ಎಸ್ಕೆ. ಶಾಮಸುಂದರ

ಓದುಗರ ಆಯ್ಕೆಯ 'ದಟ್ಸ್‌ಕನ್ನಡ ವರ್ಷದ ವ್ಯಕ್ತಿ -2002 ' ವಿಭಾಗಕ್ಕೀಗ ಹೊಸ ಸ್ವರೂಪ. ನಾನು ಮೊದಲು ಅಂದುಕೊಂಡಂತೆ ಓದುಗರು ತಮ್ಮ ಆಯ್ಕೆಯ ವ್ಯಕ್ತಿಯ ಬಗ್ಗೆ ಬರೆದು ಕಳಿಸುವುದು. ಅದನ್ನು ನಾವು ಕಟ್‌ ಪೇಸ್ಟ್‌ ಮಾಡಿ ವರ್ಷದ ವ್ಯಕ್ತಿ ಪುಟಗಳಿಗೆ ಅಪ್‌ಲೋಡ್‌ ಮಾಡುವುದು ಎಂದಿತ್ತು. ಥ್ಯಾಂಕ್ಸ್‌ ಟು ಮೈ ಟೆಕ್‌ ಫ್ರೆಂಡ್ಸ್‌ , ಈಗ Seperate Tool ಸಿದ್ಧವಾಗಿದೆ. ಮಾನ್ಯ ಓದುಗರು ಈ ಅಂಗಳಕ್ಕೆ ಭೇಟಿ ನೀಡಿ ತಮ್ಮ ಅನ್ನಿಸಿಕೆಗಳನ್ನು ತುಂಬಬಹುದು. ಈ ಫೀಚರ್‌ ಇಂಗ್ಲಿಷ್‌ನಲ್ಲಿ ಮಾತ್ರ, ಗಮನಿಸಿ. ಅತ್ಯುತ್ತಮ ಬರಹಕ್ಕೆ ಬಹುಮಾನ ಉಂಟು.

ಈಗಾಗಲೇ ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಬಂದಿರುವ ಬರಹಗಳನ್ನು ಹೊಸ ಪ್ರೋಗ್ರಾಂಗೆ ನಾನೇ ವರ್ಗಾಯಿಸುತ್ತೇನೆ. ಥ್ಯಾಂಕ್ಯೂ. Visit Thatskannada Person of the Year 2002

*

ಕಾವೇರಿ ಕನ್ನಡ ಸಂಘದ ನೂತನ ಅಧ್ಯಕ್ಷ ಡಾ. ಸಂಜಯ್‌ ರಾವ್‌ ಜನವರಿ ಮೊದಲ ವಾರದಲ್ಲಿ ಬೆಂಗಳೂರಿಗೆ ಬರುತ್ತಿದ್ದಾರೆ. ಸಿ. ದಿನಕರ್‌ ಬರೆದ Veerappans Prize Catch : Rajkumar ಮತ್ತು ಅಥವಾ ಪುಸ್ತಕದ ಕನ್ನಡ ರೂಪಾಂತರ 'ರಾಜ ರಹಸ್ಯ' (ರವಿ ಬೆಳಗೆರೆ) ಪ್ರತಿ ಪಡೆಯಲಿಚ್ಛಿಸುವವರು ಸಂಜಯ್‌ ಅವರನ್ನು ಸಂಪರ್ಕಿಸಬಹುದು. ಅವರು ಅಮೆರಿಕಾಗೆ ವಾಪಸ್ಸು ಬರುವಾಗ ನಿಮಗಾಗಿ ಪುಸ್ತಕಗಳನ್ನು ತರುತ್ತಾರೆ. ಗಮನಿಸಿ : ಸಂಜಯ್‌ ಅವರು ಸ್ವಪ್ರೇರಣೆಯಿಂದ ಮಾಡುತ್ತಿರುವ 'ಕೊಂಡು ಓದುವ ಕನ್ನಡಿಗರಿಗೆ ಸಣ್ಣ ಸಹಾಯ' ವು ವಾಷಿಂಗ್‌ಟನ್‌, ವರ್ಜಿನಿಯ, ಮೇರಿಲ್ಯಾಂಡ್‌ ಪ್ರದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೆ ಮಾತ್ರ ! ಇಂಗ್ಲಿಷ್‌ ಪುಸ್ತಕದ ಮುಖ ಬೆಲೆ 400 ರೂಪಾಯಿ. ಕನ್ನಡ ಪುಸ್ತಕದ ಮುಖ ಬೆಲೆ 120 ರೂಪಾಯಿ.

ಸಂಜಯ್‌ ಅವರ ಇ-ವಿಳಾಸ [email protected]

*

ನದಿಯ ನೆನಪಿನ ಹಂಗು ದೈನಿಕ ಧಾರಾವಾಹಿಯನ್ನು ತಪ್ಪದೆ ಓದುತ್ತಿರುವ ಕಾದಂಬರಿ ಪ್ರಿಯರಿಗೆ ನಮಸ್ಕಾರಗಳು. ದಿನದಿಂದ ದಿನಕ್ಕೆ ಕಾದಂಬರಿಯ ನಡಿಗೆ ಚಿತ್ತಾಕರ್ಷಕ ತಿರುವು ಪಡೆದುಕೊಳ್ಳುತ್ತಿರುವುದನ್ನು ಗಮನಿಸಿದ್ದೀರಿ. ಇವತ್ತು ಕಾದಂಬರಿಗೆ ರಾಜಕಾರಣದ ಸ್ಪರ್ಶ ಬಂದಿದೆ. ಕೊನೆಗೂ ಕಾದಂಬರಿಯಲ್ಲಿ ಮುಖ್ಯವಾಗುವುದು ಬದುಕನ್ನು ಕಟ್ಟಿಕೊಡುವ ಸ್ವೋಪಜ್ಞತೆ. ಕಥೆ, ಪಾತ್ರ, ಭಾಷೆ, ವಾಹಕ ಮಾತ್ರ ! ಕಾದಂಬರಿ ಲೋಕದಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿರುವ ಈ ಧಾರಾವಾಹಿಯ ಬಗ್ಗೆ ಅನೇಕರು ಪತ್ರ ಬರೆದಿದ್ದಾರೆ. ಅವುಗಳೆಲ್ಲವನ್ನೂ ಒಮ್ಮೆಗೆ ಪ್ರಕಟಿಸಲಾಗುತ್ತದೆ. ಧಾರಾವಾಹಿ ಒಂದು ಘಟ್ಟ (50 ದಿನಗಳು) ತಲಪುವುದನ್ನೇ ಕಾಯುತ್ತಿದ್ದೇನೆ. ನಿಮ್ಮಂತೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+