• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡಿಗರ ಓಣಿ , ಕಣಿವೆಗಳಲ್ಲಿ ಶಿಶಿರ ಬಂತು ಶಿಶಿರ

By Staff
|
ಕನ್ನಡಿಗರ ಓಣಿ , ಕಣಿವೆಗಳಲ್ಲಿ ಶಿಶಿರ ಬಂತು ಶಿಶಿರ Sampige marada hasirele naduve...

*ಎಸ್ಕೆ. ಶಾಮಸುಂದರ

ನೋಡನೋಡುತ್ತಲೇ ಕ್ರಿಸ್‌ಮಸ್‌ ಮತ್ತು ವರ್ಷಾಂತ್ಯದ ರಜೆ ಕಾಣದಂತೆ ಮಾಯವಾಯಿತು ! ಭಾರತ ಮತ್ತು ಇತರ ದೇಶ ಪ್ರದೇಶಗಳಿಗೆ ರಜಾಪ್ರವಾಸ ತೆರಳಿದ್ದ ಅನೇಕ ಕನ್ನಡಿಗರು ಪುನಃ ತಮ್ಮ ಊರು ಕೇರಿ ಸೇರಿಕೊಂಡರು. ಶಾಲೆ, ಕಾಲೇಜು, ಆಫೀಸಿನ ಜತೆಜತೆಗೆ ಹೊರನಾಡ ಕನ್ನಡಿಗರು ಎಂದಿನಂತೆ ಕನ್ನಡ ಭಾಷೆ, ಸಂಸ್ಕೃತಿಯ ಚಟುವಟಿಕೆಗಳಿಗೆ ಮತ್ತೆ ತೊಡಗಿಕೊಂಡರು.

ಉತ್ತರ ಅಮೆರಿಕಾದ ಅನೇಕ ಕನ್ನಡ ಕೂಟಗಳಲ್ಲಿ ಕನ್ನಡ ಚಟುವಟಿಕೆಗಳು ಗರಿಕೆದರಿದ ಬಗ್ಗೆ ಮಾಹಿತಿಗಳು ನನ್ನತ್ತ ಹರಿದು ಬರುತ್ತಿವೆ. ಅಮೆರಿಕನ್ನಡಿಗರ ಕೆಲವು ಚಟುವಟಿಕೆಗಳ ಸ್ವರೂಪ ವಿವರಿಸುವ ಮುನ್ನ ನಿಮಗೆ ನೆನಪಿಸುತ್ತಿದ್ದೇನೆ :

  • ಪೂರ್ವ ಕರಾವಳಿ ತೀರದ ಕಾವೇರಿ ಕನ್ನಡ ಸಂಘದ ಸಾಹಿತ್ಯಶಾಖೆ ಎಂದು ಕರೆಯಬಹುದಾದ ಭೂಮಿಕಾ ಈ ವರ್ಷದ ಮೊಟ್ಟ ಮೊದಲ ಸಾಹಿತ್ಯಿಕ ಕಾರ್ಯಕ್ರಮವನ್ನು ಜನವರಿ 12 ರಂದು ಮಾಡಿ ಮುಗಿಸಿದೆ. ಕನ್ನಡ ಸಾಹಿತ್ಯ ನಡೆದು ಬಂದ ದಾರಿಯ ಕುರಿತು ವಿಹಂಗಮ ನೋಟವನ್ನು ಆ ಕಾರ್ಯಕ್ರಮದಲ್ಲಿ ಪರಿಚಯಿಸಿದವರು ಹೊಸನಗರದ ಸತೀಶ್‌ ಕುಮಾರ್‌. ಇತ್ತ , ಪಶ್ಚಿಮ ಕರಾವಳಿಯಲ್ಲಿ ಕನ್ನಡ ಸಾಹಿತ್ಯ ಗೋಷ್ಠಿ ತನ್ನ ಮೊದಲ ಕಾರ್ಯಕ್ರಮವನ್ನು ಅದೇ ದಿನ ಅಚ್ಚು ಕಟ್ಟಾಗಿ ನೆರವೇರಿಸಿಕೊಂಡಿತು. ಕನ್ನಡ ಜನಪದದಲ್ಲಿ ಹೆಣ್ಣು ವಿಷಯವನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡು ಉಪನ್ಯಾಸ ನೀಡಿದವರು ಹೊಸಪೇಟೆಯ ಯಲಂಜಿ ಹನುಮಂತ ಶೆಟ್ಟಿ. ಈ ಎರಡೂ ಕಾರ್ಯಕ್ರಮಗಳ ಬಗ್ಗೆ ಆತ್ಮೀಯವಾದ ವರದಿಯನ್ನು ಬರೆದವರು ಅನುಕ್ರಮವಾಗಿ ನಮ್ಮ ಓದುಗ-ಲೇಖಕ ಬಳಗದವರಾದ ಪುರುಷೋತ್ತಮ ಉಡುಪಿ ಹಾಗೂ ವಿಜಯ್‌ ಸನ್ನಿವೇಲ್‌.

