ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಮಗುವನ್ನು ದತ್ತು ಪಡೆದ ಮಲ್ಲು

|
Google Oneindia Kannada News

Gilivindu, Mangalam publications, Kerala
ಕನ್ನಡ ಪತ್ರಿಕಾ ಪ್ರಪಂಚಕ್ಕೆ ಬೇಡವಾದ ಕನ್ನಡ ಓದುವ ಮಕ್ಕಳನ್ನು ಮಲಯಾಳಿಗಳು ದತ್ತು ತೆಗೆದುಕೊಂಡರು. ಹೌದು, ಇದು ನಿಜ ಅಥವಾ ಕಹಿಯಾದ ಸತ್ಯ. ನನಗೊತ್ತಿದ್ದಂತೆ ಪ್ರಜಾವಾಣಿ ಬಳಗ ಮಕ್ಕಳ ಪತ್ರಿಕೆಯನ್ನು ಆರಂಭಿಸುವ ಸಾಹಸ ಮಾಡಿಲ್ಲ. 'ಸಖಿ'ಯಂತಹ ಮಹಿಳಾ ಪತ್ರಿಕೆಯನ್ನು ಮೊನ್ನೆ ಮೊನ್ನೆಯಿಂದ ಪ್ರಕಟಿಸುತ್ತಿರುವ ಕನ್ನಡಪ್ರಭ, ಪುಟಾಣಿಗಳಿಗೆ ಒಂದು ಪತ್ರಿಕೆಯನ್ನು ಹುಟ್ಟುಹಾಕಿಲ್ಲ. ಸಂಯುಕ್ತ ಕರ್ನಾಟಕದಂತಹ ಅತಿ ಹಳೆಯ ಸಂಸ್ಥೆಯದ್ದೂ ಇದೇ ಬಾಲವಿರೋಧಿ ನಿಲುವು!

ಈ ಕನ್ನಡನಾಡಿನಲ್ಲಿ ಮಕ್ಕಳ ಚಲನಚಿತ್ರಗಳು ಬರಕತ್ತಾಗುವುದಿಲ್ಲ. ಮೊನ್ನೆ ಟೈಂಸ್ ಆಫ್ ಇಂಡಿಯಾ ಮಾಡಿದ ಒಂದು ಚಿತ್ರವರದಿಯ ಪ್ರಕಾರ ಬೆಂಗಳೂರಿನ ಬಾಲವನಗಳು ಹಾಳುಹಂಪೆಗಳಾಗಿವೆ. ಅಲ್ಲಿ ಹಾವು ಚೇಳು ಓತಿಕ್ಯಾತಗಳ ಕಾಟವೋ ಕಾಟ!

ನಮ್ಮಲ್ಲಿ ಮಕ್ಕಳಿಗಾಗಿಯೇ ಪತ್ರಿಕೆಗಳು ಹೊರಬಂದಿದ್ದವು, ನಿಜ. ಈ ಹಿಂದೆ ಆರಂಭಿಸಿದ ಬಾಲಮಿತ್ರ, ಬೊಂಬೆಮನೆ, ಪುಟಾಣಿ ಮುಂತಾದ ಎಳೆಯರ ನಿಯತಕಾಲಿಕಗಳು ಉಸಿರು ಕಳೆದುಕೊಂಡ ಉದಾಹರಣೆಗಳೂ ನಮ್ಮ ಮುಂದಿವೆ. ಆದರೆ ಕನ್ನಡದವರಲ್ಲದ ಪ್ರಕಟನ ಸಂಸ್ಥೆ ಮಾತ್ರ ಕರ್ನಾಟಕದಲ್ಲಿ ಒಂದಲ್ಲ ಮೂರು ಮಕ್ಕಳ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ!

ಇದು ನಿಜ, ಮೂಲ ಕೇರಳದ 'ಮಂಗಳಂ ಪಬ್ಲಿಕೇಷನ್ಸ್" ಕನ್ನಡದಲ್ಲಿ ಬಾಲಮಂಗಳ ಮತ್ತು ಬಾಲಮಂಗಳ ಚಿತ್ರಕಥಾ ಎಂಬ ಎರಡು ಪಾಕ್ಷಿಕವನ್ನು ಮಕ್ಕಳಿಗಾಗಿ ಹತ್ತಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಅವರು ಕೆ.ಜಿ. ಮಕ್ಕಳಿಗಾಗಿ ಶುರುಹಚ್ಚಿರುವ 'ಗಿಳಿವಿಂಡು" (ಮಾಸಿಕ) ವ್ಯಾಪಾರೀ ಉದ್ದೇಶಗಳನ್ನು ಮೀರಿ ನಿಲ್ಲುವ ಒಂದು ಸುಂದರ ಪ್ರಯತ್ನ.

