495804monsoonಮುಂದಿನ ಎರಡು ದಿನ ರಾಜ್ಯದಲ್ಲಿ ಭಾರಿ ಮಳೆ ಸಂಭವ/news/2009/05/18/weather-forecast-heavy-rain-in-karnataka.htmlಬೆಂಗಳೂರು, ಮೇ 18 : ಕಳೆದೆರಡು ದಿನಗಳಿಂದ ಹುಯ್ಯುತ್ತಿರುವ ಮಳೆಗೆ ಬೆಂಗಳೂರಿನ ಚರಂಡಿಗಳು, ಅಗಿದ ರಸ್ತೆಗಳು, ರಸ್ತೆ ತಗ್ಗುಗಳು ತುಂಬಿ ತುಳುಕಾಡುತ್ತಿವೆ. ಜೋರು ಗಾಳಿ, ಬರೀ ಆರ್ಭಟದಿಂದ ಕೂಡಿ ಮಳೆಗೆ ರಾಜಧಾನಿಯ ಜನತೆ ಮೈಯೊಡ್ಡಿದ್ದಾರೆ.ಆಗಿದ್ದು ಬರೀ 16 ಮಿ.ಮೀ. ಮಳೆ. ಇಷ್ಟಕ್ಕೇ ರಸ್ತೆಗಳು ರಸ್ತೆಗೆ ಹರಿದುಬಂದ ಚರಂಡಿ ನೀರಿನಲ್ಲಿ ತೇಲಾಡುತ್ತಿದ್ದಂತೆ ಭಾಸವಾಗುತ್ತಿದೆ. ಗರಿಷ್ಠ ತಾಪಮಾನ 35ರಿಂದ 33 36736http://kannada.oneindia.com/img/2009/05/18-weather-forecast1.jpg495804monsoonಮರೆಯಾಗುತ್ತಿರುವ ಕರಾವಳಿಯ ಹುರಿಯಕ್ಕಿ ಲಾಡು/cj/vinayak-patagar/2009/0526-huriyakki-ladu-coastal-karnataka-recipe.htmlಕರಾವಳಿ ವಿಶೇಷ ತಿಂಡಿ ತಿನಸುಗಳಲ್ಲಿ ಹುರಿಯಕ್ಕಿ ಲಾಡು ಒಂದು. ಆಧುನಿಕತೆಯ ಸೋಗಿನಲ್ಲಿ ಸಾಂಪ್ರದಾಯಕವಾಗಿ ಪ್ರಮುಖ ಆಹಾರವಾಗಿ ಉಳಿದುಕೊಂಡಿರುವ ಕುಚ್ಚಿಗೆ ಅಕ್ಕಿಯಿಂದ ಮತ್ತು ತೆಳುವಾದ ಜೋನಿ ಬೆಲ್ಲದಿಂದ ತಯಾರಿಸಲ್ಪಡುವ ಲಾಡು ಇಂದಿನ ಥಳಕು ಬಳುಕಿನ ನಾಜೂಕಿನ ಬೇಕರಿ ತಿಂಡಿಗಳ ಭರಾಟೆಗಳ ಮಧ್ಯೆ ಅಪರೂಪವಾಗುತ್ತಿದೆ.* ವಿನಾಯಕ ಪಟಗಾರ್, ಬೆಟ್ಕುಳಿ, ಕುಮಟಾಮೊದಲ್ಲೆಲ್ಲಾ ಬೇಸಿಗೆ ರಜೆ ಮುಗಿಸಿ ದೂರದ ಊರುಗಳಿಗೆ ಹೋಗುವಾಗ ಡಬ್ಬಿ 36902http://kannada.oneindia.com/img/2009/05/26-huriyakki-ladu1.jpg495804monsoonಮತ್ತೆ ಮಳೆ ಹುಯ್ಯುತ್ತಿದೆ, ಎಲ್ಲ ನೆನಪಾಗುತ್ತಿದೆ.../column/manikanth/2009/0608-sweet-memories-of-monsoon.htmlಮಳೆಗಾಲ ಶುರುವಾಗಿದೆ! ಮಳೆ'ಯ ನೆನಪಾದರೆ ಸಾಕು-ತಂಗಾಳಿಯಂಥ ಆಹ್ಲಾದವೊಂದು ಮೈಮನವನ್ನು ಆವರಿಸಿಕೊಳ್ಳುತ್ತದೆ. ಅದರಲ್ಲೂ ದಶಕಗಳ ಹಿಂದೆ ಹಳ್ಳಿಗಳಲ್ಲೇ ತಮ್ಮ ಬಾಲ್ಯ ಕಳೆದವರಿಗಂತೂ-ಮಳೆ ಅಂದಾಕ್ಷಣ ಊರು, ಒಂದಿಡೀ ವಾರ ಕೆಂಪು ನೀರಿನಿಂದಲೇ ತುಂಬಿರುತ್ತಿದ್ದ ಅಲ್ಲಿನ ಕೆರೆ ನೆನಪಾಗುತ್ತದೆ. ಹಾಗೆಯೇ, ಹೊರಗೆ ಜುರ್ರೋ ಎಂದು ಮಳೆ ಸುರಿಯುತ್ತಿದ್ದರೆ- ಇದ್ಯಾಕೋ ಛಳಿಛಳಿ ಆಗ್ತಾ ಇದೆಯಲ್ಲ ಎನ್ನುತ್ತಲೇ ಬೀಡಿ ಹಚ್ಚಿಕೊಂಡು ಬೆಚ್ಚಗಾಗುತ್ತಿದ್ದ ಅಪ್ಪ/ಚಿಕ್ಕಪ್ಪನ ಚಿತ್ರ 37193http://kannada.oneindia.com/img/2009/06/08-children-rain1.jpg495804monsoonಬರದ ಛಾಯೆ : ಎಮರ್ಜೆನ್ಸಿ ಸಭೆ ಕರೆದ ಕೇಂದ್ರ/news/2009/06/24/draught-centre-calls-for-emergency-meeting.htmlನವದೆಹಲಿ, ಜೂ. 