30946ಶ್ರೀನಿಧಿಲಾರಾ ಇಂಗಲ್ಸ್ ವೈಲ್ಡರ್ ಮತ್ತು ಕ್ರಿಸ್ಮಸ್/column/shreenidhi/2008/1223-laura-ingalls-wilder-little-house-series.htmlಮಗುವಿನ ಮುಗ್ಧತೆಯಿಂದ ಮಕ್ಕಳ ಕಥೆಗಳನ್ನು ಮನೋಜ್ಞವಾಗಿ ಬರೆದ ಲಾರಾಳ ನೆನಪು ಇವತ್ತಿನ ಕಾಡುಹರಟೆಯಲ್ಲಿ ಒಂದೇಸಮನೆ ಕಾಡುತ್ತಿದೆ. ವಿಸ್ಕಾನ್ ಸಿನ್ ಕಾಡಿನ ಮರದತೊಗಟೆಗಳಿಂದ ಸೂಸಿಬರುವ ಪರಿಮಳ ನೆತ್ತಿಗೇರುತ್ತಿದೆ. ನಾನೂ ಕೂಡ ನನ್ನ ಬಾಲ್ಯದ ಕಥೆಗಳನ್ನು ಬಾಲ್ಯದ ಭಾಷೆಯಲ್ಲೇ ಬರೆಯಲಾರೆನೇ ಎಂದು ನನಗೆ ನಾನೇ ಕೇಳಿಕೊಳ್ಳಲಾರಂಭಿಸಿದ್ದೇನೆ!* ಶ್ರೀನಿಧಿ ಡಿ. ಎಸ್.ಆಕೆ ಬರೆಯಹೊರಟಿದ್ದು ಎಂದಿಗೂ ಕಳೆದುಹೋಗಬಾರದ ಕಥೆಗಳನ್ನು. ಅವಳ ಜೀವನಾನುಭವಗಳು 33657http://kannada.oneindia.com/img/2008/12/23-laura-ingalls-wilder1.jpg30946ಶ್ರೀನಿಧಿಬಂದಿದೆ ಹೊಸ ವರುಷ ತಂದಿದೆ ಬಲು ಹರುಷ/column/shreenidhi/2008/1230-cheers-lets-celebrate-the-new-year.htmlಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.* ಶ್ರೀನಿಧಿ ಡಿ.ಎಸ್.ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು 33789http://kannada.oneindia.com/img/2008/12/30-new-year1.gif30946ಶ್ರೀನಿಧಿರಾಜು ಅನಂತಸ್ವಾಮಿಗೆ ಬ್ಲಾಗಿಗಳ ಅನಂತ ನಮನ/mixed-bag/blogs/2009/0119-tribute-raju-ananthaswamy-by-kannada-bloggers.html[ಗಾಯಕ ರಾಜು ಅನಂತಸ್ವಾಮಿ ಅವರ ಅಕಾಲಿಕ ಮರಣ ದುರಂತವೇ ಸರಿ. ಅವರ ಅಗಣಿತ ಅಭಿಮಾನಿಗಳು ತಮ್ಮ ನೋವು,ಆಘಾತ, ವಿಷಾದ ಹಾಗೂ ಅಂತಿಮ ನಮನವನ್ನು ಬ್ಲಾಗ್ ಲೋಕದಲ್ಲಿ ಹರಿಯಬಿಟ್ಟಿದ್ದಾರೆ. ಅದರಲ್ಲಿ ಆಯ್ದ ಕೆಲವನ್ನು ಇಲ್ಲಿ ಕೊಡಲಾಗಿದೆ. ಮಿಕ್ಕವರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲು ಅಡ್ಡಿಯಿಲ್ಲ. -ಸಂಪಾದಕ]*ಚೆಂಡೆಮದ್ದಳೆಕಣ್ತುಂಬಿ ಬರುತ್ತದೆ….!