• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಡುಪಿ ಭೋಜನ ಸೂಪರ್‌; ಕ್ರಿಕೆಟ್‌ ಗೂಗ್ಲಿಗೆ ಸಿಕ್ಸರ್‌!

By Staff
|
Srivathsa Joshiವಿಚಿತ್ರಾನ್ನದಲ್ಲಿ ಪ್ರಕಟವಾದ ‘ಬಾಳೆಲೆಯಲ್ಲಿ ಉಡುಪಿಶೈಲಿಯ ಭೋಜನ’, ‘ಮುಗ್ಧತೆಯ ಲೋಕಕ್ಕೊಂದು ಗಣೇಶ ಪ್ರದಕ್ಷಿಣೆ’ (ಪಾಪ ಪಾಂಡು), ‘ಕ್ರಿಕೆಟ್‌ ರಸಪ್ರಶ್ನೆ’ ಮತ್ತು ‘ಮೇಡ್‌ ಫಾರ್‌ ಈಚ್‌ ಅದರ್‌’ - ಈ ನಾಲ್ಕು ಬರವಣಿಗೆಗಳಿಗೆ ಬಂದ ಪ್ರತಿಕ್ರಿಯೆಗಳನ್ನೆಲ್ಲ ಒಟ್ಟುಮಾಡಿ ಇಲ್ಲಿ ಪ್ರಕಟಿಸಲಾಗಿದೆ. ವಿಚಿತ್ರಾನ್ನದ ಮೂಲೋದ್ದೇಶವಾದ ಲಘು-ಓದು ಮತ್ತು ಓದುಗರ ಭಾಗವಹಿಸುವಿಕೆ ಈ ಪತ್ರಗಳಿಂದ ಇನ್ನೊಮ್ಮೆ ಸಾಬೀತಾಗಿರುವುದು ಸಂತಸದ ವಿಷಯ. ಎಲ್ಲರಿಗೂ ಧನ್ಯವಾದಗಳು.

- ಶ್ರೀವತ್ಸ ಜೋಶಿ.

ಜೋಶಿಯವರೆ,

ನಮ್ಮಂತಹ ಉಡುಪಿ ಶಿವಳ್ಳಿ ಬ್ರಾಹ್ಮಣರಿಗೆ ನಿಮ್ಮ ಭೂರಿ ಭೋಜನದ ಎಲೆ ನೋಡಿದ ಮೇಲೆ ನಮ್ಮ ಸ್ಥಿತಿ ಕೇಳಬೇಕೆ? ಎಷ್ಟೊಂದು ಬಗೆಗಳು? ನಾನು ಬಹಳಷ್ಟು ಹುಡುಕಾಡಿದೆ ಬಡಿಸದಿರದ ಬಗೆಗೆ. ಆದರೆ ಎಲ್ಲವೂ ಇದೆ. ಚೆನ್ನಾಗಿ ಹೊಡೆದೆ. ಹಸಿರು ಬಾಳೆ ಎಲೆ ಖಾಲಿ. ಊಟದ ಮಧ್ಯೆ ‘ದಕ್ಷಿಣೆ’ ಕೊಡ್ತಾರೆ, ಉಡುಪಿ ಊಟದಲ್ಲಿ ?

ನಿಮ್ಮದು ಊಟದ ಅರೇಂಜ್‌ಮೆಂಟ್‌ ಅಲ್ಲವಾ ? ಇನ್ನೂ ಆಗಿಂದಾಗ್ಗೆ ವಿವಿಧ ರೀತಿಯ ಊಟ ನಿಮ್ಮ ಒದುಗರಿಗೆ ನಿಮ್ಮಿಂದ ಸಿಗುವಂತಾಗಲಿ

ಧನ್ಯವಾದಗಳು,

- ತ್ರಿಪುರಾನಂದ ವಾರಂಬಳ್ಳಿ; ಹಾಂಗ್‌ಕಾಂಗ್‌

*

ಜೋಶಿಯವರೆ,

ವಿಚಿತ್ರಾನ್ನದ 18ನೆಯ ಪ್ರಕರಣ ನೋಡಿದೆ. ನಾನು ಓದಿದ ಮತ್ತು ಪಾಠ ಮಾಡಿದ ದಿನಗಳು ನೆನಪಾಗತೊಡಗಿದವು. ಮುಂದೆ ಅಡಿಗೆಯ ಬಗ್ಗೆ ಓದಿದೆ. ಮಿತ್ರ ಉಡುಪಿ ರಾಘವೇಂದ್ರ ಮತ್ತು ಶ್ರೀನಿವಾಸನ ಅಕ್ಕನ ಮದುವೆ ಸಮಯದಲ್ಲಿ ಸೊಗಸಾದ ಭೋಜನ ಮಾಡಿದ್ದು ನೆನಪಾಯಿತು. ಅದು ನಿಮಗಿಂತ ತುಂಬ ದೊಡ್ಡ ಪಟ್ಟಿ . ಅಬ್ಬ! ಮಾಡಿದರೆ ಅಂಥ ಊಟ ಮಾಡಬೇಕು. ಈದಿನ ಊಟ ಪುನಃ ದೊರೆಯಿತು. ಭಕ್ಷ್ಯಗಳ ಹೆಸರು ಸಹಿತ ಸಿಕ್ಕಿತು. ಸ್ವಾಮೀ ಅಜೀರ್ಣ ಆಗುತ್ತದೆ ಹೀಗೆ ತಿಂದರೆ! ಊರಿಗೆ ಹೋಗಲೊ ಅಥವ ಇಲ್ಲೇ ಇರಲೊ?

