ಒಂದೆರಡ್ಮೂರು ಕಥೆಗಳು; ನನ್ನದು ನಿಮ್ಮದು ಮತ್ತ್ಯಾರದ್ದೋ..!


ಕಥೆ ನಂ.3

ಜಯಬಾಧುರಿ ನನ್ನ favourite. ಜೀವನದಲ್ಲಿ ಇನ್ನೇನಿಲ್ಲದಿದ್ದರೂ ಅವಳ ಗಂಡನಷ್ಟು ಎತ್ತರವಾಗಿರುವ ಗಂಡ ಸಿಕ್ಕಲಿ ಅಂತ ನನಗೊಂದು ಆಸೆಯಿತ್ತು. ಆ ಜಾದು ನಡೆದೇಬಿಟ್ಟಿತು ಗೊತ್ತಾ. ನನ್ನವರೂ ಆರಡಿ ಎತ್ತರ. ಹಾಂ. . . ದುಡ್ಡಿನ ವಿಷಯದಲ್ಲಿ ಮಾತ್ರ ಅಡಿ ಅಳತೆಯಲ್ಲ ಇಂಚು ಅಷ್ಟೆ. ಏನೇ ಆದ್ರೂ ಹನಿಮೂನ್‍ಗೆ ಹೋಗಬೇಕಲ್ಲ. ಅದ್ಯಾವುದೋ ಸಮುದ್ರ ತೀರಕ್ಕೆ ಹೋಗಿದ್ದ್ವಿ. ನನ್ನ ಹುಡುಗ ಕೈಭರ್ತಿ ಮುರಿದ ಶಂಖ, ಕಪ್ಪೆಚಿಪ್ಪು ಎಲ್ಲ ತುಂಬಿಕೊಂಡು ನನ್ನ ಕೈಗೆ ಸುರಿಯುತ್ತಾ “ಇವನೆಲ್ಲಾ ನಾನು ನಿನಗೆ ಕೊಡುತ್ತಿರುವ ಮುತ್ತು ಅಂತ ತಿಳ್ದ್ಕೋ” ಅಂದ. “ನಿನ್ನ ಮುಖಕ್ಕೆ ಮುತ್ತು ಈ ಜನ್ಮದಲ್ಲಿ ಆಗೋಲ್ಲಾ” ಅಂತ ಅನ್ನೋಕ್ಕೆ ನನ್ನ harmones ಬಿಡಲಿಲ್ಲ ಬದಲಿಗೆ “ಲಂಬೂ, ಐ ಲವ್ ಯೂ ಕಣೋ” ಅಂತ ಅವನ ಕಿವಿಯಲ್ಲಿ ಉಲಿದಿದ್ದೆ.

ನಾಳೆ ನಮ್ಮ ಮದುವೆಯ ಇಪ್ಪತ್ತೈದನೇ ವಾರ್ಷಿಕೋತ್ಸವ. ನೆನ್ನೆ ಮಗನ ಐ.ಐ.ಟಿ. ಅಡ್ಮಿಷನ್ನಾಯ್ತು. ಈ ರಾತ್ರಿ ಅಮೆರಿಕೆಯಲ್ಲಿ ಡಾಕ್ಟರ್ ಆಗಿರೋ ನನ್ನ ಮಗಳು ಬರ್ತಾಳೆ. ಸಡಗರದಿಂದ ಓಡಾಡ್ತಿದ್ದೆ. “ಮೇಡಂ ಬಾಸ್ ಕರೀತಿದ್ದಾರೆ” ಅಂದ ಡ್ರೈವರ್. ನನ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಇವರು ಮಾತೇ ಆಡದೆ ಎಲ್ಲಿಗೋ ಕರೆದುಕೊಂಡು ಹೋಗುತ್ತಿದ್ದರು. ನನಗೆ ಹಿಂದಿ ಸಿನೆಮಾಗಳ ಎಷ್ಟೋ scene ಗಳು ಹಾಡುಗಳು ನೆನಪಾಗುತಿತ್ತು! ಒಂದರ್ಧ ಮುಕ್ಕಾಲು ಘಂಟೆ ಪ್ರಯಾಣದ ನಂತರ ಕಾರು ನಿಂತಿತು.

ಯಜಮಾನರು ಕಾರಿನಿಂದಿಳಿದು ನನಗೂ ಇಳಿಯಲು ಹೇಳಿದರು. ಜೊತೆ ಜೊತೆಯಲ್ಲಿ ಒಂದಷ್ಟು ದೂರ ನಡೆದೆವು. ಅಲ್ಲೊಂದು ಕಾಲುವೆ.. ಸುತ್ತಲೂ ಹಸಿರೋ ಹಸಿರು. ಎಲ್ಲಿಂದಲೋ ಕಾಡು ಜಾಜಿಯ ಘಮ ಬೇರೆ ಸೇರಿಕೊಂಡಿತ್ತು. ಪತಿ ಮಹಾಶಯರು ಕೋಟಿನ ಜೇಬಿನಿಂದ ಗಂಟೊಂದ ತೆಗೆದು ಬಿಚ್ಚಿ ತಮ್ಮ ಕೈಭರ್ತಿ ತುಂಬಿಸಿಕೊಂಡು ಹನಿಮೂನ್ ದಾಟಿಯಲ್ಲೇ ನನ್ನ ಕೈಗೆ ಸುರಿಯುತ್ತಾ “ಈ ಮುತ್ತುಗಳೆಲ್ಲ ಬಾಲ ಮುರಿದ ಶಂಖ, ಅಂಚು ಒಡೆದ ಕಪ್ಪ ಚಿಪ್ಪುಗಳೇ ಆಗಿರಬೇಕಿತ್ತು” ಅಂದರು.

ಆ ಕ್ಷಣ ನನ್ನೊಳಗಿನ ಎಲ್ಲಾ ಮುರುಕುಗಳು ನನ್ನನ್ನು ಚುಚ್ಚುತ್ತಿರುವಂತನ್ನಿಸಿತು. ಇದೇನು ಮಾಡಿಕೊಂಡಿದ್ದೆ?! ಮನೆ ಕಟ್ಟುತ್ತಿದ್ದೆ. ಸಂಸಾರವನ್ನು ಹಸನು ಮಾಡಿತ್ತಿದ್ದೆ. ನನ್ನ ಬದುಕಿನ ಶೈಲಿಯೇ ಒಂದು empire ಅನಿಸುವಂತೆ ಆಳಿದ್ದೆ, ಬಾಳಿದ್ದೆ. ನಾನು ಎಲ್ಲರನ್ನೂ ಪ್ರೀತಿಸುತ್ತಿದ್ದೆ. ಇಲ್ಲ, ಹಾಗಂದುಕೊಂಡಿದ್ದೆ ಅಷ್ಟೆ. material ಗಳ ಮಧ್ಯೆ ಮನಸ್ಸಿನ ಸಾಥ್ ಬಿಟ್ಟೇಹೋಗಿತ್ತು ನನಗರಿವಿಲ್ಲದಂತೆ. ನೋವು, ನಲಿವು, ಮಾತು, ಹಂಚಿಕೆ ಎಲ್ಲವೂ ರೂಢಿಯಾಗಿತ್ತೇ ಹೊರತು ನನ್ನ ಪ್ರೀತಿಯ ಬಸಿರಿನಿಂದ ಹುಟ್ಟಿರಲಿಲ್ಲ! ತಪ್ಪಾಗಿತ್ತು. ಥ್ಯಾಂಕ್ಸ್ ದೇವರೇ, ತಪ್ಪಿನ ಅರಿವೂ ಆಗಿತ್ತು. ಮತ್ತೊಮ್ಮೆ ಯಜಮಾನರ ಬಳಿ ಹೋಗಿ “ಲಂಬೂ, ಐ ಲವ್ ಯೂ ಕಣೋ” ಅಂತ ಉಲಿದೆ. ಯಾವ ಪೋಲಿಸ್ ಸ್ಟೇಷನ್ ಮೆಟ್ಟಲು ಹತ್ತದೆ ನನ್ನ ಕಳೆದುಹೋದ ಆಸ್ತಿಯೆಲ್ಲಾ ಸಿಕ್ಕಿಬಿಟ್ಟಿತ್ತು!

ಹೇ, ಆಕಳಿಸುತ್ತಾ ಕಣ್ಣುಜ್ಜಿಕೊಳ್ಳುತ್ತಾ ಪೆದ್ದ್ಪೆದ್ದು ಮುಖ ಮಾಡಿಕೊಂಡು ಮುದ್ದಾಗಿ ನೀವೆಲ್ಲಿಗೆ ಹೊರಟಿರಿ? ನಿಮ್ಮ ಮಾತಿನ ಧಾರೆಗೆ, ಮೌನದ ಪಾತಕ್ಕೆ ನನ್ನ ಮನಸ್ಸಿನ ಪ್ರಪಾತ ಇಟ್ಟುಕೊಂಡು ನಾನು ಇಲ್ಲೇ ಇದ್ದೇನಲ್ಲ. . . .ನೀವೆಲ್ಲಿ ಹೊರಟಿರಿ?!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+