150287lok sabhaಮತ್ತೊಂದು ಲೋಕಸಭೆ ಚುನಾವಣೆ ಬಂದಿದೆ/column/shreenidhi/2009/0303-elections-and-peoples-apathy.htmlವಿಧಾನಸಭೆಯೇ ಆಗಲಿ, ಲೋಕಸಭೆಯೇ ಆಗಲಿ ಪ್ರತಿ ಬಾರಿ ಚುನಾವಣೆ ಬಂದಾಗ ಮಾನ್ಯ ಮತದಾರರದು ಒಂದೇ ಉದಾಸೀನತೆ. ಎಲ್ಲಾ ಪಕ್ಷಗಳೂ ಅಷ್ಟೇ, ಅಭ್ಯರ್ಥಿಗಳಂತೂ ಅಷ್ಟಕ್ಕಷ್ಟೇ ಅಂತ ದೇಶಾವರಿ ಮಾತನಾಡುತ್ತ, ನಾನಂತೂ ಈ ಬಾರಿ ಓಟು ಹಾಕಲ್ಲಪ್ಪ ಅಂದ್ಕೊಳ್ತಾನೆ, ಹಣ-ಹೆಂಡ-ಸೀರೆ ಹಂಚ್ತಾ ಇದ್ದಾರಾ ಅಂತ ಆಸೆಯಿಂದ ನೋಡೋರೆ ಜಾಸ್ತಿ. ಆದರೆ, ಈಬಾರಿ ಹಾಗಾಗದಿರಲೆಂದು ಅತಿಯಾಸೆಯಿಂದ ನೋಡೋಣ. ಗುರುತಿನ ಚೀಟಿ ಮಾಡಿಸಿ, 34959http://kannada.oneindia.com/img/2009/03/03-voter-politician1.jpg150287lok sabhaಯಡಿಯೂರಪ್ಪನವರೆ ಗೌಡ್ರನ್ನ ಅದ್ಯಾವ ಬಾಯಲ್ಲಿ ಬೈತೀರಾ?/column/bhat/2009/0305-family-politics-yeddyurappa-eats-his-own-word.htmlಸೋನಿಯಾ ಗಾಂಧಿ ಕಾಂಗ್ರೆಸ್ಸು ಅವ್ವ ಮಕ್ಕಳ ಪಕ್ಷ, ದೇವೇಗೌಡ ಅವರ ಜೆಡಿಎಸ್ಸು ಅಪ್ಪ ಮಕ್ಕಳ ಪಕ್ಷ ಅಂತ ಗೇಲಿ ಮಾಡಿ, ಟೀಕಿಸಿ, ಹಂಗಿಸಿ, ಮೂದಲಿಸಿ, ಜರಿದು, ಸ್ವಾಟೆಯನ್ನೂ ತಿವಿದಿದ್ದ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ 'ಆಚಾರ ಹೇಳುವುದಕ್ಕೆ ಬದನೆಕಾಯಿ ತಿನ್ನುವುದಕ್ಕೆ' ಎಂಬಂತೆ ತಮ್ಮ ಮಗ ರಾಘವೇಂದ್ರನನ್ನೇ ಲೋಕಸಭೆ ಚುನಾವಣೆಗೆ ನಿಲ್ಲಿಸಲು ನಿರ್ಧರಿದ್ದಾರೆ. ಈ ರಾಜಕೀಯ ನಡೆ ಅವರಿಗೆ 35016http://kannada.oneindia.com/img/2009/03/05-bsy-raghavendra1.jpg150287lok sabhaಅಗಾಥಾ ಸಂಗ್ಮಾ ಚಿಕ್ಕ ವಯಸ್ಸಿನ ಕೇಂದ್ರ ಸಚಿವೆ/news/2009/05/28/agatha-sangma-youngest-minister-in-upa-govt.htmlನವದೆಹಲಿ, ಮೇ. 28 : ಎರಡನೇ ಬಾರಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಸಂಪುಟದಲ್ಲಿ 59 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ನೂತನ ಸರಕಾರದಲ್ಲಿ ಯುವಕರಿಗೆ ಆದ್ಯತೆ ನೀಡಲಾಗಿದ್ದು, ರಾಜೇಶ್ ಪೈಲೆಟ್ ಮಗ ಸಚಿನ್ ಪೈಲೆಟ್, ಪಿಎ ಸಂಗ್ಮಾ ಅವರ ಮಗಳು 28 ವರ್ಷ ವಯಸ್ಸಿನ ಅಗಾಥಾ ಸಂಗ್ಮಾ, 36943http://kannada.oneindia.com/img/2009/05/28-agatha-sangma.jpg150287lok sabhaಜುಲೈ 8ಕ್ಕೆ ಮಮತಾ ಬ್ಯಾನರ್ಜಿ ರೈಲ್ವೆ ಬಜೆಟ್/news/2009/06/03/mamata-likely-to-present-rail-budget-on-jul-8.htmlನವದೆಹಲಿ, ಜೂ.3: ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರು ಜುಲೈ 8ರಂದು ಲೋಕಸಭೆಯಲ್ಲಿ ರೈಲ್ವೆ ಮುಂಗಡ ಪತ್ರವನ್ನು ಮಂಡಿಸುವ ಸಾಧ್ಯತೆ ಇದೆ. ರೈಲ್ವೆ ಸಚಿವಾಲಯ ಈಗಾಗಲೇ ವರದಿಯನ್ನು ಸಿದ್ಧಪಡಿಸುತ್ತಿದ್ದು ಬಜೆಟ್ ಮಂಡನೆಗೂ ಮುನ್ನ ರೈಲ್ವೆ ಸಚಿವರಿಗೆ ಸಲ್ಲಿಸಬೇಕಾಗಿದೆ. ಪ್ರಸಕ್ತ ಆರ್ಥಿಕ ವರ್ಷದಿಂದ ಆರನೇ ವೇತನ ಆಯೋಗ ಜಾರಿಯಾಗಿದ್ದು ಸಿಬ್ಬಂದಿಗೆ ರು.14,000 ಕೋಟಿಯನ್ನು ಬಟವಾಡೆ ಮಾಡಬೇಕಾಗಿದೆ. 37080http://kannada.oneindia.com/img/2009/06/03-mamata-banerjee.jpg150287lok sabhaಜೂ.5ರಂದು ಕುಮಾರಣ್ಣನ ಸ್ಥಾನಕ್ಕೆ ರೇವಣ್ಣ ಆಯ್ಕೆ/news/2009/06/03/jds-legislature-party-meet-on-june5.htmlಬೆಂಗಳೂರು, ಜೂ.3: ಜಾತ್ಯಾತೀತ ಜನತಾದಳವು ಜೂನ್ 5 ರಂದು ತನ್ನ ಶಾಸಕರ ಸಭೆ ಕರೆದಿದ್ದು, ಅಂದು ವಿಪಕ್ಷ ನಾಯಕ, ನೂತನ ಪದಾಧಿಕಾರಿಗಳು, ಕಚೇರಿ ನಿರ್ವಾಹಕರನ್ನು ಆಯ್ಕೆ ಮಾಡಲಿದೆ ಎಂದು ಪಕ್ಷದ ವಕ್ತಾರ ವೈಎಸ್ ವಿ ದತ್ತಾ ತಿಳಿಸಿದ್ದಾರೆ. ಲೋಕಸಭಾ ಸ್ಥಾನವನ್ನು ಉಳಿಸಿಕೊಂಡು ಶಾಸಕ ಸ್ಥಾನಕ್ಕೆ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಅವರ ಸ್ಥಾನ ತುಂಬಬಲ್ಲ 37096http://kannada.oneindia.com/img/2009/06/03-ysv-datta1.jpg30952shreenidhiಮನೆಯಿಂದ ಮನೆಗೆ../column/shreenidhi/2008/0826-old-memories-from-one-home-to-another.htmlಊರಿಂದ ಊರಿಗೆ ಹೋಗುವುದು, ಮನೆಯಿಂದ ಮನೆ ಬದಲಾಯಿಸುವುದು ಬಾಡಿಗೆದಾರರಿಗೆ, ವರ್ಗಾವಣೆಯ ಸರ್ಕಾರಿ ಕೆಲಸ ಇರುವವರಿಗೆ ತಪ್ಪದ ಕರ್ಮ. ಆದರೆ ಅದರಲ್ಲೂ ಸ್ವಾರಸ್ಯವಿರುತ್ತದೆ. ಪ್ರತಿ ಬಾಡಿಗೆ ಮನೆಯೂ ನಮ್ಮ ಸ್ವಂತ ಮನೆಯೇ, ಅದನ್ನು ಬಿಡುವವರೆಗೆ. ಇಂಥ ಅನುಭವಗಳು ಪ್ರತಿಯೊಬ್ಬರದೂ ಆಗಿರುತ್ತವೆ. ಮನೆ ಬದಲಾಯಿಸುವುದು ಸಾಮಾನು ಸರಂಜಾಮುಗಳ ಮೆರವಣಿಗೆ ಮಾತ್ರವಲ್ಲ ನೆನಪುಗಳ ಮೆರವಣಿಗೆ. ಅಂಕಣಕಾರ : ಶ್ರೀನಿಧಿ ಡಿ.ಎಸ್. ವರುಷ 1145http://kannada.oneindia.com/img/2009/09/23-loaded-van1.jpg30952shreenidhiಲಾರಾ ಇಂಗಲ್ಸ್ ವೈಲ್ಡರ್ ಮತ್ತು ಕ್ರಿಸ್ಮಸ್/column/shreenidhi/2008/1223-laura-ingalls-wilder-little-house-series.htmlಮಗುವಿನ ಮುಗ್ಧತೆಯಿಂದ ಮಕ್ಕಳ ಕಥೆಗಳನ್ನು ಮನೋಜ್ಞವಾಗಿ ಬರೆದ ಲಾರಾಳ ನೆನಪು ಇವತ್ತಿನ ಕಾಡುಹರಟೆಯಲ್ಲಿ ಒಂದೇಸಮನೆ ಕಾಡುತ್ತಿದೆ. ವಿಸ್ಕಾನ್ ಸಿನ್ ಕಾಡಿನ ಮರದತೊಗಟೆಗಳಿಂದ ಸೂಸಿಬರುವ ಪರಿಮಳ ನೆತ್ತಿಗೇರುತ್ತಿದೆ. ನಾನೂ ಕೂಡ ನನ್ನ ಬಾಲ್ಯದ ಕಥೆಗಳನ್ನು ಬಾಲ್ಯದ ಭಾಷೆಯಲ್ಲೇ ಬರೆಯಲಾರೆನೇ ಎಂದು ನನಗೆ ನಾನೇ ಕೇಳಿಕೊಳ್ಳಲಾರಂಭಿಸಿದ್ದೇನೆ!