ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಲು ರೋಚಕ ಈ ಶಾಲಾ ಸಮವಸ್ತ್ರದ ಕಥಾನಕ!

By ಶ್ರೀನಾಥ್ ಭಲ್ಲೆ
|
Google Oneindia Kannada News

ಶಾಲೆಯಲ್ಲಿ ಸಿಕ್ಕಾಪಟ್ಟೆ ಓದಿದ್ದೇವೋ ಇಲ್ಲವೋ ಗೊತ್ತಿಲ್ಲ ಆದರೆ ಸಮವಸ್ತ್ರ ಅಂತೂ ಧರಿಸಿದ್ದೆವು ಬಿಡಿ.

ಶುದ್ಧ ಸೋಮವಾರದಿಂದ ಶುಕ್ರವಾರದವರೆಗೂ ಒಂದು ರೀತಿಯ ಸಮವಸ್ತ್ರವಾದರೆ ಶನಿವಾರದ ಕಥೆ ಬೇರೆ. ಈವರೆಗೂ ನಾನು ಓದಿರೋ ಶಾಲೆಗಳಲ್ಲಿ ಯಾವ ಯಾವ ಸಮವಸ್ತ್ರ ಧರಿಸಿದ್ದೆ ಎಂದು ಯೋಚಿಸಿದಾಗ ಒಂದಷ್ಟು ತಲೆಗೆ ಬಂತು.

ಕಾಕಿ ಚಡ್ಡಿ-ಕಾಕಿ ಅಂಗಿ, ಕಾಕಿ ಚಡ್ಡಿ - ಬಿಳೀ ಅಂಗಿ, ನೀಲಿ ಚಡ್ಡಿ - ಬಿಳಿ ಅಂಗಿ, ನೀಲಿ ಚಡ್ಡಿ - ನೀಲಿ stripes ಒಂದೇ ಎರಡೇ? black shoes common. ಶನಿವಾರ ಮಾತ್ರ ಬಿಳೀ ಚಡ್ಡಿ - ಬಿಳೀ ಅಂಗಿ-ಬಿಳೀ canvas ಶೂಸ್. ಒಟ್ಟಾರೆ ಸಮವಸ್ತ್ರ ಧರಿಸದೇ ಶಾಲೆ ಮುಗಿಸಿದ್ದೇ ಇಲ್ಲ.

ಏನ್ ಕಣೇ, ನಾನು ಏನಾದ್ರೂ ಸ್ವಲ್ಪ ಹೆಲ್ಪ್ ಮಾಡ್ಲಾ?ಏನ್ ಕಣೇ, ನಾನು ಏನಾದ್ರೂ ಸ್ವಲ್ಪ ಹೆಲ್ಪ್ ಮಾಡ್ಲಾ?

ಈ ಸಮವಸ್ತ್ರದ ಕಥಾನಕ ಬಹಳ ಇದೆ. ಶಾಲೆ ಮುಗಿದು ಬೇಸಿಗೆ ರಜೆ ಅಂತ ಎಲ್ಲಾದರೂ ಹೋಗಿ ಶಾಲೆ ತೆರೆಯೋದಕ್ಕೆ ಒಂದು ವಾರ ಇದೆ ಎನ್ನೋವಾಗ ಬಂದು ಶಾಲೆಯ ತಯಾರಿ ಕೆಲಸ ಶುರು. ಇತ್ಯಾದಿ ಕೆಲಸಕ್ಕಿಂತ ಮುಂಚೆ ಈ ಸಮವಸ್ತ್ರದ ಕೆಲಸ.

Hilarious facts about school uniforms

ಮೊದಲಿಗೆ ಶಾಲಾ ಸಮವಸ್ತ್ರ ಹೊಲೆಯೋದಕ್ಕೆ ಹಾಕೋದು ದೊಡ್ಡ ಕೆಲಸ. ಅವನು ಬೇಗ ಕೊಡಲ್ಲ, ನಾವು ಅಂಗಡಿ ಅಲೆಯೋದು ತಪ್ಪುತ್ತಿರಲಿಲ್ಲ. ಇಲ್ಲಿ ಎರಡು ರೀತಿಯ ಕೆಲಸ ಇದೆ. ಹಿಂದಿನ ವರ್ಷದ ಸಮವಸ್ತ್ರವೇ ಈ ವರ್ಷಕ್ಕೂ ಮುಂದುವರೆಯುತ್ತದೆ ಎಂದಾಗ, ಅದೇ ಬಟ್ಟೆ ಈ ವರ್ಷಾನೂ ಹಾಕ್ಕೋ ಎಂಬುದು ಮುಖ್ಯ ವಿಷಯ. ಮಾಧ್ಯಮ ವರ್ಗದ ಬವಣೆ!

ಯಾವಾಗ ಹಿಂದಿನ ವರ್ಷದ ಸಮವಸ್ತ್ರವೇ ಈ ವರ್ಷದ್ದೂ ಅಂತ ಶಾಲೆಯವರು ಅನೌನ್ಸ್ ಮಾಡಿದಾಗ, ಆ ಬೇಸಿಗೆಯಲ್ಲಿ ನಾನು ಉದ್ದ-ದಪ್ಪ ಆಗ್ತಾನೇ ಇರಲಿಲ್ಲ. ಇದೇನು ಕಾಕತಾಳೀಯವೋ ಏನೋ ಗೊತ್ತಿಲ್ಲ. ಹಾಗಾಗಿ ಹೊಸ ಶಾಲಾ ದಿನಗಳ ಕನಿಷ್ಠ ಎರಡು ತಿಂಗಳು ಹಳೇ ಸಮವಸ್ತ್ರವೇ ನಡೆಯುತ್ತಿತ್ತು. ಶಾಲೆಯಲ್ಲಿ ಮಿಕ್ಕವರು ಮಿರಿಮಿರಿ ಮಿಂಚೋ ಹೊಸಬಟ್ಟೆಯಾದರೆ ನನ್ನದು ಹಳೆಯದಾಗಿದ್ದಾಗ ದುಃಖ ಒತ್ತರಿಸಿಕೊಂಡು ಬರುತ್ತಿತ್ತು.

ಧಾರಾವಾಹಿಗಳೆಂಬ ರಾಯರ ಕುದುರೆ, ರಿಯಾಲಿಟಿ ಶೋ ಎಂಬ ಪೀಡೆಧಾರಾವಾಹಿಗಳೆಂಬ ರಾಯರ ಕುದುರೆ, ರಿಯಾಲಿಟಿ ಶೋ ಎಂಬ ಪೀಡೆ

ಎರಡನೆಯ ವಿಷಯ ಎಂದರೆ, ಆ ಶಾಲಾ ವರ್ಷಕ್ಕೆ ಹೊಸ ಸಮವಸ್ತ್ರ ಎಂದಾಗ ಒಂದು ಕಡೆ ಖುಷಿಯೋ ಖುಷಿ. ಯಾವ ರೀತಿಯ ಬಟ್ಟೆ ಅಂತ ಅನೌನ್ಸ್ ಮಾಡಿದಾಗ 'ಥತ್, ಇದೂ ಒಂದು ಸ್ಟೈಲಾ?' ಅಂತ ರೇಗಿಹೋಗ್ತಿತ್ತು. ಒಂದು ಜೊತೆಗೆ ಇಷ್ಟು, ಎರಡು ಜೊತೆಗೆ ಇಷ್ಟಾಗುತ್ತೆ ಅನ್ನೋ ವಿಷಯ ಮನೆಯವರಿಗೆ ತಲುಪಿಸಿ ಅನ್ನೋ ಸಮಾಚಾರ ಮೊದಲಿಗೆ ಹೊರಬಿದ್ದಾಗ, ಮನೆಯಲ್ಲಿ 'ಇಷ್ಟಿರೋ ನಿನಗೂ ಅಷ್ಟೇ ದುಡ್ಡು ನಿನ್ನ ಕ್ಲಾಸಿನ ಆ ರಾಜೇಂದ್ರನಿಗೂ (ಸಖತ್ತಾಗಿದ್ದ) ಅಷ್ಟೇ ದುಡ್ಡಾ? ಬೇರೆ ಕಡೆ ಹುಡುಕೋಣಾ ಸುಮ್ಮನೆ ಇರು' ಅನ್ನುತ್ತಿದ್ದರು.

