• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಪ ಪಾಂಡು !

By Staff
|

*ಶ್ರೀವತ್ಸ ಜೋಶಿ

Papa Pandu...‘ನಾಗ್‌ಪುರ್‌ ಮೇ ಬೀಚ್‌ ಹೈ ಕ್ಯಾ...?’ ಎಂದು ಒಮ್ಮೆ ಒಬ್ಬಾತ ಕೇಳಿದ್ದ . ಭಾರತದ ಜಿಯಾಗ್ರಫಿ ಅಷ್ಟೂ ಗೊತ್ತಿಲ್ಲದ ಅಪ್ಪಟ ಭಾರತೀಯ ಆಸಾಮಿ! ಸಂತ್ರಾ(ಕಿತ್ತಳೆ) ಹಣ್ಣುಗಳಿಗೆ ಪ್ರಸಿದ್ಧವಾದ, ಬೇಸಿಗೆಯಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪುವ, ಮಹಾರಾಷ್ಟ್ರದ ಎರಡನೆ ರಾಜಧಾನಿಯಾಗಿರುವ, ಭಾರತದ ಪ್ರಮುಖ ರೈಲ್ವೇ ಜಂಕ್ಷನ್‌ ಆಗಿರುವ, ಹೆಚ್ಚು ಕಡಿಮೆ ಭಾರತದ ನಕ್ಷೆಯಲ್ಲಿ ಮಧ್ಯಭಾಗದಲ್ಲಿರುವ ನಾಗಪುರದಲ್ಲಿ ಬೀಚ್‌ ಎಲ್ಲಿಂದ ಬರಬೇಕು? ಬೀಚ್‌ ಇದೆಯಾ ಎಂದು ಪ್ರಶ್ನೆ ಕೇಳಿದವನ ಇನ್ನೊಸೆನ್ಸ್‌ಗೆ ಏನೆಂದು ಉತ್ತರಿಸಬೇಕು? ‘ನಾಗ್‌ಪುರ್‌ಮೆ ಕೋಯೀ ಬೀಚ್‌ ವೀಚ್‌ ನಹೀ ಹೈ, ಕ್ಯೋಂಕೀ ನಾಗ್‌ಪುರ್‌ ಹೀ ಬೀಚ್‌ ಮೇ ಹೈ...’ ಸರಿ ಹೋದೀತು!

ನಾಗ್‌ಪುರ್‌, ಬೀಚ್‌ ಇತ್ಯಾದಿಯ ಉಲ್ಲೇಖ ಇಲ್ಲಿ ಏಕಪ್ಪಾ ಬಂತೆಂದರೆ, ಕೆಲವೊಮ್ಮೆ ‘ಇನ್ನೊಸೆನ್ಸ್‌’ನಿಂದ ನಮಗೆಷ್ಟು ಮನರಂಜನೆ ಸಿಗುತ್ತದೆ (ಇರಿಟೇಷನ್‌ ಆಗುವುದೂ ಇದೆಯೆನ್ನಿ!) ಎಂಬುದಕ್ಕೆ ಇದೊಂದು ಉದಾಹರಣೆ. ಇದೇ ಪರಿಯ ಇನ್ನೂ ಕೆಲ ಇನ್ನೊಸೆನ್ಸ್‌ಗಳು ಈ ಸಲದ ವಿಚಿತ್ರಾನ್ನದ ಹೂರಣ.