* ಶ್ರೀನಿಧಿ ಡಿ. ಎಸ್.ಆಕೆ ಬರೆಯಹೊರಟಿದ್ದು ಎಂದಿಗೂ ಕಳೆದುಹೋಗಬಾರದ ಕಥೆಗಳನ್ನು. ಅವಳ ಜೀವನಾನುಭವಗಳು 33657http://kannada.oneindia.com/img/2008/12/23-laura-ingalls-wilder1.jpg30952shreenidhiಬಂದಿದೆ ಹೊಸ ವರುಷ ತಂದಿದೆ ಬಲು ಹರುಷ/column/shreenidhi/2008/1230-cheers-lets-celebrate-the-new-year.htmlಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.* ಶ್ರೀನಿಧಿ ಡಿ.ಎಸ್.ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು 33789http://kannada.oneindia.com/img/2008/12/30-new-year1.gif30952shreenidhiನಮ್ಮೂರಿನ ಅಂದಿನ ಚೆಂದದ ಕೆರೆಗೆ ಇಂದೇನಾಗಿದೆ?/column/shreenidhi/2009/0106-sad-story-of-a-lake-in-karnataka.html* ಶ್ರೀನಿಧಿ ಡಿ.ಎಸ್.ಒಂದು ಉದ್ದನೆಯ ಏರಿ, ಏರಿಯ ಕೆಳಗೆ ದೊಡ್ಡ ಕೆರೆ. ನಿಂತು ನೋಡುತ್ತಿದ್ದರೆ, ಅದರ ತುದಿ ಕಾಣುವಷ್ಟರಲ್ಲಿ ಕಣ್ಣು ನೋಯಬೇಕು, ಅಷ್ಟು ದೊಡ್ಡದು. ಕೆರೆಯ ತುಂಬ ಗಾಳಿಗೆ ಅಲ್ಲಾಡುತ್ತ ನಿಂತ ತಾವರೆಯ ಹೂವುಗಳು. ಜೊತೆಗೆ ಹಸಿರು ಹುಲ್ಲ ಜೊಂಡು. ದಂಡೆಯ ಪಕ್ಕದಲ್ಲೇ ಸಾಲು ಮರಗಳು. ಕೆರೆಯ, ಅಕೋ ಆ ತುದಿಯಲ್ಲಿ ಒಂದು ಹಳೆಯ ಕಾಲದ ಶಿವನ 33924http://kannada.oneindia.com/img/2009/01/06-lake1.jpg30952shreenidhiರಾಜು ಅನಂತಸ್ವಾಮಿಗೆ ಬ್ಲಾಗಿಗಳ ಅನಂತ ನಮನ/mixed-bag/blogs/2009/0119-tribute-raju-ananthaswamy-by-kannada-bloggers.html[ಗಾಯಕ ರಾಜು ಅನಂತಸ್ವಾಮಿ ಅವರ ಅಕಾಲಿಕ ಮರಣ ದುರಂತವೇ ಸರಿ. ಅವರ ಅಗಣಿತ ಅಭಿಮಾನಿಗಳು ತಮ್ಮ ನೋವು,ಆಘಾತ, ವಿಷಾದ ಹಾಗೂ ಅಂತಿಮ ನಮನವನ್ನು ಬ್ಲಾಗ್ ಲೋಕದಲ್ಲಿ ಹರಿಯಬಿಟ್ಟಿದ್ದಾರೆ. ಅದರಲ್ಲಿ ಆಯ್ದ ಕೆಲವನ್ನು ಇಲ್ಲಿ ಕೊಡಲಾಗಿದೆ. ಮಿಕ್ಕವರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲು ಅಡ್ಡಿಯಿಲ್ಲ. -ಸಂಪಾದಕ]*ಚೆಂಡೆಮದ್ದಳೆಕಣ್ತುಂಬಿ ಬರುತ್ತದೆ….!