ಸ ರಘುನಾಥ ಅಂಕಣ; ಡಿಯ್ಯ ಡಿಯ್ಯ ಡಾಡಾ ಡಿಯ್ಯ
ನರಸಿಂಗರಾಯನಿಗೆ ಕೂತರೆ ನಿಂತರೆ ಕಳ್ಳನ ಪಾತ್ರದ್ದೇ ಧ್ಯಾನವಾಯಿತು. ಸಾಕಷ್ಟು ಹೊತ್ತು ರಂಗದ ಮೇಲಿರುವ ಪಾತ್ರವದು. ಕತ್ತಲೆಗೆ ಕಾಯುವುದು, ಹೊಂಚು ಹಾಕುವುದು, ಚಟುವಟಿಕೆಯಿಂದಿರುವುದು. ಅವನಿಗೆ ಯಾವ ಕಾವಲೂ ಲೆಕ್ಕಕ್ಕಿಲ್ಲ. ಕಪ್ಪಗೆ ಗಟ್ಟಿಮುಟ್ಟಾದ ಮೈಕಟ್ಟು. ಅವನೆಂದರೆ ಭಯವೇ ಭಯಪಡಬೇಕು. ಜೊತೆಗೆ ಭಯವನ್ನೂ ನಗಿಸಬಲ್ಲವನು.
Recommended Video
ಸದಾರಮೆಯನ್ನು ಕಾಡುತ್ತ, ಪೀಡಿಸುವವನು. ಹೆಂಗರುಳಿನ ಪ್ರೇಕ್ಷಕರು ಅವಳ ಬಗ್ಗೆ ಕನಿಕರಿಸಿ ಅವನನ್ನು ನಿಂದಿಸುವಂತೆ ಬಲಗೊಳಿಸಬೇಕು ಎಂಬ ಇರಾದೆಗೆ ನರಸಿಂಗರಾಯ ಬಂದಿದ್ದ. ಅವನ ಪ್ರವೇಶದ ಹಾಡಿನಲ್ಲಿ ಅವನಲ್ಲಿನ ಚಮತ್ಕಾರ ಎದ್ದು ಕಾಣಬೇಕು. ಹಾಡು ಹಾಗಿರಬೇಕೆಂದುಕೊಂಡಾಗ ಕಳ್ಳನ ಪಾತ್ರ ಯಾರಿಗೆ ಕೊಡುವುದೆಂದು ಆಲೋಚಿಸಿದ.
ಈವರೆಗೆ ಆ ಪಾತ್ರ ಕಟ್ಟುತ್ತಿದ್ದ ಐನೋರ ಸತ್ಯಪ್ಪನ ನಟನೆ ತೆಗೆದು ಹಾಕುವಂತಿರಲಿಲ್ಲ. ಅವನೇ ಮಾಡುವುದಾದರೆ ಹಳೆಯ ಪದ್ಯಗಳೇ ಸಾಕೆ, ಹೊಸವು ಬೇಕೆ ಎಂದು ಕೇಳಬೇಕು. ಬೇಡವೆಂದರೆ ಹೊಸಬರನ್ನು ಆರಿಸಬೇಕು. ಅದಕ್ಕೆ ಸಭೆಯ ದಿನದವರೆಗೆ ಕಾಯಬೇಕು. ಈಗಲೇ ಇತ್ಯರ್ಥವಾದರೆ ಚೆನ್ನ ಅನ್ನಿಸಿತು. ಸತ್ಯಪ್ಪನ ಮನೆಗೆ ಹೋದ. ವಿಷಯ ಹೀಗೀಗೆಂದು ತಿಳಿಸಿದ. ಅವನು ನನ್ನನ್ನು ಬಿಟ್ಟುಬಿಡು ಮಾರಾಯ. ನನಗಾಗೊಲ್ಲವೆಂದ. ಆ ಸಮಸ್ಯೆ ತೀರಿತು. ಇನ್ನು ಹೊಸಬನನ್ನು ಆಯ್ಕೆ ಮಾಡಬೇಕು. ಯಾರು ಎಂದು ನೋಡೋಣ ಅಂದುಕೊಂಡು ಮನೆಯ ದಾರಿ ಹಿಡಿದ.