Hilarious facts about school uniforms

ಶಾಲೆಯಲ್ಲಿ ನಿರ್ಧಾರ ಮಾಡಿದ್ದ ಸಮವಸ್ತ್ರದ ಬಟ್ಟೆಗಳು ಬೇರೆ ಕಡೆ ಸಿಗ್ತಾನೇ ಇರಲಿಲ್ಲ! ಇನ್ನೆರಡು ದಿನವಾದ ಮೇಲೆ ಮತ್ತೊಂದು announcement 'ಇಂಥಾ ದಿನ tailor ಬಂದು ಅಳತೆ ತೊಗೋತಾನೆ. ಎಲ್ಲರೂ ದುಡ್ಡು ಕಟ್ಟಬೇಕು. ಶಾಲೆ ಶುರುವಾಗೋ ಎರಡು ದಿನ ಮುಂಚೆ ಬಂದು ತೊಗೊಂಡು ಹೋಗಬೇಕು!' ಅಂತ. ಮೊದಲಲ್ಲಿ ನಮ್ಮದೇನೇ ಹಾರಾಟ ಇದ್ರೂ ಕೊನೆಯಲ್ಲಿ ಶಾಲೆಯ ರೂಲ್ಸ್ ಗೆಲ್ಲುತ್ತಿತ್ತು.

ಶಾಲೆಯವರಿಗೂ ಆ ಸಮವಸ್ತ್ರದ ಬಟ್ಟೆ ಡಿಸೈನ್ ತಯಾರು ಮಾಡುವ ಕಂಪನಿಗೂ ಏನೋ adjustment ಇರಬೇಕು ಅಂತ ನಾವು ಮಾತಾಡ್ತಾ ಇರ್ತಿದ್ವಿ!

ಯಾವಾಗ ನೋಡಿದಾಗ್ಲೂ ಅದೇ ಸ್ಟೈಲು ಅದೇ ಲುಕ್ಕು!ಯಾವಾಗ ನೋಡಿದಾಗ್ಲೂ ಅದೇ ಸ್ಟೈಲು ಅದೇ ಲುಕ್ಕು!

ಇರಲಿ, ಸಮವಸ್ತ್ರ ಶಾಲೆಯಿಂದ ತೆಗೆದುಕೊಂಡು ಬಂದ ದಿನ ಹಾಕಿಕೊಂಡು ನೋಡಬೇಕು ಅನ್ನೋ ಕುತೂಹಲದಲ್ಲಿ ಇನ್ನೇನು ಹಾಕ್ಕೋಬೇಕು ಅಂದಾಗ "ಕುಂಕುಮ ಹಚ್ಚದೆ ಹಾಕ್ಕೋತಾರಾ? ಮೊದಲು ಕುಂಕುಮ ಹಚ್ಚು" ಅಂತ ಆಜ್ಞೆ ಹೊರಡುತ್ತಿತ್ತು. ಆಯ್ತು, ಕುಂಕುಮ ಇನ್ನೆಲ್ಲಿರುತ್ತೆ ಅಂತ ದೇವರಮನೆ ಕಡೆ ಓಡಿದರೆ "ಮೊದಲು ಕೈ ತೊಳ್ಕೋ" ಅನ್ನೋ ಎರಡನೆಯ ಆಜ್ಞೆ. ಒಂದು ಕಡೆ ಕುತೂಹಲವಾದರೆ ಇನ್ನೊಂದೆಡೆ ಈ ರೀತಿಯ ಕಟ್ಟುಪಾಡುಗಳು. ಕೆಲವೊಮ್ಮೆ ಇನ್ನೊಂದು layer ಕಟ್ಟುಪಾಡೂ ಇರ್ತಿತ್ತು! ಏನದು ಅಂದ್ರಾ? "ಇವತ್ತು ಮಂಗಳವಾರ, ನಾಳೆ ಹಾಕ್ಕೋ!" ಅಥವಾ "ಇವತ್ತು ಅಮಾವಾಸ್ಯೆ... ನಾಳೆ ಹಾಕ್ಕೋ" ಅಂತ. ಇನ್ನೆಂಥಾ ದುಃಖ ಆಗ್ತಿತ್ತು ಅಂದ್ರೆ, ಹೋಗ್ಲಿ ಬಿಡಿ!

