• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಾತಂತ್ರ್ಯ ದಿನದ ಸ್ಮರಣೆಯಲ್ಲಿ ಕತಲೂನ್ಯಾ ಸ್ವಾತಂತ್ರ್ಯ ಹೋರಾಟದ ಕಥೆ...

By ಜಯನಗರದ ಹುಡುಗಿ
|

ನೆನ್ನೆ ತಾನೆ ನಾವೆಲ್ಲರೂ ಸ್ವಾತಂತ್ರ್ಯ ದಿವಸ ಆಚರಿಸಿ, ತ್ರಿವರ್ಣ ಧ್ವಜದೊಂದಿಗಿನ ನಮ್ಮ ಚಿತ್ರ ಫೇಸ್ ಬುಕ್ ನಲ್ಲಿ ಹಾಕೊಂಡಿದ್ದಾಯಿತು. ನಮ್ಮ ಪೀಳಿಗೆಯವರ ಅಜ್ಜಂದಿರು, ಮುತ್ತಜ್ಜಂದಿರು ಒಮ್ಮೆಯಾದರೂ ಹೋರಾಟದಲ್ಲಿ ಭಾಗವಹಿಸಿದ್ದರಿಂದ ಅದರ ಕಥೆಗಳನ್ನು ಕೇಳಿ ಬೆಚ್ಚಿಬಿದ್ದಿದ್ದಿದೆ.

ತುಂಬಾ ಕಷ್ಟ ಪಟ್ಟು ಇವೆಲ್ಲ ಪಡೆದುಕೊಂಡಿದ್ದರ ಕಾರಣವೇನೋ ದೇಶದ ಬಗ್ಗೆ ಅವರಿಗೆ ತುಂಬಾ ವಿಶ್ವಾಸ ಹಾಗೂ ಪ್ರೀತಿ. ಶಾಲೆಯಲ್ಲಿ ಸಹ ಇದನ್ನೇ ಬೋಧನೆ ಮಾಡುತ್ತಿದ್ದುದ್ದರಿಂದ ನಮಗೆಂದಿಗೂ ದೇಶವನ್ನು ಬಯ್ಯುವುದು ಸಹಜವಾದ ಪ್ರಕ್ರಿಯೆ ಅಲ್ಲ. ಸರಕಾರಗಳನ್ನ ನಿಂದಿಸಿದ್ದು ಬಿಟ್ಟರೆ ಕನಸಲ್ಲಿಯೂ ದೇಶವನ್ನು ಅಪಹಾಸ್ಯ ಮಾಡಿದ್ದಿಲ್ಲ.

ಸ್ವಾತಂತ್ರ್ಯ ವೀರರು ಕಂಡ ಕನಸಿನ ಭಾರತ ಇದೇನಾ?

ಶಾಲೆಯಲ್ಲಿದ್ದಾಗ ನಾನು ಸ್ಕೂಲ್ ಕ್ಯಾಪ್ಟನ್. ಆದ್ದುದರಿಂದ ಭಾರತದ ಬಾವುಟವನ್ನು ಇಸ್ತ್ರಿ ಮಾಡಿ, ಅದರ ರೀತಿಯಲ್ಲಿಯೆ ಮಡಸಿ ಧ್ವಜ ಹಾರಿಸುವ ವ್ಯವಸ್ಥೆಗೆ ತಯಾರಿ ಮಾಡಬೇಕಿತ್ತು. ನಂತರ ಅದನ್ನು ಇಳಿಸಿ ಹಾಗೆಯೆ ಶಿಸ್ತುಬದ್ಧವಾಗಿ ಮಡಸಿ ಒಳಗೆ ಇಡುವ ಜವಾಬ್ದಾರಿ ಸಹ ನನ್ನದೇ ಅಗಿತ್ತು.

ನಮ್ಮ ಶಾಲೆಯ ಸಮಾರಂಭಕ್ಕೂ ಯೋಧರೋ, ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳೋ ಬಂದು ಭಾಷಣ ಮಾಡಿ ಹೊರಡುತ್ತಿದ್ದರು. ತಾತ ನನಗೆ ಯಾವಾಗಲೂ ಹೇಳುತ್ತಿದ್ದದ್ದು, "ನಿಮ್ಮ ಪೀಳಿಗೆ ಹೋರಾಟ ನೋಡಿಲ್ಲ, ಎಮರ್ಜೆನ್ಸಿ ನೋಡಿಲ್ಲ, ಯಾವುದಕ್ಕೂ ಹೊಡೆದಾಡದೆ ಕೈಗೆ ಎಲ್ಲವೂ ಸಿಕ್ಕಿದೆ, ಅದಕ್ಕೆ ನಿಮಗೆ ಅದರ ಬೆಲೆ ತಿಳಿಯುವುದು ಕಡಿಮೆ".

ಒಂದೇ ದಿನದಲ್ಲಿ ಎಷ್ಟೊಂದು ಕಥೆ ಕೊಟ್ಟ ನಮ್ಮ ಮೆಟ್ರೋ!