ನಾವು ಕ್ರಮಿಸುವ ದಾರಿಯನ್ನು ಪ್ರತಿ ಪ್ರತಿ ಹಂತದಲ್ಲೂ ಪ್ರಶ್ನಿಸುತ್ತಲೇ ನಮ್ಮ ಖಚಿತತೆಯನ್ನು ಮತ್ತಷ್ಟು 34153http://kannada.oneindia.com/img/2009/01/19-raju-ananthaswamy2.jpg108623ಲೋಕಸಭೆಸಾಂಗ್ಲಿಯಾನಾ, ಕುನ್ನೂರು ಕಾಂಗ್ರೆಸ್ ಸೇರ್ಪಡೆ/news/2009/01/21/expelled-ktaka-bjp-leaders-join-congress.htmlನವದೆಹಲಿ, ಜ. 21 : ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಿ ಬಿಜೆಪಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಅಮಾನತುಗೊಂಡಿದ್ದ ಮನೋರಮಾ ಮಧ್ವರಾಜ್, ಎಚ್ ಟಿ ಸಾಂಗ್ಲಿಯನಾ ಮತ್ತು ಮಂಜುನಾಥ್ ಕುನ್ನೂರು ಇಂದು ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿಕೊಂಡರು.ಕಳೆದ ವರ್ಷ ಜುಲೈ 22 ರಂದು ಲೋಕಸಭೆಯಲ್ಲಿ ಗೊತ್ತುವಳಿ ಪರವಾಗಿ ಮತ ಚಲಾಯಿಸಿದ್ದರು. ಮನೋರಮಾ ಮಧ್ವರಾಜ್ 34195http://kannada.oneindia.com/img/2009/01/21-sangliyana-congress.jpg108623ಲೋಕಸಭೆಮತ್ತೊಂದು ಲೋಕಸಭೆ ಚುನಾವಣೆ ಬಂದಿದೆ/column/shreenidhi/2009/0303-elections-and-peoples-apathy.htmlವಿಧಾನಸಭೆಯೇ ಆಗಲಿ, ಲೋಕಸಭೆಯೇ ಆಗಲಿ ಪ್ರತಿ ಬಾರಿ ಚುನಾವಣೆ ಬಂದಾಗ ಮಾನ್ಯ ಮತದಾರರದು ಒಂದೇ ಉದಾಸೀನತೆ. ಎಲ್ಲಾ ಪಕ್ಷಗಳೂ ಅಷ್ಟೇ, ಅಭ್ಯರ್ಥಿಗಳಂತೂ ಅಷ್ಟಕ್ಕಷ್ಟೇ ಅಂತ ದೇಶಾವರಿ ಮಾತನಾಡುತ್ತ, ನಾನಂತೂ ಈ ಬಾರಿ ಓಟು ಹಾಕಲ್ಲಪ್ಪ ಅಂದ್ಕೊಳ್ತಾನೆ, ಹಣ-ಹೆಂಡ-ಸೀರೆ ಹಂಚ್ತಾ ಇದ್ದಾರಾ ಅಂತ ಆಸೆಯಿಂದ ನೋಡೋರೆ ಜಾಸ್ತಿ. ಆದರೆ, ಈಬಾರಿ ಹಾಗಾಗದಿರಲೆಂದು ಅತಿಯಾಸೆಯಿಂದ ನೋಡೋಣ. ಗುರುತಿನ ಚೀಟಿ ಮಾಡಿಸಿ, 34959http://kannada.oneindia.com/img/2009/03/03-voter-politician1.jpg108623ಲೋಕಸಭೆಜುಲೈ 8ಕ್ಕೆ ಮಮತಾ ಬ್ಯಾನರ್ಜಿ ರೈಲ್ವೆ ಬಜೆಟ್/news/2009/06/03/mamata-likely-to-present-rail-budget-on-jul-8.htmlನವದೆಹಲಿ, ಜೂ.3: ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರು ಜುಲೈ 8ರಂದು ಲೋಕಸಭೆಯಲ್ಲಿ ರೈಲ್ವೆ ಮುಂಗಡ ಪತ್ರವನ್ನು ಮಂಡಿಸುವ ಸಾಧ್ಯತೆ ಇದೆ. ರೈಲ್ವೆ ಸಚಿವಾಲಯ ಈಗಾಗಲೇ ವರದಿಯನ್ನು ಸಿದ್ಧಪಡಿಸುತ್ತಿದ್ದು ಬಜೆಟ್ ಮಂಡನೆಗೂ ಮುನ್ನ ರೈಲ್ವೆ ಸಚಿವರಿಗೆ ಸಲ್ಲಿಸಬೇಕಾಗಿದೆ. ಪ್ರಸಕ್ತ ಆರ್ಥಿಕ ವರ್ಷದಿಂದ ಆರನೇ ವೇತನ ಆಯೋಗ ಜಾರಿಯಾಗಿದ್ದು ಸಿಬ್ಬಂದಿಗೆ ರು.14,000 ಕೋಟಿಯನ್ನು ಬಟವಾಡೆ ಮಾಡಬೇಕಾಗಿದೆ. 