• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಂದಿ-ಬಾವಲಿ, ಚಿಂದಿ-ಚಿತ್ರಾನ್ನವೆಂದ ಓದುಗರು...

By Staff
|
ಪ್ರಶ್ನಾರ್ಥಕ ಚಿಹ್ನೆಯ ವ್ಯುತ್ಪತ್ತಿಯ ಕುರಿತು ವಿಶ್ಲೇಷಿಸಿದ ವಿಚಿತ್ರಾನ್ನಕ್ಕೆ ಕೆಲವು ಮತ್ತು ಕಳೆದ ವಾರ ಮಕ್ಕಳ ಕವಿತೆಗಳು ಹಾಗೂ ಓದುಗರಿಗೊಂದು ಒಗಟಿನೊಂದಿಗೆ ಪ್ರಕಟವಾದ ವಿಚಿತ್ರಾನ್ನಕ್ಕೆ ಹಲವು ಈ ಮೈಲ್‌ಗಳು ಬಂದಿವೆ. ಈ ಅಂಕಣ ಬರೇ ಇಂಟೆರೆಸ್ಟಿಂಗ್‌, ಎಂಟರ್‌ಟೈನಿಂಗ್‌, ಇನ್ಫಾರ್ಮೇಟಿವ್‌ ಅಷ್ಟೇ ಆಗಿರದೆ ಇಂಟರಾಕ್ಟೀವ್‌ ಆಗಿರಬೇಕೆಂಬ ನನ್ನ ಮತ್ತು ದಟ್ಸ್‌ಕನ್ನಡದ ಸಂಪಾದಕರ ಹಂಬಲಕ್ಕೆ ಸರಿಯಾಗಿ ತುಂಬ ಸಂಖ್ಯೆಯಲ್ಲಿ ಓದುಗರು ಭಾಗವಹಿಸುತ್ತಿರುವುದು ಸಂತೋಷದ ಸಂಗತಿ. ಮೊದಮೊದಲು ಅಮೆರಿಕ-ಬೆಂಗಳೂರಿನಿಂದಷ್ಟೇ ಸೀಮಿತವಾಗಿದ್ದ ಪ್ರತಿಕ್ರಿಯೆಗಳು ಈಗ ಸಿಂಗಾಪುರ್‌, ಕೊರಿಯಾ ಮುಂತಾದ ಕಡೆಗಳಿಂದಲೂ ಮತ್ತು ಭಾರತದ ಇತರ ನಗರಗಳಿಂದಲೂ ಬರುತ್ತಿವೆ. ವಿಶ್ವವ್ಯಾಪಿ ಕನ್ನಡಿಗರ ಸ್ನೇಹಸೇತುಜಾಲವನ್ನು ಆರೋಗ್ಯಕರ-ಆನಂದಮಯ ಸಮುದಾಯವನ್ನು ನಿರ್ಮಿಸಲು ಸಹಕರಿಸುವ ನಿಮಗೆಲ್ಲ ಹೃತ್ಪೂರ್ವಕ ವಂದನೆಗಳು.

- ಶ್ರೀವತ್ಸ ಜೋಶಿ.

ಜೋಶಿಯವರೆ,

ನಿಮ್ಮ ಪ್ರಶ್ನೆಗಳ ವಿಚಿತ್ರಾನ್ನಕ್ಕೆ ನಮ್ಮದೊಂದು ಉತ್ತರಗಳ ಒಗ್ಗರಣೆ.