ಕೋಣೆಗೆ ಬಂದವನನ್ನು ಕಳ್ಳನ ಪಾತ್ರ ಕಾಡತೊಡಗಿತು. ಕಳ್ಳರು ತಮ್ಮನ್ನು ಹಿಡಿಯುವವರು ಯಾರೂ ಇಲ್ಲ ಎಂಬ ಅಹಮ್ಮಿನ ದಿಮಾಕಿನಲ್ಲಿರುತ್ತಾರಲ್ಲ ಅಂದುಕೊಂಡ. ಅವರೇನೆ ಕಡಿಮೆಯೆ ಅನ್ನಿಸಿದ್ದೇ ತಡ ಮನಸ್ಸಿನಲ್ಲಿ ಆ ಪದದಿಂದಲೇ ಹಾಡು ಹುಟ್ಟಲು ತವಕಿಸಿತು. ಹಾರ್ಮೋನಿಯಂ ಹಿಡಿದು ಕುಳಿತ.
ಡಿಯ್ಯ ಡಿಯ್ಯ ಡಾಡಾ ಡಿಯ್ಯ
ಡಿಯ್ಯ ಡಿಯ್ಯ ಡಾಡಾ ಡಿಯ್ಯ
(ಹಾಡುತ್ತ ರಂಗದ ಮೇಲೆ ಸುತ್ತಾಡುತ್ತ)
ಕಡಿಮೆಯಲ್ಲ ಈ ಕಳ್ಳ
ಬಲು ಸುಳ್ಳ ನಾ ಮಲ್ಲ
ಮನೆದೇವರಾಣೆ ಇದು ಸುಳ್ಳಲ್ಲ
ನನ್ನ ಹಿಡಿಯಲಾರ ಕೊತ್ವಾಲ
(ಸಭಿಕರತ್ತ ಕೈ ತೋರಿಸಿ)
ಕೇಳಿರಿ ಆ ಕೆಂಚಮ್ಮನ
ಹಾರಿಸಿದ್ದೆ ಕಾಸಿನ ಸರವನ್ನ
ಬೈಸಿದ್ದೆ ಕೊತ್ವಾಲನ
ಹಿಡಿಯೊ ಶಪಥ ಮಾಡಿ ಸೋತಿದ್ದನ್ನ.
ಅರಮನೆ ಕಾವಲು ಲೆಕ್ಕಕ್ಕಿಲ್ಲ
ರಾಣಿಯ ರತ್ನದ ಹಾರವೆ ಮಾಯ
ಇರುಳಲಿ ಹೆಂಡಿರ ಕೊರಳಲಿ ಮಿಣಮಿಣ
ಕೊತ್ವಾಲನ ಕಷ್ಟ ತಿಮ್ಮಪ್ಪನೆ ಬಲ್ಲ
ಹಾಡು ಕೇಳಿಸಿಕೊಳ್ಳುತ್ತ ಅಮ್ಮ ನಕ್ಕಾಗ ನರಸಿಂಗರಾಯನಿಗೆ ಗೆದ್ದೆ ಅನ್ನಿಸಿತು. ಮನೆಯಲ್ಲಿದ್ದ ಅಪ್ಪನ ನಗು ಹಾಡು ಚೆನ್ನಾಗಿದೆ ಎಂಬ ಸೂಚನೆ ಕೊಟ್ಟಿತು. ಸಂಜೆ ಮುನೆಕ್ಕ, ಸುನಂದಾ ಬಂದಾಗ ಮಾಡಿದ ಮೊದಲ ಕೆಲಸ ಹಾಡು ಕೇಳಿಸಿದ್ದು. ಆ ಇಬ್ಬರೊಂದಿಗೆ ಅಮ್ಮನೂ ನಕ್ಕಳು. ಕೆಂಚಮ್ಮನೂ ನಿನ್ನ ಹಾಡಿಗೆ ತಂದುಬಿಟ್ಟಿದ್ದೀಯಲ್ಲ. ಅವಳು ಕೇಳಿದರೆ ಕುಣಿದಾಡಿಬಿಡುತ್ತಾಳೆ. ನಾಳೆ ಬರಲು ಹೇಳುತ್ತೇನೆ ಎಂದಳು ಮುನೆಕ್ಕ. ಅದೇನು ಬೇಡ. ನಾಟಕದ ದಿನ ಕೇಳಲಿ ಸುಮ್ಮನಿರು ಎಂದಳು ಅಮ್ಮಯ್ಯ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications