಗ ಕಲಿಯುತ್ತಿರುವದಾಗಿ ಸಾಮಾಜಿಕ ಜಾಲ ತಾಣಗಳಲಿ ಹೇಳಿಕೊಳ್ಳುವುದು ಒಂದು ಖಯಾಲಿಯಾಗಿದೆ. ಕೆಲವು ಪ್ರಸಿದ್ದ ವ್ಯಕ್ತಿಗಳಂತೂ ಫೇಸ್ ಬುಕ್, ಟ್ವಿಟ್ಟರ್, ವಾಟ್ಸಾಪ್ ಗಳಿಗಾಗಿಯೇ ಯೋಗ ಮಾಡಿ ಚಾಲನೆಯಲ್ಲಿ ಇರಲು ಬಯಸುತ್ತಾರೆ.

ನಮ್ಮ ದೇಶದ ಜನತೆಗೆ ಉದೋಗ್ಯ ಬೇಕಾಗಿದೆ. ಅದಕ್ಕಾಗಿ ಯೋಗ ಕ್ಷೇತ್ರ ಹಲವಾರು ಅವಕಾಶಗಳನ್ನು ನೀಡಿದೆ. ಆದರೇ ನಾವು ನಮ್ಮ ಸ್ವಾರ್ಥಕ್ಕಾಗಿ ಯೋಗ ಕ್ಷೇತ್ರವನ್ನು ಬಳಸಿಕೊಳ್ಳದೇ ಅದರ ಮೂಲವಾದ ಉದ್ದೇಶವನ್ನು ತಿಳಿಸುವುದು ಬಹುಮುಖ್ಯವಾಗಿದೆ. ಆದರೆ, ಅದಾಗುತ್ತಿದೆಯಾ? ಎಂದು ಕೇಳಿಕೊಂಡರೆ 'ಇಲ್ಲ' ಎಂಬ ಉತ್ತರವೇ ಬರುತ್ತದೆ.

ಬಹುಶ: ಈ ಬಾರಿಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗದ ಬಗ್ಗೆ ಸಮರ್ಪಕವಾಗಿ ಅರ್ಥ ಮಾಡಿಕೊಂಡು ಆ ಕ್ಷೇತ್ರವನ್ನು ಬೆಳೆಸಲು ಪ್ರಯತ್ನಿಸಿದರೆ ಆಚರಣೆಗೆ ಸಂದಭೋ೯ಚಿತವಾಗುವುದು.

English summary
Beware about the kind of Yoga which has become business, writes Vivek Betkuli from Kumata, Uttara Kannada. International Yoga Day was celebrated on 21st June all over the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X