24 : ದೇಶದಾದ್ಯಂತ ಬರದ ಭೀಕರ ಛಾಯೆ ಮೂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಿದ್ಯುತ್, ಕೃಷಿ ಕಾರ್ಯದರ್ಶಿ, ನೀರಾವರಿ ಸಚಿವ ಮತ್ತು ಹವಾಮಾನ ಇಲಾಖೆಯ ತುರ್ತು ಸಭೆಯನ್ನು ಶ್ರಮ ಶಕ್ತಿ ಭವನದಲ್ಲಿ ಬುಧವಾರ ಕರೆದಿತ್ತು.ದೇಶದ ಬಹುತೇಕ ರಾಜ್ಯಗಳಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಸರಾಸರಿಗಿಂತ ಭಾರೀ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಸಾಲದೆಂಬಂತೆ ದಕ್ಷಿಣ ಮತ್ತು 37560http://kannada.oneindia.com/img/2009/06/24-draught1.jpg495804monsoonಲಿಂಗನಮಕ್ಕಿಯಲ್ಲಿ ಬರ... ಅರ್ಧ ಕರ್ನಾಟಕ ಕತ್ತಲಲ್ಲಿ?/cj/pasha/2009/0630-monsoon-failure-linganamakki-dam-empty.htmlಶಿವಮೊಗ್ಗ, ಜೂ.30 : ಭಾರತದ ಹತ್ತು ಪ್ರಮುಖ ಅಣೆಕಟ್ಟುಗಳಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಲಿಂಗನಮಕ್ಕಿ ಅಣೆಕಟ್ಟು ಅರ್ಧ ಕರ್ನಾಟಕಕ್ಕೆ ಬೆಳಕು ನೀಡುವ ಅಣೆಕಟ್ಟು ಎಂದೇ ಕರೆಯಲ್ಪಡುತ್ತದೆ. ಆದರೆ, ಈ ಬಾರಿಯ ಮುಂಗಾರು ಕೈಕೊಟ್ಟಿದ್ದರಿಂದ ಲಿಂಗನಮಕ್ಕಿ ಅಣೆಕಟ್ಟು ನೀರಿಲ್ಲದೇ ಬಡಕಲಾಗಿದೆ.ಶರಾವತಿ ನದಿಗೆ ಕರ್ನಾಟಕ ಸರ್ಕಾರ 1964ರಲ್ಲಿ ನಿರ್ಮಿಸಿದ ಲಿಂಗನಮಕ್ಕಿ ಅಣೆಕಟ್ಟಿನ ವಿಸ್ತಾರ 2.4 37676http://kannada.oneindia.com/img/2009/06/30-linganamakki1.jpg135888loveಪ್ರೀತಿ ಪ್ರೇಮ, ಕಾಮ ಬಂದಾಗ ಚರ್ಚೆಗೆ ಫುಲ್‌ಸ್ಟಾಪ್!/lifestyle/kamasutra/2008/0806-why-the-discussion-should-end-here.htmlನಮ್ಮದೊಂದು ಏಳೆಂಟು ಜನರ ಗೆಳೆಯರ ಗುಂಪೇ ಇದೆ. ಗೆಳತಿಯರಿಗೆ ಖಂಡಿತ ಪ್ರವೇಶವಿಲ್ಲ. ಗೆಳತಿಯರಿಗೆ ಪ್ರವೇಶವಿಲ್ಲ ಏಕೆಂದರೆ ನಮಗ್ಯಾರಿಗೂ ಗರ್ಲ್‌ಫ್ರೆಂಡ್‌ಗಳಿಲ್ಲ. ಗರ್ಲ್‌ಫ್ರೆಂಡ್ಸ್ ಯಾಕಿಲ್ಲ ಅಂದ್ರೆ ಹುಡುಗಿಯರನ್ನು ನೇರವಾಗಿ ಹೋಗಿ ಮಾತನಾಡಿಸುವ ತಾಕತ್ತು ಇಲ್ಲಿ ಅನೇಕರಿಗಿಲ್ಲ ಮತ್ತು ಕೆಲವರಿಗೆ ಈಗಾಗಲೆ ಮದುವೆಯಾಗಿದೆ! ನಾವು ಬೆಳೆದು ಬಂದ ಪರಿಸರವೇ ಅಂತಹುದೋ ಅಥವಾ ಧೈರ್ಯ ಮಾಡೇ ಇಲ್ವೋ ಅಂತೂ ನಮ್ಮ ಗುಂಪಿನಲ್ಲಿ ಹುಡುಗಿಯರಿಗೆ 1482http://kannada.oneindia.com/img/2009/11/10-intimacy1e.jpg135888loveಪ್ರಾಮಿಸ್‌ ಮಾಡಿದ್ರೆ ಮಾತ್ರ ನಾನ್‌ ಈ ವಿಷ್ಯಾ ಹೇಳ್ತೀನಿ!