• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೆಕ್ಸಿಕನ್‌ ಅಲೆ - ಪ್ರೇಕ್ಷಕರೇ ಪ್ರದರ್ಶಕರಾಗುವ ಕಲೆ

By Staff
|

ಕ್ರಿಕೆಟ್‌ ಅಥವಾ ಯಾವುದೇ ಇರಲಿ. ಮೈದಾನದಲ್ಲಿ ಆಟಗಾರರು ಮಾತ್ರವಲ್ಲ, ಪ್ರೇಕ್ಷಕರು ಸಹಾ ಎಲ್ಲರ ಗಮನ ಸೆಳೆಯುತ್ತಾರೆ. ಆಗಾಗ ಎದ್ದು ನಿಂತು, ಕುಣಿದು ಕುಪ್ಪಳಿಸುವ ಯುವಕ-ಯುವತಿಯರ ಹಾವ-ಭಾವ, ಆಟ-ಮೈಮಾಟ ಕಣ್ಣಿಗೆ ಹಬ್ಬ!

  • ಶ್ರೀವತ್ಸ ಜೋಶಿ

Mexican Wave - what it is?‘‘ಏನೇ ಹೇಳಿ, ಈಬಾರಿಯ ಕ್ರಿಕೆಟ್‌ ವರ್ಲ್ಡ್‌ಕಪ್‌ ಪಂದ್ಯದಲ್ಲಿ ಏನೇನೂ ಮಜಾ ಬರಲಿಲ್ಲ...’’ - ಭಾರತೀಯ ಕ್ರಿಕೆಟಾಭಿಮಾನಿಗಳ ಒಕ್ಕೊರಲ ಅಂಬೋಣವಿದು ಎಂದರೂ ತಪ್ಪಲ್ಲ. ಮಾನ ಉಳಿಸಿದ್ದೆಂದರೆ ಬರ್ಮುಡಾ ಒಂದೇ ಎಂಬ ಸಮಾಧಾನ, ಬದ್ಧವೈರಿಗಳಾದ ಪಾಕಿಗಳಿಗೂ ಚೆನ್ನಾಗಿ ಮುಖಭಂಗವಾಯಿತೆಂಬ ವಿಚಿತ್ರತೃಪ್ತಿ ಬಿಟ್ಟರೆ ಬಹುನಿರೀಕ್ಷಿತ ರೋಚಕತೆ ಸೊನ್ನೆ - ನಮ್ಮ ದಾಂಡಿಗರ ಸ್ಕೋರ್‌ನಂತೆಯೇ. ಭಾರತ ಸೂಪರ್‌-8 ಹಂತವನ್ನೂ ತಲುಪಲಿಲ್ಲವೆಂದು ನಿಚ್ಚಳವಾದ ಮೇಲೆ ವರ್ಲ್ಡ್‌ಕಪ್‌ ಮ್ಯಾಚ್‌ಗಳ ಲೈವ್‌ ಟೆಲಿಕಾಸ್ಟ್‌ ನೋಡುವುದನ್ನು ನಿಲ್ಲಿಸಿದವರೇ ಹೆಚ್ಚು.

ಆದರೆ, ಸ್ಪರ್ಧೆಯಲ್ಲಿ ಭಾರತ ಇಲ್ಲದಿದ್ದರೂ, ಕ್ರಿಕೆಟ್‌ ಬಗ್ಗೆ ಅಂತಹ ಕ್ರೇಜ್‌ ಇಲ್ಲದಿದ್ದರೂ, ಕಾಲಕ್ಷೇಪಕ್ಕಾಗಿ ಟೆಲಿಕಾಸ್ಟ್‌ ವೀಕ್ಷಿಸುವವರಿರುತ್ತಾರೆ. ಅಂಥವರಿಗೆ ಮೋಜು/ಮನರಂಜನೆಯು ಆಟದಲ್ಲಿನ ಭರ್ಜರಿ ಸಿಕ್ಸರ್‌ಗಳಿಂದ, ರೋಮಾಂಚಕಾರಿ ಹ್ಯಾಟ್ರಿಕ್‌ಗಳಿಂದಲೇ ಸಿಗಬೇಕೆಂದೇನಿಲ್ಲ. ಪಂದ್ಯದ ಒಟ್ಟು ವಾತಾವರಣವನ್ನು ಅನುಭವಿಸುವುದೇ ಒಂದು ಸೊಗಸು.

