• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಸ್ತಕ ಭಂಡಾರದಲ್ಲಿ ಮರೆಯಲಾಗದ 30 ಆಣಿಮುತ್ತುಗಳು!

By Staff
|

(7) ಪುಕ್ಕಟ್ಟೆ ಸದಸ್ಯತ್ವವುಳ್ಳ ಪುಸ್ತಕಾಲಯದಂಥ ಪ್ರಜಾಪ್ರಭುತ್ವದ ತೊಟ್ಟಿಲು ಈ ಭೂಮಿಯಮೇಲೆ ಮತ್ತೊಂದಿಲ್ಲ. ಅಂತಸ್ತು, ಶ್ರೀಮಂತಿಕೆ, ಅಥವಾ ಅಧಿಕಾರ ಇದಾವುದನ್ನೂ ಗಣನೆಗೆ ತಂದುಕೊಳ್ಳದ ಸಾಮ್ರಾಜ್ಯವೆಂದರೆ ಈ ಅಕ್ಷರಸಾಮ್ರಾಜ್ಯವೊಂದೇ. (ಆಂಡ್ರೂ ಕಾರ್ನೆಗೀ)

(8) ಐಶ್ವರ್ಯಕ್ಕಿಂತ ಅರಿವೇ ಮುಖ್ಯ, ಏಕೆಂದರೆ, ಐಶ್ವರ್ಯ ನಶ್ವರ, ಅರಿವು ನಿರಂತರ. (ಸಾಕ್ರಟೀಸ್‌)

(9) ಪುಸ್ತಕಾಲಯಗಳನ್ನು ಸ್ಥಾಪಿಸುವುದಕ್ಕೆ ಒಂದಿಷ್ಟು ಹಣ ಖರ್ಚಾಗುತ್ತದೆ, ನಿಜ. ಆದರೆ, ಪುಸ್ತಕಾಲಯಗಳಿಲ್ಲದ ದೇಶಗಳು ದುರಹಂಕಾರೀ ನಾಯಕತ್ವದ ದುರಾಡಳಿತಕ್ಕೆ ಸಿಕ್ಕಾಗ ಉಂಟಾಗುವ ಅವ್ಯವಸ್ಥೆಯನ್ನು ಸರಿಪಡಿಸಲು ತಗುಲುವ ಖರ್ಚಿನ ಮುಂದೆ ಪುಸ್ತಕಾಲಯಗಳ ಖರ್ಚು ಅತ್ಯಲ್ಪ. (ವಾಲ್ಟರ್‌ ಕ್ರಾಂಕೈಟ್‌)

(10) ಜ್ಞಾನವೇ ಬಲ. (ಫ್ರ್ಯಾಂಸಿಸ್‌ ಬೇಕನ್‌)

(11) ಪುಸ್ತಕವಿಲ್ಲದ ಮನೆ ಆತ್ಮವಿಲ್ಲದ ದೇಹವಿದ್ದಂತೆ. (ಮಾರ್ಕಸ್‌ ಟುಲಿಯಸ್‌ ಸಿಸೆರೋ)

(12) ಈ ಜಗತ್ತಿನಲ್ಲಿ ನಾವು ಒಬ್ಬಂಟಿಗರಲ್ಲ ಎಂದು ತಿಳಿಯುವದಕ್ಕಾಗಿಯೇ ನಾವು ಓದುವುದು. (ಸಿ.ಎಸ್‌. ಲೂವಿಸ್‌)

(13) ಅಂಧರ ‘ಬ್ರೈಲ್‌’ ಲಿಪಿಯನ್ನೋದುವುದರಲ್ಲಿ ಇರುವ ಒಂದು ಜಾದು, ಕಣ್ಣಿರುವ ಓದುಗರಿಗೆ ಅರ್ಥವಾಗಲು ಸಾಧ್ಯವೇ ಇಲ್ಲ. ಬ್ರೈಲ್‌ ಲಿಪಿಯ ಅಕ್ಷರಗಳನ್ನು ಮುಟ್ಟಿದರೆ ಅವು ನಿಮ್ಮನ್ನೂ ನಿಮ್ಮ ಮನಸ್ಸನ್ನೂ ಹಿಂದಿರುಗಿ ಮುಟ್ಟುತ್ತವೆ. (ಜಿಮ್‌ ಫೈಬಿಗ್‌)