ನಾವು ಕ್ರಮಿಸುವ ದಾರಿಯನ್ನು ಪ್ರತಿ ಪ್ರತಿ ಹಂತದಲ್ಲೂ ಪ್ರಶ್ನಿಸುತ್ತಲೇ ನಮ್ಮ ಖಚಿತತೆಯನ್ನು ಮತ್ತಷ್ಟು 34153http://kannada.oneindia.com/img/2009/01/19-raju-ananthaswamy2.jpg30946ಶ್ರೀನಿಧಿಸಿನಿಮಾ ನೋಡುವ ಸುಖದ ಕುರಿತು.../column/shreenidhi/2009/0120-the-joy-of-watching-acclaimed-movies.htmlಕ್ಲಾಸಿಗೆ ಚಕ್ಕರ್ ಹಾಕಿ, ಸ್ನೇಹಿತರೊಡಗೂಡಿ ಹಳ್ಳಿ ಚಿತ್ರಮಂದಿರಗಳಲ್ಲಿ ಕದ್ದುಮುಚ್ಚಿ ಚಲನಚಿತ್ರ ನೋಡುವ ಖುಷಿಯಿದೆಯಲ್ಲ, ಅದು ಯಾವ ಸಂತೋಷಕ್ಕೂ ಸಾಟಿಯಲ್ಲ. ಹಳ್ಳಿ ಹುಡುಗರನೇಕರು ಪಟ್ಟಣ ಸೇರಿಕೊಂಡು ಆ ಸುಖದಿಂದ ವಂಚಿತರಾಗುತ್ತಿರುವುದು ಅಷ್ಟೇ ಸತ್ಯ. ಈಗಂತೂ ಸಿನೆಮಾವನ್ನು ಡಿವಿಡಿಗಳಲ್ಲೇ ನೋಡುವ ಸೌಭಾಗ್ಯ ಲಭಿಸುತ್ತಿರುವುದರಿಂದ ಮನೆಯಲ್ಲಿ ಕೂತು ಸಿನೆಮಾ ನೋಡುವವರ ಸಂಖ್ಯೆ ಜಾಸ್ತಿಯಾಗ್ತಾಯಿದೆ. ಆದರೂ, ಧಿಯೇಟರಿಗೆ ಹೋಗಿ ಚಿತ್ರ ವೀಕ್ಷಿಸುವ ಸುಖವೇ 34175http://kannada.oneindia.com/img/2009/01/20-seven-pounds1.jpg30946ಶ್ರೀನಿಧಿಕಡಲಕಿನಾರೆಯ ಕಥಾ ಪ್ರಸಂಗಗಳು/column/shreenidhi/2009/0127-beach-is-not-a-funspot-for-fishermen.htmlಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?* ಶ್ರೀನಿಧಿ ಡಿ.ಎಸ್.ಸೇಸುಗೆ ಎಂದಿನ 34318http://kannada.oneindia.com/img/2009/01/27-ullal-beach1.jpg138839ಕಾಡುಹರಟೆನಮ್ಮೂರಿನ ಅಂದಿನ ಚೆಂದದ ಕೆರೆಗೆ ಇಂದೇನಾಗಿದೆ?/column/shreenidhi/2009/0106-sad-story-of-a-lake-in-karnataka.html* ಶ್ರೀನಿಧಿ ಡಿ.ಎಸ್.ಒಂದು ಉದ್ದನೆಯ ಏರಿ, ಏರಿಯ ಕೆಳಗೆ ದೊಡ್ಡ ಕೆರೆ. ನಿಂತು ನೋಡುತ್ತಿದ್ದರೆ, ಅದರ ತುದಿ ಕಾಣುವಷ್ಟರಲ್ಲಿ ಕಣ್ಣು ನೋಯಬೇಕು, ಅಷ್ಟು ದೊಡ್ಡದು. ಕೆರೆಯ ತುಂಬ ಗಾಳಿಗೆ ಅಲ್ಲಾಡುತ್ತ ನಿಂತ ತಾವರೆಯ ಹೂವುಗಳು. ಜೊತೆಗೆ ಹಸಿರು ಹುಲ್ಲ ಜೊಂಡು. ದಂಡೆಯ ಪಕ್ಕದಲ್ಲೇ ಸಾಲು ಮರಗಳು. ಕೆರೆಯ, ಅಕೋ ಆ ತುದಿಯಲ್ಲಿ ಒಂದು ಹಳೆಯ ಕಾಲದ ಶಿವನ 33924http://kannada.oneindia.com/img/2009/01/06-lake1.jpg138839ಕಾಡುಹರಟೆಸಿನಿಮಾ ನೋಡುವ ಸುಖದ ಕುರಿತು.../column/shreenidhi/2009/0120-the-joy-of-watching-acclaimed-movies.htmlಕ್ಲಾಸಿಗೆ ಚಕ್ಕರ್ ಹಾಕಿ, ಸ್ನೇಹಿತರೊಡಗೂಡಿ ಹಳ್ಳಿ ಚಿತ್ರಮಂದಿರಗಳಲ್ಲಿ ಕದ್ದುಮುಚ್ಚಿ ಚಲನಚಿತ್ರ ನೋಡುವ ಖುಷಿಯಿದೆಯಲ್ಲ, ಅದು