ನಮ್ಮ ವಾಷಿಂಗ್ಟನ್‌ ಡೀ.ಸಿ ಪ್ರದೇಶದ ಕನ್ನಡಿಗ ಕೃಷ್ಣಮೂರ್ತಿಯವರಿಗೆ ಫೋನ್‌ ಸಂಭಾಷಣೆಯಲ್ಲಿ ಒಮ್ಮೆ ಒಂದು ‘ಇನ್ನೊಸೆನ್ಸ್‌’ ಅನುಭವವಾಗಿ ಅದನ್ನವರು ಆನಂದಿಸಿ ನನಗೂ ತಿಳಿಸಿದ್ದರು. ಆದು ಆದದ್ದು ಹೀಗೆ. ಕಳೆದ ದೀಪಾವಳಿಯ ಸಂದರ್ಭ ವಾರಾಂತ್ಯದ ಒಂದು ಸಂಜೆ ಅವರ ಮನೆಯಲ್ಲೊಂದು ಗೆಟ್‌-ಟುಗೆದರ್‌ ನಡೆಸಬೇಕೆಂದಿದ್ದರಂತೆ. ಮಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಪಾಠ ಹೇಳಿಕೊಡುವ ಟೀಚರನ್ನೂ ಕರೆದಿದ್ದರು. ಅವತ್ತು ಮುತ್ತುಸ್ವಾಮಿ ದೀಕ್ಷಿತರ ಕೃತಿಗಳನ್ನು (ವಾತಾಪಿ ಗಣಪತಿಂ ಭಜೇಹಂ... ನಿಂದ ಮೊದಲ್ಗೊಂಡು) ಎಲ್ಲರೂ ಸೇರಿ ಹಾಡುವ ಕಾರ್ಯಕ್ರಮವನ್ನೂ ಯೋಜಿಸಿದ್ದರು. ಆದರೆ ಅದೇ ದಿನಕ್ಕೆ ಕೃಷ್ಣಮೂರ್ತಿಯವರ ಇನ್ನೊಬ್ಬ ಸ್ನೇಹಿತರೂ (ಬಹುಶಃ ಉತ್ತರಭಾರತದವರು) ತಮ್ಮ ಮನೆಯಲ್ಲಿ ಗೆಟ್‌-ಟುಗೆದರ್‌ ಪ್ಲಾನ್‌ ಮಾಡಿದ್ದರು. ಕೃಷ್ಣಮೂರ್ತಿಯವರಿಗೆ ಫೋನ್‌ನಲ್ಲಿ ಅವರ ಇನ್ವಿಟೇಶನ್‌. ಅವರಿಗೆ ಮೂರ್ತಿಯವರು ‘ಇಲ್ಲಾ ಸಾರ್‌, ನಮ್ಮನೇಲಿ ಆಗಲೇ ಪ್ರೊಗ್ರಾಂ ಫಿಕ್ಸ್‌ ಆಗಿದೆ. ಮ್ಯೂಸಿಕ್‌ ಟೀಚರ್‌ ಬೇರೆ ಬರ್ತಿದ್ದಾರೆ. ದೀಕ್ಷಿತರ ಕೃತಿಗಳನ್ನು ನಾವೆಲ್ಲ ಹಾಡುವುದೆಂದಾಗಿದೆ...’ ಎಂದು ಸಬೂಬು ಹೇಳಿದರೂ ಅವರು ಬಿಡಲಿಲ್ಲ. ‘ಹಾಗಿದ್ದರೆ ಒಂದು ಕೆಲಸ ಮಾಡಿ. ನೀವೆಲ್ಲ ನಮ್ಮ ಮನೆಗೆ ಬನ್ನಿ. ಮ್ಯೂಸಿಕ್‌ ಟೀಚರ್‌ಗೂ ಹೇಳಿ. ಹಾಗೆಯೇ ದೀಕ್ಷಿತರನ್ನೂ ನಮ್ಮನೆಗೆ ಕರಕೊಂಡು ಬನ್ನಿ. ಇಲ್ಲೇ ಕಚೇರಿ ಆಗಲಿ...’! ಪಾಪ, ಅವರಿಗೆ ಗೊತ್ತಿಲ್ಲ ಮುತ್ತುಸ್ವಾಮಿ ದೀಕ್ಷಿತರೆಂದರೆ ಯಾರೆಂಬುದು! ಅದವರ ಇನ್ನೊಸೆನ್ಸ್‌.