Hilarious facts about school uniforms

ಆಯ್ತು, ಕುಂಕುಮ ಹಚ್ಚಿ ಸಮವಸ್ತ್ರ ಧರಿಸಿ ಕನ್ನಡಿ ಮುಂದೆ ನಿಂತುಕೊಂಡಾಗ "ಚಡ್ಡಿ ಬಣ್ಣ ಓಕೆ ಆದರೆ ಈ ಷರಟು ಸ್ವಲ್ಪ ಲೈಟ್ ಶೇಡ್ ಇದ್ದಿದ್ರೆ ಚೆನ್ನಾಗಿತ್ತು ಅಂತ ಮುಖ ಸಪ್ಪಗಾಗುತ್ತಿತ್ತು. ಏನು ಮಾಡೋಕ್ಕಾಗುತ್ತೆ, ನಾವೇನು ಐಶ್ವರ್ಯ ರೈ ಬಣ್ಣಾನೇ?" ಎಷ್ಟು ಚೆನ್ನಾಗಿದೆ ಷರಟು, ಯಾವುದಾದರೂ functionಗೋ ಅಥವಾ ಮದುವೆಗೂ ಹಾಕ್ಕೊಂಡ್ ಹೋಗಬಹುದು ಅಂತ statement ಕೊಟ್ಟಾಗ ಭೀತಿ ಆವರಿಸುತ್ತಿತ್ತು!

ಮೊದಲ ದಿನದ ಗರಿಗರಿ ಸಮವಸ್ತ್ರ, ಬಿಟಿಎಸ್ ಬಸ್ಸಿನ ಉಜ್ಜಾಟದಲ್ಲಿ ಕೊಂಚ ಮುದುರಾದರೂ ದುಃಖ ಆಗ್ತಿತ್ತು. ಮೊದಲ ವಾರದ ನಂತರ ಭಾನುವಾರ ಬೆಳಿಗ್ಗೆ ಅವನ್ನು ಐರನ್ ಮಾಡುವ ಸಂಭ್ರಮ. ಎಲೆಕ್ಟ್ರಿಕ್ ಐರನ್ ಮನೆಯಲ್ಲಿ ಇರಲಿಲ್ಲ ಹಾಗಾಗಿ ಇದ್ದಿಲಿನ ಐರನ್ ಸಿದ್ಧ ಮಾಡೋಷ್ಟರಲ್ಲಿ ಸುಸ್ತಾಗುತ್ತಿತ್ತು. ಚಿಕ್ಕವನು ಅಂತ ಮಾಡಿಕೊಳ್ಳಲು ಬಿಡುತ್ತಿರಲಿಲ್ಲ. ದೊಡ್ಡವರ ಆಶ್ರಯ ಪಡೆದೇ ಮಾಡಿಕೊಳ್ಳಬೇಕಿತ್ತು.

ಕೆಲವೊಮ್ಮೆ ಎಲ್ಲೋ ಹೋಗುವುದಿದ್ದು ಐರನ್ ಮಾಡಿಕೊಳ್ಳುವುದು ಆಗದೆ ಇದ್ದರೇ, ನೀಟಾಗಿ ಮಡಿಸಿ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಬೆಳಿಗ್ಗೆ ಹಾಕಿಕೊಂಡಾಗ, ಯಾಕೋ ಐರನ್ ಆಗಿಲ್ಲ ಅನ್ನಿಸುತ್ತಿತ್ತು.

ಇನ್ನು ಶನಿವಾರದ ಬಿಳೀ ಸಮವಸ್ತ್ರದ ಕಥೆಯೇ ಬೇರೆ. ಬಿಳೀ ಬಟ್ಟೆಯ ಜೊತೆ ಅರ್ಧ ದಿನ ಮಾತ್ರ ಶಾಲೆಯಾಗಿದ್ದು ಮಿಕ್ಕರ್ಧ ದಿನ ಆಟದಲ್ಲಿ ತೊಡಗಿ ಮನೆಗೆ ಹೋಗೋಷ್ಟರಲ್ಲಿ ಬಿಳೀ ಬಣ್ಣದ ವಸ್ತ್ರ ಅಂತ ಪ್ರಮಾಣ ಮಾಡಿದ್ರೂ ಯಾರೂ ನಂಬುತ್ತಿರಲಿಲ್ಲ. ಅಂಥಾ ನಾನು ಹೈಸ್ಕೂಲಿಗೆ ಕಾಲಿಟ್ಟೆ. ಆದರೆ ಏಳನೆಯ ತರಗತಿ ನೀಲಿ ಪ್ಯಾಂಟು ಬಿಳೀ ಷರಟು ಇನ್ನೂ ಚೆನ್ನಾಗೇ ಇತ್ತು. ಹೋದ ಕಡೆ ಹಾಕ್ಕೊಂಡ್ ಹೋಗ್ತಿದ್ದೆ.

