• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಗೋ ನೋಡು, ಆರ್‌ಲ್ಯಾಂಡೋ ...!

By Super
|

ಫ್ಲಾರಿಡಾದ ಶ್ರೀಗಂಧ ಕನ್ನಡ ಕೂಟ ವ್ಯವಸ್ಥೆಗೊಳಿಸಿರುವ ವಿಶ್ವ ಕನ್ನಡ ಸಮ್ಮೇಳನ 2004ರ ಮೊದಲ ಮಾತುಗಳು.

*ಎಸ್ಕೆ ಶಾಮಸುಂದರ

Dr.Renuka Ramappa, President, Srigandha Kannada Kootaಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನ ಮುಕ್ತಾಯವಾಗಿ ಇವತ್ತಿಗೆ ಎಂಟು ತಿಂಗಳ ಮೇಲೆ 17 ಒಪ್ಪತ್ತುಗಳು ಕಳೆದಿದೆ. ಆ ಸಮ್ಮೇಳನದ ಕಡೆಯ ದಿನ ಡಾ. ರೇಣುಕಾ ರಾಮಪ್ಪ ಅವರು 2003ರ ಸಮ್ಮೇಳನದ ಅಧ್ಯಕ್ಷ ಅಮರ್‌ನಾಥ್‌ ಗೌಡರಿಂದ ‘ ಕನ್ನಡ ಜ್ಯೋತಿ’ ಯನ್ನು ಸ್ವೀಕರಿಸಿದ ನಂತರ ನಾನು www.akkaonline.org ವೆಬ್‌ ಸೈಟಿಗೆ ಭೇಟಿ ಕೊಟ್ಟಿರಲಿಲ್ಲ. ಯಾಕೋ ಇವತ್ತು ಮತ್ತೆ ನೆನಪಾಯಿತು. ಅಕ್ಕ ವೆಬ್‌ಪುಟಗಳನ್ನು ತೆರೆದು ನೋಡಿದರೆ ಅಲ್ಲಿ ಏನೆಲ್ಲ ಬದಲಾವಣೆಗಳು ಕಾಣುತ್ತಿವೆ!

ಭೇಷ್‌. ಮೊದಲಿಗೆ ನನ್ನ ಕಣ್ಣ ಸೆಳೆದದ್ದು ಫ್ಲಾರಿಡಾ ಕನ್ನಡ ಕೂಟದ ಲಾಂಛನ ಗಂಡಭೇರುಂಡ. ಎರಡು ತಲೆಯ ಈ ಪೌರಾಣಿಕ ಪಕ್ಷಿಯ ಚಿತ್ರವನ್ನು ಕಲಾವಿದರು ಚೆನ್ನಾಗಿ ಬಿಡಿಸಿದ್ದಾರೆ. ಚಿತ್ರದ ಕಲಾನೈಪುಣ್ಯತೆಗೆ ಬೆರಗುಹೋದ ನಾನು ಆನಂತರ, ಮುಖಪುಟದಲ್ಲೇ ಎದ್ದು ಕಾಣುತ್ತಿರುವ ಸಮ್ಮೇಳನ ಆಯೋಜಕರ ಮೊದಲ ಮಾತುಗಳು ಓದುತ್ತಾ ಕುಳಿತೆ. ಮೇಲಿನಿಂದ ಕೆಳಗೆ ಕಣ್ಣಾಡಿಸುವ ಹೊತ್ತಿಗೆ ಆರ್‌ಲ್ಯಾಂಡೋ ಸಮ್ಮೇಳನ ಸಂಭ್ರಮದ ಮೊದಲ ಅಧ್ಯಾಯಿಕೆಯನ್ನು ಓದಿ ಮುಗಿಸಿದ ಅನುಭವ ಆಯಿತು. 2004ರ ವಿಶ್ವ ಕನ್ನಡ ಸಮ್ಮೇಳನದ ಆನ್‌ಲೈನ್‌ ಮಾಹಿತಿಯಲ್ಲಿ ನಾನು ಕಂಡ ಮೊದಲ ಸಮಾಚಾರವನ್ನು ನಿಮಗಾಗಿ ಇಲ್ಲಿ ಕನ್ನಡದಲ್ಲಿ ಕೊಡುತ್ತಿದ್ದೇನೆ.