ಇನ್ನೊಂದು ಘಟನೆ ನೆನಪಾಗುತ್ತದೆ, ಚೆನ್ನೈನಲ್ಲಿ ಒಮ್ಮೆ ನಮ್ಮ ಆಫೀಸಿನವರು ಏರ್ಪಡಿಸಿದ್ದ ಯಾವುದೋ ಕಾನ್ಫರೆನ್ಸ್‌ಗೆ ಕೋ-ಓರ್ಡಿನೇಟರ್ಸ್‌ ಆಗಿ ನಾನೂ, ನನ್ನ ಸಹೋದ್ಯೋಗಿಯಾಬ್ಬರೂ ಹೋಗಿದ್ದೆವು. ಕಾನ್ಫರೆನ್ಸ್‌ ನಡೆದ ಪಂಚತಾರಾ ಹೊಟೇಲಲ್ಲೇ ನಾವು ಉಳಕೊಂಡಿದ್ದೆವು. ನಮ್ಮ ತುರ್ತು ಅಗತ್ಯಗಳಿಗೆ ಬೇಕಾಗುತ್ತದೆಯೆಂದು ದಿನವಿಡೀ ಒಂದು ಟ್ಯಾಕ್ಸಿಯನ್ನೂ ಇಟ್ಟುಕೊಂಡಿದ್ದೆವು. ಒಮ್ಮೆ ಟ್ಯಾಕ್ಸಿ ಡ್ರೈವರ್‌ನ ಬಳಿ ಏನನ್ನೋ ಕೊಟ್ಟು ಕಳಿಸುವ ಸಂದರ್ಭ ಬಂತು. ಪಂಚತಾರಾ ಹೊಟೇಲ್‌ಗಳಲ್ಲೆಲ್ಲ ಟ್ಯಾಕ್ಸಿ ಸ್ಟಾಂಡ್‌ ಪ್ರತ್ಯೇಕವಾಗಿದ್ದು ಹೊಟೇಲ್‌ನ ‘ಬೆಲ್‌ಮ್ಯಾನ್‌’ ಟ್ಯಾಕ್ಸಿಯ ನಂಬರ್‌ ಎನೌನ್ಸ್‌ ಮಾಡಿದಾಗ ಡ್ರೈವರ್‌ ಟ್ಯಾಕ್ಸಿಯಾಂದಿಗೆ ಬರುತ್ತಾನೆ. ನಮಗೋ ಆಗ ಟ್ಯಾಕ್ಸಿ ಅಗತ್ಯವಿರಲಿಲ್ಲ , ಬರೇ ಆ ಡ್ರೈವರನನ್ನು ಬರಹೇಳುವುದಿತ್ತು. ಅದಕ್ಕಾಗಿ ಬೆಲ್‌ಮ್ಯಾನ್‌ನ ಬಳಿ Driver alone should come, we don’t want taxi.. ಎಂದು ಹೇಳಿದೆವು. ಅದನ್ನು ಕೇಳಿಸಿಕೊಂಡ ಬೆಲ್‌ಮ್ಯಾನ್‌ Driver Mr.Alone should report to front desk... ಎಂದು ಕ್ಲೀನಾಗಿ ಉದ್ಘೋಷಿಸಿದ!