ಒಮ್ಮೆ ಅಕ್ಕನ ಜೊತೆ ಆಕೆಯ ಕಾಲೇಜಿಗೆ ಹೋಗಿದ್ದೆ. ಆಕೆಯ ಅಡ್ಮಿಷನ್ ಮುಂಚೆ ಏನೋ ಕೆಲಸ ಇತ್ತು ಅಂತ ಆಕೆ ಹಿಂದೆ ನಾನೂ ಹೋಗಿದ್ದೆ. ಆ ಶಾಲೆಯ ವಿಶೇಷತೆ ಏನಪ್ಪಾ ಅಂದ್ರೆ ಬೆಳಿಗ್ಗೆ ಕಾಲೇಜಿನ ತರಗತಿಗಳು, ಮಧ್ಯಾಹ್ನ ಮಿಡಲ್ ಸ್ಕೂಲ್ ತರಗತಿಗಳು. ನಾವು ಹೋದಾಗ ಮಿಡಲ್ ಸ್ಕೂಲಿನ ಪ್ರಾರ್ಥನೆ ನಡೀತಿತ್ತು. ಇಲ್ಲೇ ಇರು ಬರ್ತೀನಿ ಅಂತ ಅಕ್ಕ ಆಫೀಸ್ ರೂಮಿನ ಕಡೆ ಹೋದಾಗ ನಾನು ಅಲ್ಲೇ ಕಾಂಪೌಂಡ್'ಗೆ ಸ್ಟೈಲಾಗಿ ಒರಕಿಕೊಂಡು ನಿಂತಿದ್ದೆ. ಪ್ರಾರ್ಥನೆ ಮುಗಿದು ಎಲ್ಲರೂ ಒಳಗೆ ಹೋಗುತ್ತಿದ್ದರೂ ನಾನು ಅಲ್ಲೇ ನಿಂತಿದ್ದೆ. ಅಲ್ಲಿದ್ದ ಒಬ್ಬ ಟೀಚರ್ ನನ್ನನ್ನು ಕರೆದು ಎದ್ವಾತದ್ವಾ ಬೈಯ್ಯೋದೆ? "ಬಂದಿರೋದೇ ಲೇಟು, ಲೈನ್'ನಲ್ಲಿ ನಿಂತಿಲ್ಲ, ಕ್ಲಾಸ್ ರೂಮಿಗೂ ಹೋಗ್ತಿಲ್ಲ. ನೀನು ಯಾವ ದೊಡ್ಡ ಮನುಷ್ಯರ ಮಗನೇ ಆಗಿದ್ರೂ i don't care ಅಂತ!

ಆಮೇಲೇ ನನಗೆ ಅರಿವಾಗಿದ್ದು, ನಾನು ಹಾಕಿಕೊಂಡಿದ್ದ ನೀಲಿ ಪ್ಯಾಂಟ್ ಬಿಳೀ ಷರಟು ಆ ಮಿಡಲ್ ಸ್ಕೂಲಿನ ಸಮವಸ್ತ್ರ. ಸರಿಯಾಗಿ ಏಟು ಬೀಳೋ ಮುನ್ನ ಸದ್ಯ ಅಕ್ಕ ಬಂದಳು! ಅಂದೇ ಕೊನೆ, ಮನೆಯೊಳಗೇ ಇದ್ದಾಗ ಮಾತ್ರ ಆ ದಿರುಸು!