*

2004 ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ನಿಮಗೆಲ್ಲ ಸ್ವಾಗತ . ಈ ಸಮ್ಮೇಳನದ ಆತಿಥ್ಯ ವಹಿಸುತ್ತಿರುವುದಕ್ಕೆ ಫ್ಲಾರಿಡಾದ ಶ್ರೀಗಂಧ ಕನ್ನಡ ಕೂಟ ಹೆಮ್ಮೆ ಪಡುತ್ತದೆ. ಸಮ್ಮೇಳನವನ್ನು ಫ್ಲಾರಿಡಾದ ರಮಣೀಯ ಆರ್‌ಲ್ಯಾಂಡೋ ನಗರದಲ್ಲಿ ವ್ಯವಸ್ಥೆಗೊಳಿಸಲಾಗಿದೆ.

ಸಮ್ಮೇಳನ ನಡೆಯುವ ದಿನಾಂಕ : ಸೆಪ್ಟೆಂಬರ್‌ 3-5, 2004. ಈ ದಿನಾಂಕವನ್ನು ದಯವಿಟ್ಟು ನಿಮ್ಮ ಕ್ಯಾಲೆಂಡರ್‌ನಲ್ಲಿ ಗುರುತು ಹಾಕಿಕೊಳ್ಳಿ.

ನಿವೇದನೆ

Gaylord Palms Resort at Orlando Venue of WKC 2004‘ವಿಶ್ವ ಕನ್ನಡ ಸಮ್ಮೇಳನ- 2004’ರ ಸಮ್ಮೇಳನ ಸಮಿತಿ ನಿಮಗೆಲ್ಲ ಈ ಬೇಸಗೆ ಸಂತೋಷದಾಯಕವಾಗಲೆಂದು ಹಾರೈಸುತ್ತದೆ. ಆರ್‌ಲ್ಯಾಂಡೋದ ಗೇಲಾರ್ಡ್‌ ಪಾಲ್ಮ್ಸ್‌ ರೆಸಾರ್ಟ್‌ನಲ್ಲಿ ಸಮ್ಮೇಳನ ನಡೆಸಬೇಕೆಂದು ಅಂತಿಮವಾಗಿ ತೀರ್ಮಾನವಾಗಿದೆ ಎಂದು ಹೇಳಲು ನಾವು ಹರ್ಷಿಸುತ್ತೇವೆ. ದೊಡ್ಡ ಛಾವಣಿಯ ಈ ಜಾಗೆಯಲ್ಲಿ ಸಮ್ಮೇಳನಕ್ಕೆ ಪೂರಕವಾದ ಕಲಾತ್ಮಕ ವಾತಾವರಣವಿದೆ. ಭಾಗವಹಿಸುವ ಕನ್ನಡಿಗರ ಚಲನಶೀಲತೆ ಇನ್ನಷ್ಟು ಚುರುಕಾಗುವಂಥಾ ಅನುಭವವನ್ನು ಸಮ್ಮೇಳನ ಕಟ್ಟಿ ಕೊಡಲಿದೆ. ಇಂಥಾ ಜಾಗದಲ್ಲಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸೋಣ ಬನ್ನಿ. ಸಮ್ಮೇಳನದ ಜಾಗೆ ಬಗ್ಗೆ ಇನ್ನಷ್ಟು ಮಾಹಿತಿಗೆ ನೋಡಿ- www.gaylordhotels.com.

ಅಕ್ಕ ‘ವಿಶ್ವ ಕನ್ನಡ ಸಮ್ಮೇಳನ- 2004’ನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುವ ಸಲುವಾಗಿ ಈಗಾಗಲೇ ಕೆಲವು ಸಮಿತಿಗಳು ರಚಿತವಾಗಿವೆ. ಸಂಗೀತ, ನೃತ್ಯ, ನಾಟಕ, ಕವಿ ಗೋಷ್ಠಿ, ವಚನಗಳು, ಜಾನಪದ ಕಲೆಗಳು, ಕರ್ನಾಟಕ ಸಂಗೀತ ಮತ್ತಿತರ ಕರ್ನಾಟಕದ ಸಾಂಪ್ರದಾಯಿಕ ಸಾಂಸ್ಕೃತಿಕಗಳು ಸಮ್ಮೇಳನದಲ್ಲಿ ನಡೆಯಲಿವೆ. ಅಲ್ಲದೆ, ವ್ಯಾಪಾರಿ ವಿಚಾರ ಸಂಕಿರಣಗಳು, ಮುಂದುವರೆಯುತ್ತಿರುವ ವೈದ್ಯಕೀಯ ಶಿಕ್ಷಣದ ಪ್ರಾತ್ಯಕ್ಷಿಕೆಗಳು ಮತ್ತು ಕಮ್ಮಟಗಳನ್ನೂ ಯೋಜಿಸಲಾಗುತ್ತಿದೆ.

