• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ರಿಕೆಟ್‌ ನಿಮಗೆ ಕಿರಿಕಿರಿಯೆ? ಕೆಟ್ಟದೇ?

By Staff
|

*ಶ್ರೀವತ್ಸ ಜೋಶಿ

Ohm Cricketaya Namaha'ಕ್ರಿಕೆಟ್‌ ವರ್ಲ್ಡ್‌ಕಪ್‌ 2003"ರ ಜ್ವರ ಇಡೀ ವರ್ಲ್ಡಿಗೇ ತಗುಲಿರುವಾಗ ಒಂದು ವಾರದ ವಿಚಿತ್ರಾನ್ನವೂ ಕ್ರಿಕೆಟ್‌ ಸ್ಪೆಷಲ್‌ ಆಗದಿದ್ದರೆ ಹೇಗೆ ಎಂಬ ವಿಚಾರವನ್ನು ಓದುಗಮಿತ್ರರೊಬ್ಬರು ಅನಿಲ್‌ಕುಂಬ್ಳೆಯ ಸ್ಪಿನ್‌ಗಿಂತಲೂ ಮಾರಕವಾಗಿ ನನ್ನ ಮೇಲೆ ಎಸೆದಿದ್ದಾರೆ. ಅದನ್ನು ಹೇಗಾದರೂ ಮಾಡಿ ಡೆಫೆನ್ಸಿವ್‌ ಆಗಿ ಆಡಬೇಕೆಂದುಕೊಂಡು, ವಿಚಿತ್ರಾನ್ನದ ಈ ತುತ್ತನ್ನು ಕ್ರಿಕೆಟ್‌ ಸ್ಪೆಷಲ್‌ ಎಂದು ಬೌಂಡರಿಗಟ್ಟುವ ಪ್ರಯತ್ನ ಮಾಡಿದ್ದೇನೆ. ಅಂಪೈರಾದ ನೀವು 'ಸಿಕ್ಸ್‌" ಎಂದು ಎರಡೂ ಕೈ ಎತ್ತುತ್ತೀರೋ, 'ಔಟ್‌" ಎಂದು ಒಂದು ಕೈ ಎತ್ತುತ್ತೀರೋ ನೋಡೋಣ.