ಹೈಸ್ಕೂಲು ಮುಗಿದು ಎಂದು ಕಾಲೇಜಿಗೆ ಹೋಗ್ತೀನೋ? ಎಂದಿಗೆ ಈ ಸಮವಸ್ತ್ರ ಧರಿಸೋದ್ರಿಂದ ಮುಕ್ತಿ ಸಿಗುತ್ತೋ ಎಂದು ಕಾದಿದ್ದೆ. ಅಲ್ಲಿಯವರೆಗೆ ಒಂದು ಬಟ್ಟೆಯ ಚಿಂತೆ ಇರ್ತಿತ್ತು, ಆದರೆ ಮುಂದೆ ಆರು ದಿನಗಳು ವಿಧವಿಧ ಬಟ್ಟೆ ಹಾಕಿಕೊಂಡು ಮಿಂಚಬೇಕಾದ ಕಷ್ಟ ಎದುರಾಗುತ್ತೆ ಅಂತ ನನಗೇನು ಗೊತ್ತಿತ್ತು?

ಸಮವಸ್ತ್ರ ಎಂಬುದು ಕೇವಲ ಶಾಲೆಗೇ ಮೀಸಲಲ್ಲ! Factory workers, ಹೋಟಲ್ ಪರಿಚಾರಕರು, ಬಸ್ ಡ್ರೈವರ್, ಬಸ್ ಕಂಡಕ್ಟರ್, ಪೆಟ್ರೋಲ್ ಪಂಪ್, ಅಂಗಡಿ ಕೆಲಸಗಾರರು ಹೀಗೇ ಎಲ್ಲಿ ನೋಡಿದರಲ್ಲಿ ಸಮವಸ್ತ್ರ ಇದ್ದೇ ಇದೆ. ವಯಸ್ಸಿನ ತಾರತಮ್ಯತೆ ಇರದೇ, ಅಂತಸ್ತಿನ ತಾರತಮ್ಯ ತೋರದೆ ನಾವೆಲ್ಲರೂ ಒಂದು, ನಮ್ಮೆಲ್ಲರ ಧ್ಯೇಯ ಒಂದೇ ಎಂಬುದನ್ನು ತೋರುವುದೇ ಈ ಸಮವಸ್ತ್ರದ ಹಿಂದಿರುವ ಉದ್ದೇಶ.

ಕಳೆದ ಭಾನುವಾರದಂದು ವಿಜೃಂಭಣೆಯಿಂದ ನಡೆದ Golden Globes Award Ceremony'ಯಲ್ಲಿ ಸಮವಸ್ತ್ರದ ರೂಪ ಕಂಡಿತ್ತು. ಇಲ್ಲಿ ಇದ್ದಿದ್ದು ಸಮವಸ್ತ್ರದ ಒಂದು ರೂಪ ಅರ್ಥಾತ್ ಎಲ್ಲರ ವಸ್ತ್ರದ ಬಣ್ಣ "ಕಪ್ಪು". ನಾವೆಲ್ಲರೂ ಒಂದು, ನಮ್ಮೆಲ್ಲರ ಧ್ಯೇಯ ಒಂದು ಎಂಬುದು ಸಮವಸ್ತ್ರದ ಹಿಂದಿನ ಉದ್ದೇಶವಾದರೆ ಇಲ್ಲಿ ಯಾಕೆ ಎಲ್ಲರೂ ಕಪ್ಪು ಬಣ್ಣದ ದಿರಿಸು ಧರಿಸಿದ್ದು?

#MeToo ಅಭಿಯಾನದ ಅಂಗವಾಗಿ, ನಾವೆಲ್ಲರೂ ಒಂದಾಗಿ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುತ್ತೇವೆ ಎಂಬ ಹೋರಾಟ ಶ್ಲಾಘನೀಯವಾಗಿತ್ತು ಎಂದು ನನ್ನ ಅನಿಸಿಕೆ.

ಸಮವಸ್ತ್ರದ ಹಿಂದಿನ ಉದ್ದಿಶ್ಯ ಮತ್ತು ಉದ್ದೇಶದ ಉಪಯೋಗ ನಮ್ಮಲ್ಲಿನ ತಾರಾಲೋಕದಲ್ಲೂ ಬರಬಹುದೇ? ಎಲ್ಲದರಲ್ಲೂ Western style ಅನುಕರಿಸುವ ಸಿನಿಮಾಲೋಕ ಮುಂದಿನ Award Ceremonyಯಲ್ಲಿ ಈ ರೀತಿ ಕೈಜೋಡಿಸಬಹುದೇ?

English summary
During our childhood days everyone of us would have wore school uniform, which symbolizes the uniformity and unity. Srinath Bhalle shares some of the hilarious incidents surrounding the school uniform. Please do share your experiences too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X