ಇತ್ತೀಚೆಗೆ ಹೆಂಗಸರ ಹಣೆಯನ್ನು ಅಲಂಕರಿಸುವ ಬಿಂದಿ (ಅಚ್ಚ ಕನ್ನಡ ಭಾಷೆಯಲ್ಲಿ ಹಣೆಬೊಟ್ಟು) ವಿವಿಧ ರೀತಿಯ ಆಕಾರ ಮತ್ತು ಗಾತ್ರಗಳಲ್ಲಿ ಬರುತ್ತಿದೆ. ಇದು ಇಂದಿನ ಫ್ಯಾಷನ್‌. ಅದರಲ್ಲೇ ಈ ಪ್ರಶ್ನಾರ್ಥಕ ಚಿಹ್ನೆಯ ಬಿಂದಿ ಸಹ ಒಂದು. ನನಗೆ ಮೊದ ಮೊದಲು ಹೀಗೂ ಒಂದು ರೀತಿಯ ಬಿಂದಿಯೆ ಎಂದು ಆಶ್ಚರ್ಯವಾಗುತ್ತಿತ್ತು ! ಆದರೆ ಮೊನ್ನೆ ಒಂದು ಪುಸ್ತಕದಲ್ಲಿ , ಹೆಂಗಸರ ಮನಸ್ಸನ್ನು ಅರಿಯೋದು ಗಂಡಸರಿಂದ ಸಾಧ್ಯವಿಲ್ಲದ ಕೆಲಸ ಎಂದು ಓದಿದ ನೆನಪು. ಅದರ ನಂತರ ನನಗೆ ಅರ್ಥವಾಯ್ತು ! ಇದೇ ಕಾರಣಕ್ಕೆ ಈ ರೀತಿ ಪ್ರಶ್ನಾರ್ಥಕ ಚಿಹ್ನೆಯ ಬಿಂದಿ. ಪುರುಷರನ್ನು (ಪುರುಷೋತ್ತಮರನ್ನು???) ಪ್ರಶ್ನಿಸಿ ಹೆಂಗಸರು ಈ ಹಣೆಬೊಟ್ಟನ್ನು ಉಪಯೋಗಿಸುತ್ತ ಇದ್ದಾರೆ ಅಂತ!

- ಪುರುಷೋತ್ತಮ ರಾವ್‌ ಉಡುಪಿ, ಗೈಥರ್ಸ್‌ಬರ್ಗ್‌ (ಮೇರಿಲ್ಯಾಂಡ್‌)

*

ಪ್ರಶ್ನಾರ್ಥಕ ಚಿಹ್ನೆ ಹುಟ್ಟಿದ್ದು ಹೇಗೆ ಎಂಬ ಮಾಹಿತಿ ನಿಜವಾಗಿಯೂ ತುಂಬ ಚೆನ್ನಾಗಿತ್ತು. ಇದನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು.

- ಶ್ರೀಲತಾ, ಬೆಂಗಳೂರು.

*

ಜೋಶಿಯವರೆ,

ನಿಮ್ಮ ವಿಚಿತ್ರಾನ್ನಕ್ಕೆ ಸ್ವಲ್ಪ ಒಗ್ಗರಣೆ!