/column/women/2007/020307gossipping.htmlಕಂಡೋರ ಪತ್ರ, ಅದರಲ್ಲೂ ಪ್ರೇಮ ಪತ್ರಗಳ ಓದೋದು ತಪ್ಪು ಅಂತ ನಮಗೆಲ್ಲರಿಗೂ ಚೆನ್ನಾಗಿ ಗೊತ್ತು, ಆದರೆ ಹಾಳಾದ್ದು ಎಂಥದ್ದೋ ಒಂದು ರೀತಿಯ ಕುತೂಹಲ! ಮೊನ್ನೆ ಹೀಗೆ ಒಂದು ಲವ್‌ಲೆಟರ್‌ ನನ್‌ ಕಣ್ಣಿಗೆ ಬಿತ್ತು. ಅದರ ಬಗ್ಗೆ ನಿಮಗೆ ಹೇಳ್ದೆಯಿದ್ರೇ, ಬೆಳಗ್ಗೆ ತಿಂದ ತಿಂಡಿ ಜೀರ್ಣವಾಗೋದಾದ್ರೂ ಹೇಗೆ? ಅವಳು ಆ ಲವ್‌ಲೆಟರ್‌ನಲ್ಲಿ ಏನೇನ್‌ ಬರ್ದೀದಾಳೆ? ಯಾರಿಗೆ ಬರ್ದೀದಾಳೆ ಅಂತಾ 10897http://kannada.oneindia.com/img/2009/08/27-woman-water1.jpg135888loveಓ ಗೆಳತಿ, ಒಲುಮೆಯ ಹೂವೆ ನೀಹೋದೆ ಎಲ್ಲಿಗೆ?/column/sham/2006/080606loud_thinking.htmlಕಾಡುಬೆಳದಿಂಗಳ ರಾತ್ರಿಯಲ್ಲಿ ತಂಗಾಳಿಗೆ ಮೈಯೊಡ್ಡಿ ವಿಹಾರಕ್ಕೆಂದು ಹೊರಟವರು ನಾವು. ಇಂದು ಹಾಲುಜೇನಿನ ಚಕ್ರತೀರ್ಥದ ಸುಳಿಗೆ ಸಿಲುಕಿಕೊಂಡಿದ್ದೇವೆ. ಗತ್ಯಂತರವೇ ಇಲ್ಲ. ಅಲ್ಲೇ ನಿಂತು ನಕ್ಷತ್ರಗಳತ್ತ ಕೈಚಾಚೋಣ. ಕೆಲವಾದರೂ ನಮ್ಮದಾಗಬಹುದು. ಯೋಗ ಇದ್ದರೆ ಎಲ್ಲವೂ..* ಎಸ್.ಕೆ. ಶಾಮಸುಂದರ'ಓ ಬಸಂತಿ ಪವನ ಪಾಗಲ್‌ ನಾಜಾರೆ ನಾಜಾ.. ರೂಕೋ ಕೋಯೀ .. ಓ ಬಸಂತಿ"ನಮ್ಮದೊಂದು ದಿವ್ಯ ಪ್ರೇಮ ಆಗಿತ್ತು ಅಲ್ವಾ? ಮಧುಮತಿ.ಹೌದು. ಇವತ್ತಿನ 11285http://kannada.oneindia.com/img/2009/09/01-sham3.jpg135888loveಪ್ರೇಮಿಗಳ ದಿನದಂದು ಮುತಾಲಿಕ್‌ಗೆ ಪಿಂಕ್ ಚಡ್ಡಿ!/mixed-bag/lifestyle/2009/0209-pink-chaddi-to-mutalik-on-valentines-day.htmlಫೆಬ್ರವರಿ 14 ಪ್ರೇಮಿಗಳ ದಿನದಂದು ಒಟ್ಟಾಗಿರುವ ಹುಡುಗ ಹುಡುಗಿಯರನ್ನು ಬೇರ್ಪಡಿಸುವ ಅಥವಾ ಮದುವೆ ಮಾಡಿಸಿ ಒಂದಾಗಿಸುವ 'ಪ್ರತಿಜ್ಞೆ'ಗೈದಿರುವ ಬ್ರಹ್ಮಚಾರಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರಿಗೆ ಅವಕೃಪೆಗೊಳಗಾಗಿರುವ ಹುಡುಗಿಯರಿಂದಲೇ 'ಭರ್ಜರಿ' ಕೊಡುಗೆ ಸಿಗಲಿದೆ.'ಕನ್ಸಾರ್ಷಿಯಮ್ ಆಫ್ ಪಬ್ ಗೋಯಿಂಗ್, ಲೂಸ್ ಅಂಡ್ ಫಾರ್ವರ್ಡ್ ವುಮೆನ್' ಎಂಬ ವಿಚಿತ್ರ ಹೆಸರಿನ ಆಧುನಿಕ ಜಗತ್ತಿಗೆ ತೆರೆದುಕೊಂಡಿರುವ, ಬೆಂಗಳೂರಿನಲ್ಲಿ ಬೇರೂರಿರುವ ಮಹಿಳೆಯರ ಸಂಘಟನೆಯೊಂದು 34568http://kannada.oneindia.com/img/2009/02/10-gift-parcel1.jpg135888loveಮಲೆನಾಡ ಮದುವೆಯೆಂದರೆ.. ಸುಮ್ನೆನಾ?