- ಯೇಲಂಜಿ ಹನುಮಂತ ಶೆಟ್ಟಿ; ಸನ್ನಿವೇಲ್‌

*

ಜೋಶಿಯವರೆ,

ನಿಮ್ಮ ವಿಚಿತ್ರ ಭೋಜನ, ಉಣಬಡಿಸುವ ವಿಧಾನ ಅವಕ್ಕವೇ ಪೈಪೋಟಿ. ಮೂಲತಃ ನಾನು ಚಿತ್ರದುರ್ಗದವನಾದರೂ ನನ್ನ ಬಾಲ್ಯ ಎಲ್ಲ ದಕ್ಷಿಣ ಕನ್ನಡದಲ್ಲೇ ಕಳೀತು. ಗುಜ್ಜೆ ಪಲ್ಯ, ಕೊದ್ಯೆಲ್‌, ಪತ್ರೊಡೆ, ಹಲಸಿನ ಹಪ್ಪಳ, ಆಡ್ಯೆ, ಮೂಡಿ, ಸೇಮಿಗೆ, ಗೋಳಿಬಜೆ, ಕಡ್ಲೆ-ಬಜಿಲ್‌, ಇತ್ಯಾದಿ ಇತ್ಯಾದಿ... ಒಂದೇ ಎರಡೇ, ಎಲ್ಲ ಒಂದೇ ಸಲ ನೆನಪಿಗೆ ಬರೋ ಹಾಗೆ ಮಾಡಿದ್ರಲ್ಲ... ನೀವೇ ಹೇಳಿದ ಹಾಗೆ ಬಾಯಿಗೆ ಒಂದು ದೊಡ್ಡ ಅಣೆಕಟ್ಟು ಕಟ್ಟಬೇಕಾಯಿತು.

ನಿಮ್ಮ ಲೇಖನಗಳನ್ನು ಓದುತ್ತ ಇದ್ದರೆ, ಎಲ್ಲ ವಿಷಯಗಳು ಕಣ್ಣ ಮುಂದೆ ಕಟ್ಟಿದ ಹಾಗೆ ಇರುತ್ತೆ , ನಾವೂ ಅವುಗಳಲ್ಲೊಂದಾಗಿಬಿಡುತ್ತೇವೆ ಅಂತ ಅನ್ನಿಸ್ತದೆ.

ನಿಮ್ಮಿಂ-ದ ಇನ್ನೂ ಅನೇಕ ವಿಚಿತ್ರ... ವಿಷಯಗಳ ನಿರೀಕ್ಷೆಯಲ್ಲಿರುವ,

- ರಾಜೇಶ್‌ ಚೆಲುವ; ಕನೆಕ್ಟಿಕಟ್‌

*

ದಟ್ಸ್‌ಕನ್ನಡದಲ್ಲಿ ನಿಮ್ಮ ವಿಚಿತ್ರಾನ್ನ ಲೇಖನ ನೋಡಿದೆ. ತುಂಬ ಚೆನ್ನಾಗಿ ಮೂಡಿ ಬಂದಿದೆ. ಒಂದು ಸಾರಿ ವಿಶೇಷದ ಊಟ ಮಾಡಿದ ಅನುಭವವಾಯಿತು. ಆದರಲ್ಲಿ ನೀವು ಬಡಿಸಿದ ಕೆಲವು ಐಟಂಗಳ ಬಗ್ಗೆ ಬರೆಯುತ್ತಿದ್ದೇನೆ.

1. ಚಟ್ನಿ ಪುಡಿ: ಉಡುಪಿಯ ಕಡೆಯ ಊಟದಲ್ಲಿ ಇದು ಇರುವುದೆ? ನಾನು ಇದುವರೆಗೆ ನೋಡಿರಲಿಲ್ಲ.

2. ತೊವ್ವೆ: ತೊವ್ವೆಯ ಜಾಗ ಬದಲಾಗಿದೆ ಅನ್ನಿಸುತ್ತೆ. ಅದು ಅನ್ನದ ಮೇಲೆ ಹಾಕುವುದಲ್ಲವೆ? ಐಟಂ 13ರ ಪಕ್ಕ ಜಾಗ ಮಾಡಿಕೊಟ್ಟಿದ್ದರೆ ಚೆನ್ನಾಗಿದ್ದೀತು.