ನಮ್ಮ ಕೆಲವು ಕನ್ನಡ ‘ಉಟ್ಟು ಓರಾಟಗಾರರು’ ಹೇಳುವ ಲಾಜಿಕ್‌ ಹೀಗಿದೆ. ಷೇಕ್ಸ್‌ಪಿಯರ್‌ ಮೊದಲಿಗೆ ಷೇಷಪ್ಪ ಐಯರ್‌ ಆಗಿದ್ದ ! ಅವನು ಇಂಗ್ಲಂಡಿಗೆ ಹೋದಮೇಲೆ ಅಲ್ಲಿ ಆಂಗ್ಲಭಾಷೆಯನ್ನು ಅಭ್ಯಾಸ ಮಾಡಿ ನಾಟಕ ಬರೆದು ಷೇಕ್ಸ್‌ಪಿಯರ್‌ ಎಂದು ಪ್ರಸಿದ್ಧಿ ಹೊಂದಿದ ಅಂತ. ಅದೇ ಲಾಜಿಕ್ಕನ್ನು ಉಪಯೋಗಿಸಿ ನಿಮ್ಮ ಪ್ರಶ್ನಾರ್ಥಕ ಚಿಹ್ನೆಯ ವ್ಯುತ್ಪತ್ತಿ : ಮನುಷ್ಯನ ಎಡ ಕಿವಿಯನ್ನು ನೋಡಿದವರಿಗೆ ಪ್ರಶ್ನಾರ್ಥಕ ಚಿಹ್ನೆ ಜ್ಞಾಪಕಕ್ಕೆ ಬರುತ್ತದೆ. ಕನ್ನಡದಲ್ಲಿ ಪ್ರಶ್ನೆಯನ್ನು ನಾವು ‘ಕೇಳು’ತ್ತೇವೆ. ಹಾಗೂ ಇತರರ ಮಾತನ್ನು ಆಲಿಸಲೂ ಕೂಡ ‘ಕೇಳು’ ಪದವನ್ನು ಉಪಯೋಗಿಸುತ್ತೇವೆ. ಆದ್ದರಿಂದ ಕನ್ನಡದ ‘ಕೇಳು’ ಕಿವಿಯಿಂದ ಆಲಿಸುವುದಕ್ಕೂ, ಮತ್ತು ಪ್ರಶ್ನೆ ಕೇಳುವುದಕ್ಕೂ ಇರುವುದರಿಂದ ಕಿವಿ ಚಿಹ್ನೆಯನ್ನು ಪ್ರಶ್ನೆಗೆ ಉಪಯೋಗಿಸತೊಡಗಿದರು (ಸದ್ಯ ಯಾವ ರಾಜಕೀಯ ಪಕ್ಷವೂ ಕಿವಿ ಚಿಹ್ನೆ ಇಟ್ಟುಕೊಳ್ಳದಿದ್ದರೆ ಸಾಕು)!

ಹೇಗಿದೆ ನನ್ನ ಕಲ್ಪನೆಯ ವ್ಯುತ್ಪತ್ತಿ?

-ಚಂದ್ರಶೇಖರ್‌ ನೆಲೋಗಲ್‌, ಬಾಸ್ಟನ್‌

*

ನಮಸ್ಕಾರ.

ನಾನು ಯಾವಾಗಲೂ ದಟ್ಸ್‌ಕನ್ನಡ ಸೈಟ್‌ ಓಪನ್‌ ಮಾಡಿ ನೋಡುತ್ತೇನೆ. ನನಗೆ ಇಂಗ್ಲೀಷಲ್ಲಿ ಬರೆಯುವದಕ್ಕಿಂತ ಕನ್ನಡದಲ್ಲಿ ಬರೆಯುವುದಕ್ಕೆ ಇಷ್ಟ . ನನಗೆ ದಟ್ಸ್‌ಕನ್ನಡ ಸೈಟ್‌ ತುಂಬಾ ಇಷ್ಟವಾಗಿದೆ. ವಿಚಿತ್ರಾನ್ನ ಎಂದರೇನು ನನಗೆ ಅರ್ಥ ಅಗಲಿಲ್ಲ ? ನಾನು ಯಾವಾಗಲೂ ದಟ್ಸ್‌ಕಾರ್ಟೂನ್‌ ಮಾತ್ರ ನೋಡುತ್ತಿದ್ದೆ !

- ರವಿಕಿರಣ್‌, ಊರು?

*

ಪ್ರಿಯ ಶ್ರೀವತ್ಸ ಜೋಶಿ,

ನಿಮ್ಮ ವಿಚಿತ್ರಾನ್ನ ಸವಿಯಲು ಮೊದಲ ಪಂಕ್ತಿಯಲ್ಲಿ ಕುಳಿತುಕೊಳ್ಳುವವರಲ್ಲಿ ನಾನೂ ಒಬ್ಬ. ನಿಮ್ಮ ಫ್ಯಾನ್‌ (ಬೀಸಣಿಗೆ ;-)?) ಕೂಡ ಆಗಿಬಿಟ್ಟಿದ್ದೇನೆ. ಹೀಗೆ ನಿಮ್ಮ ಅಂಕಣ ಹೊಸ ವಿಷಯಗಳೊಂದಿಗೆ ಜನ ಮನ ಸೂರೆಗೊಳ್ಳಲಿ ಎಂದು ಆಶಿಸುತ್ತೇನೆ. ಇವತ್ತಿನ ಒಗಟಿನ ಉತ್ತರ: ಬಾವಲಿ.

