ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಡ್‌ ಫಾರ್‌ ಈಚ್‌ ಅದರ್‌!

By Staff
|
Google Oneindia Kannada News

*ಶ್ರೀವತ್ಸ ಜೋಶಿ

Made for each otherಹನಿಗವನ ಬ್ರಹ್ಮ ಎಚ್‌.ಡುಂಡಿರಾಜ್‌ ಅವರ ‘ಹನಿಖಜಾನೆ’ ಪುಸ್ತಕವನ್ನು (ಅಂಕಿತ ಪ್ರಕಾಶನ, ಬೆಂಗಳೂರು; ಪುಟಗಳು 256; ಬೆಲೆ ರೂ.95) ಈ ಸಲ ಭಾರತಕ್ಕೆ ಹೋಗಿಬಂದಾಗ ನಾನು ಖರೀದಿಸಿದ್ದೇನೆ. 2000ದಲ್ಲಿ ಪ್ರಕಟವಾದ ಆ ಪುಸ್ತಕ, ಡುಂಡಿರಾಜ್‌ರ ಪ್ರಕಟಿತ ಕವನ ಸಂಕಲನಗಳ ಸಂಕಲನ. ಈ ಪುಸ್ತಕದ 120ನೇ ಪುಟದಿಂದ ಒಂದು ಹನಿಗವನ ಎತ್ತಿಕೊಳ್ಳೋಣ. (ಈ ವಾರದ ವಿಚಿತ್ರಾನ್ನ ಹೇಗಾದರೂ ಮಾಡಿ ಭರ್ತಿಮಾಡಬೇಕೆಂಬುದು ನನ್ನ ಮಿಷನ್‌; ಅದಕ್ಕಾಗಿ ಅಸ್ಯೂಮಿಸಿಕೊಂಡಿದ್ದೇನೆ ಡುಂಡಿರಾಜರ ಪರ್‌-ಮಿಷನ್‌:-) ಆ ಹನಿಗವನ ಹೀಗಿದೆ.

‘ಭಲೇ ಜೋಡಿ’
ಸಚಿನ್‌ ತೆಂಡುಲ್ಕರ್‌
ಅಂಜಲಿ ಮೆಹತಾ
ಮೇಡ್‌ ಫಾರ್‌ ಈಚ್‌ ಅದರ್‌
ಈತ
ಕ್ರಿಕೆಟ್‌ ಲೋಕದ
ಶಿಶು
ಆಕೆ ಮಕ್ಕಳ ಡಾಕ್ಟರ್‌!

Srivathsa Joshiಡುಂಡಿರಾಜರ ಪ್ರಸ್ತಾಪ/ಸಹಾಯ ಇಷ್ಟಕ್ಕೆ ಸಾಕು. ಈಗ ವಿಷಯಕ್ಕೆ ಬರೋಣ. ಮೂಲತಃ ಮೈಸೂರಿನವರಾದ, ಈಗ ಚೆನ್ನೈನಲ್ಲಿ ಉದ್ಯೋಗಿಯಾಗಿರುವ ಕನ್ನಡಿಗ ಎಂ.ಬಸವರಾಜ್‌ ಎಂಬ ಓದುಗಮಿತ್ರರೋರ್ವರು ವಿಚಿತ್ರಾನ್ನದ ಬಗ್ಗೆ ಪ್ರತಿಕ್ರಯಿಸುತ್ತ , ‘ಮೇಡ್‌ ಫಾರ್‌ ಈಚ್‌ ಅದರ್‌’ ಅನ್ನುವುದಕ್ಕೆ ಕನ್ನಡದಲ್ಲಿ ಸೂಕ್ತ ಪದಪ್ರಯೋಗವೇನಾದರೂ ಇದೆಯೇ, ಈ ಬಗ್ಗೆಯೇ ಒಂದು ವಿಚಿತ್ರಾನ್ನ ಟಾಪಿಕ್‌ ಏಕೆ ಆಯ್ದುಕೊಳ್ಳಬಾರದು ಎಂದು ಸಲಹಿಸಿದ್ದರು. ನನಗೂ ಗೊತ್ತಿಲ್ಲ ‘ಮೇಡ್‌ ಫಾರ್‌ ಈಚ್‌ ಅದರ್‌’ಗೆ ಸರಿಯಾದ ಕನ್ನಡ ರೂಪ. ಡುಂಡಿರಾಜರೇನೋ ತಮ್ಮ ಹನಿಗವನಕ್ಕೆ ‘ಭಲೇ ಜೋಡಿ’ ಎಂದು ಶೀರ್ಷಿಕೆ ಕೊಟ್ಟಿದ್ದಾರಾದರೂ ‘ಭಲೇ ಜೋಡಿ’ ಗಿಂತಲೂ ಸೊಗಸಾದ, ಸಮಂಜಸವಾದ ಪದಪ್ರಯೋಗವನ್ನು ಸೂಚಿಸುವಂತೆ ನಿಮ್ಮನ್ನು ಕೋರುತ್ತಿದ್ದೇನೆ.