/column/shreenidhi/2009/0217-marriage-rituals-in-malenadu-karnataka.htmlನಗರಗಳಲ್ಲಿ ಮದುವೆಗಳೆಂದರೆ ಧಾರ್ಮಿಕ ಕಾರ್ಯಗಳಿಂದ ಹಿಡಿದು ಪ್ರತಿಯೊಂದನ್ನು ಕಾಂಟ್ರಾಕ್ಟ್ ಕೊಟ್ಟು ಕೈಬೀಸಿ ಮದುವೆ ಮಂಟಪಕ್ಕೆ ನಡೆದು ಬರುವಷ್ಟರ ಮಟ್ಟಕ್ಕೆ ಯಾಂತ್ರಿಕವಾಗಿವೆ. ಎಲ್ಲ ಮದುವೆಗಳೂ ಹೀಗೇ ಇಲ್ಲದಿದ್ದರೂ ಕಷ್ಟ ತಪ್ಪಿದರೆ ಸಾಕಪ್ಪ ಅನ್ನುವಂತಾಗಿವೆ. ಆದರೆ, ಮಲೆನಾಡುಗಳಲ್ಲಿ ಮದುವೆಗಳೆಂದೆ ಹೀಗಲ್ಲ. ಅಲ್ಲಿಯ ಸಂಭ್ರಮಕ್ಕೆ ಎಲ್ಲೆಯೇ ಇಲ್ಲ. ಊರಿನ ಪ್ರತಿಯೊಬ್ಬರೂ ಬಂಧುಗಳೇ. ಇಷ್ಟೊಂದು ಜನರನ್ನ ಹೇಗಪ್ಪ ಸಂಭಾಳಿಸುವುದು ಅಂದುಕೊಂಡರೂ ಮದುವೆ ಮುಗಿಸಿ 34711http://kannada.oneindia.com/img/2009/02/17-woman-havyaka1.jpg38243manikanthಅಮ್ಮ ಹೇಳಿದ ಎಂಟು ಸುಳ್ಳುಗಳು/column/manikanth/2008/0918-eight-lies-of-my-mothers.htmlಸೂಚನೆ : ಈ ಸುಳ್ಳುಗಳನ್ನು ಓದುವುದಕ್ಕೆ ಶುರುಮಾಡುವ ಮುನ್ನ ಕರವಸ್ತ್ರವನ್ನು ಕೈಯಲ್ಲಿಟ್ಟುಕೊಂಡಿದ್ದರೆ ಕ್ಷೇಮ. ಯಾಕೆಂದರೆ, ಇದು ತಾಯಿಯ ಪ್ರೀತಿ ಮತ್ತು ತ್ಯಾಗವನ್ನು ಕಂಡುಂಡು ಕಡುಬಡತನದಲ್ಲಿ ಬೆಳೆದ ಕನ್ನಡ ಮಕ್ಕಳಿಗೆ ಮಾತ್ರ. ಸಿರಿ ಉಕ್ಕಿ ಮದ ಹೊಕ್ಕಿದವರಿಗಿಲ್ಲ. ಅಂಕಣಕಾರ : ಎ.ಆರ್. ಮಣಿಕಾಂತ್ ತುಂಬಾ ದೂರ ಅಲ್ಲ ಸಾರ್, ಇಲ್ಲೇ, ಬೆಂಗಳೂರು ತುಮಕೂರಿನ ಮಧ್ಯೆ ನೆಲಮಂಗಲ 765http://kannada.oneindia.com/img/2009/10/24-manikanth1.jpg38243manikanthಎರಡೂ ಕೈಗಳಿಲ್ಲದ ಹೀಗೂ ಉಂಟೆ/column/manikanth/2008/1224-jessica-cox-hats-off-to-the-handless.htmlಕಾಲುಗಳಿಲ್ಲದ ನಾಗನರೇಶ್ ಕರುತರ ಸಾಫ್ಟ್‌ವೇರ್ ಎಂಜಿನಿಯರ್ ಆದದ್ದನ್ನು; ಕೈ-ಕಾಲುಗಳಿಲ್ಲದ ನಿಕ್ ಜೆಸಿಕ್‌ನ ಯಶೋಗಾಥೆಯನ್ನು; ಅಂಧತ್ವಕ್ಕೇ ಸವಾಲು ಹಾಕಿ ಭರತನಾಟ್ಯದ ದೊರೆಯಾದ ಬುಸೇಗೌಡರ ಕತೆಯನ್ನು; ಕಡುಕಡುಕಡುಕಡು ಬಡತನದ ಮಧ್ಯೆಯೂ ಐಎಎಸ್ ಮಾಡಿದ ಗೋವಿಂದ ಜೈಸ್ವಾಲ್‌ನ ದಿಗ್ವಿಜಯದ ಚರಿತೆಯನ್ನು ಈ ಹಿಂದೆ, ಇದೇ ಅಂಕಣದಲ್ಲಿ ಓದಿದ್ದೀರಿ. ಈಗ ನಿಮ್ಮೆದುರು ತೆರೆದುಕೊಳ್ಳಲಿರುವುದು, ಇವರೆಲ್ಲರನ್ನೂ ಮೀರಿಸಿದ ಮಹಾನ್ ಸಾಧಕಿಯೊಬ್ಬಳ ಬದುಕಿನ ಕಥೆ; ಹ್ಯಾಟ್ಸ್ 33687http://kannada.oneindia.com/img/2008/12/24-jessicacox1.jpg38243manikanthಯುವ ನಿರ್ದೇಶಕರುಗಳಿಗೆ ಒಂದು ಪತ್ರವು.../column/manikanth/2009/0103-open-letter-to-young-directors-kannada-movie.htmlಹಳೆಯ ಕಥೆ, ಬಡಕಲು ಹೀರೋ, ಕಡಿಮೆ ಬಟ್ಟೆಯ ಇಪ್ಪತ್ತೈದು ಕೇಜಿಯ ಹೀರೋಯಿನ್, ಮಧ್ಯೆ ಮಧ್ಯೆ ಲಾಂಗು-ಮಚ್ಚುಗಳ ಖಣಖಣ, ನಮ್ಮ ವಜ್ರಮುನಿಯ ಕಿರುಬೆರಳಿಗೂ ಸಾಟಿಯಾಗದಂಥ ವಿಲನ್ನು... ಇಂಥವರೇ ತುಂಬಿಕೊಂಡಿರೋ ನಿಮ್ಮ ಸಿನಿಮಾ ನೋಡೋಕೆ-ಜನಕ್ಕೇನಾದ್ರೂ ಹುಚ್ಚು ಹಿಡಿದಿದೆಯೇನ್ರಿ? ಮುಂಗಾರು ಮಳೆ ಸುರಿಸಲು ಬಂದು ಅರ್ಧದಾರಿಯಲ್ಲೇ ಆವಿಯಾಗಿ ಹೋದ ಯುವ ನಿರ್ದೇಶಕರಿಗೆ ಎರಡು ಕಿವಿಮಾತುಗಳು. ಆದರೆ ಇನ್ನೊಂದು ಮಾತು, ಈ ಕಿವಿಯಿಂದ 33855http://kannada.oneindia.com/img/2009/01/03-preetam-gubbi1e.jpg38243manikanthಪ್ರೀತಿಯ ತಂದೆಗೆ ಮಗಳ ಪತ್ರ.../column/manikanth/2009/0109-letter-from-daughter-to-beloved-father.htmlಮಕ್ಕಳು ಜೀವನದಲ್ಲಿ ಎಡವದಿರಲೆಂದು ಮುದ್ದು ಮಾಡಿ ಬೆಳೆಸಿದ ಅಪ್ಪ ಅಮ್ಮಂದಿರು ಹೇಗೆ ಅಪೇಕ್ಷಿಸುತ್ತಾರೋ, ಅರಿವಿದ್ದೋ, ಅರಿವಿಲ್ಲದೆಯೋ ಎಡವಿ ಬಿದ್ದಾಗ ಮಕ್ಕಳು ಕೂಡ ಪ್ರೀತಿಯ ಅಪ್ಪ ಮತ್ತು ಅಮ್ಮ ತಮ್ಮ ಕಿರುಬೆರಳು ಹಿಡಿದು ಎಬ್ಬಿಸುತ್ತಾರೆಂದು ಅಪೇಕ್ಷಿಸುತ್ತವೆ. ಸೋತಾಗ ಕೈಹಿಡಿದು ಎಬ್ಬಿಸಿ, ಗೆದ್ದಾಗ ಬೆನ್ನುತಟ್ಟಿ ಪ್ರೋತ್ಸಾಹಿಸುವುದು ಪ್ರತಿ ಪಾಲಕರ ಕರ್ತವ್ಯ.* ಎ.ಆರ್. ಮಣಿಕಾಂತ್ಮಗಳ ವರ್ತನೆ ಯಾಕೋ ಸರಿಯಾಗಿಲ್ಲ. ಇಂಥದೊಂದು ಅನುಮಾನ 33978http://kannada.oneindia.com/img/2009/01/09-daughter-father-love1.jpg38243manikanthಬೇಡ ಬಿಟಿ ಬದನೆ, ಶ್ರೀರಾಮುಲು ಅವರಿಗೆ ನಿವೇದನೆ/column/manikanth/2009/0128-bt-brinjal-how-safe-is-gm-crop.htmlಜೈವಿಕ ತಂತ್ರಜ್ಞಾನ ಬಳಸಿ ಬೆಳೆಯಲಾಗುವ ಆಹಾರದ ವಿರುದ್ಧ ಇಡೀ ದೇಶದಲ್ಲೇ ಹುಯಿಲೆದ್ದಿದೆ. ಕುಲಾಂತರಿ ಆಹಾರ ತಯಾರಿಗೆ, ಸಂಶೋಧನೆಗೆ ನಾನು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಚಿವರು ಕೂಡ ಘೋಷಿಸಿದ್ದಾರೆ. ರಾಜ್ಯದ ಆರೋಗ್ಯ ಸಚಿವರಾದ ಶ್ರೀರಾಮುಲು ಮಾತ್ರ ಬಾಯಿಗೆ ಬಿರಡೆ ಹಾಕಿ ಕುಳಿತಿದ್ದಾರೆ. ಸಾವಯವ ಕೃಷಿಗೆ ಉತ್ತೇಜನ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ್ದರೂ ಜೈವಿಕ ತಂತ್ರಜ್ಞಾನದ ಬಳಕೆ 34337http://kannada.oneindia.com/img/2009/01/28-bt-brinjal1.jpgnews"> ಹೆಂಡತಿಗೆ ಚೆಲ್ಲಾಟ 'ಪಾಪಿ' ಗಂಡನಿಗೆ ಪ್ರಾಣಸಂಕಟ! | Ashadha masa | Newly married couple | Romance | Separation - ಹೆಂಡತಿಗೆ ಚೆಲ್ಲಾಟ 'ಪಾಪಿ' ಗಂಡನಿಗೆ ಪ್ರಾಣಸಂಕಟ! - Kannada Oneindia

ಹೆಂಡತಿಗೆ ಚೆಲ್ಲಾಟ 'ಪಾಪಿ' ಗಂಡನಿಗೆ ಪ್ರಾಣಸಂಕಟ!

Why married couple are separated during Ashadha?