ನಮಸ್ಕಾರ,

- ಕಿರಣ್‌, ಮೈಸೂರು

*

ಜೋಶಿಯವರೆ,

ನಿಮ್ಮ ಈ ಸಲದ ಒಗಟು ಅಂಥಾ ಏನೂ ಕಷ್ಟದ್ದಾಗಿರ್ಲಿಲ್ವಲ್ಲ ? ಆದ್ರೂ ನೋಡಿ ಉತ್ರ ಹುಡ್ಕೋಕೆ ಸ್ವಲ್ಪ ತಲೆ ಕೆರ್ಕೊಂಡೆ, ‘ಬಾವಲಿ’ ತಾನೆ ಉತ್ರ?

ನಾನು ಸಣ್ಣೋನಿರುವಾಗ ಬೇಸಗೆ-ದಸರಾ ರಜೆಗೆ ನಮ್ಮ ಮಾವನ ಮನಗೆ ಹೋಗ್ತಾ ಇದ್ವಿ, ಅಲ್ಲಿಗೆ ಹೋದ ತಕ್ಷಣ ಟೇಪ್‌ರೆಕಾರ್ಡರ್‌ನಲ್ಲಿ ‘ಬಂದಿತು ರೈಲು... ಬಿದ್ದಿತು ಕೈಮರ... ಊದಿತು ಸೀಟಿ...’ ಹಾಡು ಕೇಳ್ತಾ ಇದ್ದೆ . ಈ ಸಲ ಊರಿಗೆ ಹೋದಾಗ ಆ ಕ್ಯಾಸೆಟ್‌ ಇದೆಯೋ ನೋಡ್ಬೇಕು. ಅಂದ್ಹಾಗೆ ನಾನು ಸದ್ಯಕ್ಕೆ ಕನೆಕ್ಟಿಕಟ್‌ನಲ್ಲಿ (ನಾವು ತಮಾಷೆಗೆ ಕನಕನಕಟ್ಟೆ ಅಂತೀವಿ...) ಇದ್ದೇನೆ. ಊರಿಗೆ ಹೋಗೋದೇ ಕಾಯ್ತಾ ಇದ್ದೇನೆ.

ನಿಮ್ಮ ಇವತ್ತಿನ ವಿಚಿತ್ರಾನ್ನ, ನನ್ನ ಶ್ಯಾವಿಗೆ ಉಪ್ಪಿಟ್ಟಿನ ಜೊತೆ ಬಹಳ ಚೆನ್ನಾಗಿತ್ತು.

ವಂದನೆಗಳೊಂದಿಗೆ,

- ರಾಜೇಶ್‌ ಚೆಲುವ, ಕನೆಕ್ಟಿಕಟ್‌

*

ಕನ್ನಡದ ಕಂಪನ್ನು ಸೂಸುತ್ತಿರುವ ನಿಮ್ಮ ಅಂತರ್ಜಾಲ ಪತ್ರಿಕೆಗೆ, ವಿಚಿತ್ರಾನ್ನ ಅಂಕಣಕ್ಕೆ ನಮ್ಮ ಅಭಿನಂದನೆಗಳು. ಒಗಟಿನ ಉತ್ತರ ‘ಬಾವಲಿ’.

- ಗೀತಾ ಸಾಗರ್‌, ಫೀನಿಕ್ಸ್‌ , ಯು.ಎಸ್‌.ಎ.