37080http://kannada.oneindia.com/img/2009/06/03-mamata-banerjee.jpg108623ಲೋಕಸಭೆಸಭೆಯಲ್ಲಿ ವಿಷ ಸೇವಿಸಿ ಸಾಯುತ್ತೇನೆ:ಶರದ್ ಎಚ್ಚರಿಕೆ/news/2009/06/06/sharad-yadav-womens-reservation-bill-poison.htmlನವದೆಹಲಿ, ಜೂ.6: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಈಗಿನ ರೂಪದಲ್ಲೇ ಅಂಗೀಕರಿಸಿದರೆ ತಾನು ವಿಷ ಸೇವಿಸಿ ಸಾಯುತ್ತೇನೆ ಎಂದು ಜೆಡಿ (ಯು) ಅಧ್ಯಕ್ಷ ಶರದ್ ಯಾದವ್ ಶುಕ್ರವಾರ ಬೆದರಿಕೆ ಹಾಕಿದ್ದಾರೆ. ಮಹಿಳೆಯರನ್ನು ರಾಷ್ಟ್ರಪತಿ, ಸ್ಪೀಕರ್ ಹುದ್ದೆಗಳಲ್ಲಿ ಕುಳ್ಳರಿಸಿದ ಮಾತ್ರಕ್ಕೆ ಅಥವಾ ಅವರಿಗೆ ಮೀಸಲಾತಿ ಕಲ್ಪಿಸುವುದರಿಂದ ಸ್ವಾತ್ರಂತ್ರ್ಯ ಸಿಗುವುದಿಲ್ಲ ಎಂದು ಶರದ್ ಯಾದವ್ ಅಭಿಪ್ರಾಯಪಟ್ಟರು. ಶುಕ್ರವಾರ 37161http://kannada.oneindia.com/img/2009/06/06-sharad-yadav.jpg108623ಲೋಕಸಭೆರೈಲ್ವೆ ಬಜೆಟ್-2009ರ ಮುಖ್ಯಾಂಶಗಳು/news/2009/07/03/mamata-banerjee-begins-railway-budget-speech.htmlನವದೆಹಲಿ, ಜು. 3 : ಕೇಂದ್ರದ ಯಪಿಎ ಸರಕಾರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ತಮ್ಮ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದು, ಪಶ್ಚಿಮ ಬಂಗಾಲಕ್ಕೆ ಗಮನಾರ್ಹ ಕೊಡುಗೆ ನೀಡಿರುವ ನಿರೀಕ್ಷೆಯ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜನರ ನಿರೀಕ್ಷೆ ಈಡೇರಿಸುವ ಸಮಯ ಯುಪಿಎ ಸರಕಾರದ ಮೂಲಕ ಕೈಗೂಡಿದೆ. ಜನರ ಹಿತಕಾಯುವ ಬಜೆಟ್ ಮಂಡಿಸುವೆ ಎಂದರು. *ಪ್ರಮುಖ 12 37752http://kannada.oneindia.com/img/2009/07/03-mamata-banerjee1.jpgnews"> ಮತ್ತೊಂದು ಲೋಕಸಭೆ ಚುನಾವಣೆ ಬಂದಿದೆ | Lok Sabha | Election 2009 | Politics | Kaaduharate - ಮತ್ತೊಂದು ಲೋಕಸಭೆ ಚುನಾವಣೆ ಬಂದಿದೆ - Kannada Oneindia

ಮತ್ತೊಂದು ಲೋಕಸಭೆ ಚುನಾವಣೆ ಬಂದಿದೆ

Photo courtesy : Business Line
ವಿಧಾನಸಭೆಯೇ ಆಗಲಿ, ಲೋಕಸಭೆಯೇ ಆಗಲಿ ಪ್ರತಿ ಬಾರಿ ಚುನಾವಣೆ ಬಂದಾಗ ಮಾನ್ಯ ಮತದಾರರದು ಒಂದೇ ಉದಾಸೀನತೆ. ಎಲ್ಲಾ ಪಕ್ಷಗಳೂ ಅಷ್ಟೇ, ಅಭ್ಯರ್ಥಿಗಳಂತೂ ಅಷ್ಟಕ್ಕಷ್ಟೇ ಅಂತ ದೇಶಾವರಿ ಮಾತನಾಡುತ್ತ, ನಾನಂತೂ ಈ ಬಾರಿ ಓಟು ಹಾಕಲ್ಲಪ್ಪ ಅಂದ್ಕೊಳ್ತಾನೆ, ಹಣ-ಹೆಂಡ-ಸೀರೆ ಹಂಚ್ತಾ ಇದ್ದಾರಾ ಅಂತ ಆಸೆಯಿಂದ ನೋಡೋರೆ ಜಾಸ್ತಿ. ಆದರೆ, ಈಬಾರಿ ಹಾಗಾಗದಿರಲೆಂದು ಅತಿಯಾಸೆಯಿಂದ ನೋಡೋಣ. ಗುರುತಿನ ಚೀಟಿ ಮಾಡಿಸಿ, ಆಮಿಷಗಳಿಗೆ ಬಲಿಯಾಗದೆ ಸರತಿಯಲ್ಲಿ ನಿಂತು ಮತ ಚಲಾಯಿಸುತ್ತಾರೆಂದು ಬಯಸೋಣ.