3. ಅವಿಯಲ್‌: ಇದನ್ನು ವಿಶೇಷಕ್ಕೆ ಮಾಡುವರೆ? ಅದೂ ನುಗ್ಗೆಕಾಯಿ ಹಾಕಿ?

4. ವಾಂಗೀಬಾತ್‌: ಸಾಂಪ್ರದಾಯಿಕ ಊಟಗಳಲ್ಲಿ ನನ್ನ ಅನಿಸಿಕೆಯ ಪ್ರಕಾರ ಯಾವ ಭಾತ್‌ ಸಹ ಇರುವುದಿಲ್ಲ (ಚಿತ್ರಾನ್ನ ಬಿಟ್ಟು).

ನಾನು ಉಡುಪಿಯವನು. ಈವಾಗ ಬೆಂಗಳೂರಲ್ಲಿ 5 ವರ್ಷದಿಂದ ಇದ್ದೇನೆ. ಊರಲ್ಲಿ ಇರುವಾಗ ನೀವು ಬರೆದ ರೀತಿಯ ಊಟ ನಾನು ತುಂಬ ಸಲ ಮಾಡಿದ್ದೇನೆ. ಅಲ್ಲಿ ಊಟ ಮಾಡುವುದು ಅಂದರೆ ಒಂದು ರೀತಿಯಲ್ಲಿ ಗಮ್ಮತ್ತು. ಒಂದೇ ಒಂದು ಚೂರು ಎಲೆಯಲ್ಲಿ ಬಿಡದೆ ಊಟ ಮಾಡುತ್ತಿದ್ದವ ನಾನು :-)

ಮತ್ತೊಮ್ಮೆ ಸಿಗೋಣ,

- ರಾಮಮೂರ್ತಿ ಮಕ್ಕಿತ್ತಾಯ; ಬೆಂಗಳೂರು

*

ಜೋಶಿ,

ನಿಂಕುಳ್ನೊ ಈ ವಾರಂತೊ ವಿಚಿತ್ರಾನ್ನ ಓದುತು, ಉಡುಪಿಡೊ ಕೃಷ್ಣ ಮಠಂತೊ ಚೌಕಿಡು ಅಶನ ಅಂತ್‌ನಾತ್‌ ಕುಶಿ ಆನು :)

- ಹರೀಶ್‌ ಬಾಧ್ಯ; ಸನ್ನಿವೇಲ್‌, ಕ್ಯಾಲಿಫೋರ್ನಿಯಾ

*

ಪ್ರಿಯ ಜೋಶಿಯವರೆ,

ನಿಮ್ಮ ‘ಒಂದು ಎರಡು ಬಾಳೆಲೆ ಹರಡು’ ಬಗ್ಗೆ ಒಂದೆರಡು ಮಾತು.

‘ನಾಯಿಮರಿ ನಾಯಿಮರಿ’ ಪದ್ಯದಂತೆಯೇ ಈ ಪದ್ಯವನ್ನು ರಚಿಸಿದವರು ರಾಜರತ್ನಮ್‌. ಇದು ಅವರ ‘ತುತ್ತೂರಿ’ ಪುಸ್ತಕದಲ್ಲಿದೆ. ‘ನಾಯಿಮರಿ ನಾಯಿಮರಿ’ ಇರುವ ಪುಸ್ತಕ ‘ಚುಟಕ’; ಅವರ ಎಲ್ಲ ಶಿಶುಸಾಹಿತ್ಯವನ್ನೂ ಒಟ್ಟಿಗೆ ಸೇರಿಸಿ ‘ಕಂದನ ಕಾವ್ಯಮಾಲೆ’ ಎಂಬ ಪುಸ್ತಕವನ್ನು ಅವರೇ ಪ್ರಕಟಿಸಿದ್ದಾರೆ. ಅದರಲ್ಲಿ ಇವನ್ನೂ, ಅವರ ಇತರ ಮಕ್ಕಳಪದ್ಯಗಳನ್ನೂ ಓದಬಹುದು.