ವಿವಿಧ ಕ್ಷೇತ್ರಗಳ ಹೆಸರಾಂತ ಕನ್ನಡ ಕಲಾವಿದರು, ಅಮೆರಿಕಾದ ಮೂವತ್ತಕ್ಕೂ ಹೆಚ್ಚು ಕನ್ನಡ ಕೂಟಗಳು, ಕೆನಡಾ ಹಾಗೂ ಜಗತ್ತಿನ ಮೂಲೆಮೂಲೆಗಳ ಪ್ರತಿಭಾನ್ವಿತರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನಕ್ಕೆ ಹಬ್ಬದ ಮೆರುಗನ್ನು ಹಚ್ಚಲು ರಸದೌತಣ, ಭೂರೀಭೋಜನ ಕೂಡ ಉಂಟು.

ಫ್ಲಾರಿಡಾ ಸಮ್ಮೇಳನ ಯಶಸ್ವಿಯಾಗುವುದಕ್ಕೆ ನಿಮ್ಮ ಸಹಕಾರ ಅತ್ಯಗತ್ಯ. ನಿಮ್ಮ ಸಲಹೆ, ಸೂಚನೆಗಳಿಗೆ ಮುಕ್ತ ಆಹಾನ.

ಕೇವಲ ಆರಂಭಿಕ ಮಾಹಿತಿಗಳನ್ನು ಒಳಗೊಂಡಿರುವ ಅಕ್ಕ ಪುಟಗಳನ್ನು ಆಂಗಿದಾಗ್ಗೆ ಅಪ್‌ಡೇಟ್‌ ಮಾಡುವುದಾಗಿ ವ್ಯವಸ್ಥಾಪಕರು ಬರೆದುಕೊಂಡಿದ್ದಾರೆ. ಸದ್ಯಕ್ಕೆ ನಿಮಗೆ ಇಲ್ಲಿ ದೊರೆಯುವ ಮಾಹಿತಿ ಇಷ್ಟು :

About The Conference-2004

http://www.akkaonline.org/2004/aboutconference.shtml

AKKK 2004 Conference Committees

http://www.akkaonline.org/2004/committee.shtml

Conference Venue

http://www.akkaonline.org/2004/venue.shtml

Registration

http://www.akkaonline.org/2004/registration.shtml

ಅಕ್ಕ ವೆಬ್‌ ಪುಟಗಳಲ್ಲಿ ಇನ್ನೂ ಲಿಂಕ್‌ ಹಾಕದ ಇನ್ನೆರಡು ಪ್ರಕಟಣೆಗಳು ನನ್ನ ಕಣ್ಣಿಗೆ ಬಿತ್ತು.

1) ADVERTISE

on this Website and in the Souvenir

2) SPONSOR

Programs , Events, Artists, Food etc.,

Software Management Group. Inc ಸಿದ್ಧಪಡಿಸಿರುವ 2004ರ ಸಮ್ಮೇಳನದ ವೆಬ್‌ ಪುಟಗಳ Copyright 2003, 2004 AKKA

ಸಮ್ಮೇಳನವನ್ನು ವ್ಯವಸ್ಥೆಗೊಳಿಸಿರುವ ಶ್ರೀಗಂಧ ಕನ್ನಡ ಕೂಟ ಮಾತೃ ಸಂಸ್ಥೆಯ ವೆಬ್‌ ಪುಟಗಳಿಗೆ ಭೇಟಿ ಕೊಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
2004 AKKA conference is hosted by Srigandha Kannada Koota, Florida. Orlando is the venue. A curtain raiser about preparations being made by the organizing committee
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more