* ಶ್ರೀನಿಧಿ ಡಿಎಸ್

ಮತ್ತೆ ಚುನಾವಣೆ ಬರುತ್ತಿದೆ. ಎಪ್ರಿಲ್ ಹದಿನಾರರಿಂದ ಮೇ ಹದಿಮೂರರವರೆಗೆ ಲೋಕಸಭಾ ಚುನಾವಣೆಗಳು ನಡೆಯಲಿವೆ ಎಂದು ಚುನಾವಣಾ ಅಯೋಗ ನಿನ್ನೆ ಘೋಷಣೆ ಮಾಡಿದೆ. ಇನ್ನೇನು, ನಿಧಾನವಾಗಿ ಚುನಾವಣಾ ಕಾವು ದೇಶದಾದ್ಯಂತ ಹಬ್ಬುತ್ತದೆ. ಹಳ್ಳಿಗಳ ಅರಳಿಕಟ್ಟೆಯ ಮಧ್ಯಾಹ್ನದ ಉರಿಬಿಸಿಲು, ನಗರಗಳ ಚಾದುಕಾನಿನ ಸಂಜೆಗಳು, ಚುನಾವಣೆಗಳನ್ನೇ ಜಪಿಸಲು ತೊಡಗುತ್ತವೆ. ಕೂಲಿ ಕಾರ್ಮಿಕರಿಂದ ಹಿಡಿದು, ಬ್ಯಾಂಕ್ ಮ್ಯಾನೇಜರುಗಳವರೆಗೂ ಬರೀ ಇದೇ ಚರ್ಚೆ.

ಇಷ್ಟು ದಿನ, ಅದೆಲ್ಲಿ ಹೋಗಿದ್ದರೋ? ನೋಡಿ, ಇನ್ನು ಮಿರಮಿರ ಮಿರುಗುವ ಬಿಳಿಬಿಳಿ ಧೋತರ ಉಟ್ಟ ರಾಜಕಾರಣಿಗಳು ತಮ್ಮ ತಮ್ಮ ಊರುಗಳ ಗಲ್ಲಿಗಲ್ಲಿಗಳಲ್ಲಿ ತಿರುಗಲಾರಂಭಿಸುತ್ತಾರೆ. ನೀವು ಹೋಗಿ ಮದುವೆಗೋ ಮುಂಜಿಗೂ ಕರೆದು ಬನ್ನಿ ಬಂದುಬಿಡುತ್ತಾರೆ. ತಾವು ಕಳೆದ ಐದು ವರುಷಗಳಿಂದ ಏನಂದರೆ ಏನೂ ಮಾಡಿರದಿದ್ದರೂ, ಮತ್ತೆ ನಮ್ಮನಿಮ್ಮೆದುರು ಅತ್ಮವಿಶ್ವಾಸದಿಂದ ನಿಂತು ಹೊಸ ಕಥೆಗಳನ್ನು ನಂಬುವಂತೆ ಹೇಳತೊಡಗುತ್ತಾರೆ.