*

ಈ ಸಲದ ಉತ್ತರ ‘ಬಾವಲಿ’? ಏಕೋ ಸರಿಯಿಲ್ಲ ಎನಿಸುತ್ತಿದೆ... ಸರಿಯೋ ತಪ್ಪೋ ನೀವೇ ಹೇಳುವಂಥವರಾಗಿ! :)

ಉತ್ತರ ಸರಿ ಇದ್ದರೆ... ನಿಮಗೆ ನನ್ನ ಮರುಪ್ರಶ್ನೆ...

ಅಲ್ಲಾ... ನಿಮಗೂ ವರ್ಲ್ಡ್‌ ಕಪ್‌ ಜಾಡ್ಯ ತಗುಲಿತೊ ಹೇಗೆ?? :) ಯಾಕೆ ಬಾವಲಿ, ಬ್ಯಾಟ್‌ (ಇಂಗ್ಲೀಷಲ್ಲಿ ಬ್ಯಾಟ್‌ = ಬಾವಲಿ) ಅಂತೆಲ್ಲ ಬಡಬಡಿಕೆ :) ? ಅಥವಾ ನೀವೂ ಬ್ರಿಟಾನಿಯಾ ಅಡ್ವರ್ಟೈಸ್‌ಮೆಂಟ್‌ ‘ಬ್ರಿಟಾನಿಯಾ ಖಾವೊ ವರ್ಲ್ಡ್‌ ಕಪ್‌ ಜಾವೊ ’ ತರಹ.... ‘ವಿಚಿತ್ರಾನ್ನ ಖಾವೊ ಬ್ಯಾಟ್‌ (ಬಾವಲಿ) ಘುಮಾವೊ...’ :) ಎನ್ನುತ್ತೀರೊ ಹೇಗೆ??

ಏನೇ ಇರಲಿ. ಮಕ್ಕಳ ಕವಿತೆಗಳು ಚೆನ್ನಾಗಿದ್ದುವು.

- ಜಯಶ್ರೀ, ಬೆಂಗಳೂರು

*

ಆತ್ಮೀಯ ಜೋಶಿಯವರಿಗೆ,

ಕನ್ನಡದ ಪದಬಂಧ ಮಾಡಿದ ಯಾರೇ ಆದರೂ ಈ ಒಗಟನ್ನು ತಕ್ಷಣ ‘ಒಡೆಯುತ್ತಾರೆ’... ಉತ್ತರ ‘ಬಾವಲಿ’. ಸರಿಯೇ? -:)

- ಡಿ.ಎಸ್‌ ಫಣಿ ಕುಮಾರ್‌, ಮಿನ್ನಿಯಾಪೊಲಿಸ್‌, ಮಿನ್ನೆಸೋಟ

*

ನಮಸ್ಕಾರ,

ನಿಮ್ಮ ವಿಚಿತ್ರಾನ್ನ ಬಹಳ ಚೆನ್ನಾಗಿದೆ. ಆದನ್ನು ಉಣಬಡಿಸುತ್ತಿರುವ ಶೈಲಿಯೂ ಸೊಗಸಾಗಿದೆ. ಈ ಬಾರಿಯ ವಿಚಿತ್ರಾನ್ನದಲ್ಲಿ ಪ್ರಕಟವಾಗಿರುವ ಮಕ್ಕಳ ಕವಿತೆಗಳು ಚೆನ್ನಾಗಿವೆ. ಅವನ್ನು ಹುಡುಕಿತೆಗೆದಿರುವ ನಿಮ್ಮ ಪ್ರಯತ್ನ ಶ್ಲಾಘನೀಯ. ಈ ರೀತಿಯ ಮಕ್ಕಳ ಕವಿತೆಗಳ ಅವಶ್ಯಕತೆ ಮೊದಲಿಗಿಂತ ಈಗ ಹೆಚ್ಚಾಗಿದೆ ಅನ್ನಿಸುತ್ತದೆ. ಸುಲಭ ಕವಿತೆಗಳ ಮೂಲಕ ಕಾಗುಣಿತ ಹೇಳಿಕೊಟ್ಟರೆ ಮಕ್ಕಳು ಕಲಿಯುವ ವೇಗವೂ ಹೆಚ್ಚಾಗಿರುವುದಲ್ಲದೆ ನಮ್ಮ ಭಾಷೆಯ ಬಗ್ಗೆ ಆಸಕ್ತಿಯೂ, ಅಚ್ಚರಿಯೂ ಮೂಡುತ್ತದೆ. ನಿಮ್ಮ ಲೇಖನ ಓದಿದ ನಂತರ ಇಂತಹ ಕವಿತೆಗಳನ್ನು ಬರೆಯಲು ನಾನೂ ನಮ್ಮ ಸ್ನೇಹಿತರೂ ಪ್ರಯತ್ನಿಸುತ್ತಿದ್ದೇವೆ.ವಂದೆನೆಗಳೊಂದಿಗೆ,