ಪ್ರಾಮಾಣಿಕವಾಗಿ ಹೇಳುತ್ತೇನೆ, ನಾನೊಬ್ಬ ಕ್ರಿಕೆಟ್‌ ಹುಳುವಲ್ಲ . ಆಶ್ಚರ್ಯವೆಂದರೆ, ಕ್ರಿಕೆಟ್‌ (cricket) ಎಂದರೇ ಒಂದು ಹುಳ/ಕೀಟ ಎಂಬ ಅರ್ಥವನ್ನು ಆಕ್ಸ್‌ಫರ್ಡ್‌ ಅಥವಾ ವೆಬ್‌ಸ್ಟರ್‌ ಡಿಕ್ಷನರಿಯು ಸೂಚಿಸುತ್ತದೆ. ಅಂದಮೇಲೆ ಇಂಗ್ಲೀಷ್‌ ಸಾಮ್ರಾಜ್ಯದ ಪ್ರಜೆಗಳಾದ (ಅಂದರೆ ಪ್ರಜೆಗಳ ಮಕ್ಕಳ ಮಕ್ಕಳಾದ ಅಂತ ಅನ್ನಿ...) ನಾವೆಲ್ಲ ಭಾರತೀಯರು ಕ್ರಿಕೆಟ್‌ ಹುಳಗಳಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ . ಇರಲಿ, ಹುಳ ಆಗಿರದಿದ್ದರೂ ವರ್ಲ್ಡ್‌ಕಪ್‌ ಬಗ್ಗೆ, ಅಥವಾ ಭಾರತ ಯಾವುದಾದರೂ ತಂಡದೆದುರು ಟೆಸ್ಟ್‌ , ವನ್‌-ಡೇ ಸರಣಿಯಾಡುತ್ತಿದ್ದರೆ ಮಿನಿಟ್‌-ಟು-ಮಿನಿಟ್‌ ಅಕೌಂಟ್‌ ಅಲ್ಲದಿದ್ದರೂ ಡೇ-ಟು-ಡೇ ಸ್ಕೋರನ್ನೆಲ್ಲ ನಾನೂ ಅಪ್‌ಡೇಟ್‌ ಮಾಡಿಟ್ಟುಕೊಂಡಿರುತ್ತೇನೆ. ಹಾಗೆ ನೋಡಿದರೆ ಅಮೆರಿಕದಲ್ಲಿರುತ್ತ ಅಮೆರಿಕನ್‌ ಫುಟ್‌ಬಾಲ್‌ (ಪ್ರಮುಖವಾಗಿ ಸೂಪರ್‌ಬೌಲ್‌ ಸಂದರ್ಭದಲ್ಲಿ), ಬೇಸ್‌ಬಾಲ್‌, ಬಾಸ್ಕೆಟ್‌ಬಾಲ್‌ ಇತ್ಯಾದಿ ಆಟವಾಡಿ ಅಭ್ಯಾಸವಿರದಿದ್ದರೂ ಅವುಗಳ ಬಗ್ಗೆ ಒಂದಿಷ್ಟು ತಿಳಿದುಕೊಂಡಿದ್ದರೆ ಆಫೀಸ್‌ ಲಂಚ್‌ರೂಮ್‌ನಲ್ಲಿ ಆ ಟಾಪಿಕ್‌ ಬಂದಾಗ ನಮ್ಮ 'ಎಕ್ಸ್‌ಪರ್ಟ್‌ ಕಾಮೆಂಟ್ಸ್‌" ಎಸೆಯಲಿಕ್ಕಡ್ಡಿಯಿಲ್ಲ ! (ಹೆಚ್ಚಿನವರು ಮಾಡುವುದು ಅದನ್ನೇ:-). ಸೋ, ನನ್ನ ಕ್ರಿಕೆಟ್‌ ಮಾಹಿತಿ ಭಂಡಾರದ ಆಳ ಅಷ್ಟಕ್ಕಷ್ಟೇ.

ಇದಿಷ್ಟು ಪೀಠಿಕೆಯ ನಂತರ ಈಗ ಟಿಪಿಕಲ್‌ ವಿಚಿತ್ರಾನ್ನದ ಶೈಲಿಯಲ್ಲಿ ಕ್ರಿಕೆಟಾಯಣ. ನಡುವೆ ಕೆಲವು ನೋಬಾಲ್‌, ವೈಡ್‌ಬಾಲ್‌ಗಳಿಂದ, ಲೆಗ್‌ಬೈಗಳಿಂದ ನಿಮಗೆ ಎಕ್ಸ್ಟ್ರಾ ಓಟಗಳು ಸಿಗಬಹುದಾದರೂ ಕೊನೆಯಲ್ಲಿ ಒಂದು ಒಗಟಿನ 'ಗೂಗ್ಲಿ" ಇದೆ. ಉತ್ತರಕ್ಕಾಗಿ ಗೂಗಲ್‌.ಕಾಂನ ಮೊರೆ ಹೋಗಬೇಕಾಗುತ್ತದೋ ಅಥವಾ ನೀವೇ ಭರ್ಜರಿ ಹೊಡೆತದಿಂದ ಅದನ್ನು ಸಿಕ್ಸಾಗಿಸುತ್ತಿರೋ ನೋಡಿ.