(14) ಪುಸ್ತಕಾಲಯವೆಂದರೆ ಅದು ಮನಸ್ಸಿನ ಆಸ್ಪತ್ರೆ. (ಅನಾಮಿಕ)

(15) ಪುಸ್ತಕಗಳನ್ನು ಸುಡುವವರ ಗುಂಪಿಗೆ ನೀವು ಸೇರಬೇಡಿ. ಸಬೂತನ್ನು ಸುಟ್ಟರೂ ಸತ್ಯವನ್ನು ಸುಡಲಾಗುವುದಿಲ್ಲ. ಪುಸ್ತಕಾಲಯದ ಪ್ರತಿಯಾಂದು ಪುಸ್ತಕವನ್ನೂ ಹಿಂಜರಿಯದೇ ಓದಿ. (ಅಧ್ಯಕ್ಷ, ಡ್ವೈಟ್‌ ಡಿ. ಐಸೆನ್‌ಹೋವರ್‌)

(16) ಪುಸ್ತಕದಂಥ ನಿಷ್ಠಾವಂತ ಗೆಳೆಯ ಮತ್ತೊಬ್ಬನಿಲ್ಲ. (ಅರ್ನೆಸ್ಟ್‌ ಹೆಮಿಂಗ್‌ವೇ)

(17) ಹಣದ ಕೊರತೆಯಿದ್ದಾಗ ಪುಸ್ತಕಗಳು ನಿಮಗೆ ಜೊತೆನೀಡುವಹಾಗೆ ಪುಸ್ತಕಗಳ ಕೊರತೆಯಿದ್ದಾಗ ಹಣ ನಿಮಗೆ ಜೊತೆನೀಡಲಾರದು. (ಆನ್‌ ಹರ್ಬರ್ಟ್‌)

(18) ನಾಯಿಯನ್ನು ಬಿಟ್ಟರೆ ಮನುಷ್ಯನಿಗೆ ಪುಸ್ತಕದಂಥ ಗೆಳೆಯ ಮತ್ತೊಬ್ಬನಿಲ್ಲ. ಆದರೆ, ಕೇವಲ ನಾಯಿಯಾಡನಾಟದಿಂದ ಜ್ಞಾನದಾಹ ಹಿಂಗುವುದಿಲ್ಲ. (ಗ್ರೋಕೋ ಮಾರ್ಕ್ಸ್‌)

(19) ಪುಸ್ತಕವೊಂದೇ ಅಮರ. (ರೂಫಸ್‌ ಚೋಟ್‌)

(20) ಓದಿನಿಂದ ಬಲದ ಅರಿವು. ಬಲದ ಅರಿವು ಬರವಣಿಗೆಯ ಮೂಲ. ಬರವಣಿಗೆಯಿಂದಲೇ ಇತರರಮೇಲೆ ಪ್ರಭಾವ. ಪ್ರಭಾವದಿಂದಲೇ ಬದಲಾವಣೆ. ಬದಲಾಯಿಸುತ್ತಿರುವುದೇ ಜೀವನ. (ಜೇನ್‌ ಎವರ್ಷೆಡ್‌)

(21) ನಾನು ಸ್ವರ್ಗ ಹೇಗಿರುತ್ತದೆ ಎಂದು ಊಹಿಸಿಕೊಂಡಾಗ, ಅದೊಂದು ಪುಸ್ತಕಾಲಯದಂತೆ ಕಾಣಿಸುತ್ತದೆ. (ಜಾರ್ಜ್‌ ಲೂಯಿಸ್‌ ಬೋರ್ಜಸ್‌)

(22) ಓದಿದಷ್ಟು ಅರಿವು, ಅರಿತಷ್ಟೂ ಮನ್ನಣೆ. (ಡಾ. ಸೂಸ್‌)

(23) ಎಲ್ಲಕ್ಕಿಂತ ಹೆಚ್ಚು ದರದ ಬಡ್ಡಿ ಬರುವ ವ್ಯಾಪಾರವೆಂದರೆ ಓದು. (ಬೆಂಜಮಿನ್‌ ಫ್ರ್ಯಾಂಕ್‌ಲಿನ್‌)