ಜಗತ್ತಿನ ಒಂದು ಮೂಲೆಯಲ್ಲಿ ಕುಳಿತ ನಮಗೆ ಕನ್ನಡಿಗರ ವಿಶ್ವ ಭೂಪಟದ ಚಟುವಟಿಕೆಗಳು ತಿಳಿಯಬೇಕಾದರೆ ವರದಿಗಾರರ /ಬರಹಗಾರರ / ಛಾಯಾಚಿತ್ರಕಾರರ ಸೌಜನ್ಯಯುತ ಸೇವೆ ಬಹು ಮುಖ್ಯ. ಮಾಹಿತಿಯನ್ನು ವಿಶ್ವದ ನಾನಾ ಮೂಲೆಗಳಿಗೆ ಪಸರಿಸುವ ನಮ್ಮ ಕೆಲಸಕ್ಕೆ ಈ ಬಗೆಯ ನೆರವು ಅತ್ಯಮೂಲ್ಯವಾದದ್ದು. ಕಾಲಕಾಲಕ್ಕೆ ನಮಗೆ ಲೇಖನ ಚಿತ್ರ ನೆರವು ನೀಡುತ್ತಾ ಬಂದಿರುವ ದಟ್ಸ್‌ಕನ್ನಡ ಕಾಂಟ್ರಿಬ್ಯೂಟರ್ಸ್‌ಗಳಿಗೆ ಮತ್ತೊಮ್ಮೆ ಧನ್ಯವಾದಗಳು.

  • ಲಾಸ್‌ಏಂಜಲಿಸ್‌ ನಗರ ಡೈಮಂಡ್‌ಬಾರ್‌ ಪ್ರದೇಶದ ಕನ್ನಡಿಗರ 2003ರ ಕಲರವ ಆರಂಭವಾಗಿದೆ. ಕನ್ನಡ ಕಾರ್ಯಕ್ರಮ ಆರಂಭವಾಗುತ್ತಿರುವುದು ನಾಟಕೋತ್ಸವದಿಂದ . ಕಳೆದ ವರ್ಷವೂ ನಾಟಕೋತ್ಸವ ಚೆನ್ನಾಗಿ ನಡೆದ ಬಗ್ಗೆ ವರದಿ ಪ್ರಕಟಿಸಿದ ನೆನಪು.

ದಕ್ಷಿಣ ಕ್ಯಾಲಿಫೋರ್ನಿಯ ಕನ್ನಡ ಸಂಘದ ಅಧ್ಯಕ್ಷ ಬೆಟ್ಟದಪುರ ನಾಗರಾಜ್‌ ತಿಳಿಸಿರುವ ಪ್ರಕಾರ ನಾಟಕೋತ್ಸವ ಫೆಬ್ರವರಿ 1 ರಂದು ಹೂವರ್‌ ಮಿಡಲ್‌ ಸ್ಕೂಲ್‌ ಸಭಾಂಗಣದಲ್ಲಿ ಏರ್ಪಾಟಾಗಿದೆ. ಊಟದ ವ್ಯವಸ್ಥೆ ಮಾಡುತ್ತಿರುವುದರಿಂದ ನಾಟಕ ನೋಡಲು ನಿಮ್ಮ ಮನೆಯಿಂದ ಎಷ್ಟು ಜನ ಬರುತ್ತೀರಿ ? ದೊಡ್ಡವರೆಷ್ಟು ? ಮಕ್ಕಳೆಷ್ಟು ? ದಯವಿಟ್ಟು ತಿಳಿಸಬೇಕು ಎನ್ನುವುದು ಅವರ ಕೋರಿಕೆ.

RSVP

B.N. Nagaraj

bnagaraj@aol.com

(714) 441-1420 (Home Tel No)

(714) 441-2716(Fax) or

Jayanthi Ravikumar

Jayanthi5@aol.Com

(714) 838-8505 (Home Tel No)

Last date for receiving RSVP will be Wednesday January 29, 2003.