ನೀವು ಬರೆದಿರುವ ಅರ್ಥದಲ್ಲಿ ‘ದಂಟು’ ಎನ್ನುವುದು ಬೇರೆ ಬೇರೆ ಸೊಪ್ಪುಗಳ ಅಥವಾ ಇತರ ಗಿಡಗಳ ಎಳೆಯ ಕಾಂಡ ಎಂದು ಆಗುತ್ತದೆ. ಕಿಟ್ಟೆಲ್‌ ನಿಘಂಟುವಿನಲ್ಲೂ ಈ ಪದಕ್ಕೆ ಇದೇ ಅರ್ಥವನ್ನು ಕೊಟ್ಟಿದೆ. ಈ ಅರ್ಥದ ಜೊತೆಗೆ ‘ದಂಟು’ ಎಂದರೆ ‘ದಂಟಿನ ಸೊಪ್ಪು’ ಎಂದೇ ಹೆಸರಾಗಿರುವ, ಪಲ್ಯ ಮಾಡುವ, ಕೆಂಪು, ಹಸಿರು ಸೇರಿದ ಸೊಪ್ಪೂ ಆಗುತ್ತದೆ. ಬೇರೆ ಸೊಪ್ಪುಗಳಿಗಿಂತ, ಈ ಸೊಪ್ಪಿನಲ್ಲಿ ಕಾಂಡ ಎದ್ದು ಕಾಣುತ್ತದೆ. ಅದರಿಂದಲೇ ಇದಕ್ಕೆ ‘ದಂಟಿನ ಸೊಪ್ಪು’ ಎಂದು ಹೆಸರೇನೋ. ಇದು ಅಡಿಗೆ ಮಾಡಿದಾಗ ‘ಪಾಲಕ್‌’ ಸೊಪ್ಪಿನಂತೆ ಬಹಳ ಕುಗ್ಗುವುದಿಲ್ಲ. ಇದೇ ತರಹದ, ಅಂದರೆ, ಕೆಂಪು ಹಸಿರು ಸೇರಿದ, ಅಡಿಗೆ ಮಾಡಿದಾಗ ಕುಗ್ಗದ, ಇನ್ನೊಂದು ಸೊಪ್ಪು ‘ಚಾರ್ಡ್‌’. ರಾಜರತ್ನಮ್‌ ಅವರು ಬಹುಶಃ ಈ ಎರಡನೆಯ ಅರ್ಥದಲ್ಲಿ ‘ದಂಟ’ನ್ನು ಬಳಸಿದ್ದಾರೆ.

ಇದೇ ಸರಣಿಯಲ್ಲಿ ಇನ್ನೊಂದು ಮಾತು. ನಿಮ್ಮ ‘ನಾಯಿಮರಿ ನಾಯಿಮರಿ’ ಪದ್ಯದ ಇಂಗ್ಲೀಷ್‌ ರೂಪಾಂತರವನ್ನು ಓದಿದವರೊಬ್ಬರು ಅದು ತಮ್ಮ ಪಠ್ಯಪುಸ್ತಕದಲ್ಲಿ ಒಬ್ಬ ಹುಡುಗ ನಾಯಿಗೆ ಹೇಳಿದ ಮಾತು ಎಂದು ನೆನಪು ಮಾಡಿಕೊಂಡರಲ್ಲವೆ? ರಾಜರತ್ನಮ್‌ ಅವರ ‘ಚುಟಕ’ದಲ್ಲಿ ಈ ಪದ್ಯಕ್ಕೆ ಎರಡು ಚಿತ್ರ ಇವೆ. ಒಂದರಲ್ಲಿ ‘ಟೆರ್ರಿಯರ್‌’ ತರಹದ ನಾಯಿಯನ್ನು ಒಬ್ಬಳು ಚಿಕ್ಕ, ಒಂದು ಜಡೆ ಹಾಕಿಕೊಂಡು, ಹೂ ಮುಡಿದುಕೊಂಡಿರುವ ಹುಡುಗಿ ಮಾತನಾಡಿಸುತ್ತಿದ್ದಾಳೆ. ನಾಯಿಗೆ ಕಿವಿ ನೆಟ್ಟಗಿದೆ. ಸ್ವಲ್ಪ ಗಡ್ಡವೂ ಇದೆ. ಇನ್ನೊಂದು ಚಿತ್ರದಲ್ಲಿ ನಾಯಿ ಮಾತ್ರ ಇದೆ. ಅದು ಈಗ ಹೆಚ್ಚು ಕಮ್ಮಿ ‘ಸ್ಪಾನಿಯಲ್‌’ ತರಹ ಆಗಿಬಿಟ್ಟಿದೆ! ಕಿವಿ ಜೋತುಬಿದ್ದು, ಗಡ್ಡ ಮಾಯವಾಗಿಬಿಟ್ಟಿದೆ. ಈ ಪುಸ್ತಕಕ್ಕೆ ಚಿತ್ರವನ್ನು ಬರೆದವರು ಯಾರು ಎಂದು ಪುಸ್ತಕದಲ್ಲಿ ಹೇಳಿಲ್ಲ. ‘ರಸಕವಳ’ ಎಂಬ ಇನ್ನೊಂದು ಪುಸ್ತಕದ ಚಿತ್ರಾಲಂಕಾರ ಮಾಡಿರುವವರು ಎಸ್‌. ಆರ್‌. ಸ್ವಾಮಿ. ಆದ್ದರಿಂದ ಈ ಚಿತ್ರಗಳನ್ನು ಬರೆದವರೂ ಅವರೇ ಏನೋ ಎಂದು ಊಹಿಸಬಹುದು! ವಂದನೆಗಳೊಂದಿಗೆ,