ಯಾವ ಸಂತೋಷಕ್ಕೂ ಸಾಟಿಯಲ್ಲ. ಹಳ್ಳಿ ಹುಡುಗರನೇಕರು ಪಟ್ಟಣ ಸೇರಿಕೊಂಡು ಆ ಸುಖದಿಂದ ವಂಚಿತರಾಗುತ್ತಿರುವುದು ಅಷ್ಟೇ ಸತ್ಯ. ಈಗಂತೂ ಸಿನೆಮಾವನ್ನು ಡಿವಿಡಿಗಳಲ್ಲೇ ನೋಡುವ ಸೌಭಾಗ್ಯ ಲಭಿಸುತ್ತಿರುವುದರಿಂದ ಮನೆಯಲ್ಲಿ ಕೂತು ಸಿನೆಮಾ ನೋಡುವವರ ಸಂಖ್ಯೆ ಜಾಸ್ತಿಯಾಗ್ತಾಯಿದೆ. ಆದರೂ, ಧಿಯೇಟರಿಗೆ ಹೋಗಿ ಚಿತ್ರ ವೀಕ್ಷಿಸುವ ಸುಖವೇ 34175http://kannada.oneindia.com/img/2009/01/20-seven-pounds1.jpg138839ಕಾಡುಹರಟೆಕಡಲಕಿನಾರೆಯ ಕಥಾ ಪ್ರಸಂಗಗಳು/column/shreenidhi/2009/0127-beach-is-not-a-funspot-for-fishermen.htmlಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?* ಶ್ರೀನಿಧಿ ಡಿ.ಎಸ್.ಸೇಸುಗೆ ಎಂದಿನ 34318http://kannada.oneindia.com/img/2009/01/27-ullal-beach1.jpg138839ಕಾಡುಹರಟೆಈ ಮೇಲ್ ಭಯೋತ್ಪಾದನೆ!/column/shreenidhi/2009/0210-spam-junk-hoax-emails.htmlಜನ ಇವತ್ತಿಗೂ ಐವತ್ತು ಜನಕ್ಕೆ ಫಾರ್ವರ್ಡು ಮಾಡಿದರೆ ಕ್ಯಾನ್ಸರು ಪೇಶಂಟಿಗೆ 10 ಸೆಂಟು ಸಿಗುತ್ತದೆ ಅನ್ನುವ ತರಹದ ಈ-ಮೇಲ್ ಗಳನ್ನು ಕಳಿಸುತ್ತಲೇ ಇದ್ದಾರೆ. ನನ್ನ ಪರಿಚಿತರೊಬ್ಬರು ಹೇಳಿದ ಹಾಗೆ, ಸೀಮನ್ಸ್ನಲ್ಲಿ ಕೆಲಸ ಮಾಡುವ ಅದ್ಯಾವುದೋ ಹೆಂಗಸು- ಅವಳಿಗೇನೋ ರೋಗ ಇರುವ ಈ ಮೇಲ್, ಕಳೆದ ಆರು-ಏಳು ವರುಷಗಳಿಂದ ಬರುತ್ತಲೇ ಇದೆಯಂತೆ!* ಶ್ರೀನಿಧಿ ಡಿಎಸ್ಇತ್ತೀಚಿನ ದಿನಗಳಲ್ಲಿ ಕೆಲಬಾರಿ ದಿನವೂ 34579http://kannada.oneindia.com/img/2009/02/10-junk-emails1.gif138839ಕಾಡುಹರಟೆಮಲೆನಾಡ ಮದುವೆಯೆಂದರೆ.. ಸುಮ್ನೆನಾ?/column/shreenidhi/2009/0217-marriage-rituals-in-malenadu-karnataka.htmlನಗರಗಳಲ್ಲಿ ಮದುವೆಗಳೆಂದರೆ ಧಾರ್ಮಿಕ ಕಾರ್ಯಗಳಿಂದ ಹಿಡಿದು ಪ್ರತಿಯೊಂದನ್ನು ಕಾಂಟ್ರಾಕ್ಟ್ ಕೊಟ್ಟು ಕೈಬೀಸಿ ಮದುವೆ ಮಂಟಪಕ್ಕೆ ನಡೆದು ಬರುವಷ್ಟರ ಮಟ್ಟಕ್ಕೆ ಯಾಂತ್ರಿಕವಾಗಿವೆ. ಎಲ್ಲ ಮದುವೆಗಳೂ ಹೀಗೇ ಇಲ್ಲದಿದ್ದರೂ ಕಷ್ಟ ತಪ್ಪಿದರೆ ಸಾಕಪ್ಪ ಅನ್ನುವಂತಾಗಿವೆ. ಆದರೆ, ಮಲೆನಾಡುಗಳಲ್ಲಿ ಮದುವೆಗಳೆಂದೆ ಹೀಗಲ್ಲ. ಅಲ್ಲಿಯ ಸಂಭ್ರಮಕ್ಕೆ ಎಲ್ಲೆಯೇ ಇಲ್ಲ. ಊರಿನ ಪ್ರತಿಯೊಬ್ಬರೂ ಬಂಧುಗಳೇ. ಇಷ್ಟೊಂದು ಜನರನ್ನ ಹೇಗಪ್ಪ ಸಂಭಾಳಿಸುವುದು ಅಂದುಕೊಂಡರೂ ಮದುವೆ ಮುಗಿಸಿ 34711http://kannada.oneindia.com/img/2009/02/17-woman-havyaka1.jpg108579ಅಂಕಣಕಾರನಟರಾಜ್ ಲೇಖನಕ್ಕೆ ಶೇಷಾದ್ರಿ ಪ್ರತಿಕ್ರಿಯೆ/column/nataraj/2003/031203sheshadri.htmlDear Editor,I read with interest the recent column by Dr.M.S.Nataraja (http://www.thatskannada.com/column/nataraj/2003/191103moore.html) about the religious fanaticism. Other than providing a laundry list of conflicts around the world, this column does not inform the readers much. In fact the good Doctor has 10939http://kannada.oneindia.com/img/2009/11/24-ms-nataraj7.jpg108579ಅಂಕಣಕಾರಜಾಲತರಂಗದಿಂದ ಜಾಲತರಂಗಿಣಿಯವರೆಗೆ/column/nataraj/2009/0514-farewell-to-jaalataranga-columnist-ms-nataraj.htmlಅದುವೆಕನ್ನಡ ಬಿಂದು ಕಾಮ್! ಈ ಮುದ್ದಾದ ಹೆಸರನ್ನು ದಟ್ಸ್ ಕನ್ನಡ ಅಂತರ್ಜಾಲ ತಾಣಕ್ಕೆ ದಯಪಾಲಿಸಿದ 'ಜಾಲತರಂಗ' ಅಂಕಣಕಾರರಾದ ಆತ್ಮೀಯ ಡಾ. ಮೈ.ಶ್ರೀ. ನಟರಾಜ್ ಅವರ ಅಕ್ಷರ ಕೊಡುಗೆಯನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಸಾಧ್ಯವೇ ಇಲ್ಲ. ಸತತ ಆರು ವರ್ಷಗಳ ಕಾಲ ವೈವಿಧ್ಯಮಯ, ಚಿಂತನಶೀಲ ಬರಹಗಳ ಮುಖಾಂತರ ತಮ್ಮ ಅನುಭವಗಳನ್ನು ಓದುಗರೊಡನೆ ಹಂಚಿಕೊಂಡಿದ್ದಾರೆ ಮತ್ತು ದಟ್ಸ್ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಈಗ 36601http://kannada.oneindia.com/img/2009/05/14-ms-nataraj7.jpg108579ಅಂಕಣಕಾರಚೀನಾದ ಬೀಸಣಿಗೆ/literature/book/2009/0529-foreword-to-jaalatarangini-by-cn-ramachandran.htmlದಟ್ಸ್ ಕನ್ನಡ ಅಂತರ್ಜಾಲ ತಾಣದಲ್ಲಿ 'ಜಾಲತರಂಗ' ಅಂಕಣದಲ್ಲಿ ಪ್ರಕಟವಾದ ಡಾ. ಮೈಶ್ರೀ ನಟರಾಜ್ ಅವರ 55 ವಿಭಿನ್ನ ಲೇಖನಗಳ ಸಂಕಲನವೇ 'ಜಾಲತರಂಗಿಣಿ'. ಈ ಪುಸ್ತಕ ಮೇ 30 ಮತ್ತು 31ರಂದು ಅಮೆರಿಕಾದಲ್ಲಿ ನಡೆಯುತ್ತಿರುವ 