ಬಾಲಂಗೋಚಿ :

RSVP ಕನ್ನಡ ರೂಪಾಂತರ ಏನು ?

ಉತ್ತರ : ರಂಭ ಸಂತೋಷಂ, ವರೆ, ಪೋ !!

**

ವಾಷಿಂಗ್‌ಟನ್‌ ಡಿಸಿ ಮೆಟ್ರೋ ಪ್ರದೇಶದ ಕಾವೇರಿ ಕನ್ನಡ ಸಂಘದ ಜನವರಿ ಕಾರ್ಯಕ್ರಮದ ವಿವರಗಳು ಈಗಾಗಲೇ ನಮ್ಮಲ್ಲಿ ಪ್ರಟವಾಗಿದೆ. ಕಾರ್ಯಕ್ರಮದ ಸ್ಥೂಲ ವಿವರಗಳು ಇಂತಿದೆ :

  • ಕಾವೇರಿಯ ಸ್ವಯಂಸೇವಕ ಪಡೆ ತಯಾರಿಸಿದ ಎಳ್ಳು ಬೆಲ್ಲ ನಿಮಗಾಗಿ ಕಾಯುತ್ತಿದೆ, ತಪ್ಪದೆ ಬನ್ನಿ.
  • ಶನಿವಾರ ಜನವರಿ 18 ಸಮಯ 1 ಗಂಟೆ.
  • Venue : Loehmanns Twin Cinema, 7291 Arlington Blvd, Falls Church, VA 22042
  • ಮನರಂಜನೆ : ಎಸ್‌. ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ --- ಕುರಿಗಳು ಸಾರ್‌ ಕುರಿಗಳು
  • ಸಿನಿಮಾ ನೋಡುವ ಮುನ್ನ ಇದನ್ನು ಓದಿಕೊಂಡು ಹೋಗಿ !

ಬಾಲಂಗೋಚಿ :

ಎಳ್ಳು ಮೈಗೆ ಒಳ್ಳೆಯದು, ಬೆಲ್ಲ ಬಾಯಿಗೆ ಒಳ್ಳೆಯದು !

**

ಉತ್ತರ ಕ್ಯಾಲಿಫೋರ್ನಿಯ ಕನ್ನಡ ಸಾಹಿತ್ಯ ಗೋಷ್ಠಿಯ ಸದಸ್ಯರಾದ ಮಧು ಕೃಷ್ಣಮೂರ್ತಿ ಅವರು ನಾಟಕದ ಬಗ್ಗೆ ಒಂದು ಕೋರ್ಸ್‌ ಮಾಡುತ್ತಿದ್ದಾರೆ. ಅವರಿಗೆ ನಿಮ್ಮ ನೆರವು ಬೇಕಾಗಿದೆ : ಮಧು ಅವರ ಕೋರಿಕೆಯನ್ನು ಯಥಾವತ್ತಾಗಿ ನಿಮಗೆ ತಲುಪಿಸುತ್ತಿದ್ದೇನೆ. ಅವರಿಗೆ ನೇರವಾಗಿ ಬರೆಯಬಹುದು.

Atmeeya kannada sahitya goshti sadhasyare,

I am asking this question here because I felt you might be able to help me.

I need to do a report on a play and perform a monolog for my theater course. I am looking for an English Play written by an Indian playwright. I have seen CR Simha perform Kailasams play about Ekalavya. Can somebody please help me find this. Atleast part of it will also help.

As a last resort I can use an English play written by other Indians.

Thanks

madhu

madhukanthk@yahoo.com

ಮಧು ಅವರು ಸಿ. ಆರ್‌. ಸಿಂಹ ಅವರಿಗೆ ಪತ್ರ ಬರೆದು ಮಾಹಿತಿ ತಿಳಿಯಬಹುದು ಎನ್ನುವುದು ನನ್ನ ಸಲಹೆ. ಸಿ. ಆರ್‌ ಸಿಂಹ ಅವರ ಇ-ವಿಳಾಸ : crsimha@hotmail.com

ನಾಟಕಕಾರರೂ ಆಗಿರುವ ಟಿವಿ / ಚಲನಚಿತ್ರ ನಿರ್ದೇಶಕ ಟಿ. ಎನ್‌. ಸೀತಾರಾಂ ಅವರನ್ನೂ ಸಂಪರ್ಕಿಸಬಹುದು.

ಸೀತಾರಾಂ ಇ-ವಿಳಾಸ : tns@bhoomikavisions.com

Thank you for choosing Thatskannada.com

shami.sk@greynium.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more