- ಎಚ್‌. ಕೆ. ಕೃಷ್ಣಪ್ರಿಯನ್‌; ಕುಪರ್ಟಿನೋ, ಕ್ಯಾಲಿಫೋರ್ನಿಯಾ

*

ಜೋಶಿಯವರೆ,

ನಿಮಗೆ ಪ್ರಾಮಿಸ್‌ ಮಾಡಿದಂತೆ ಕನ್ನಡ ಬರಹದಲ್ಲಿ ನಮ್ಮ ಶಿಶುವಿಹಾರದ ಪದ್ಯವನ್ನು ಎಕ್ಸ್‌ಟೆಂಡ್‌ ಮಾಡಿದ್ದೀನಿ, ನಿಮ್ಮ ಸವಿಯಾದ ಭೋಜನ ಮಾಡಿದಮೇಲೆ.

ಹನ್ನೊಂದು ಹನ್ನೆರಡು ಗೊಜ್ಜಾಂಬಡೆ ಮತ್ತೆರಡು

ಹದಿಮೂರು ಹದಿನಾಲ್ಕು ಸಾರು ಸುರಿಯಬೇಕು

ಹದಿನೈದು ಹದಿನಾರು ಕಾಯಿ ಹೋಳಿಗೆ ಖೀರು

ಹದಿನೇಳು ಹದಿನೆಂಟು ಕೈಗೆ ಬಾಯಿಗೆ ನಂಟು

ಹತ್ತೊಂಬತ್ತು ಇಪ್ಪತ್ತು ಹೊಟ್ಟೆಯ ಚೀಲ ತುಂಬಿತ್ತು (ಅಥವ ಬಿರಿದಿತ್ತು :-)

ಹನ್ನೊಂದರಿಂದ ಇಪ್ಪತ್ತು ಹೇಗಿತ್ತು? ಜೋಶಿಯ ನಳಪಾಕದ ಗಮ್ಮತ್ತು!

ಭಾರಿ ಊಟ ಮಾತ್ರ ಅಲ್ಲ , ನಿಮ್ಮ ಬಡಿಸುವಾಗಿನ ಆತ್ಮೀಯತೆ, ಪ್ರತೀ ಪದಾರ್ಥಕ್ಕೆ ಕೊಟ್ಟ ವಿವರಣೆ ಎಲ್ಲ ವೂ ರುಚಿಯನ್ನು ಹೆಚ್ಚಿಸಿ, ಎಂಜಾಯ್‌ ಮಾಡೋಹಾಗೆ ಮಾಡ್ತು. ಈಗಿನ ಧಾವಂತದ ಬದುಕಲ್ಲಿ ಈ ರೀತಿ ಊಟ ಮಾಡೋದು/ಹಾಕೋದು ಕನಸೇ ಅಗ್ತಿದ್ರೂನೂ ಇನ್ನೂ ನಮ್ಮ ಊರ ಕಡೆ ಬಾಳೆಯೆಲೆ ಸಂಪ್ರದಾಯ ಉಳಿದಿದೆ ಅನ್ನಬಹುದು. ಬೆಂಗಳೂರಲ್ಲಿ ದರ್ಶಿನಿಗಳಲ್ಲೂ ಬಾಳೆಯೆಲೆ ಉಪಯೋಗ ಚೆನ್ನಾಗಿ ಮಾಡ್ತಾರೆ. ಇದು ಹೈಜೀನ್‌ ಕೂಡ ಅಲ್ವಾ? ಆದ್ರೆ ಯಾಕೊ ನಮ್ಮ ಎಂ.ಟಿ.ಆರ್‌ನವ್ರು ಈಗ ತಟ್ಟೆ ಬಳಸೋಕೆ ಶುರು ಮಡಿದ್ದರೆ :-(

ನಿಮ್ಮ ವಿಚಿತ್ರಾನ್ನವೂ ಅದರ ಓದುಗರೂ, ‘ಹೇಳಿ ಮಾಡಿಸಿದ ಜೋಡಿ’ ಅಲ್ವಾ!! ಮೇಡ್‌ ಫಾರ್‌ ಈಚ್‌ ಅದರ್‌ ಅಂತ ಓದ್ತಿದ್ದ ಹಾಗೆ ನನ್ಗೆ ಮದ್ವೆಗಳಲ್ಲಿ ಸಾಮಾನ್ಯವಾಗಿ ದೊಡ್ಡವ್ರು ಗಂಡು-ಹೆಣ್ಣಿನ ಜೋಡಿ ಎಲ್ಲ ರೀತೀಲೂ ಅನುರೂಪವಾಗಿದ್ರೆ ಹೀಗೆ ಕಾಮೆಂಟ್‌ ಮಾಡುವುದು ಕೇಳಿದ್ದೀನಿ. ಈ ಬಳಕೆ ಸಾಧಾರಣ ಎಲ್ಲ ಲವ್‌ಸ್ಟೋರಿಗಳಲ್ಲೂ,

ಕಾದಂಬರಿಗಳಲ್ಲೂ ಉಪಯಾಗಿಸೋದು ಕಂಡಿದೀನಿ. ಜೋಕ್ಸ್‌ ಚೆನ್ನಾಗಿತ್ತು ಈ ವಿಚಿತ್ರ ಜೋಡಿಗಳದ್ದು. ‘ಮೇಡ್‌ ಫಾರ್‌ ವನ್‌, ಮದುವೆ ವಿದ್‌ ಅದರ್‌’ ಆಗದೆ ಇದ್ರೆ ಜೀವನ ಚೆನ್ನ. ಗಂಡ ಹೆಂಡಿರಿಬ್ಬರೂ ‘ಮೇಕ್‌ ಮದುವೆ ವಂಡರ್‌ಫುಲ್‌ ಫಾರ್‌ ಈಚ್‌ ಅದರ್‌’ ಮಾಡಿದರೆ ತನ್ನಿಂತಾನೇ ಎಲ್ಲರೂ ಅವರನ್ನು ಮೇಡ್‌ ಫಾರ್‌ ಈಚ್‌ ಅದರ್‌ ಎನ್ನುತ್ತಾರೆ!- ಅನುರಾಧಾ ಆರ್‌ ಕೆ; ಬೆಂಗಳೂರು

*

ನಮಸ್ಕಾರ ಶ್ರೀವತ್ಸ ಜೋಶಿಯವರಿಗೆ,

ನಿಮ್ಮ ಭೋಜನ ಸಖತ್ತಾಗಿತ್ತು ಮಾರಾಯ್ರೆ. ಓದುವಾಗ ನನ್ನ ಬಾಯಿಯಲ್ಲಿ ನೀರೂರಿದ್ದಂತೂ ನಿಜ! ನೀವು ಹೇಳೋದು ಸರಿ, ಮಹಾಭಾರತದ್ದು 18 ಪರ್ವಗಳಾದರೆ ನಿಮ್ಮ ವಿಚಿತ್ರಾನ್ನದ ಪರ್ವಗಳು ಹೀಗೆ ‘ರಸಮಯ ಭೋಜನ’ ನಮ್ಮ ಮೆದುಳಿಗೆ ಬಡಿಸುತ್ತ ಮುಂದೆ ಮುಂದೆ ಸಾಗಲಿ.

‘ಮೇಡ್‌ ಫಾರ್‌ ಈಚ್‌ ಅದರ್‌’ ಓದಿ.... ಹ ಹ ಹಾ.... ಇನ್ನೂ ನನ್ನ ನಗು ನಿಲ್ತಾ ಇಲ್ಲ ! ಅದರಲ್ಲಿದ್ದ ಜೋಡಿಗಳನ್ನು ನೋಡಿ, ಈ ವಾರದ ವಿಚಿತ್ರಾನ್ನದ ಶೀರ್ಷಿಕೆ ‘ಮೇಡ್‌ ಫಾರ್‌ ಈಚ್‌ ಅದರ್‌’ ಗೆ ಬದಲು, ‘ಮ್ಯಾಡ್‌ ಫೋರ್‌ ಈಚ್‌ ಅದರ್‌’ ಇರಬೇಕಿತ್ತು ಅಂತ ನನ್ನ ಅನಿಸಿಕೆ:-)

ಧನ್ಯವಾದಗಳೊಂದಿಗೆ,

- ಲೀನಾ; ಬೆಂಗಳೂರು

*

ಮಾನ್ಯರೆ,

ಇಂದು ನಿಮ್ಮ ವಿಚಿತ್ರಾನ್ನದ ಪ್ರಶ್ನೆಗೆ ಉತ್ತರಿಸೋಣವೆಂದು ಕುಳಿತೆ. ಆದರೆ ನನಗೆ ಕೆಲವು ಅನುಮಾನಗಳಿವೆ, ನೀವು ಹೇಳಿದಂತೆ ಪ್ರತಿಯಾಂದು ಚೆಂಡಿಗೆ ಒಬ್ಬ ದಾಂಡಿಗ ಹೊರ ನಡೆಯುತ್ತಾನೆ. ನನ್ನ ಪ್ರಶ್ನೆ ಆತ ಯಾವ ರೀತಿ ಔಟ್‌ ಆಗುತ್ತಾನೆಂದು ನೀವು ತಿಳಿಸಿಲ್ಲ ಅಲ್ಲವೆ? ಉದಾಹರಣೆಗೆ ಕ್ಯಾಚ್‌ ಹಿಡಿಯಬೇಕಾದರೆ ದಾಂಡಿಗರು ತಮ್ಮ ತುದಿಯನ್ನು ಬದಲಿಸಿರಬಹುದಲ್ಲವೆ? ಹಾಗೆ ದಾಂಡಿಗರು ಓಟ ಗಳಿಸುವಾಗ ರನೌಟಾದರೆ ಆಗಲೂ ಅವರ ಆದುವ ತುದಿಗಳು ಬದಲಾಗಿರುತ್ತದಲ್ಲವೆ? ಅಥವಾ ನಿಮ್ಮ ಪ್ರಶ್ನೆಯಲ್ಲಿ ಎಲ್ಲರೂ ತಮ್ಮ ಹುದ್ದರಿಯನ್ನು ಮುರಿದು ಔಟ್‌ ಅಗುತ್ತಾರ (ಬೌಲ್ಡ್‌) ?

- ಪ್ರಸನ್ನ ಕೆ.; ಊರು?

*

ಜೋಶಿಯವರಿಗೆ,

ಕ್ರಿಕೆಟ್‌ ಬಗೆಗಿನ ನಿಮ್ಮ ಲೇಖನ ಇಂದು ಓದಿದೆ. ತುಂಬ ಚೆನ್ನಾಗಿದೆ. ನಿಮ್ಮ ಪ್ರಶ್ನೆಯ ಉತ್ತರ 7ನೇ ಕ್ರಮಾಂಕದ ಆಟಗಾರ ಔಟಾಗದೆ ಉಳಿಯುತ್ತಾನೆ.

ಇದು ಸರಿಯೇ? ಉತ್ತರಗಳನ್ನು ಪ್ರಕಟಿಸಿದಾಗ ನೋಡುತ್ತೇನೆ.

- ಡ್ಯಾಶ್‌ ಘಟ್ಟು; ನ್ಯೂ ಜೆರ್ಸಿ.

*

ಥರ್ಡ್‌ ಅಂಪೈರ್‌ನ ನೆರವಿಲ್ಲದೇ 8ನೇ ಬ್ಯಾಟ್ಸ್‌ಮನ್‌ ನಾಟ್‌ಔಟ್‌ ಎಂದು ಸರಿಯಾಗಿ ತೀರ್ಪು ಕೊಟ್ಟವರು:

- ಚೇತನ್‌ ನಾಡಿಗೇರ್‌; ಬೆಂಗಳೂರು

- ಜಯಶ್ರೀ ಎಚ್‌.ಆರ್‌; ಬೆಂಗಳೂರು

- ಸಂತೋಷ್‌ ಕುಮಾರ್‌ ಕೆ.ಎನ್‌; ನ್ಯೂ ಜೆರ್ಸಿ

- ಪುರುಶೋತ್ತಮ್‌ ರಾವ್‌ ಉಡುಪಿ; ಗೈಥರ್ಸ್‌ಬರ್ಗ್‌

- ರೋಶನ್‌ ಶೆಟ್ಟಿ; ನ್ಯೂ ಜೆರ್ಸಿ

- ನಟರಾಜು ದಾಳಪ್ಪ; ಮೆಯಿನ್‌

- ಅನುರಾಧಾ ಕಲ್ಯಾಣಿ; ಮಿಲ್ವಾಕಿ, ವಿಸ್ಕಾನ್ಸಿನ್‌

- ಅರವಿಂದ ಉಪಾಧ್ಯ; ಸೈಂಟ್‌ ಲೂಯಿಸ್‌

- ರಂಗನಾಥ ಬಾಪಟ್‌; ಬೆಂಗಳೂರು

- ಪುರುಶೋತ್ತಮ ಜೋಶಿ; ಮುಂಬಯಿ

- ಚಂದ್ರಶೇಖರ್‌ ಎಸ್‌; ಊರು?

- ಲೇಪಾಕ್ಷ ಎನ್‌; ಕೋರಿಯಾ

- ಮುಕುಂದ್‌ ಆರ್‌.ಎಸ್‌; ಬೆಂಗಳೂರು

- ತ್ರಿಪುರಾನಂದ ವಾರಂಬಳ್ಳಿ; ಹಾಂಗ್‌ಕಾಂಗ್‌

*

Hello Joshi,

Thank you for giving buns receipe. I prepared buns, it was very tastee. Keep writing
- Parvathi; Bangalore

*

Dear Mr. Joshi,

Brilliant archival value this article of yours...its very appropriately written ( i should know since i am a Mangalorean ) and it brought a little moisture to my eyes...my land, my culture is captured and i am not so worried about where to go if my progeny needs info on the culinary skills and rituals that are slowly disappearing from the face of our cosmopolitan experiences.

Regards,
- Aparna Shivapura; Bangalore

*

Hi Joshi,

We are bachelor out of home, having Chitranna or some colour rice everyday, Now you are telling about these 31 delicious dishes out of which we can have only the following things:

1) Salt

2) Pickle

3) Papad

4) Curds

5) Butter milk.

6) Chitranna.

So you should stop your vichitranna at this stage only, now I pray god to get all 31 at the earliest.