(24) ಸಾಹಿತ್ಯದ ಅಧ್ಯಯನ ನನ್ನ ಆದರ್ಶಜಗತ್ತು. (ಹೆಲೆನ್‌ ಕೆಲ್ಲರ್‌)

(25) ನಾನೋದಿದ ವಿಶ್ವವಿದ್ಯಾಲಯವೆಂದರೆ ಪುಸ್ತಕಜಗತ್ತು. ನನ್ನ ಕುತೂಹಲವನ್ನು ತೀರಿಸಿಕೊಳ್ಳುತ್ತ ಮಿಕ್ಕ ಜೀವನವನ್ನು ಓದುತ್ತ ಓದುತ್ತ ಕಳೆಯಲು ನಾನು ಸಿದ್ಧ. (ಮಾಲ್ಕಮ್‌ ಎಕ್ಸ್‌)

(26) ನಮ್ಮ ಜೀವನದ ಕನಸುಗಳೆಲ್ಲ ಪುಸ್ತಕಾಲಯದಲ್ಲಿ ತುಂಬಿವೆ. (ನಿಕಿ ಗಿಯಾವಾನಿ)

(27) ಇಲ್ಲಿಯವರೆಗೂ ಓದಿರುವ ಪುಸ್ತಕಗಳ ಮೊತ್ತವೇ ನಾನು. (ಜಾನ್‌ ಕೈರನ್‌)

(28) ಎಲ್ಲೋ ಯಾವುದೋ ಪುಸ್ತಕಾಲಯದಲ್ಲಿ, ತಿಳಿಯಲೇಬೇಕಾದ ಸತ್ಯ ನಮಗಾಗಿ ಕಾಯುತ್ತಿದೆ. (ಕಾರ್ಲ್‌ ಸೇಗನ್‌)

(29) ಓದಿಗಾಗಿ ಬದುಕು, ಬದುಕಿಗಾಗಿ ಓದು. (ಗಸ್ಟೇವ್‌ ಫ್ಲಾಬರ್ಟ್‌)

(30) ಪುಸ್ತಕಾಲಯವೆಂಬುದು ಜೀವನದ ಒಂದು ಅಗತ್ಯ, ಅದು ಭೋಗ ಅಥವಾ ಸಿರಿವಂತಿಕೆಯ ಕುರುಹಲ್ಲ. (ಹೆನ್ರಿ ವಾರ್ಡ್‌ ಬೀಷರ್‌)

ಕೊನೆಯದಾಗಿ ಮುಕ್ತಾಯಕ್ಕೆ ಮುನ್ನ ಒಂದು ಮಾತು: ಜನಗಳಿಂದ ವಸೂಲು ಮಾಡುವ ಕಂದಾಯದ ಹಣವನ್ನು, ರಸ್ತೆಗಳು, ಉದ್ಯಾನಗಳು, ವಿಹಾರಸ್ಥಳಗಳು, ವಿದ್ಯಾಲಯಗಳು, ಮತ್ತು ಇನ್ನೂ ಹಲವು ಸಾರ್ವಜನಿಕ ಸೌಕರ್ಯಗಳಿಗಾಗಿ ಖರ್ಚುಮಾಡುವ ಹಾಗೆ, ಜನಸಾಮಾನ್ಯರು ಜ್ಞಾನಸಂಚಯಮಾಡಿಕೊಳ್ಳಲು ಅನುಕೂಲವಾಗುವಂತೆ ಇಂಥ ಪುಸ್ತಕಭಂಡಾರಗಳಮೇಲೂ ತಕ್ಕಷ್ಟು ಹಣವನ್ನು ವ್ಯಯಮಾಡಿದಾಗಲೇ ದೇಶದಲ್ಲಿ ಪ್ರಜಾಪ್ರಭುತ್ವ ಊರ್ಜಿತವಾಗುವುದು ಎಂಬ ಸಂದೇಶದೊಂದಿಗೆ ವಿರಮಿಸುವೆ ಮುಂದಿನ ಕಂತಿನವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X