ಚುನಾವಣಾ ಹಾಸ್ಯೋತ್ಸವ, ಉಚಿತ ಪ್ರವೇಶ

Rajesh Jain, Emergic blog
ಭಾರತದಲ್ಲಿ ಚುನಾವಣೆ ಘೋಷಣೆಯಾದರೆ ತಮಾಷೆಗೆ ಬರವಿರುವುದಿಲ್ಲ. ಮತದಾರ ಯಾವ ರೀತಿ ಚಿಂತಿಸುತ್ತಾನೆ ಎಂಬ ಬಗ್ಗೆ ಕಿಂಚಿತ್ ತಿಳಿವಳಿಕೆಯಿಲ್ಲದಿದ್ದರೂ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡಲು ಶುರು ಮಾಡುತ್ತಾರೆ.

ಮತ ಹಾಕುವವರಿಗೆ ಎಲ್ಲ ರೀತಿ ಆಸೆ ತೋರಿಸಿ ಸೆಳೆಯಲು ಯತ್ನಿಸುತ್ತಾರೆ. ರಾಜಕೀಯ ಪರಿಣತರು ಹೇಳುವಂತೆ ಚುನಾವಣಾ ಕಣವೆಂಬುದು ರಾಜಕೀಯ ನಾಟಕಶಾಲೆ ಮತ್ತು ಪ್ರಜಾಪ್ರಭುತ್ವದ ಸಂಗಮ. ಪ್ರತಿ ರಾಜ್ಯದಲ್ಲಿ ನಡೆಯುವ ಚುನಾವಣೆಯನ್ನು ಒಂದಿಲ್ಲೊಂದು ಕಾರಣಕ್ಕೆ ಸೆಮಿ ಫೈನಲ್ ಎಂದೇ ಪರಿಗಣಿಸಲಾಗುತ್ತದೆ.

ಸೋ, ಮತ್ತೊಂದು ಚುನಾವಣಾ ಹಾಸ್ಯೋತ್ಸವ ನಮ್ಮ ಮುಂದೆ ಬಂದು ನಿಂತಿದೆ. ಮಾರ್ಚ್ 6ರಂದು ಫಲಿತಾಂಶ ಪ್ರಕಟಣೆಯಾಗುವವರೆಗೆ ರಾಷ್ಟ್ರಮಟ್ಟದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳು ಹೊರಬೀಳಲಾರವು.

ಉತ್ತರ ಪ್ರದೇಶದ ಚುನಾವಣಾ ರಂಗದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಯಾವ ರೀತಿ ಜಾತಿಯ ದಾಳಗಳನ್ನು ರಾಜಕೀಯ ಬಣಗಳು ಉರುಳಿಸುತ್ತಿವೆ ಮತ್ತು ಚುನಾವಣಾ ಗಾಳಿ ಎತ್ತ ಬೀಸುತ್ತಿದೆ ಎಂಬ ಬಗ್ಗೆ ಅನೇಕ ಸುದ್ದಿಗಳು ಪ್ರಕಟವಾಗುತ್ತಿವೆ.

ಆದರೆ, ಉತ್ತರ ಪ್ರದೇಶದ ಜೊತೆ ಹೋಲಿಸಿದರೆ ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾಗಳು ಅಷ್ಟೊಂದಿ ಪ್ರಾಮುಖ್ಯತೆ ಪಡೆದಿಲ್ಲದಿದ್ದರೂ ಅವು ಕೂಡ ಮುಖ್ಯವೆ. ಇಂಥ ಅನೇಕ ಚುನಾವಣೆಗಳನ್ನು ಭಾರತ ಕಂಡಿದೆ.

ಈಗ ಪ್ರಜೆಗಳು ಮತ್ತೆ ಮತ ಹಾಕಲಿದ್ದಾರೆ. ಒಂದೊಂದು ರಾಜ್ಯದಲ್ಲಿಯೂ ವಿಭಿನ್ನ ಸನ್ನಿವೇಶ, ವಾತಾವರಣವಿದೆ. ಹೀಗಾಗಿ ಗೆಲುವಿನ ಗಾಳಿ ಇಂಥದೇ ಪಕ್ಷದತ್ತ ಬೀಸಲಿದೆ ಎಂದು ಊಹಿಸುವುದು ಕಷ್ಟ. [ರಾಜೇಶ್ ಜೈನ್ ಬ್ಲಾಗ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+