ಎಸ್‌.ಕೆ. ಶಾಮಸುಂದರ

ಮುಖಪುಟ --> ಕೆಂಡ ಸಂಪಿಗೆ --> ಸಮಾಚಾರ

ನವೆಂಬರ್‌ 08, 2002


ಮಣಿಕಾಂತ, 3ನೇ ತರಗತಿ ಓದುತ್ತಿರುವ ಹೊಸೂರಿನ ಹುಡುಗ. ಶಾಲೆಯಿಂದ ವಾಪಸ್ಸು ಬರುವಾಗ ಗೆಳೆಯರು ಪಟಾಕಿ ಹೊಡೆಯುವುದನ್ನು ನೋಡುತ್ತ ಆನಂದಿಸುತ್ತಿರುವಾಗಲೇ ಪಟಾಕಿ ದುರಂತಕ್ಕೆ ಬಲಗಣ್ಣು ಬಲಿ.


ವಿನಯ್‌, ಮುಳಬಾಗಿಲಿನಲ್ಲಿ 8ನೇ ತರಗತಿ ವಿದ್ಯಾರ್ಥಿ. ಪಟಾಕಿ ಸರಿಯಾಗಿ ಹೊತ್ತಿಕೊಂಡಿದೆಯೇ ಎಂದು ಹತ್ತಿರದಿಂದ ನೋಡುತ್ತಿರುವಾಗಲೇ ಪಟಾಕಿ ಹೊಡೆದು ಎಡಗಣ್ಣು ಕಳಕೊಂಡ.


ಕನಕಪುರದ ಉಯ್ಯಮಾಬಳ್ಳಿಯ ಬಸಪ್ಪನಿಗೆ 60 ವರ್ಷ. ಹುಡುಗರು ಪಟಾಕಿ ಸಿಡಿಸುತ್ತಿರುವುದ ನೋಡಿ ಖುಷಿ ಪಡುತ್ತಿದ್ದ. ಪಟಾಕಿ ಹಾರಿ ಬಲಗಣ್ಣಿಗೆ ಗಾಯಮಾಡಿತು.


15 ವರ್ಷದ ಪ್ರಿಯಾ, ಬೆಂಗಳೂರಿನಲ್ಲಿ 10ನೇ ತರಗತಿ ಓದುತ್ತಿದ್ದಾಳೆ. ಪಕ್ಕದ ಮನೆಯವರ ಪಟಾಕಿ ಸಂಭ್ರಮ ನೋಡುತ್ತಿರುವಾಗ ರಾಕೆಟ್‌ ಬಂದು ಈಕೆಯ ಎಡಗಣ್ಣು ಕಿತ್ತುಕೊಂಡಿತು.


ಮುನಿರೆಡ್ಡಿ ಪಾಳ್ಯದ ಕಾಂತರಾಜು. 7 ನೇ ತರಗತಿ ಓದುತ್ತಿರುವವ. ಎಲ್ಲಿಂದಲೋ ಬಂದ ರಾಕೆಟ್‌ ಈತನಿಗೆ ಗಾಯ ಮಾಡಿಬಿಟ್ಟಿದೆ.


ಮಹೇಶ್‌, ಯಲಹಂಕದಲ್ಲಿ ಇಲೆಕ್ಟ್ರಿಕ್‌ ಲೈಟ್‌ ಶಾಪ್‌ ಇಟ್ಟುಕೊಂಡಿದ್ದಾರೆ. ಪಟಾಕಿ ದುರಂತಕ್ಕೆ ಎಡಗಣ್ಣು ಬಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+