4ನೇ ವಸಂತ ಸಾಹಿತ್ಯೋತ್ಸವದಲ್ಲಿ ಬಿಡುಗಡೆಯಾಗುತ್ತಿರುವ ಪುಸ್ತಕಗಳಲ್ಲೊಂದು. ನಟರಾಜ್ ಅವರನ್ನು ಪ್ರತ್ಯಕ್ಷ ಕಂಡಿರದಿದ್ದರೂ ಖ್ಯಾತ ಲೇಖಕ, ಪ್ರಾಧ್ಯಾಪಕ, ವಿಮರ್ಶಕರಾದ ಡಾ. ಸಿಎನ್ ರಾಮಚಂದ್ರನ್ ಅವರು 36980http://kannada.oneindia.com/img/2009/05/29-jaalatarangini1.jpg108579ಅಂಕಣಕಾರಡಾ. ಕುವಲಯಶ್ಯಾಮ ಶರ್ಮಾ-ಕೆಲವು ನೆನಪುಗಳು/column/gv/2009/0926-writer-publisher-friend-ks-sharma-75.htmlಸ್ವಾತಂತ್ರ್ಯ ಸೇನಾನಿ, ವೇದವಿದ್ವಾಂಸ, ಗ್ರಂಥಕರ್ತ, ಮುದ್ರಕ, ಪ್ರಕಾಶಕ ಮೊದಲಾದ ಮುಖಗಳನ್ನು ಪಡೆದ ಎಂಬಾರ್ ಭಾಷ್ಯಾಚಾರ್ಯ ಹಾಗೂ ಅವರ ಧರ್ಮಪತ್ನಿ ಸಂಪತ್ತಮ್ಮ ಅವರ ಪುತ್ರನಾಗಿ 30 ಸೆಪ್ಟೆಂಬರ್, 1934ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನಿಸಿದ ಕುವಲಯಶ್ಯಾಮ (ಡಾ|ಕೆ.ಎಸ್.ಶರ್ಮಾ) ಅವರಿಗೆ 75 ವರ್ಷ ತುಂಬಿದ ಸಂಭ್ರಮ. ಸಮೀಪದವರಿಗೆಲ್ಲ, ಅಷ್ಟೇ ಏಕೆ ಇವರ ಸಂಪರ್ಕದಲ್ಲಿ ಬಂದವರೆಗೆಲ್ಲ, ಇವರೊಬ್ಬ ಮಿತ್ರ, ತತ್ವಜ್ಞಾನಿ, ಮಾರ್ಗದರ್ಶಿಯಾಗಿದ್ದಾರೆ. ಹಾಗೆ ನೋಡಿದರೆ 39394http://kannada.oneindia.com/img/2009/09/26-ks-sharma1.jpg108579ಅಂಕಣಕಾರಉತ್ತಮ ವಿದ್ಯಾರ್ಥಿ ಆದರ್ಶ ಶಿಕ್ಷಕ ಡಾ. ಕೆಎಸ್ ಶರ್ಮಾ/column/gv/2009/1003-writer-publisher-friend-ks-sharma-75.htmlಕೆಎಸ್. ಶರ್ಮಾ ಅವರ ಶಿಕ್ಷಣ ಮುಂದುವರೆಯಿತು. ನಾನು ಪ್ರತಿ ತಿಂಗಳು ರೂ.75 ಮ.ಆ. ಮೂಲಕ ಕಳಿಸತೊಡಗಿದೆ. ಅವರಿಗೆ ಸಾಲಕೊಟ್ಟ ನಾರಾಯಣರಾಯರು ಅವರನ್ನು ಒಮ್ಮೆ ಪೇಟೆಯಲ್ಲಿ ಸಂಧಿಸಿದಾಗ ಮನೆಯ ಕಡೆಗೆ ಬರಲು ಕರೆದರು. ಒಂದು ರವಿವಾರ ಮುಂಜಾನೆ ಅವರ ಮನೆಗೆ ಹೋದರು. ಅಭ್ಯಾಸ ಚೆನ್ನಾಗಿ ಸಾಗಿದೆ ಅಂದರು. ಆರ್ಥಿಕ ಸಹಾಯಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ಅವರ ಮಕ್ಕಳು ಅಭ್ಯಾಸ ಮಾಡುತ್ತಿದ್ದರು. 39483http://kannada.oneindia.com/img/2009/10/03-ks-sharma-gv-kulkarni1.jpgnews"> 'ಕಾಡಿನ' ಮಕ್ಕಳ ಕಾಡುವ ದಿನಚರಿ | Trekking is fun for us, not for them - 'ಕಾಡಿನ' ಮಕ್ಕಳ ಕಾಡುವ ದಿನಚರಿ - Kannada Oneindia