ಎಲ್‌.ಬಿ.ಡಬ್ಲ್ಯು ಅಂದರೆ ಲೆಗ್‌ ಬಿಫೋರ್‌ ವಿಕೇಟ್‌ - ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ ಔಟಾಗುವ ಹಲವು ವಿಧಗಳಲ್ಲೊಂದು. ಕ್ರಿಕೆಟ್‌ ಮೈದಾನದ ಹೊರಗೆ, ನಿಜಜೀವನದಲ್ಲಿ ಎಲ್‌.ಬಿ.ಡಬ್ಲ್ಯು ಅನ್ನುವ ಶಾರ್ಟ್‌ಫಾರ್ಮ್‌ಗೆ ಬೇರೆಯೇ ವಿವರಣೆ ಇದೆ. ಪ್ರೇಮವಿವಾಹ (ಲವ್‌ಮ್ಯಾರೇಜ್‌) ಅನ್ನುವುದಕ್ಕೆ ಬಳಸಲ್ಪಡುವ ಕೋಡ್‌ ವರ್ಡ್‌ 'ಎಲ್‌.ಬಿ.ಡಬ್ಲ್ಯು" = ಲವ್‌ ಬಿಫೋರ್‌ ವೆಡ್ಡಿಂಗ್‌. ಹಾಗಿದ್ದರೆ ಅರೇಂಜ್ಡ್‌ ಮ್ಯಾರೇಜನ್ನು ಎಲ್‌.ಎ.ಡಬ್ಲ್ಯು ಅನ್ನಬಹುದೇ ? ಖಂಡಿತ, ಅದು ಕಾನೂನು Law! ಮದುವೆಯಾದ ಮೇಲೆ ಮನೆಯಲ್ಲಿ ಒಂದೋ ಹೆಂಡತಿಯ ಕಾನೂನು ನಡೆಯುತ್ತದೆ (ಅಥವಾ ಅಪರೂಪದ ಸಂದರ್ಭದಲ್ಲಿ ಗಂಡನ ಕಾನೂನು)? in-laws ಎಂಬುದರ ವ್ಯುತ್ಪತ್ತಿಯೂ ಹೀಗೆಯೇ ಇರಬಹುದೇ?

Shrivatsa Joshiಕ್ರಿಕೆಟ್‌ ಚೆಂಡಿನ ವ್ಯಾಸ 7.2 ಸೆ.ಮೀ ಇರಬೇಕು. ಇದು ಆಟದ ಸಂವಿಧಾನಬದ್ಧ ನಿಯಮ. ಹಾಗಾದರೆ 'ವೈಡ್‌ಬಾಲ್‌" ಎಂದು ಕರೆಸಿಕೊಳ್ಳುವ ಚೆಂಡಿನ ವ್ಯಾಸ ಎಷ್ಟಿರಬೇಕು? ಅನ್ನುವ ಅಸಂಬದ್ಧ ಪ್ರಶ್ನೆಯು ಶುದ್ಧತರಲೆಗೊಂದು ಉದಾಹರಣೆ ಅಷ್ಟೇ. ಆದರೂ ನಾನಿಲ್ಲಿ ಪ್ರಸ್ತಾಪ ಮಾಡಿದ್ದೇಕೆಂದರೆ ವ್ಯಾಸ (ಡಯಾಮೀಟರ್‌), ತ್ರಿಜ್ಯ (ರೇಡಿಯಸ್‌) ಇತ್ಯಾದಿ ಶಬ್ದಗಳನ್ನು ನಾವು (ಕನ್ನಡ ಮಾಧ್ಯಮದವರೂ ಕೂಡ) ಎಸ್ಸೆಸ್ಸೆಲ್ಸಿಯ ನಂತರ ಎಂದಾದರೂ ಆಡುಮಾತಲ್ಲಿ ಉಪಯೋಗಿಸುತ್ತೇವೆಯೇ?

ಕ್ರಿಕೆಟ್‌ನಲ್ಲಿ 'ಹ್ಯಾಟ್ರಿಕ್‌" ಎಂಬ ಪದ ನಿಮಗೆ ಗೊತ್ತಿದೆ. ಬೌಲರ್‌ನ ಸತತ ಮೂರು ಚೆಂಡೆಸೆತಗಳಲ್ಲಿ ಮೂರು ಮಂದಿ ಎದುರಾಳಿ ಬ್ಯಾಟ್ಸ್‌ಮನ್‌ ಔಟಾದರೆ ಅದು ಆ ಬೌಲರನ ಹ್ಯಾಟ್ರಿಕ್‌ ಸಾಧನೆ. ಹಿಂದಿನ ಶತಮಾನದಲ್ಲಿ ಬ್ರಿಟಿಷ್‌ ಕೌಂಟಿಗಳಲ್ಲಿ ಕ್ರಿಕೆಟ್‌ ಆಡುತ್ತಿದ್ದಾಗ ಯಾವುದೇ ಬೌಲರ್‌ ಮೂವರನ್ನು ಒಬ್ಬರ ಹಿಂದೆ ಒಬ್ಬರಂತೆ ಔಟ್‌ ಮಾಡುವ ಈ ಚಾತುರ್ಯವನ್ನು ತೋರಿದರೆ ಅವನ ಸಾಧನೆಯನ್ನು ಗುರುತಿಸಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಒಂದು ಖಾಲಿ ಹ್ಯಾಟನ್ನು ಸರ್ಕ್ಯುಲೇಟ್‌ ಮಾಡಿ ಎಲ್ಲರೂ ಅದರಲ್ಲಿ ತಂತಮ್ಮ ಬಹುಮಾನಧನವನ್ನು ಹಾಕಿ ಕೊನೆಗೆ ಅದನ್ನು ಆ ಬೌಲರ್‌ಗೆ ಇನಾಮಾಗಿ ಕೊಡುವ ಸಂಪ್ರದಾಯವಿತ್ತು . ಆಗೆಲ್ಲ ಕ್ರಿಕೆಟಿಗರ ಸಂಭಾವನೆ ಇವತ್ತಿನ ಪರಿಯಲ್ಲಿರಲಿಲ್ಲವಲ್ಲ ! ಹ್ಯಾಟ್‌ ಸರ್ಕ್ಯುಲೇಟ್‌ ಆಗಿ ಅದರಲ್ಲೇನಾದರೂ ಜಮೆಯಾದರೆ ಅದೇ ದೊಡ್ಡ ಸಂಭಾವನೆ. ಅದನ್ನು ಪಡೆಯುವುದೇ ಪ್ರತಿ ಬೌಲರ್‌ನ ದೊಡ್ಡ ಕನಸು. ಹೀಗೆ ಹುಟ್ಟಿತು ಹ್ಯಾಟ್ರಿಕ್‌! ಈ ಹಿಂದೆ ವರ್ಲ್ಡ್‌ಕಪ್‌ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್‌ ಸಾಧನೆ ತೋರಿದ ಭಾರತೀಯ ಬೌಲರ್‌ ಎಂದರೆ ಚೇತನ್‌ ಶರ್ಮಾ. ವರ್ಲ್ಡ್‌ಕಪ್‌ ಅಲ್ಲದ ಏಕದಿನ ಪಂದ್ಯದಲ್ಲಿ ಕಪಿಲ್‌ದೇವ್‌ ಹಾಗೂ ಟೆಸ್ಟ್‌ಕ್ರಿಕೆಟ್‌ನಲ್ಲಿ ಹರ್‌ಭಜನ್‌ ಸಿಂಗ್‌ ಕೂಡ ಭಾರತದ ಹ್ಯಾಟ್‌ಟ್ರಿಕ್‌ ಹೀರೋಗಳೆನಿಸಿದ್ದಾರೆ.

