• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವರ್ಷದ ವ್ಯಕ್ತಿಯಾಗಿ ಕೃಷ್ಣ ಗೆದ್ದದ್ದು ಯಾಕೆ ? ಹೇಗೆ ?

By Staff
|
ವರ್ಷದ ವ್ಯಕ್ತಿಯಾಗಿ ಕೃಷ್ಣ ಗೆದ್ದದ್ದು ಯಾಕೆ ? ಹೇಗೆ ? Sampige marada hasirele naduve...

*ಎಸ್ಕೆ ಶಾಮಸುಂದರ

S.K.Shamasundara, Editor, thatskannada.comಸನ್ಮಾನ್ಯ ಓದುಗರಿಗೆ ನಮಸ್ಕಾರ.

‘ವರ್ಷದ ವ್ಯಕ್ತಿ ಕರ್ನಾಟಕ -2002’ ಫಲಿತಾಂಶ ಹೊರಬಿದ್ದಿದೆ. ಸಂಪಾದಕರ ಆಯ್ಕೆ ವಿಭಾಗದಲ್ಲಿ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಮತ್ತು ಓದುಗರ ಆಯ್ಕೆ ವಿಭಾಗದಲ್ಲಿ ವೀರಪ್ಪನ್‌ ವರ್ಷದ ವ್ಯಕ್ತಿ ಆಗಿ ಮೂಡಿ ಬಂದಿದ್ದಾರೆ. ನಮ್ಮ ಅನೇಕ ಓದುಗರ ಕೋರಿಕೆಯಂತೆ ಕೃಷ್ಣ ಅವರಿಗೆ ಶುಭಾಶಯಗಳನ್ನು ತಲುಪಿಸಲಾಗುವುದು. ಆದರೆ ಇದೇ ಕೆಲಸವನ್ನು ನಾವು ವೀರಪ್ಪನ್‌ಗೆ ಮಾಡಲಾಗುವುದಿಲ್ಲ. ಯಾಕೆಂದರೆ, ನಮ್ಮಲ್ಲಿ ನಕ್ಕೀರನ್‌ ಗೋಪಾಲ್‌ ಅಥವಾ ಶಿವಸುಬ್ರಮಣ್ಯಂ ಇರುವುದಿಲ್ಲ .

ಓದುಗರ ಪಾಲುದಾರಿಕೆಯಲ್ಲಿ , ಇಂಟರ್‌ನೆಟ್‌ನಲ್ಲಿ ಕಾಣಿಸಿಕೊಳ್ಳುವ ವರ್ಷದ ವ್ಯಕ್ತಿ ಸ್ಪರ್ಧೆಯ ಈ ಫಲಿತಾಂಶಗಳು ಸೂಚಿಸುವುದಾದರೂ ಏನನ್ನು ?

ವರ್ಷದ ವ್ಯಕ್ತಿ ಆಗಿ ಆಯ್ಕೆಗೊಳ್ಳುವವರು ಮದರ್‌ ತೆರೇಸಾ ಅವರಂತೆ ಸಾತ್ವಿಕರೂ, ಲೋಕಕಲ್ಯಾಣಕ್ಕೆ ಶ್ರಮಿಸುವವರೂ, ಒಳ್ಳೆಯವರೂ ಆಗಿರಬೇಕು ಎಂಬ ನಿಯಮವಿಲ್ಲ. ಅಂತೆಯೇ ವಿಘ್ನಕಾರಕ ಒಸಾಮಾನಂತೆ, ಅಮೆರಿಕಾದವರಿಗೆ ಸದ್ದಾಮನಂತೆ, ಅಥವಾ ಇರಾಕ್‌ ಜನತೆಗೆ ದಬಾವಣೆಕಾರನಾಗಿ ಬುಷ್‌ ಕಾಣಿಸುತ್ತಿರುವಂತೆ ದುರುಳರೂ, ಕೆಟ್ಟವರೂ, ಕುತಂತ್ರಿಗಳೂ ಆಗಿರಲೇಬೇಕಾಗಿಲ್ಲ.

ಒಂದು ಕ್ಯಾಲೆಂಡರ್‌ ವರ್ಷದಲ್ಲಿ , ನಿರ್ದಿಷ್ಟ ಪ್ರದೇಶದ ಜನಜೀವನದ ಮೇಲೆ ಆತ ಅಥವಾ ಆಕೆ ಬೀರಿದ ಒಟ್ಟಾರೆ ಪ್ರಭಾವವನ್ನು (Impact)ಗುರುತಿಸಲು ವರ್ಷದ ವ್ಯಕ್ತಿ ಪುಟಗಳು ಪ್ರಯತ್ನಿಸುತ್ತವೆ. ನಾವು ಮಾಡಿದ್ದು ಅಷ್ಟೇ.

ನಾಗಪ್ಪ ಅವರನ್ನು ಅಪಹರಿಸಿ , ಆನಂತರ ಅವರ ಹತ್ಯೆಗೆ ಕಾರಣೀಭೂತನಾದ ಮಾತ್ರದಿಂದಲೆ ವೀರಪ್ಪನ್‌ ಓದುಗರ ಆಯ್ಕೆ ವಿಭಾಗದಲ್ಲಿ ಗೆಲ್ಲಲಿಲ್ಲ . ಕರ್ನಾಟಕದ ಮೇಲೆ ಆತ ನಿರಂತರವಾಗಿ ಬೀರುತ್ತಿರುವ ಕರಿ ನೆರಳು , ಅದರಿಂದ ಉಂಟಾಗುತ್ತಿರುವ ವಿಷಮ ಪರಿಸ್ಥಿತಿ ವೀರಪ್ಪನನ್ನು ವರ್ಷದ ವ್ಯಕ್ತಿಯಾಗಿ ಮಾಡಿಸಿತು. ಲಂಚ, ಅದಕ್ಷತೆ ವಿರುದ್ಧ ಸಮರ ಸಾರಿರುವ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರೇ ಹಿಂದೆ ಬಿದ್ದರೆಂದ ಮೇಲೆ, ನೀವು ವೀರಪ್ಪನ ಮಹತ್ವವನ್ನು ಊಹಿಸಿಕೊಳ್ಳಬಹುದು.

*

ಸಂಪಾದಕರ ಆಯ್ಕೆ ವಿಭಾಗದಲ್ಲಿ ನಾನು ಸೂಚಿಸಿದ್ದು ಐದು ಹೆಸರುಗಳು.

Crooked Shadow Veerappan

Shock absorber Krishna

Martyr Nagappa

Water thirsty G. Made Gowda

Lone ranger C. Dinakar

ಈ ವಿಭಾಗದಲ್ಲಿ ಕೃಷ್ಣ ಅವರು ಗೆದ್ದದ್ದಕ್ಕೆ ಅವರೊಬ್ಬ ಶ್ರೇಷ್ಠ ರಾಜಕಾರಣಿ ಎಂದಾಗಲೀ ಅಥವಾ ಸತ್ಯ ಹರಿಶ್ಚಂದ್ರನ ಮೊಮ್ಮಗ ಎಂದಾಗಲೀ ಅಲ್ಲ. ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ಒಬ್ಬ ಮುಖ್ಯಮಂತ್ರಿ ಹೇಗೆ ನಡೆದುಕೊಳ್ಳಬೇಕು ಎಂದು ತೋರಿಸಿಕೊಟ್ಟರು. ಅದಕ್ಕಾಗಿ ಅವರು ನನ್ನ ಕಣ್ಣಿಗೆ ಬಿದ್ದರೇ ವಿನಾ, ಲಿಂಗಾಯಿತ- ಗೌಡ ರಾಜಕೀಯದಲ್ಲಿ ಗೆದ್ದದ್ದಕ್ಕಾಗಲೀ ಅಥವಾ ನಾಗಪ್ಪ ಹತ್ಯೆ ತನಿಖೆಯನ್ನು ಸಿಬಿಐಗೆ ಒಪ್ಪಿಸದೆ ನುಣುಚಿಕೊಂಡದ್ದಕ್ಕಾಗಲೀ ಅಲ್ಲ. ಇಷ್ಟಕ್ಕೂ ಯಾವೊಬ್ಬ ರಾಜಕಾರಣಿಯೂ ಒಳ್ಳೆಯವನು ಎಂದು ಕರೆಸಿಕೊಳ್ಳುವುದಿಲ್ಲ. ಯಾಕೆಂದರೆ ಅವರು ಒಳ್ಳೆಯವರಾಗಿದ್ದರೆ ರಾಜಕಾರಣಕ್ಕೆ ಬರುತ್ತಿರಲಿಲ್ಲ !

ಕೃಷ್ಣ ಅವರನ್ನು ಆರಿಸಿದ್ದಕ್ಕೆ ಕಾರಣ, ಸಮರ್ಥನೆ ನೀಡಿದ ಸಾವಿರಾರು ಪತ್ರಗಳು ನಮಗೆ ಬಂದಿವೆ. ಅವುಗಳಲ್ಲಿ ನಾನು ಮೆಚ್ಚಿದ ಪತ್ರಕ್ಕೆ ಬಹುಮಾನ ಘೋಷಿಸಿದ್ದೇನೆ. ಆ ಪತ್ರವನ್ನು ಬರೆದವರು ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿರುವ ಜಯಶ್ರೀ ರಾಮಸ್ವಾಮಿ. ಅವರ ಪತ್ರವನ್ನು ಪ್ರಕಟಿಸಲಾಗಿದೆ, ಕಣ್ಣಾಡಿಸಿ.

ಕೃಷ್ಣ ಅವರನ್ನು ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ತೋಡಿಕೊಳ್ಳುವ ಒಂದು ಪತ್ರ ಬಂದಿದೆ. ಆ ಪತ್ರವನ್ನು ಓದುಗರ ಓಲೆ ವಿಭಾಗದಲ್ಲಿ ಯಥಾವತ್ತಾಗಿ ಪ್ರಕಟಿಸಿದ್ದೇನೆ. ಓದಿ.

ಪೂರಕ ಓದಿಗೆ-

ಕೃಷ್ಣ ನಂ.1, ಇದಕೆ ಸಂಶಯವಿಲ್ಲ !

ವರ್ಷದ ವ್ಯಕ್ತಿ - ಜನ ಆರಿಸಿದ ಹೆಸರುಗಳು

Thank you for choosing Thatskannada.com

shami.sk@greynium.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more