'ಕಾಡಿನ' ಮಕ್ಕಳ ಕಾಡುವ ದಿನಚರಿ

ನಮ್ಮ ಜೊತೆ ನಗುನಗುತ್ತ, ಅದೂ ಇದೂ ಹರಟುತ್ತ, ನಾವು ಹೇಳುವ ನಗರದ ಕಥೆಗಳನ್ನು ಬೆರಗಿನಿಂದ ಕೇಳುತ್ತ ನಿಷ್ಕಲ್ಮಶ ನಗು ನಗುವ ಅವರುಗಳನ್ನ ನೋಡಿ ಹೊಟ್ಟೆಕಿಚ್ಚಾಯಿತು ನನಗೆ. ಇತ್ತೀಚಿಗೆ ಪ್ರಾಮಾಣಿಕವಾಗಿ ನಗುವುದೂ ಮರೆತು ಹೋಗಿದೆಯಲ್ಲ!

* ಶ್ರೀನಿಧಿ ಡಿ.ಎಸ್.

"ದಿನಕ್ಕೆಷ್ಟು ಸಂಬಳ ನಿನಗೆ?" ಸುಮ್ಮನೆ ಕೇಳಿದೆ ಆತನ ಬಳಿ, ಹೋಗುವ ದಾರಿ ಸಾಗಲು ಏನಾದರೂ ಮಾತನಾಡಬೇಕಿತ್ತು.
"125 ರೂಪಾಯಿ" ಥಟ್ಟಂತ ಉತ್ತರ ಕೊಟ್ಟ. ಕಾಡು ದಾರಿ. ತರಗಲೆ ಸರಪರ ಸದ್ದು, ಬಿಟ್ಟರೆ ಹಿಂದೆಲ್ಲೋ ಬರುತ್ತಿರುವ ಸಂಗಡಿಗರ ದನಿ.
"ಸಾಕಾಗತ್ತನೋ ಸಂಬಳ" ಸುಮ್ಮನೆ ಕೇಳಿದೆ- ಅವನ ಕೈಲಿದ್ದ ಕಳ್ಳಭಟ್ಟಿಯ ಬಾಟಲು ನೋಡುತ್ತ. ಹುಂ, ಸಾಕಾಗುತ್ತದೆ, ಆದರೆ 100 ರೂಪಾಯಿ ಕುಡೀಯೋಕೆ ಬೇಕು".
"ಅರೇ, ನೂರು ರೂಪಾಯಿ ಕುಡಿಯೋಕೆ ಬೇಕು ಅಂತೀಯಲ್ಲೋ, ಮತ್ತೆ ಸಾಕಾಗೋದು ಹೇಗೆ ಮಾರಾಯ?"

ಅವನು ಸ್ವಲ್ಪ ಹೊತ್ತು ಮಾತಾಡದೇ ಹಾಗೇ ಮುಂದುವರಿಯುತ್ತಿದ್ದ. ನಾನು ಅವನ ಯಮವೇಗಕ್ಕೆ ನನ್ನನ್ನು ಹೊಂದಿಸಿಕೊಳ್ಳಲು ಪ್ರಯತ್ನ ಮಾಡುತ್ತ ಜೋರಾಗಿ ಹೆಜ್ಜೆ ಹಾಕಿದೆ.

ನಮಗೊಂದಿಷ್ಟು ಜನಕ್ಕೆ ಚಾರಣದ ಹುಚ್ಚು. ತಿಂಗಳಿಗೆ ಎರಡು ತಿಂಗಳಿಗೆ ಒಂದು ಬಾರಿಯಾದರೂ ಬೆಟ್ಟ-ಗುಡ್ಡ, ನದಿಕೊಳ್ಳ ಅಂತ ಓಡಾಡದಿದ್ದರೆ, ಉಂಡ ಅನ್ನ ಕರಗುವುದಿಲ್ಲ, ಸರಿ ನಿದ್ರೆ ಬರುವುದಿಲ್ಲ. ಹೀಗಾಗಿ, ಎಲ್ಲ ಮಾತಾಡಿಕೊಂಡು, ಎಂದಿನಂತೆ ಯಾವುದೋ ದೂರದೂರಿಗೆ, ಯಾವುದೋ ಬೆಟ್ಟ ಹತ್ತಲು ಹೋಗಿದ್ದೆವು. ಬೆಟ್ಟದ ಕೆಳಗಿನೂರಿನ ಇಬ್ಬರು ಯುವಕರು ನಮ್ಮ ಜೊತೆಗೆ ಬಂದಿದ್ದರು, ಗೈಡುಗಳಾಗಿ. ಐದಾರು ತಾಸು ನೆತ್ತಿಸುಡುವ ಬಿಸಿಲು ಮತ್ತು ಸುಸ್ತು. ಅವರಿಬ್ಬರು ಉತ್ಸಾಹ ತುಂಬದಿದ್ದರೆ, ನಾವ್ಯಾರು ಮೇಲೆ ಹತ್ತಲು ಸಾಧ್ಯವೇ ಇರಲಿಲ್ಲ.