ಈಗ ಕೊನೆಯಲ್ಲೊಂದು ಟ್ರಿಕ್ಕಿ ಪ್ರಶ್ನೆ. ಇದು ಹ್ಯಾಟ್ರಿಕ್‌ಗಿಂತಲೂ ಅಮೋಘ ಸಾಧನೆಯ ಒಂದು ಕಾಲ್ಪನಿಕ ಚಿತ್ರ. ಗಮನವಿಟ್ಟು ಓದಿ:

ಅದೊಂದು ವನ್‌-ಡೇ ಮ್ಯಾಚ್‌. ಭಾರತ ಮತ್ತು ಕೆನ್ಯಾ ತಂಡಗಳ ನಡುವೆ. (ಅವೆರಡೂ ವರ್ಲ್ಡ್‌ಕಪ್‌ ಟೂರ್ನಮೆಂಟ್‌ನ ಒಂದೇ ಪೂಲ್‌ನಲ್ಲಿ ಇಲ್ಲವಲ್ಲ ಎಂದು ನನಗೇ ಪ್ರಶ್ನೆ ಎಸೆಯಬೇಡಿ. ಯಾರಿಗೆ ಗೊತ್ತು ಅವೆರಡು ಫೈನಲ್ಸ್‌ಗೆ ಬಂದರೆ!? ಹೇಗೂ ಕ್ರಿಕೆಟ್‌ ಈಸ್‌ ಎ ಗೇಮ್‌ ಆಫ್‌ ಅನಿಶ್ಚಿತತೆ...) . ಕೆನ್ಯಾ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಂಭಿಸುತ್ತದೆ. ಈ ಮ್ಯಾಚ್‌ನಲ್ಲಿ ಭಾರತದ ಬೌಲಿಂಗ್‌ ದಾಳಿಯ ಮೊನಚು ಎಷ್ಟಿರುತ್ತದೆಯೆಂದರೆ ಆಟ ಆರಂಭವಾದೊಡನೆ, ಪ್ರತಿ ಬಾಲ್‌ಗೆ ಒಬ್ಬ ಬ್ಯಾಟ್ಸ್‌ಮನ್‌ ಔಟ್‌. ಐ ಮೀನ್‌ ಒಂದು ಓವರ್‌ ಮತ್ತು ನಾಲ್ಕು ಬಾಲ್‌ಗಳಲ್ಲಿ (ನೋಬಾಲ್‌, ವೈಡ್‌ಬಾಲ್‌ ಯಾವುದೂ ಇಲ್ಲ . ಅತಿ ಕರಾರುವಾಕ್ಕಾದ ಚೆಂಡೆಸೆತ) ಕೆನ್ಯಾ ಆಲೌಟ್‌! ಈಗ ನೀವು ಉತ್ತರಿಸಬೇಕಾದದ್ದಿಷ್ಟೇ. ಭಾರತದ ಈ ಬೌಲಿಂಗ್‌ ಚಂಡಮಾರುತಕ್ಕೆ ತತ್ತರಿಸಿ ಆಲೌಟಾದ ಕೆನ್ಯಾ ತಂಡದಲ್ಲಿ , ಯಾವ ಕ್ರಮಾಂಕದ ಆಟಗಾರ (ಬ್ಯಾಟಿಂಗ್‌ ಆರ್ಡರ್‌ನಲ್ಲಿ ಸೀರಿಯಲ್‌ ನಂಬರ್‌) 'ನಾಟೌಟ್‌" ಆಗಿ ಉಳಿದಿರುತ್ತಾನೆ? ಆಲೌಟ್‌ ಅಂದರೂ ಕ್ರಿಕೆಟ್‌ ಟೀಮ್‌ನಲ್ಲಿ ಹನ್ನೊಂದು ಮಂದಿ ಆಟಗಾರರಿರುತ್ತಾರೆ, ಹತ್ತು ಮಂದಿ ಮಾತ್ರ ಔಟಾಗುತ್ತಾರೆ ಇತ್ಯಾದಿಯನ್ನೆಲ್ಲ ನಿಮಗೆ ಹೇಳಿಕೊಡಬೇಕೆ? ಅದರೂ ಇದು ಸ್ವಲ್ಪ ಟ್ರಿಕ್ಕಿ ಇದೆ. ಉತ್ತರ ಗೊತ್ತಿದ್ದರೆ/ಗೊತ್ತಾದರೆ sjoshim@hotmail.comಗೆ ಬರೆದು ತಿಳಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more