Thanks, I enjoyed this week Vichitranna.

Regards
- Dilip Chakravarthy; Cambridge, Europe

*

Hai Srivatsa

I enjoy reading your articles on "Vichitranna". I think you should continue with your 19th and more articles in kannada on vichitranna.

Thanks,
- Vasantha Shashil; New Jersey

*

Hello Mr. Joshi:

Keep up the good work. How come you didnt mention the "tambuli" or may be it is just North Kanara dish. Thanks.
- Usha Bhat; City?

*

Hello, namaskaara!

I read your "innocence" article in thatskannada.com. Let me write one of my experiences.

Recently I met one of my friends. I had borrowed mysore mallige book from him. During that visit I returned the book to him. Incidentally, another friend of him was also present there. To be frank, he doesnt have that much idea about K S Narasimha Swamy, Mysore mallige etc. (though He also is a kannadiga). Suddnely he asked is that .. mallige a novel book. My friend clarified- no, that is kavana sankalana of K.S.Narasimha Swamy. Again he quippped, oh, i know Mysore Mallige is a film. K.S.N is director of that film. yes i met him once... he was a good director. he died in 1998........ (reeelu bitta....:-)
- Ganesh B K; Bangalore

*

Hi Joshi,

Well, it was an interesting pick up. Innocence or some times absent mind really creates some funny situations. It happened to me few months back. That time I was scheduled to travel to Louisville, Kentucky on business visit to G.E. Appliances park. So was in the preparation for the same. Usually when some one asks to where we are traveling we tell either city name or state name if they used to it else simply we say that going to USA. At the same time one of my friend also had to travel to Singapore. So she called up and we were exchanging the greetings and wishes mean while without thinking even for a while suddenly I asked her loudly To which city in Singapore? , after that I could hear only a big laugh from her side as well of my colleagues who over heard that. I didnt realize for a while about it then realized my absent minded question and joined them with a laugh. :-)

Thanks and Regards,
- Jayakumar C D; Bangalore

*

Answer to Cricket Quiz: Not Out Batsmen is No.2 Because He will be at the other end.
- K S Sastry; Manipal
- Krishnamurthy Bhat; Basrur

*

Batsman number 9 will be not out!
- Rajendra; City?

*

Dear Mr.Joshi,

Nice to read something about criket in your column. I think the answer is sl.No.7 in the batting order will be left with not out.
- Radha K; Bangalore

*

Hi Joshi,

Topic on cricket is good. You cant dicide which batsman is not out. If there are no runouts as you said bowling is very good, then obviously "NOT" the first player. It can be any player from second to 11th batsman is not out, as when any batsman is got out by catch -- batsmen are crossed when catch is taken.
- Venkatesh; Bellary

*

Dear Joshi,

Your atricle is very nice this week. Its nice fun with LBWs & LAWs. We can relate cricket & marriage as in both we cant predict anything.

I know the answer to your question . Its batsman no.8 who will be not-out.
- Shrilatha; Bangalore

*

Dear joshi,

Answer for that tricky question is: 7th batsman will be notout batsman in that team.
- Harinath Seetharamaiah; City?

*

Hi Srivatsa,

Gr8 cricketayana!! But , i think puzzle has missing data. I am assuming that all the batsmen are out as clean bowled (not a catch out where batsmen may have changeover). The solution is - 8th Batsman remaining Not-out.
- Gururaj.K.Kulkarni; Bangalore

*

Hello sir..

This batsman will be NO. 8 who will come to the crease when the 6th wicket falls down. He will be at the non-strikers end in the second over and so.. will be NOT OUT. But.. I am assuming all the types of OUTs happened were.. like lbw, bowled or anything that did not make batsmen to run across while being OUT. Is that right.. or u have something else VICHITRA ?? :-)
- Somayaji N; California

*

Dear Joshiji,

I could find out two sentences similar to English "Made for each other" in Kannada

1. anuguNavAda jodi/dampathi

2. anurUpavAda jodi/dampathi (aparUpa amthu alla)

or in saada words..."hELi maadisida jODi" and "gamDamge takka hemDti, hemDtige takka gamDa"
- Usha Rani A S; Hyderabad

*

Dear Joshi,

Here is a pair
Wifes name is vidhya (she is not educated; she is illiterate)
Husbands name is sundara (his looks are scary or horrible!)

Pleases write this in good kannada wordings and put for made for each other session, if you find this interesting ....
- Krishnarao Sreepadaraju; City?

*

Dear Joshi.
The exact connversion of "Made of each other is "eeDu jODu". This is used by many Novelist like M.K Indira, Usha navaratna ram, H G Radhadevi & so.
- Shylendra.K; Pune

*

Joshiyavare,

Made for eachother = janumada jodi......?
- Roopa Prakash K; NewJersey.

*

Kannada translation for "Made for Each other" is "hELi maaDisidhaanga"
- Geetanjali V Arakeri; City?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X