ಮಕ್ಕಳ ಬಾಯಿಂದಂತೂ ಇಂಥ ಇನ್ನೊಸೆನ್ಸ್‌ನ ಅಣಿಮುತ್ತುಗಳು ಉದುರುತ್ತಲೇ ಇರುತ್ತವೆ! ಮಕ್ಕಳಷ್ಟೇ ಏಕೆ, ಸುಮಾರು ಎಂಬತ್ತರ ವಯಸ್ಸಿನ ನಮ್ಮ ಅಜ್ಜಿಯವರ (ಈಗ ದಿವಂಗತರಾಗಿದ್ದಾರೆ) ಇನ್ನೊಸೆನ್ಸ್‌ನ ಒಂದು ಸ್ಯಾಂಪಲ್‌ ಹೀಗಿದೆ. ಮಂಗಳೂರಿಗೆ, ಅವರ ಮಗನ ಮನೆಗೆ ಹೋಗಿದ್ದ ಅವರು ಅಲ್ಲಿ ಜ್ಯೋತಿ ಟಾಕೀಸ್‌ನಲ್ಲಿ ‘ಗಿರಿಕನ್ಯೆ’ ಸಿನೆಮಾ ಪ್ರದರ್ಶಿತವಾಗುತ್ತಿದ್ದುದನ್ನು ಕೇಳಿ ಮಗ-ಸೊಸೆಯಾಂದಿಗೆ ತಾವೂ ಹೊರಟು ಸಿನೆಮಾ ನೋಡಿ ಬಂದರು. ಬಂದ ನಂತರ ಹೇಳುತ್ತಾರೆ - ಗಿರಿಕನ್ಯೆಯೆಂದರೆ ಪಾರ್ವತಿ-ಪರಮೇಶ್ವರರದೇನೋ ಕಥೆಯಿರಬಹುದೆಂದು ನಾನಂದುಕೊಂಡರೆ, ರಾಜ್‌ಕುಮಾರ್‌ ಥೈ ಥೈ ಥೈ ಥೈ ಬಂಗಾರಿ... ಎಂದು ಕುಣಿಯುವುದು ಬಿಟ್ಟರೆ ಅದರಲ್ಲಿ ಬೇರೇನೂ ಇಲ್ಲ... ಎಂದು ತಮ್ಮ ಅಸಮಾಧಾನ ತೋಡಿಕೊಂಡರು!

ಸರ್ದಾರ್ಜಿ ಜೋಕ್‌ಗಳು (ಸಂತಾ ಸಿಂಗ್‌, ಬಂಟಾ ಸಿಂಗ್‌ ಸಿರೀಸ್‌...), ಆಂಧ್ರಪ್ರದೇಶದಲ್ಲಿ ‘ಅಂಜಯ್ಯ’ ಜೋಕ್‌ಗಳು ಅಥವಾ ನಮ್ಮ ಮಂಗಳೂರು/ಉಡುಪಿ ಕಡೆ ‘ರಾಂಪ’ನ ಜೋಕುಗಳು (ರಾಂಪನ ಜೋಕ್ಲು... ಎಂದು ತುಳು ಭಾಷೆಯಲ್ಲಿ ಹೇಳಿದರೆ ರಾಂಪನ ಮಕ್ಕಳು ಎಂಬ ಅರ್ಥವೂ ಬರುತ್ತದೆ!) ಹೆಚ್ಚಾಗಿ ಎಲ್ಲವೂ ‘ಇನ್ನೊಸೆನ್ಸ್‌’ ಸುತ್ತಲೇ ಹೆಣೆದಿರುವಂಥವು. ರಾಂಪನ ಇನ್ನೊಸೆನ್ಸ್‌ನ ಒಂದು ಸ್ಯಾಂಪಲ್‌ ನೋಡಿ. ರಾಂಪ ಮತ್ತು ಜನಾರ್ಧನ ಪೂಜಾರಿ ಸ್ನೇಹಿತರು. ಮಂಗಳೂರಿಗೆ ‘ಮೈ ಡಿಯರ್‌ ಕುಟ್ಟಿಚ್ಚಾತನ್‌’ ಮಲಯಾಳಂ ತ್ರೀ-ಡಿ ಸಿನೆಮಾ ಬಂದಿದ್ದಾಗ ಅದನ್ನು ನೋಡಲು ಇಬ್ಬರೂ ಹೋಗುತ್ತಾರೆ. ತ್ರೀ-ಡಿ ಎಫೆಕ್ಟ್‌ ತರುವ ವಿಶೇಷ ಕನ್ನಡಕ ಹಾಕಿ ಸಿನೆಮಾ ನೋಡುತ್ತಿದ್ದೇನೆಂದು ಬೀಗಿದ ರಾಂಪನಿಗೆ, ಒಂದು ದೃಶ್ಯದಲ್ಲಿ ಹುಲಿ ತನ್ನ ಮೈಮೇಲೆಯೇ ಎರಗಿದಂತಾದಾಗ ಹೆದರಿಕೆಯಾಗುತ್ತದೆ. ಬಳಿಯಲ್ಲಿದ್ದ ಪೂಜಾರಿಯವರು, ‘ರಾಂಪಣ್ಣ , ಅದು ಸಿನೆಮಾ ಅಲ್ಲವಾ, ನಿಮಗೆ ಹೆದರಿಕೆ ಏಕೆ ಮಾರಾಯ್ರೆ?’ ಎಂದು ಹೇಳಿದರೂ, ರಾಂಪನ ಇನ್ನೊಸೆಂಟ್‌ ಉತ್ತರ ಏನಿತ್ತು ಗೊತ್ತೆ? ‘ಹೌದು ಪೂಜಾರ್ರೇ, ನನಗೆ-ನಿಮಗೆ ಗೊತ್ತು ಅದು ತ್ರೀ-ಡಿ ಸಿನೆಮಾ ಅಂತ. ಆದರೆ ಆ ಹುಲಿಗೆ ಗೊತ್ತಿಲ್ಲವಲ್ಲ...!?’