ನನ್ನ ಜೊತೆಗೆ ಮಾತಾಡುತ್ತಿದ್ದವನ ಹೆಸರನ್ನು ರಾಜೀವ ಅಂತಿಟ್ಟುಕೊಳ್ಳಿ. ಮೂವತ್ತು ವರ್ಷವಿರಬಹುದು. ಚುರುಕು ನಡಿಗೆ, ತೇಜಸ್ವಿ ಕಾದಂಬರಿಯಿಂದ ಸಟಕ್ಕನೆ ಹೊರಗೆದ್ದು ಬಂದ ಹಾಗಿನವನು. ರಾತ್ರಿ ಕುಡಿಯದಿದ್ದರೆ ಆಗದು ಅಂತ, ಬೆಟ್ಟದ ಮತ್ತೊಂದು ತುದಿ ಇಳಿದು, 2-2 ತಾಸು ನಡೆದು ಕಳ್ಳಭಟ್ಟಿ ತಂದುಕೊಂಡವನು.

ರಾತ್ರಿಯಿಡೀ ಬೆಟ್ಟದ ಶಿಖರದಲ್ಲಿ ಕಳೆದು ಮಾರನೇ ದಿನ ಬೆಳಗ್ಗೆ ಅವರೋಹಣದಲ್ಲಿ ತೊಡಗಿದ್ದಾಗ ಈ ರಾಜೀವನ ಬಳಿ ಮಾತಿಗೆ ತೊಡಗಿದ್ದೆ. ಮೈ ಕೈ ನೋವು ನಮಗೆಲ್ಲ. ಈ ಯುವಕರಿಬ್ಬರು ಮಾತ್ರ ಗಟ್ಟಿಯಾಳುಗಳು. ಲವಲವಿಕೆಯಿಂದ ಕುಣಿಯುತ್ತ, ಆರಾಮಾಗಿ ಬರುತ್ತಿದ್ದರು ನಮ್ಮ ಜೊತೆ, ಕಳ್ಳಭಟ್ಟಿ ಕಾರಣವಿದ್ದರೂ ಇರಬಹುದು, ಬೇರೆ ವಿಚಾರ.

ರಾಜೀವನ ಬಳಿ ಮತ್ತೆ ಕೇಳಿದೆ, ನೂರು ರೂಪಾಯಿಯ ಖರ್ಚು ಕುಡೀಯೋಕೆ ಆದರೆ, ಹೊಟ್ಟೆ-ಬಟ್ಟೆಗೇನೋ ಅಂತ. ಅಯ್ಯ, ಅದೇನು ದೊಡ್ಡ ವಿಚಾರ ಅನ್ನುವ ಹಾಗೆ ಒಮ್ಮೆ ಹಿಂತಿರುಗಿ ನೋಡಿದವನೇ ತಾನು ಮತ್ತು ತನ್ನಂತವರು ಹೇಗೆ ಬದುಕುತ್ತಿದ್ದೇವೆ ಅನ್ನುವುದನ್ನು ವಿಸ್ತಾರವಾಗಿ ಹೇಳಿದ.

ಅದೇನೋ ಮರದ ಎಣ್ಣೆಯಂತೆ, ಕಿಲೋಗೆ 500 ರೂಪಾಯಿ, ವಾರದಲ್ಲಿ ಒಂದು ದಿನ ನಾಲಾರು ಜನ ಸೇರಿ ಕಾಡಲೆದು, ಎಣ್ಣೆಮರ ಹುಡುಕಿ, 3-4 ಕೇಜಿ ಎಣ್ಣೆ ಸಂಪಾದಿಸುತ್ತಾರಂತೆ,(ಕೊನೆಗೂ ಆ ಮರದ ಹೆಸರು ಹೇಳಲಿಲ್ಲ ಆಸಾಮಿ) ಇನ್ನು ಉಳಿದದಿನ ಧೂಪ, ಸೀಗೇಕಾಯಿ, ದಾಲ್ಚಿನ್ನಿ, ಜೇನು, ರಾಮಪತ್ರೆ- ಹೀಗೆ ಒಂದಲ್ಲ ಎರಡಲ್ಲ- ಕೇಜಿ 10ರಿಂದ ಹಿಡಿದು 300ರವರೆಗೆನ ಉತ್ಪನ್ನಗಳು ಕಾಡಲ್ಲೇ ಲಭ್ಯ. ಇವುಗಳನ್ನೆಲ್ಲ ಕಷ್ಟ ಪಟ್ಟು ಒಟ್ಟು ಮಾಡಿ ಮಾರಿದರೆ, ಆರಾಮಾಗಿ ಜೀವನ ಸಾಗಿಸಲು ಸಾಧ್ಯವಾದಷ್ಟು ದುಡ್ಡು ಗ್ಯಾರೆಂಟಿ. ಇವ್ಯಾವುದೂ ಇಲ್ಲದೇ ಹೋದರೆ, ದಿನಗೂಲಿ ಕೆಲಸ-125ರೂಪಾಯಿಗಳು.