ಅದರಲ್ಲೂ ವೆಸ್ಟ್‌ಇಂಡೀಸ್‌ನಂಥ ದೇಶಗಳಲ್ಲಿ ಪಂದ್ಯಗಳಿದ್ದರಂತೂ ಮುಗಿಯಿತು ಪ್ರೇಕ್ಷಕರ ಗ್ಯಾಲರಿಯ ನೋಟವೇ ಮನಸೆಳೆಯುವಂಥದ್ದಿರುತ್ತದೆ. ಬಣ್ಣಬಣ್ಣದ ಕ್ರೀಮುಗಳನ್ನು ಲೇಪಿಸಿಕೊಂಡವರು, ಮೈಮರೆತು ಕುಣಿಯುವವರು, ಭೇರಿ-ನಗಾರಿ-ಶಂಖ-ತಾಳ ವಿಧವಿಧ ವಾದ್ಯಗಳನ್ನು ನುಡಿಸುವವರು (ಕ್ರಿಕೆಟ್‌ ಸಮರದಲ್ಲೂ ಶಂಖನಾದ ಕೇಳಿಬಂದಾಗೆಲ್ಲ ನನಗೆ ಭಗವದ್ಗೀತೆಯಲ್ಲಿನ ‘‘ಶಂಖಾನ್‌ದಧ್ಮುಃ ಪೃಥಕ್‌ಪೃಥಕ್‌...’’ ಶ್ಲೋಕ ನೆನಪಾಗುವುದು) ... ಹೀಗೆ ಸಂಭ್ರಮಕ್ಕೊಂದು ಹೊಸ ವ್ಯಾಖ್ಯೆ.

ಇದನ್ನು ನಾನು ಕ್ರಿಕೆಟ್‌ ಪಂದ್ಯಗಳ ಉದಾಹರಣೆಯಿಟ್ಟು ಹೇಳಿದೆನಾದರೂ ಫ‚ುಟ್‌ಬಾಲ್‌, ಬೇಸ್‌ಬಾಲ್‌, ಒಲಂಪಿಕ್ಸ್‌ ಹೀಗೆ ಸಾವಿರಗಟ್ಟಲೆ ಸಂಖ್ಯೆಯ ಪ್ರೇಕ್ಷಕರು ಜಮಾಯಿಸುವ ಪಂದ್ಯಗಳಲ್ಲೆಲ್ಲ ಈ ಪರಿಯ ಹೆಚ್ಚುವರಿ ಸಂಭ್ರಮೋಲ್ಲಾಸದ ವಾತಾವರಣ ಇದ್ದೇ ಇರುತ್ತದೆ.

ಅಂಥ ಸಂಭ್ರಮದ ಅಭಿವ್ಯಕ್ತಿಯ ಒಂದು ರೂಪವೇ Mexican Wave. ವರ್ತುಲಾಕಾರದ ಅಥವಾ ಅಂಡಾಕಾರದ ಸ್ಟೇಡಿಯಂನ ಸುತ್ತಲೂ ಕುಳಿತ ಪ್ರೇಕ್ಷಕವರ್ಗದಲ್ಲಿ ಹುಟ್ಟಿ ಹರಿಯುವ ಬೃಹತ್‌ ಅಲೆ. ಕ್ರಿಕೆಟ್‌, ಫುಟ್‌ಬಾಲ್‌ ಇತ್ಯಾದಿ ಪಂದ್ಯಗಳನ್ನು ಸ್ಟೇಡಿಯಂನಲ್ಲೇ ಕುಳಿತು ನೋಡಿದ್ದರೆ ನೀವೂ ಮೆಕ್ಸಿಕನ್‌ ಅಲೆಯಲ್ಲಿ ಪಾಲ್ಗೊಂಡಿದ್ದರೂ ಇರಬಹುದು. ಅಥವಾ ಕನಿಷ್ಠಪಕ್ಷ ಟಿವಿಯಲ್ಲಾದರೂ ಅದನ್ನು ನೋಡಿಯೇ ಇರುತ್ತೀರಾ. ಅದಕ್ಕೆ ಮೆಕ್ಸಿಕನ್‌ ವೇವ್‌ ಎಂಬ ಹೆಸರಿದೆಯೆಂಬ ವಿಷಯ ಮಾತ್ರ ಗೊತ್ತಿರಲಿಕ್ಕಿಲ್ಲ ಅಷ್ಟೇ.