ತಮಾಷೆಯೆಂದರೆ, ಹೀಗೆ- ಕುಣಿದಾಡಿಕೊಂಡೇ ತೌರಿಗೆ ಬಂದವಳ ಸಂಭ್ರಮ ಎರಡೇ ದಿನಗಳಿಗೆ ಮುಗಿದು ಹೋಗುತ್ತಿತ್ತು. ತವರು ಮನೆಯ ನೂರು ಸಂಭ್ರಮದ ಮಧ್ಯೆಯೂ ಗಂಡ' ನೆನಪಾಗುತ್ತಿದ್ದ. ಅವನೊಂದಿಗೆ ಜಗಳವಾಡಿದ್ದು, ಠೂ ಬಿಟ್ಟಿದ್ದು, ತಲೆ ಮೇಲೆ ಮೊಟಕಿದ್ದು, ಸ್ನಾನದ ಮನೆಯಲ್ಲಿ ಸರಸವಾಡಿದ್ದು, ಒಂದೇ ತಟ್ಟೆಯಲ್ಲಿ ಹಂಚಿಕೊಂಡು ತಿಂದದ್ದು ನೆನಪಾಗಿ ಬಿಡುತ್ತಿತ್ತು. ಪರಿಣಾಮ, ಕೆನ್ನೆಯಲ್ಲಿನ್ನೂ ಅರಿಶಿಣದ ಗುರುತು ಉಳಿಸಿಕೊಂಡಿರುತ್ತಿದ್ದ ಕನ್ಯೆಗೆ ರಾತ್ರಿ ನಿದ್ರೆ ಬರುತ್ತಿರಲಿಲ್ಲ!

ಈ ಕಡೆ, ಗಂಡ ಅನ್ನಿಸಿಕೊಂಡವನ ಕಥೆಯೂ ಅದೇ. ಆಗೆಲ್ಲ, ತವರಿಗೆ ಹೋದವಳನ್ನು ಸಂಪರ್ಕಿಸಲು ಇದ್ದ ದಾರಿಯೆಂದರೆ ಕಾಗದ ಬರೆಯುವುದು! ಈ ಪುಣ್ಯಾತ್ಮನ ಕಾಗದವನ್ನು ಹೆಂಡತಿಯ ಮನೆಯಲ್ಲಿ ಎಲ್ಲರೂ ಓದುತ್ತಿದ್ದುದರಿಂದ ಅಲ್ಲಿ ಪೋಲ್ ಪೋಲಿಯಾಗಿ ಬರೆಯುವಂತಿರಲಿಲ್ಲ. ಕಾಗದ ಬಿಟ್ಟರೆ, ಹೆಂಡತಿಯನ್ನು ಸಂಪರ್ಕಿಸಲು ಇದ್ದ ಇನ್ನೊಂದು ದಾರಿಯೆಂದರೆ- ಎಸ್ಟೀಡಿ ಫೋನು! ಆಗೆಲ್ಲ, ಒಂದೂರಿನಲ್ಲಿ ತಲಾ ಇಪ್ಪತ್ತು ಮನೆಗೆ ಒಂದು ಫೋನ್ ಇರುತ್ತಿತ್ತು. ಆ ಮನೆಯ ನಂಬರ್ ಪಡೆದು ಫೋನ್ ಮಾಡಿದರೆ, ಮನೆಯ ಯಜಮಾನರು ಫೋನ್ ಎತ್ತಿಕೊಂಡು ಲೋಕಾಭಿರಾಮ ಹರಟೆಗೇ ನಿಂತುಬಿಡುತ್ತಿದ್ದರು! ಇವನಿಗೋ ಪ್ರಾಣಸಂಕಟ. ಅವರ ಕಾಡು ಹರಟೆಯನ್ನೆಲ್ಲ ತೆಪ್ಪಗೆ ಕೇಳಿಸಿಕೊಂಡು ಕಡೆಗೊಮ್ಮೆ ಸಂಕೋಚದಿಂದ ನಮ್ಮ ರಾಧನನ್ನು' ಕರೀತೀರಾ ಅಂದರೆ- ಕರೆಯೋಣ ಕರೆಯೋಣ ಎಂದು ಅವರು ಹೇಳುತ್ತಿದ್ದಾಗಲೇ ಲೈನ್ ಕಟ್ ಆಗುತ್ತಿತ್ತು! ಇವನು ಇನ್ನೊಂದು ಬಾರಿ ಫೋನ್ ಮಾಡುವ ವೇಳೆಗೆ ಅವಳು' ಓಡಿ ಬಂದಿರುತ್ತಿದ್ದಳು ನಿಜ. ಆದರೆ, ಆಕೆಯ ಸುತ್ತಲೂ ಗೆಳತಿಯರ, ನೆರೆ ಹೊರೆಯವರ ಗುಂಪಿರುತ್ತಿತ್ತು. ಇವನಿಗೋ ಫೋನ್‌ನಲ್ಲೇ ಲಲ್ಲೆಗೆರೆಯುವ, ಮುತ್ತಿಡುವ, ಪೋಲಿ ಜೋಕು ಹೇಳುವ ಕಾತುರ!