ನಿಮ್ಮ ಅನುಭವಕ್ಕೂ ಈ ರೀತಿಯ ಇನ್ನೊಸೆನ್ಸ್‌ಗಳು ಧಾರಾಳ ಸಿಕ್ಕಿರಬಹುದು. ನೀವೇ ಕೆಲವೊಮ್ಮೆ ಇನ್ನೊಸೆನ್ಸಿಗರಾದದ್ದೂ ಇರಬಹುದು. ಅಂತಹ ಸ್ವಾರಸ್ಯಕರ ಸಂಗತಿ/ಘಟನೆಗಳೇನಾದರೂ ಇದ್ದರೆ ಬರೆದು ಕಳಿಸಿ. ಒಪ್ಪಿಕೊಂಡೆ, ಇದು ಅವಹೇಳನ, ಮೂದಲಿಕೆ ಅಲ್ಲ ; ಮನನೋಯಿಸುವ ಉದ್ದೇಶವೂ ಇಲ್ಲ . ಜಸ್ಟ್‌ ಎಂಜಾಯ್‌ಮೆಂಟ್‌ ಅಷ್ಟೇ. ವಿಳಾಸ ನಿಮಗೆ ಗೊತ್ತೆ ಇದೆ, sjoshim@hotmail.com

*

ಇನ್ನೊಸೆನ್ಸ್‌ ಬಗ್ಗೆ ನನಗೆ ಒಂದುಕಡೆ ದೊರೆತ ಸುಂದರ ಪ್ಯಾರಾಗ್ರಾಫೊಂದು ಇಲ್ಲಿದೆ. ವಿಚಿತ್ರಾನ್ನ ‘ಲೈಟ್‌ ರೀಡಿಂಗ್‌’ಗೆ ಮಾತ್ರ ಅಂತಿದ್ದರೂ ಆಗೊಮ್ಮೆ ಈಗೊಮ್ಮೆ ನಮಗೆ ಸ್ವಲ್ಪ ‘ಟಾರ್ಚ್‌ಲೈಟ್‌’ ಕೂಡ ಬೇಕಾಗುತ್ತದಲ್ಲ , ಅನ್ನುವುದಕ್ಕಾಗಿ ಇಲ್ಲಿ ಕಟ್‌-ಪೇಸ್ಟ್‌ ಮಾಡಿದ್ದೇನೆ.

Its easy to mistake being innocent for being simple minded or naive. We all want to seem sophisticated; we all want to seem street-smart. To be innocent is to be "out of it." Yet there is a deep truth in innocence.

A baby looks in his mothers eyes, and all he sees is love. As innocence fades away, more complicated things take its place. We think we need to outwit others and scheme to get what we want. We begin to spend a lot of energy protecting ourselves. Then life turns into a struggle. People have no choice but to be street-smart. How else can they survive?

When you get right down to it, survival means seeing things the way they really are and responding. It means being open. And thats what innocence is. Its simple and trusting like a child, not judgmental and committed to one narrow point of view. If you are locked into a pattern of thinking and responding, your creativity gets blocked. You miss the freshness and magic of the moment. Learn to be innocent again, and that freshness never fades!!!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more