ಏತನ್ಮಧ್ಯೆ ‘ಮೇಡ್‌ ಫಾರ್‌ ಈಚ್‌ ಅದರ್‌’ ಕುರಿತಂತೆ ಕೆಲವು ಪನ್‌ ಮತ್ತು ಫನ್‌ ವಿಷಯಗಳನ್ನು ಚರ್ಚಿಸೋಣ - ಕನ್ನಡ ಪದ ಹುಡುಕುವ ನಿಮ್ಮ ಕೆಲಸವನ್ನು ಬ್ಯಾಕ್‌ಗ್ರೌಂಡ್‌ ಪ್ರೋಸೆಸ್ಸರ್‌ಗೆ ಒಪ್ಪಿಸಿಡಿ. ಹೊಳೆದ ಕೂಡಲೇ ಯುರೇಕಾ ಎಂದು ಓಡದೇ, ಬರೆದು ಕಳಿಸಿ.

‘ Made for each other ’ ಗೆ ಮೊದಲು ಅವರಿಬ್ಬರೂ Mad for each other ಆಗಿರುತ್ತಾರೆ. ಸ್ನೇಹದಲ್ಲಿ ಆರಂಭವಾದ ಪ್ರೇಮ, ಪ್ರಣಯದ ಹಂತವನ್ನು ತಲುಪಿ, ಸಾಕಷ್ಟು E-mail, E-greetingಗಳನ್ನೆಲ್ಲ ವಿನಿಮಯ ಮಾಡುತ್ತಾರೆ; E ಪ್ರಪಂಚದಲ್ಲಿ ಸ್ವಚ್ಛಂದ ವಿಹರಿಸುತ್ತಾರೆ. ಅಂತೂ ತಾವಿಬ್ಬರೂ Made for each other ಎಂದು ಅಂದುಕೊಳ್ಳುತ್ತಾರೆ. ಗೆಳೆಯರೂ, ಹಿತೈಷಿಗಳೂ ಹಾಗೆಯೇ ಅವರಿಬ್ಬರನ್ನು ಹುರಿದುಂಬಿಸುತ್ತಾರೆ. ಎರಡು ಮನಸ್ಸುಗಳ ಪರಸ್ಪರ ಭಾವನೆಗಳು ಅಗೋಚರವಾದ ultraviolet ಕಿರಣಗಳಂತೆ ಪ್ರವಹಿಸುತ್ತವೆ. ಈ uv ಕಿರಣಗಳೂ ಮಹತ್ವದ ಪಾತ್ರ ವಹಿಸಿ Mad ಇದ್ದದ್ದು Made ಆಗಿ ಕೊನೆಗೆ Maduve (ಮದುವೆ) for each other ಆಗುತ್ತದೆ !

ಬೇರೆಬೇರೆ ಉದ್ಯೋಗದಲ್ಲಿದ್ದರೂ ಮೇಡ್‌ ಫಾರ್‌ ಈಚ್‌ ಅದರ್‌ ಎಂದುಕೊಂಡು ಮದುವೆಯಾದ ಕೆಲವು ದಂಪತಿಗಳ ದೈನಂದಿನ ಜಗಳಗಳು ಹೇಗಿರಬಹುದು ? ಒಂದು ಕಲ್ಪನೆ :

* ಆತ Dentist; ಆಕೆ Manicurist (ಉಗುರು ತೆಗೆಯುವ ಕೆಲಸ ಅವಳ ಉದ್ಯೋಗ) : ಅವರು ಸದಾ tooth and nail fight ಮಾಡುತ್ತಿರುತ್ತಾರೆ!

* ಆಕೆ Tennis player; ಆತ ಪಂಚತಾರಾ ಹೊಟೇಲಲ್ಲಿ Waiter: ಯಾರು serve ಮಾಡುವುದು ಎಂದು ಹಮೇಷಾ ಅವರಿಬ್ಬರಲ್ಲಿ ಜಗಳ.

* ಆಕೆ Psychologist.ಆತ ಒಬ್ಬ Salesman: ಅವರ ಜಗಳ ‘Mind your business!‘ ಎಂದು ಜೋರಾಗಿ ಕಿರುಚುವುದರಲ್ಲೇ ಸಮಾಪ್ತಿಯಾಗುವುದು!

* ಆಕೆ ಒಬ್ಬ Statistician . ಆತ English Professor: ಅವರಿಬ್ಬರೂ "Dont be so mean", "What do you mean?", "I am above the mean of our group! ಎಂದು ತಾರಕ ಸ್ವರದಲ್ಲಿ ಕಿರುಚುತ್ತಿರುತ್ತಾರೆ.

* ಆತ ಒಬ್ಬ Mathematician; ಆಕೆ ಟಿ.ವಿ ಚಾನೆಲ್‌ ಒಂದರಲ್ಲಿ ಕೌಂಟ್‌ಡೌನ್‌ ಶೋಗೆ VJ:ಅವರ ಸಣ್ಣ ಮಗು ಅಂಕಿಗಳನ್ನು 1,2,3,‰ ಎಂದು ಕಲಿಯಬೇಕೇ ಅಥವಾ 10,9,8,‰ ಎಂದು ಕಲಿಯಬೇಕೆ ಎಂದು ಜಗಳ!

ಇನ್ನೂ ಒಂದು ‘ಮೇಡ್‌ ಫಾರ್‌ ಈಚ್‌ ಅದರ್‌’ ಜೋಡಿಯಿದೆ. ಆಕೆ ಮತ್ತು ಆತ ಇಬ್ಬರೂ ಅನುಕ್ರಮವಾಗಿ MTV ಮತ್ತು V-Channelನಲ್ಲಿ VJ ಗಳಾಗಿದ್ದವರು. ಅವರ ವಿವಾಹದದಲ್ಲಿ ‘ಸಪ್ತಪದಿ’ ಆಗುತ್ತಿದ್ದಾಗ ನಾಲ್ಕು ಹೆಜ್ಜೆಗಳನ್ನಿಟ್ಟ ನಂತರ ಸತಿ-ಪತಿ ಇಬ್ಬರೂ ಅಲ್ಲಿಗೇ ನಿಂತು ನೆರೆದಿದ್ದ ಪ್ರೇಕ್ಷಕರತ್ತ ಕೈ ಮಾಡಿ ‘ಬಾಕೀ ಕೇ ತೀನ್‌ ಬ್ರೇಕ್‌ ಕೇ ಬಾದ್‌....’ ಎಂದು ಸ್ಟೈಲಿಂದ ಉಸುರಿದವರು!

ಇವರನ್ನೆಲ್ಲ ಉದಯ ಟೀವಿಯ ‘ಆದರ್ಶ ದಂಪತಿಗಳು’ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಳಿಸೋಣವೇ?

ಈಗ ಬ್ಯಾಕ್‌ಗ್ರೌಂಡ್‌ ಪ್ರೊಸೆಸ್ಸರ್‌ನಿಂದ ಈಚೆಗೆ ಬನ್ನಿ - Made for each other ಎಂಬ ಅರ್ಥ/ಭಾವಾರ್ಥ/ಅನುವಾದ ಬರುವ ಕನ್ನಡ ಪದಪ್ರಯೋಗವನ್ನು ಆವಿಷ್ಕರಿಸಿ ಅಥವಾ ನಿರ್ಮಿಸಿ ರವಾನಿಸಬೇಕಾದ ವಿಳಾಸ - [email protected]

ಕೊನೆಯಲ್ಲಿ ಒಂದು ಸ್ಪಷ್ಟೀಕರಣ: Made for each other ಎಂಬ ಜಾಹೀರಾತಿನ ಸಿಗರೆಟ್‌ ಕಂಪೆನಿ ವಿಚಿತ್ರಾನ್ನದ ಈ ಕಂತನ್ನು ಪ್ರಾಯೋಜಿಸಿದ್ದಲ್ಲ !

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X