ಹೇಗೆ ದುಡ್ಡು ಮಾಡಬೇಕೆಂಬುದನ್ನು ಚೆನ್ನಾಗಿ ಅರಿತಿರುವ ಆತನಿಗೆ, ಇಷ್ಟೆಲ್ಲ ಆದರೂ ಕಾಲದೇಶಗಳ ಬಗೆಗಿನ ಪರಿವೆಯೇ ಇರಲಿಲ್ಲ ಎಂಬುದು ನಮಗೆ ನಮ್ಮ ಪ್ರಯಾಣದ ಆರಂಭದಲ್ಲೇ ಗೊತ್ತಾಗಿತ್ತು. ಕಿಲೋಮೀಟರು ಎಂಬ ಮಾಪನದ ಅರಿವೇ ರಾಜೀವನಿಗೆ ಇರಲಿಲ್ಲ. ಹತ್ತಿರದ ದೊಡ್ಡ ಊರಿಗೆ 8 ರೂಪಾಯಿಯ ದೂರ, ಮತ್ತೂ ದೊಡ್ಡ ಪಟ್ಟಣಕ್ಕೆ 50 ರೂಪಾಯಿ ದೂರ!

ಜಗತ್ತಿನ ಇತರ ಯಾವುದೇ ಆಗುಹೋಗುಗಳ ಬಗೆಗಿನ ಚಿಂತೆ ರಾಜೀವನಿಗಾಗಲೀ, ಮತ್ತೊಬ್ಬನಿಗಾಗಲೀ ಅಗತ್ಯವೇ ಇರಲಿಲ್ಲ. ರಾಜೀವನ ಅಂದಾಜಲ್ಲಿ ಪ್ರಧಾನಮಂತ್ರಿ ಇನ್ನುಕೂಡ ವಾಜಪೇಯಿಯೇ. ನಾನು ಅವನನ್ನು ತಿದ್ದ ಹೊರಟರೂ, ಇರ್ಲಿ ಬಿಡಿ- ಯಾರಾದರೇನು ಅನ್ನುವ ಧಾಟಿಯ ಉತ್ತರ ಬಂತು.ಸುಮ್ಮನಾದೆ.

ಆ ಪುಟ್ಟ ಊರಿನಲ್ಲಿ ಬದುಕುವ ಅವರುಗಳಿಗೆ, ವಾರದಕೊನೆಯಲ್ಲಿ ಬೆಂಗಳೂರಿನಂತಹ ನಗರಗಳಿಂದ ಬರುವ ಬೆಟ್ಟ ಹತ್ತುವವರು, ಮನರಂಜನೆ ಮತ್ತು ಆದಾಯದ ಇನ್ನೊಂದು ಮೂಲವೂ ಹೌದು. ನಮಗೆ ಅವರ ಊರೆದುರಿನ ಬೆಟ್ಟ ಒಂದು ಚಾರಣಯೋಗ್ಯ ಸ್ಥಳ. ಅವರಿಗೋ, ಅದೊಂದಕ್ಕೆ ಬಿಟ್ಟು ಮತ್ತೆ ಉಳಿದೆಲ್ಲಕ್ಕೂ ಯೋಗ್ಯ. ಬ್ಯಾಗು ಹೊತ್ತು ಏದುಸಿರು ಬಿಡುತ್ತ ಸಾಗುವ ನಾವುಗಳು ಅವರ ಕಣ್ಣಿಗೆ ಪೆಕರಗಳು. ಏನೇ ಆದರೂ, ನಮ್ಮ ಜೊತೆ ನಗುನಗುತ್ತ, ಅದೂ ಇದೂ ಹರಟುತ್ತ, ನಾವು ಹೇಳುವ ನಗರದ ಕಥೆಗಳನ್ನು ಬೆರಗಿನಿಂದ ಕೇಳುತ್ತ ನಿಷ್ಕಲ್ಮಶ ನಗು ನಗುವ ಅವರುಗಳನ್ನ ನೋಡಿ ಹೊಟ್ಟೆಕಿಚ್ಚಾಯಿತು ನನಗೆ.

ಇತ್ತೀಚಿಗೆ ಪ್ರಾಮಾಣಿಕವಾಗಿ ನಗುವುದೂ ಮರೆತು ಹೋಗಿದೆಯಲ್ಲ!

ಪೂರಕ ಓದಿಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+