- ಎಸ್‌. ಶ್ರೀಧರ್‌, ಬೆಂಗಳೂರು

(ಕವಿತೆ ಬರೆದ ನಂತರ ದಟ್ಸ್‌ಕನ್ನಡ.ಕಾಂಗೆ ಕಳುಹಿಸಿ- ಸಂ.)

*

ಜೋಶಿಯವರೆ,

ಬಾಲ್ಯದ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿದ ನಿಮ್ಮ ವಿಚಿತ್ರಾನ್ನ ತುಂಬ ಚೆನ್ನಾಗಿತ್ತು . ಅದನ್ನು ಓದುತ್ತಿದ್ದಾಗ ನೆನಪಾಗಿದ್ದು , ಬಾಲ್ಯದಲ್ಲಿ ಓದಿದ ‘ಊಟದ ಆಟ’ ಕವಿತೆ ! ಮತ್ತೆ ನೀವು ಕೇಳಿದ ಒಗಟಿನ ಉತ್ತರ - ಬಾವಲಿ.

- ಶಿವಮೂರ್ತಿ, ನವದೆಹಲಿ

*

ಒಗಟಿಗೆ ‘ಬಾವಲಿ’ ಸರಿಯುತ್ತರವನ್ನು ಕಳಿಸಿದ ಇತರ ಸ್ನೇಹಿತರೆಂದರೆ,

- ಕೆ.ಎಸ್‌ ಶಾಸ್ತ್ರಿ , ಮಣಿಪಾಲ್‌ ಗ್ರೂಪ್ಸ್‌, ಭಾರತ

- ಡಾ। ಗುರುಪ್ರಸಾದ್‌ ಕಾಗಿನೆಲೆ, ರೋಚೆಸ್ಟರ್‌, ಮಿನ್ನೆಸೋಟ

- ಶಚಿ ಆರ್‌ ಯೇಲಂದೂರ್‌, ಊರು?

- ಅನುರಾಧಾ ಕಲ್ಯಾಣಿ, ಮಿಲ್‌ವಾಕೀ, ವಿಸ್ಕಾನ್ಸಿನ್‌

- ಅರವಿಂದ್‌ ಎಚ್‌ ಶ್ರೀನಿವಾಸ, ಊರು?

- ರಘುನಂದನ್‌ ನಾಗರಾಜ್‌, ಊರು?

- ವೆಂಕಟೇಶ್ವರಪ್ರಸಾದ್‌ ಯೇತಡ್ಕ, ಊರು?