ಜನರೂ ಹೊಸ ಉಮೇದಿನಿಂದ ತಮ್ಮೂರ ಹಳೆಯ ಕ್ಯಾಂಡಿಡೇಟು ಅದೇನು ಕಡಿದು ಕಟ್ಟೆ ಹಾಕಿದ್ದ ಎಂಬುದನ್ನು ಚರ್ಚೆ ಮಾಡೀ ಮಾಡೀ..ಒಬ್ಬೊಬ್ಬರು ಒಂದೊಂದು ತರಾ ನಿರ್ಧಾರಕ್ಕೆ ಬರುತ್ತಾರೆ. ಕೆಲ ಊರುಗಳ ಜನ, ತಮ್ಮೂರಲ್ಲಿ ಇಲ್ಲಿಯತನಕ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ, ಹಾಗಾಗಿ ನಾವ್ಯಾರೂ ಮತ ಹಾಕುವುದಿಲ್ಲ ಅಂತ ಬೋರ್ಡು ಬರೆಸಿ, ಊರ ಹೊರಗೆ ಜೋತಾಡಿಸಿ ರಾಜಕಾರಣಿಗಳಿಗೆ ಬಹಿಷ್ಕಾರವನ್ನೂ ಹಾಕುತ್ತಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ- ಹಣ-ಹೆಂಡ-ಪಂಚೆ-ಸೀರೆ ಅಕ್ಕಿಮೂಟೆಗಳ ಸಂಗ್ರಹ ಭರದಿಂದ ಸಾಗುತ್ತದೆ. ನಗರಗಳ ಹೊರವಲಯದ ಖಾಲಿ ಬಿಲ್ಡಿಂಗುಗಳು ಇವುಗಳಿಗೆ ಅಶ್ರಯ ನೀಡುತ್ತವೆ. ಯಾರ್ಯಾರೋ ಹೆಂಡ ಹಂಚುವಾಗ ದುಡ್ಡು ಸಾಗಿಸಬೇಕಿದ್ದರೆ ಸಿಕ್ಕಿ ಬೀಳುತ್ತಾರೆ. ಅರಳಿ ಕಟ್ಟೆಗಳಲ್ಲಿ ಅವೂ ಚರ್ಚೆಯಾಗುತ್ತವೆ- ಛೇ, ತಮಗೆ ಸಿಗಲಿಲ್ಲವಲ್ಲ ಎಂಬ ಬೇಜಾರಿನೊಂದಿಗೆ.

ಊರೊಳಗೆ ಯಾವ ಕಾರು ಸ್ಕಾರ್ಪಿಯೋಗಳು ಬಂದರೂ, ನಿರುದ್ಯೋಗಿ ಜನ ಯಾವುದೋ ರಾಜಕೀಯ ಪಕ್ಷದವರೇ ಬಂದಿರಬೇಕು ಎಂದು ಉದ್ದ ಕತ್ತು ಚಾಚುತ್ತಾರೆ. ಬಂದವರು ಪಕ್ಷಗಳವರೇ ಆದರೆ, ಒಂದಿಷ್ಟು ದಿನಗಳ ಉದ್ಯೋಗ ದೊರಕುತ್ತದೆ. ಇಲ್ಲವಾದರೆ ಹಿಡಿಶಾಪ ಇದ್ದೇ ಇದೆ. ಇನ್ನು ಯಾವನಿಗಾದರೂ, ಜನ ಒಟ್ಟು ಮಾಡುವ ತಾಕತ್ತಿದ್ದರೆ, ತನ್ನ ಬಳಿ ಇರುವ ಯುವಶಕ್ತಿಯನ್ನು ಪ್ರದರ್ಶಿಸಿ, ನಿಮಗೇ ನಮ್ಮೇರಿಯಾದ ಓಟು ಎಂದು ಅಭ್ಯರ್ಥಿಗಳನ್ನು ನಂಬಿಸಿ ದುಡ್ಡು ಮಾಡಿಕೊಳ್ಳುವ ಹೋಲ್ಸೇಲ್ ದಂಧೆಯೂ ನಡೆಯುತ್ತದೆ.

ಯಾವುದೇ ದಿನಪತ್ರಿಕೆಗಳನ್ನು ತೆಗೆದು ನೋಡಿದರೂ, ಪೇಜುಪೇಜುಗಟ್ಟಲೇ ಜಾಹೀರಾತುಗಳು ಕಾಣುತ್ತವೆ ತಮ್ಮ ಪಕ್ಷದ್ದು ಮಾತ್ರ ಸಾಧನೆ ಎಂಬಹಾಗೆ. ಟೀವೀ ಚಾನಲುಗಳಿಗಂತೂ ಇನ್ನು ಹಬ್ಬ. ರಾಜಕೀಯ ಪಕ್ಷಗಳು, ಚುನಾವಣಾ ಆಯೋಗದ ನಿಯಮಗಳಲ್ಲಿ ಎಲ್ಲೆಲ್ಲಿ ಕುಂದು-ಕೊರತೆಗಳಿವೆ, ಹೇಗೆ ಅಯೋಗದ ಮೂಗಿನಡಿಯಲ್ಲಿ ಅಕ್ರಮಗಳನ್ನು ಮಾಡಿಯೂ ಸಿಕ್ಕಿಹಾಕದೇ ಉಳಿಯಬಹುದು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತವೆ.

