ಕನ್ನಡವನ್ನು ಹಂಚಿ ಸವಿಯಲು ಹೊಸ ಫೇಸ್‌ಬುಕ್ ಆಪ್
ಹೀಗಿದೆ ಇಂದಿನ ಜಗತ್ತು. ಹಲೋ ಹಾಯ್ ಬಾಯ್ ನಿಂದ ಹಿಡಿದು ಗುಡ್ ಮಾರ್ನಿಂಗ್, ಗುಡ್ ನೈಟ್‌ವರೆಗೆ ಎಲ್ಲ ಚಟುವಟಿಕೆಗಳು ಇಂದು ಸಾಮಾಜಿಕ ತಾಣದಲ್ಲಿ ನಡೆಯುತ್ತಿವೆ. ಯಾವುದೇ ಪೇಪರಿನಲ್ಲಿ, ಟಿವಿಯಲ್ಲಿ ಕಾಣದಿರುವ ಘಟನೆಗಳು, ವರದಿಗಳು ಫೇಸ್‌ಬುಕ್‌ನಲ್ಲಿ ಪ್ರತ್ಯಕ್ಷವಾಗಿರುತ್ತವೆ. ಒಂದು ರೀತಿ ಈಮೇಲ್‌ಗಿಂತ ವೇಗವಾಗಿ ಮಾಹಿತಿಗಳು ಇಂದು ಫೇಸ್‌ಬುಕ್ಕಿನಲ್ಲಿ ಹರಿದಾಡುತ್ತಿವೆ.
ಇದು ಯಾವ ಮಟ್ಟಕ್ಕೆ ಬಂದು ತಲುಪಿದೆಯೆಂದರೆ, "ಮಗಾ ಎಲ್ಲಾರೂ ಕಾಯ್ತಿದ್ದಾರೆ ಬೇಗನೆ ಊಟಕ್ಕೆ ಬಾರೋ" ಎಂದು ತಂದೆ ಒಂದು ಕೋಣೆಯಲ್ಲಿರುವ ಡೆಸ್ಟ್‌ಟಾಪ್‌ನಿಂದ ಇನ್ನೊಂದು ಕೋಣೆಯಲ್ಲಿ ಕದಹಾಕಿ ಕುಳಿತು ಫೇಸ್‌ಬುಕ್ ಲೋಕದಲ್ಲಿ ಕಳೆದುಹೋಗಿರುವ ಮಗನನ್ನು ಎಚ್ಚರಿಸಲು ಸಂದೇಶ ರವಾನಿಸಿರುತ್ತಾನೆ. ಇದು ಉತ್ಪ್ರೇಕ್ಷೆಯ ಸಂಗತಿಯಲ್ಲ.
ಹೀಗಿರುವ ವರ್ಚುವಲ್ ಲೋಕದಲ್ಲಿ, ಅನೇಕರು ಅನೇಕ ವೆಬ್‌ಸೈಟುಗಳಲ್ಲಿ ಬರೆದಿರುವ ಲೇಖನಗಳು ಹರಿದಾಡುತ್ತಿರುತ್ತವೆ. ಅವನ್ನು ನಮ್ಮಷ್ಟಕ್ಕೆ ನಾವು ಓದಿ ಮುಗಿಸದೆ ಸ್ನೇಹಿತರಿಗೂ ಹಂಚಬೇಕು. ಆದರೆ, ಇನ್ನು ಮುಂದೆ ಒನ್ಇಂಡಿಯಾ ಕನ್ನಡ ಪೋರ್ಟಲ್ಲಿನಲ್ಲಿ ಪ್ರಕಟವಾದ ಲೇಖನಗಳನ್ನು ಫೇಸ್ ಬುಕ್ ಮೆಸೇಜ್ ಬಾಕ್ಸ್ ಮುಖಾಂತರ ಕಳಿಸುವ ಗೋಜಿಗೆ ಹೋಗದೆ ಹೊಸದಾಗಿ ಬಿಡುಗಡೆಯಾಗಿರುವ ಫೇಸ್‌ಬುಕ್ ಆಪ್ ನಿಮ್ಮ ಬ್ರೌಸರ್‌ನಲ್ಲಿ ಅಳವಡಿಸಿಕೊಂಡರೆ ಆಯಿತು.