ಆದರೆ, ಇವನ ಸಂಭ್ರಮಕ್ಕೆ ದನಿಯಾಗುವ ಪರಿಸ್ಥಿತಿಯಲ್ಲಿ ಅವಳಿರುತ್ತಿರಲಿಲ್ಲ. ಈತ ಗುರ್ರ ಗುರ್ರ ಎಂದು ರೇಗಿದರೂ, ಸೆಕ್ಸಿಯಾಗಿ ಮಾತಾಡಿದರೂ ಒಂದಿಷ್ಟು ಬೈದರೂ- ಈಕೆ ಹಾ, ಹೂಂ, ಸರಿ ಸರಿ...' ಎಂದೇ ಮಾತು ಮುಗಿಸುತ್ತಿದ್ದಳು. ಇದರಿಂದ ಸಹಜವಾಗಿಯೇ ಸಿಟ್ಟಾದ ಈ ಗಂಡ ಮಹಾರಾಯ- ತವರಿನ ಸುಖ ಜಾಸ್ತಿ ಆಗಿರಬೇಕು, ಹಾಗಿರುವಾಗ ನನ್ನ ನೆನಪೆಲ್ಲಿ ಬರ್‍ತದೆ ಹೇಳು?' ಎಂದು ಚುಚ್ಚಿ ಪತ್ರ ಬರೆಯುತ್ತಿದ್ದ! ಮರುಟಪಾಲಿಗೇ ಬರುತ್ತಿದ್ದ ಅವಳ ಉತ್ತರ ಹೀಗಿರುತ್ತಿತ್ತು? ತೌರ ಸುಖದೊಳಗೆನ್ನರೆತಿಹಳು ಎನ್ನದಿರಿ/ ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು/ ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ/ ಇರುಳಿನಲಿ ಕಾಣುವುದು ನಿಮ್ಮ ಕನಸು..' ಮೊದಲೇ ವಿರಹದ ಮಧ್ಯೆ ಬದುಕುತ್ತಿದ್ದವನಿಗೆ ಇಂಥದೊಂದು ಆರ್ದ್ರ ಭಾಷೆಯ ಪತ್ರ ಬಂದರೆ, ಮನಸು ತಡೆದೀತಾದರೂ ಹೇಗೆ? ಈತ ತಕ್ಷಣವೇ ಕೋಟಿ ಯೋಜನವಿರಲಿ ದಾಟಿ ಬರುವೆನು ಹೆಣ್ಣೆ..' ಎಂದು ಹಾಡಿಕೊಂಡೇ ಹೆಂಡತಿಯ ಮನೆಗೆ ಬಂದುಬಿಡುತ್ತಿದ್ದ. ಫಜೀತಿಯೆಂದರೆ, ಅತ್ತೆಯ ಮನೆಯಲ್ಲಿ ಹೊಸದೊಂದು ಬಗೆಯ ಸಂಕಟ ಜೊತೆಯಾಗುತ್ತಿತ್ತು.

ಈತ' ಆಗೊಮ್ಮೆ ಈಗೊಮ್ಮೆ ಅವಕಾಶ ಸಿಕ್ಕರೆ ಅವಳೊಂದಿಗೆ ಸರಸವಾಡಬೇಕು ಎಂಬ ಅವಸರದಲ್ಲಿದ್ದರೆ ಅದಕ್ಕೆ ಅವಕಾಶವೇ ಸಿಗುತ್ತಿರಲಿಲ್ಲ. ಊಟ ಬಡಿಸಲು ಅವಳೊಂದಿಗೆ' ಅತ್ತೆಯೂ ಬರುತ್ತಿದ್ದುದರಿಂದ ಆಗ ಕೈ ಚಿವುಟಿ ರೋಮಾಂಚನಗೊಳ್ಳುವುದಕ್ಕೆ; ಕಣ್ಣು ಹೊಡೆದು ಖುಷಿ ಪಡುವುದಕ್ಕೆ ಆಗುತ್ತಿರಲಿಲ್ಲ. ಊಟವಾದ ನಂತರ ಹೊರಬಂದು, ಈಗ ಎರಡೇ ನಿಮಿಷದ ಮಟ್ಟಿಗೆ ಕರೆಂಟು ಹೋಗಿಬಿಟ್ಟರೆ ಸಾಕು, ತಬ್ಬಿ ಮುದ್ದಾಡಬಹುದು ಎಂದು ಇಬ್ಬರೂ ಅಂದುಕೊಳ್ಳುತ್ತಿದ್ದರು ನಿಜ. ಆದರೆ ಅವತ್ತು ದರಿದ್ರದ ಕರೆಂಟು ಹೋಗುತ್ತಲೇ ಇರಲಿಲ್ಲ! ಹಾಳಾಗಿ ಹೋಗಲಿ, ಮಲಗುವ ಮುನ್ನವಾದರೂ ಅವಳನ್ನು ತಬ್ಬಿ ಮುದ್ದಾಡಲೇಬೇಕು ಎಂದು ಇವನು' ಅಂದುಕೊಂಡಿದ್ದಾಗಲೇ- ಹೆಂಡತಿಯ ಅಣ್ಣನೋ, ಮಾವನೋ ಲಗುಬಗೆಯಿಂದ ಬಂದು ಹಾಸಿಗೆ ಹಾಸಿಕೊಡುತ್ತಿದ್ದರು. ಅವಳು' ಎಲ್ಲವನ್ನೂ ಬಾಗಿಲ ಸಂದಿಯಲ್ಲೇ ನೋಡಿ, ನಕ್ಕು, ಸಾರಿ ಕೇಳಿ, ಗಾಳಿಯಲ್ಲಿ ಹೂಮುತ್ತು ತೇಲಿಬಿಟ್ಟು ಹೋಗಿಬಿಡುತ್ತಿದ್ದಳು. ಇಂಥ ಗಡಿಬಿಡಿ, ಸಿಡಿಮಿಡಿ, ಆಸೆ, ಕಾತುರ ಹಾಗೂ ವಿರಹದ ಮಧ್ಯೆಯೇ ಆಷಾಢ ಕಳೆದುಹೋಗುತ್ತಿತ್ತು. ಸ್ವಾರಸ್ಯ ಏನೆಂದರೆ- ಈ ಒಂದು ತಿಂಗಳ ಅವಧಿಯಲ್ಲಿ ಅವಳಿಗೆ ಇವನ ಮೇಲೆ, ಇವಳಿಗೆ ಅವನ ಮೇಲೆ ಅತೀ' ಅನ್ನುವಷ್ಟು ಪ್ರೀತಿ ಹುಟ್ಟುತ್ತಿತ್ತು. ಸಂಬಂಧದ ಬಂಧ ಗಟ್ಟಿಯಾಗುತ್ತಿತ್ತು!