ಇದು ನಿಜ, ಮೊನ್ನೆ ಓರ್ವ ಒಂಭತ್ತನೇ ತರಗತಿಯ ಹುಡುಗಿ ನಮ್ಮ ವಾಚನಾಲಯದಲ್ಲಿ ಗಿಳಿವಿಂಡುವನ್ನು ಓದುತ್ತಿದ್ದಾಗ ಹೇಳುತ್ತಿದ್ದಳು: ನನಗಿದು ತುಂಬಾ ಇಷ್ಟ! ಹಾಗಾದರೆ ಏನಿದೆ ಅದರಲ್ಲಿ? ನಾನೂ ಕಣ್ಣಾಡಿಸಿದೆ. ಪುಟ್ಟ ಮಕ್ಕಳಿಗೆ ಏನು ಬೇಕೋ ಅದೆಲ್ಲವೂ ಪ್ರತಿ ಪುಟದಲ್ಲಿ ಅಡಗಿಕುಳಿತಿದೆ. ಚಿತ್ರ ನೋಡಿ ಪ್ರಾಣಿ ಗುರ್ತಿಸಿ, ದಾರಿ ಯಾವುದು, ವ್ಯತ್ಯಾಸ ಹುಡುಕಿ, ಇಂಗ್ಲಿಷ್ ಶಬ್ಧಬಂಧ, ಚಿತ್ರಕ್ಕೆ ಬಣ್ಣ ಹಾಕಿ, ಪುಟ್ಟ ಪುಟ್ಟ ಲೆಕ್ಕ.. ಇನ್ನು ಇವೆಲ್ಲ ಬೇಡ ಎನ್ನುವವರಿಗೆ ಚಿಕ್ಕದಾದ ನೀತಿ ಕತೆಗಳೂ ಇವೆ.

ಮೂರರಿಂದ ಆರರವರೆಗಿನ ಮಕ್ಕಳಿಗೆ ಏನಾದರು ಅಮೂಲ್ಯವಾದುದನ್ನು ಕೊಡಿಸಬೇಕೆಂದಿದ್ದರೆ ಮುದ್ದಾಂ ಗಿಳಿವಿಂಡು ಕೊಡಿಸಿ. ಈ ಮಾತಿನಲ್ಲಿ ಲವಲೇಶದ ಉತ್ಪ್ರೇಕ್ಷೆಯೂ ಇಲ್ಲ, ಮಕ್ಕಳಾಣೆ!

ಇದುನೂ ನಿಜ, 34 ಪುಟಗಳ ಬಣ್ಣಬಣ್ಣದ ಗಿಳಿವೀಡುವಿಗೆ ಬರೀ ಏಳು ರೂಪಾಯಿ. ಪುಟ್ಟ ಮಕ್ಕಳಿಗೆ ಜ್ಞಾನ ಸರ್ಕಸ್ ಮಾಡಿಸುವ ಪುಸ್ತಕಗಳನ್ನು ಮಾರುಕಟ್ಟೆಯಲ್ಲಿ ಕೇಳಿ ನೋಡಿ, ಅವು 20, 30 ರೂ.ಗಿಂತ ಕಮ್ಮಿಗೆ ಸಿಗುವುದು ಸಾಧ್ಯವೇ ಇಲ್ಲ. ಪತ್ರಿಕೆಯ ನಿರ್ವಾಹಕ ಸಂಪಾದಕರು ಮನುಪ್ರತಾಪ್. ಪತ್ರಿಕೆ ಬಹುಷಃ ಎಲ್ಲ ಬುಕ್‌ಸ್ಟಾಲ್ ಅಂಗಡಿಯಲ್ಲಿ ಸಿಕ್ಕುತ್ತದೆ. ಹಾಗಾಗಿ ವಿಳಾಸ ಹೇಳುತ್ತಿಲ್ಲ. ಸಿಕ್ಕದಿದ್ದರೆ ಮಂಗಳ ವಿಳಾಸದಲ್ಲಿ ವಿಚಾರಿಸಿ.

ಲೇಖಕರ ವಿಳಾಸ : ಮಾ.ವೆಂ.ಸ.ಪ್ರಸಾದ್, ಮಾವಿನಸರ, ಪೋಸ್ಟ್-ಎಡಜಿಗಳೇಮನೆ. ಸಾಗರ ತಾ. ಶಿವಮೊಗ್ಗ ಜಿ. 577401 ಫೋನ್-08183 236068, 98864 07592 ಇ ಮೇಲ್ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X