ಪ್ರೇಕ್ಷಕರ ಗ್ಯಾಲರಿಯ ಒಂದು ಭಾಗದಲ್ಲಿ ಹತ್ತಿಪ್ಪತ್ತು ಮಂದಿ ಒಮ್ಮೆಗೆ ಎದ್ದು ನಿಂತು ಎರಡೂ ಕೈಗಳನ್ನೂ ಮೇಲಕ್ಕೆತ್ತಿ ಹೋ... ಎಂದು ಕಿರುಚಿ ಕುಳಿತುಕೊಳ್ಳುತ್ತಾರೆ, ಅವರನ್ನು ನೋಡಿದ ಎಡಪಕ್ಕದವರೂ ಹಾಗೇ ಮಾಡುತ್ತಾರೆ, ಆಮೇಲೆ ಅವರ ಪಕ್ಕದವರು, ಆಮೇಲೆ ಅವರ ನಂತರದವರು ... ಹೀಗೆ ಪ್ರದಕ್ಷಿಣಾಕಾರವಾಗಿ ಇಡೀ ಸ್ಟೇಡಿಯಂನ ಸುತ್ತಕ್ಕೂ ಒಂದು ದೊಡ್ಡ ಅಲೆ ಮುಂದುವರಿಯುತ್ತದೆ. ಆಟವನ್ನು ನೇರಪ್ರಸಾರ ಮಾಡುವ ಟಿವಿ ಕ್ಯಾಮೆರಾಗಳು ಆಟದ ಬದಲು ಆ ಅಲೆಯನ್ನೇ ಫ‚ೋಕಸ್‌ ಮಾಡುತ್ತವೆ, ಆಮೂಲಕ ಟಿವಿ ವೀಕ್ಷಕರವರೆಗೂ ರೋಮಾಂಚನದ ಅಲೆ ತಲುಪುತ್ತದೆ.

Mexican Wave - what it is?1986ರಲ್ಲಿ ಮೆಕ್ಸಿಕೊದಲ್ಲಿ ಫ‚ುಟ್‌ಬಾಲ್‌ ವರ್ಲ್ಡ್‌ಕಪ್‌ ಪಂದ್ಯಗಳು ನಡೆದಾಗ ತುಂಬ ಜನಪ್ರಿಯವಾದ ಈ ಅಲೆ, ಆಗಷ್ಟೇ ಟಿವಿ ಮೂಲಕ ಕ್ರೀಡಾಪಂದ್ಯಗಳ ನೇರಪ್ರಸಾರವೂ ಆರಂಭವಾಗಿದ್ದರಿಂದ ಪ್ರಪಂಚದೆಲ್ಲೆಡೆ ಪರಿಚಿತವಾಗಿ Mexican Wave ಎಂದೇ ಗುರುತಿಸಲ್ಪಟ್ಟಿದೆ. ಆಮೇಲೆ ಇತರ ರಾಷ್ಟ್ರಗಳ ಕ್ರಿಡಾಭಿಮಾನಿಗಳೂ ಅಲೆಯೆಬ್ಬಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಕೆನಡಾದಲ್ಲಿ ಹಾಕಿ ಪಂದ್ಯಗಳಲ್ಲಿ, ಅಮೆರಿಕದಲ್ಲಿ ಬೇಸ್‌ಬಾಲ್‌ ಪಂದ್ಯಗಳಲ್ಲಿ, ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್‌ ಪಂದ್ಯಗಳಲ್ಲಿ... ಎಲ್ಲ ಕಡೆಯೂ ಭರ್ಜರಿ ಅಲೆಗಳು ಕಾಣಿಸಿಕೊಳ್ಳುತ್ತಿವೆ. ಹೆಸರು ಮಾತ್ರ ಮೆಕ್ಸಿಕನ್‌ ವೇವ್‌ ಎಂದೇ. (ಅಷ್ಟಾಗಿ ಮೆಕ್ಸಿಕೊದಲ್ಲಿ ಸ್ಪಾನಿಶ್‌ ಭಾಷೆಯಲ್ಲಿ ಇದನ್ನು La Ola ಎನ್ನುತ್ತಾರೆ, The Wave ಎಂಬರ್ಥದಲ್ಲಿ. ‘ಓಲ’ ಎಂಬ ಮೆಕ್ಸಿಕನ್‌ ಶಬ್ದಕ್ಕೂ, ಅಲೆ ಎಂಬ ಕನ್ನಡ ಪದಕ್ಕೂ ಇರುವ ಸಾಮ್ಯವನ್ನು ಗಮನಿಸಿ!)

ಈಗೀಗಂತೂ ಪ್ರತಿಯಾಂದು ಕ್ರೀಡಾಪಂದ್ಯವೂ ಟಿವಿಯಲ್ಲಿ ಪ್ರಸಾರವಾಗುವುದರಿಂದ, ಕ್ರೀಡಾಳುಗಳಷ್ಟೇ ಪ್ರೇಕ್ಷಕರೂ ‘ಮೈಲೇಜ್‌’ ಪಡೆಯಲು ಬಯಸುವುದರಿಂದ, ಮೆಕ್ಸಿಕನ್‌ ಅಲೆಯೂ ಪಂದ್ಯದ ಒಂದು ಅಂಗವೇ ಆಗಿ ಹೋಗಿದೆ. ಅಮೆರಿಕದ ಕೆಲವು ಪಂದ್ಯಪ್ರಾಯೋಜಕರು ಬೇಕಂತಲೇ ಪ್ರೇಕ್ಷಕರನ್ನು ಪ್ರಚೋದಿಸಿ ಮೆಕ್ಸಿಕನ್‌ ಅಲೆಗಳನ್ನು ಎಬ್ಬಿಸುತ್ತಾರೆ. ಅದರಲ್ಲೇ ವಿವಿಧ ವಿನ್ಯಾಸಗಳನ್ನು (ಪ್ರದಕ್ಷಿಣಾಕಾರಕ್ಕೊಂದು, ಅಪ್ರದಕ್ಷಿಣಾಕಾರಕ್ಕೊಂದು, ಒಟ್ಟೊಟ್ಟಿಗೇ ಎರಡು ಅಲೆಗಳು... ಇತ್ಯಾದಿ) ಮೂಡಿಸುತ್ತಾರೆ. ಆಸ್ಟ್ರೇಲಿಯಾದಲ್ಲಿ (ಮೆಲ್ಬೋರ್ನ್‌ ಕ್ರಿಕೆಟ್‌ ಕ್ಲಬ್‌ನಲ್ಲಿ) ಮೆಕ್ಸಿಕನ್‌ ಅಲೆಯ ಪರಾಕಾಷ್ಠೆ ಎಷ್ಟಿತ್ತೆಂದರೆ ಅಲೆಯ ನೆಪದಲ್ಲಿ ಪ್ರೇಕ್ಷಕರು ಬಾಟಲಿ ಮತ್ತಿತರ ವಸ್ತುಗಳನ್ನು ಕ್ರೀಡಾಂಗಣಕ್ಕೆ ಎಸೆಯುವುದರಿಂದ ಮೆಕ್ಸಿಕನ್‌ ವೇವ್‌ಅನ್ನು ಅಲ್ಲಿ ನಿಷೇಧಿ-ಸಿಬಿಟ್ಟಿದ್ದಾರಂತೆ!

ಕ್ರೀಡೆ ಮತ್ತು ಕ್ರೀಡಾಭಿಮಾನಕ್ಕೆ ಸಂಬಂಧಿ-ಸಿದಂತೆ ಮೆಕ್ಸಿಕನ್‌ ಅಲೆಯ ವಿವರ ಅಷ್ಟಾದರೆ, ವಿಜ್ಞಾನಿಗಳು ಮತ್ತು ಮಾನವಶಾಸ್ತ್ರಜ್ಞರು ಇದನ್ನುಪಯೋಗಿಸಿ ಹೊಸ ವಿಚಾರಗಳ ಶೋಧನೆಯ ಅಲೆಯನ್ನು ಎಬ್ಬಿಸಿರುವ ಬಗ್ಗೆ ಈಗ ಸ್ವಲ್ಪ ತಿಳಿದುಕೊಳ್ಳೋಣ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more