ಹೌದು. ಇದೆಲ್ಲಾ ಹಳೆಯ ಮಧುರ ನೆನಪು. ಈಗ ಆಷಾಢಕ್ಕೆ ಹೆದರುವ ಗಂಡ-ಹೆಂಡಿರಿಲ್ಲ. ಅಯ್ಯೋ, ಆಷಾಢ ಇಲ್ವಾ ನಿಮ್ಗೆ? ಎಂದು ಕೇಳಿದರೆ ಆ ಬೆಡಗಿ ನಕ್ಕು- ಗೊತ್ತಲ್ಲ ನಿಮ್ಗೂ. ಆಷಾಢದಲ್ಲಿ ಅತ್ತೆ-ಸೊಸೆ ಒಂದು ಮನೇಲಿ ಇರಬಾರ್‍ದಂತೆ. ಗಂಡ-ಹೆಂಡತಿ ಇರಬಹುದಂತೆ! ನಮ್ಮತ್ತೆ ಊರಲಿದ್ದಾರೆ. ಹಾಗಾಗಿ ನಮ್ಗೆ ಆಷಾಢವಿಲ್ಲ' ಅನ್ನುತ್ತಾಳೆ. ಬೆಂಗಳೂರಿನಲ್ಲೇ ಬದುಕುವ ಜೋಡಿಗಳಂತೂ ಊರಿಗೆ ಹೋಗದೆ, ಅಕ್ಕಪಕ್ಕದ ಏರಿಯಾಗಳಲ್ಲೇ ಇರುವ ಬಂಧುಗಳ ಮನೆ ಸೇರಿಕೊಳ್ಳುತ್ತಾರೆ. ಇನ್ನು ಕೆಲವರು- ಅಯ್ಯೋ ಹೋಗ್ರಿ, ಒಂದಿಡೀ ತಿಂಗಳು ಯಾರು ಒಂಟಿಯಾಗಿ ಬದುಕುತ್ತಾರೆ? ನಮಗೆ ಆಷಾಢವೂ ಬೇಡ, ಗೀಷಾಡವೂ ಬೇಡ' ಎಂದು ಉತ್ತರಿಸುತ್ತಾರೆ. ಒಂದು ವೇಳೆ ಸಂಪ್ರದಾಯದ ನೆಪದಲ್ಲಿ ಆಕೆ ತವರಿಗೆ ಹೋದರೆ, ಎರಡೇ ದಿನಗಳ ನಂತರ ಅವಳ ಪತಿರಾಯರೇ ಅತ್ತೆ ಮನೆಗೆ ಹೋಗಿಬಿಡುತ್ತಾರೆ. ಒಂದು ರೌಂಡ್ ಸುತ್ತಾಡಿ ಬರೋಣ ಎಂದು ಹೇಳಿ, ಅತ್ತೆಯ ವಿರೋಧಕ್ಕೆ ಗೋಲಿ ಹೊಡೆದು ಹೋಗಿಯೂಬಿಡುತ್ತಾರೆ. ಹೊರಗೆ ಬಂದ ಮೇಲೆ ಇನ್ನೇನಿದೆ? ಪರಸ್ಪರ ಭೇಟಿಯಾಗುತ್ತದೆ. ಬೇಕಿರುವುದೆಲ್ಲ ಲೂಟಿಯಾಗುತ್ತದೆ! ಆಮೇಲೆ, ಏನೂ ನಡೆದೇ ಇಲ್ಲ ಎಂಬಂತೆ ಇಬ್ಬರೂ ಹುಳ್ಳಗೆ ನಗುತ್ತಾ ಮನೆಗೆ ಬರುತ್ತಾರೆ. ಈಗಿನ ದಂಪತಿಯ ಪೈಕಿ ಹೆಚ್ಚಿನವರು ಸದ್ಯಕ್ಕೆ ಮಗು ಬೇಡ ಎಂದು ಮೊದಲೇ ನಿರ್ಧರಿಸುವುದರಿಂದ ಆಷಾಢದಲ್ಲಿ ಒಂದಾದರೆ ಮುಂದೆ ಕಷ್ಟ ಆಗುತ್ತೆ ಎಂಬುದೇ ಅರ್ಥ ಕಳೆದುಕೊಂಡಿದೆ.

ಪರಿಣಾಮ ಏನಾಗಿದೆಯೆಂದರೆ, ಈಗ, ಆಷಾಢ ಎಂದರೆ ಅವನಿ(ಳಿ)ಲ್ಲದೆ ಇರಬೇಕಿಲ್ಲ ಎಂಬ ಸಂಕಟವಿಲ್ಲ. ಇಬ್ಬರ ಬಳಿಯೂ ಮೊಬೈಲ್ ಇರುವುದರಿಂದ ಎಸ್ಟೀಡಿ ಫೋನ್ ಮಾಡುವ ಅಗತ್ಯವಿಲ್ಲ. ಪತ್ರ ಬರೆಯುವುದೇ ಇಬ್ಬರಿಗೂ ಮರೆತಿದೆಯಾದ್ದರಿಂದ ಅಕ್ಷರ ಪ್ರೀತಿಯ ರೋಮಾಂಚನ ಕೂಡ ಇಬ್ಬರಿಗೂ ಇಲ್ಲ. ಹೀಗೆ, ಬದಲಾಗಿ ಹೋದ ಕಾಲಮಾನವನ್ನು ಮರೆತು ಹೋಗುತ್ತಿರುವ ಸಂಪ್ರದಾಯವನ್ನು ಕಂಡಾಗ ಅನಿಸುವುದಿಷ್ಟೆ: ಕಾಲಾಯ ತಸ್ಮೈ ನಮಃ ಆಷಾಢ ಅಂದ್ರೆ ಸುಮ್ನೇನಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+