ಇವಿಷ್ಟರ ಮಧ್ಯೆ, ದೇಶ ಹಾಳಾಗುತ್ತಿದೆ, ಎಕ್ಕುಟ್ಟೋಗುತ್ತಿದೆ ಎಂದೆಲ್ಲ ಮಾತನಾಡುವ ಮಂದಿ ಮತದಾನ ಮಾಡುವುದೋ ಬಿಡುವುದೋ ಎಂಬ ಗೊಂದಲದಲ್ಲೇ ಕಾಲ ಕಳೆಯುತ್ತಾರೆ. ಇಲ್ಲಿಯ ತನಕ ಒಂದು ಬಾರಿ ಕೂಡ ಮತದಾನ ಮಾಡದೇ ಹೋದರೂ ದೇಶದ ಪರಿಸ್ಥಿತಿ ರಾಜಕಾರಣಿಗಳ ಭ್ರಷ್ಟಾಚಾರ ಇತ್ಯಾದಿ ವಿಚಾರಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಾರೆ. ಮನೆ ಬಾಗಿಲಿಗೇ ಜನಗಣತಿಯವರು ಬಂದಿದ್ದರೂ, ಮತ್ತೆ ಮತ್ತೆ ಮಂಡಲ ಪಂಚಾಯತಿಗಳಿಂದ ಹಿಡಿದು ಮಹಾನಗರ ಪಾಲಿಕೆಗಳವರೆಗೆ- ಮತದಾರರ ಗುರುತು ಪತ್ರ ಮಾಡಿಸಿಕೊಳ್ಳುವ ಮಾಹಿತಿಗಳನ್ನು ನೋಡಿದ್ದರೂ, ಅರಾಮಾಗಿ ಕೂತು ಕಾಲ ಕಳೆದ ಕಾರಣ ಇನ್ನೂ ವೋಟರ್ ಐಡಿ ಬಂದಿಲ್ಲ. ಮತದಾನ ಮಾಡಲು ವೋಟರ್ ಐಡಿ ಇಲ್ಲದಿದ್ದರೂ ಪರವಾಗಿಲ್ಲ ಉಳಿದ ಕೆಲ ಅವಶ್ಯಕ ದಾಖಲೆಗಳಿದ್ದರೆ ಎಂಬ ಮಾಹಿತಿಯೂ ಇವರಿಗೆ ತಿಳಿದಿದೆಯೋ ಇಲ್ಲವೋ- ಗೊತ್ತಿಲ್ಲ.

ಮನೆಯೆದುರಿನ ಶಾಲೆಯಲ್ಲಿ ಸರತಿ ಸಾಲಲ್ಲಿ ನಿಂತು, ಮತದಾನ ಮಾಡುವ ಗೋಳು ಯಾರಿಗೆ ಬೇಕು ಅನ್ನುವ ಕಾರಣಕ್ಕೆ, ನಾಳೆಯ ದಿನ ವೋಟ್ ಮಾಡುವುದೂ ಸಂಶಯವೇ. ಯಾಕೆ ನಮ್ಮ ದೇಶದಲ್ಲಿ ನಾವು ಅಂರ್ತಜಾಲದ ಮೂಲಕ ಮತದಾನ ಮಾಡಬಾರದು ಮೊಬೈಲ್ ಗಳ ಮೂಲಕವೂ ಅದ್ಯಾವುದೋ ದೇಶದಲ್ಲಿ ಮತದಾನ ಮಾಡುವ ಸೌಲಭ್ಯ ಇದೆಯಂತೆ ಎಂದೆಲ್ಲ ಮಾತಾಡುತ್ತಾರೆಯೇ ಹೊರತು ತಮ್ಮಲ್ಲಿ ಇರುವ ಸೌಲಭ್ಯಗಳ ಬಳಕೆ ಮಾಡಿಕೊಂಡು ಮತದಾನ ಮಾಡುವುದಿಲ್ಲ.

ಮೇ ಕೊನೆಯ ಹೊತ್ತಿಗೆ ಯಾವುದಾದರೂ ಅಲಯನ್ಸು ಸರಕಾರ ನಿರ್ಮಿಸುತ್ತದೆ. ಭಾರತದ ಅಮೂಲ್ಯ ಯುವಪಡೆಯ ಅರ್ಧದಷ್ಟು ಮಂದಿ ಕೂಡ ಮತದಾನ ಮಾಡದೇ, ಮಾಡದೇ ಇರುವುದಕ್ಕೆ ತಮಗೆ ತಾವೇ ಕಾರಣಗಳನ್ನು ಕೊಟ್ಟು ಕೊಳ್ಳುತ್ತ ಸಮಾಧಾನ ಪಟ್ಟುಕೊಳ್ಳುತ್ತಾರೆ. ಮತ್ತೆ ಇನ್ನೈದು ವರುಷಗಳ ಬಳಿಕ - ಇವೇ ಸೀನುಗಳು ಮರುಕಳಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+