ನಿಮ್ಮ ಫೇಸ್‌ಬುಕ್ ತಾಣಕ್ಕೆ ಬರುವ ಸಾವಿರಾರು ಕನ್ನಡಿಗರಿಗೆ ಅವರಿದ್ದಲ್ಲಿಯೇ ಒನ್ಇಂಡಿಯಾ ಕನ್ನಡದಲ್ಲಿ ಪ್ರಕಟವಾಗಿರುವ, ನಿಮಗಿಷ್ಟವಾದ ಲೇಖನಗಳನ್ನು, ಫೋಟೋಗಳನ್ನು ಹಂಚಬಹುದು. ಈ ಒನ್ಇಂಡಿಯಾ ಫೇಸ್‌ಬುಕ್ ಆಪ್ ಅನ್ನು ಇನ್‌ಸ್ಟಾಲ್ ಮಾಡುವುದು ಕೂಡ ತೀರ ಸುಲಭ. ಕೆಳಗೆ ತಿಳಿಸಿರುವ ಹಂತಗಳನ್ನು ಪಾಲಿಸಿದರೆ ಸುಲಭವಾಗಿ ಫೇಸ್‌ಬುಕ್ ಆಪ್ ಇನ್‌ಸ್ಟಾಲ್ ಮಾಡಬಹುದು.
1) ಲೇಖನದ ಶೀರ್ಷಿಕೆಯ ಮೇಲ್ಭಾಗದಲ್ಲಿ ಕಾಣುವ Enable Social Reader ಬಟನ್ ಕ್ಲಿಕ್ ಮಾಡಿರಿ.
2) ಆಗ ತೆರೆದುಕೊಳ್ಳುವ ವಿಂಡೋದಲ್ಲಿ ಫೇಸ್‌ಬುಕ್ ಲಾಗಿನ್, ಪಾಸ್‌ವರ್ಡ್ ಹಾಕಿ ಫೇಸ್‌ಬುಕ್ ಸೇರಿಕೊಳ್ಳಿರಿ.
3) ನಿಮ್ಮ ಫೇಸ್‌ಬುಕ್ ಪುಟದಲ್ಲಿ ಒನ್ಇಂಡಿಯಾ ಫೇಸ್‌ಬುಕ್ ಆಪ್ ಇನ್‌ಸ್ಟಾಲ್ ಆಗಲು Allow ಬಟನ್ ಒತ್ತಿರಿ.
ಇಷ್ಟು ಮಾಡಿದರೆ ಸಾಕು, ನೀವು ನಮ್ಮ ಪೋರ್ಟಲ್‌ನಲ್ಲಿ ವೀಕ್ಷಿಸುವ ಲೇಖನಗಳು ಯಾವುದೇ ಶ್ರಮವಿಲ್ಲದೆ ನಿಮ್ಮ ಸ್ನೇಹಿತರಿಗೂ ಓದಲು ಲಭ್ಯವಾಗುತ್ತವೆ. ಕನ್ನಡವನ್ನು ಅಂತರ್ಜಾಲದಲ್ಲಿ ಸ್ನೇಹಿತರು, ಬಂಧುಗಳೊಂದಿಗೆ ಹಂಚಿಕೊಳ್ಳಲು ಇದಕ್ಕಿಂತ ಉತ್ತಮವಾದ ಸಲಕರಣೆ ಬೇಕೆ? ಇನ್ನೇಕೆ ತಡ, ಒನ್ಇಂಡಿಯಾ ಫೇಸ್‌ಬುಕ್ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಿರಿ. ಹಾಗೆಯೆ, ನಿಮ್ಮ ಸ್ನೇಹಿತರನ್ನೂ ಈ ಆಪ್ ಬಳಸಲು ಆಹ್ವಾನಿಸಿ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ













Click it and Unblock the Notifications