- ದಿವಾಕರ್‌ ಫಡ್ಕೆ, ಸೈಂಟ್‌ಲೂಯಿಸ್‌

- ಹರ್ಷ ಕೋಡ್ನಾಡ್‌, ಕನ್ನಡ ಗಣಕ ಪರಿಷತ್‌, ಬೆಂಗಳೂರು

- ಹರೀಶ್‌ ಬಧ್ಯ, ಸನ್ನಿವೇಲ್‌, ಕ್ಯಾಲಿಫೋರ್ನಿಯಾ

- ಜ್ಯೋತಿ ರಾಮನ್‌, ಸಾನ್‌ ಹೋಸೆ, ಕ್ಯಾಲಿಫೋರ್ನಿಯಾ

- ಲಕ್ಷ್ಮಿ ಶ್ರೀನಾಥ್‌, ಲಾಸ್‌ಅಲ್ಟೋಸ್‌, ಕ್ಯಾಲಿಫೋರ್ನಿಯಾ

- ರಾಧಾ ಕೆ., ಬೆಂಗಳೂರು

- ತ್ಯಾಗರಾಜ ಮೂರ್ತಿ ಎನ್‌, ಬೆಂಗಳೂರು.

*

Dear sir,

I am very happy to read your "vichitranna". Answer for the riddle is - "Baavali". Thanks for your new recipes everyweek!

- Tripurananda Varambally, Hongkong

*Hi......

Is it "Baavali"?

Poems are very good. Your article is not only entertaining, also informative. Keep it up.

Regards.

–Shrilatha, Bangalore.

*

Sir,

I think the answer is BAVANA.Am I right?

– Lakshmamma, Stenographer(NAL), Bangalore

*

Dear Joshi,

I will be always waiting for your vichitranna, right now for your OGATU, answer is BAVALI.

Though it is simple, its really good puzzle to give some work to our brain. I know u r from Davanagere BDT college, but i dont know which batch, and i am having many friends from your college. This is first mail from me to u, i was always thinking of sending mail to u, but today that moment came and i am feeling happy for the same.

I am basically from chickamagalur district and did my studies in Hassan & Bellary, i did my engineering from MCE, Hassan and currently working in Korea. I am very much anxious to meet u sometime in life, and hope that day will come soon.

Have a Nice time. Bye for now.

Regards,

- Lepaksha N, Korea

*

Answer to this riddle is very easy for vichitranna readers, would like it more challenging. Anyway the answer is BAVALI.

- Vidya Gadagkar; Kettering, Ohio

*

Dear Srivatsa Joshi,

Yes, I am Dr.Guruprasads (Minnesota) brother and I live in California. I have heard a lot about you and your writings when Prasadu was here last month. Have been reading "vichitranna" regularly ever since. Your writings are combination of humor and information not necassarily in that order... Many things which we take it for granted haven been re-looked at a different angle.

Keep up the good work. Best regards,

- Sathya Prakash Kaginele, California

*

Hi Mr Joshi,

I really like your column "vichitranna" in thatskannada.com. I have answer for your "ogatu" this week. Answer is: "BAVALI".

- Sudha Badarinarayana, City?

*

Dear Mr. Joshi,

Thanks for the lovely poems. Similarly can you please write about Palakala Sitaram Bhats small poems and few old songs like "jamabada koli", "gadiyara" and "ajjana kolidu nannaya kudure" etc which we studied in our childhood days. They were very meaningful and easy unlike the latest poems which are difficult to understand.

with regards,

- Rekha S Ballal, Moodabidri

*

Dear Joshi,

I enjoy browsing Thatskannada and is good site providing lot of inforamation as well as fun. I have good interest in literature (may not be particular to Kannada) and read lot of books. Now as I am away from my homeland, I often get bored because am not having much access to them where as I can still get some flavour thro this website.

Answer for your riddle is "Baavali"

- Vivekananda Bhat, City?

*

Hello Srivatsa Joshi,

How are you? I liked your articles under "Vichitranna" section. They are different when compared to others.

Please keep up the good work. I got the answer for Ba+2Na question, it is "Banana", am I correct? :-)

I had read in one of the articles on the site that you are from the same Engg College from where I hail from. BDT :-) Reading kannada related articles and sites gives me pleasure when away from homeland.

With best regards,

- Lakshmi Nadig, Charlotte, North Carolina

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more