ಹೀಗೆ ಇಪ್ಪತ್ತೈದು ವರ್ಷ ಒಂದೇ ದೇಶದಲ್ಲಿ ಇದ್ದು, ನಂತರ ಬಾರ್ಸಿಲೋನಾಗೆ ಓದೋದಕ್ಕೆ ಹಾರಿದೆ. ಅಲ್ಲಿ ನನಗೆ ಸ್ವಾತಂತ್ರ್ಯದ ನಿಜ ಹಸಿವು, ಹೋರಾಟ ಕಂಡಿದ್ದು. ನಾ ಹೊರಡುವ ವೇಳೆ ನನಗೆ ಮಾಹಿತಿ ಕೊಡಲೆಂದು ಅಲ್ಲಿನ ವಿದ್ಯಾರ್ಥಿನಿ ಒಬ್ಬಳನ್ನು ನಮ್ಮ ವಿಶ್ವವಿದ್ಯಾಲಯ ಪರಿಚಯ ಮಾಡಿಕೊಟ್ಟಿತ್ತು. ಆಗ ಒಲಂಪಿಕ್ಸ್ ನಡೆಯುತ್ತಿದ್ದರಿಂದ ನಾ ಅವಳಿಗೆ, "ಎಲೆನಾ ನೋಡು ಸ್ಪೇನ್ ಮತ್ತು ಭಾರತ ಇವತ್ತು ಬ್ಯಾಡ್ಮಿಂಟನ್ ನಲ್ಲಿ ಕಾದಾಡುತ್ತಿದೆ, ಬಂಗಾರ ನಮ್ಮದೇ" ಎಂದು ಕಿಚಾಯಿಸಿದ್ದೆ.

ನಾನು ಕತಲಾನ್, ಸ್ಪ್ಯಾನಿಶ್ ಅಲ್ಲ

ನಾನು ಕತಲಾನ್, ಸ್ಪ್ಯಾನಿಶ್ ಅಲ್ಲ

ಅವಳು ತತಕ್ಷಣ "ನಾನು ಕತಲಾನ್, ಸ್ಪ್ಯಾನಿಶ್ ಅಲ್ಲ" ಅಂದ್ಲು. ನನಗೆ ಒಂದು ನಿಮಿಷ ಇರುಸು ಮುರುಸಾಯಿತು. ಮತ್ತೆ ನಾ ಆ ವಿಷಯ ತೆಗೆಯಲಿಲ್ಲ. ನಮ್ಮಂತಹ ದೊಡ್ಡ ದೇಶದಲ್ಲಿ ಚಿಕ್ಕ ಚಿಕ್ಕ ಭಾಗಗಳಿಗೆ ಸ್ವಾತಂತ್ರ್ಯ ಕೊಡುವುದಿರಲಿ ಸ್ವಾಯತ್ತತೆ ಕೊಡುವುದು ರೂಢಿ ಇಲ್ಲದಿರುವುದರಿಂದ ನಮಗೆ ಅರ್ಥವಾಗುವುದು ಕಷ್ಟ.

ನಾ ಅಲ್ಲಿಗೆ ಹೋದಾಕ್ಷಣ ಅವಳು ಕತಲೂನ್ಯದ ಪೂರ್ತಿ ಕಥೆಯನ್ನು ತಿಳಿಸಿದಳು. ಕತಲೂನ್ಯ ಸ್ಪೇನ್ ಗಿಂತ ಹಳತಾದ ರಾಜ್ಯವಾಗಿತ್ತು. ಐಬೀರಿಯನ್ ದೀಪಕಲ್ಪ ಎಂದು ಈಗಿನ ಸ್ಪೇನ್ ಮತ್ತು ಪೋರ್ತುಗಲ್ ಅನ್ನು ಕರೆಯುತ್ತಿದ್ದರು. ಇಲ್ಲಿನ ಭಾಗದ ಜನಕ್ಕೆ ಅವರದೆ ಆದ ಕಾನೂನು, ಸಂಪ್ರದಾಯಗಳಿದ್ದವು.

ಹಳದಿ- ಕೆಂಪು ಬಣ್ಣದ್ದೇ ಇವರದ್ದು ಧ್ವಜ

ಹಳದಿ- ಕೆಂಪು ಬಣ್ಣದ್ದೇ ಇವರದ್ದು ಧ್ವಜ

ಅರೆಗಾನ್ ನ ರಾಣಿ ಪೆಟ್ರೋನಿಲಿಯ ಮತ್ತು ಬಾರ್ಸಿಲೋನಾದ ಬೆರೆಂಜರ್ ರಾಜನಿಗೆ 1150ರಲ್ಲಿ ಮದುವೆಯಾಗಿ ಅಧಿಕೃತವಾಗಿ ಕತಲಾನ್ ಸಾಮ್ರಾಜ್ಯ ಶುರು ಮಾಡಿದ್ದರು. ಹಳದಿ- ಕೆಂಪು ಬಣ್ಣದ್ದೇ ಇವರದ್ದು ಧ್ವಜ. ರಾಜನ ಚಿನ್ನದ ರಕ್ಷಾಕವಚಕ್ಕೆ ರಕ್ತದ ಲೇಪನದ ಸಂಕೇತವಿದು.

The war of Spanish succession 1715ರಲ್ಲಿ ನಡೆದು ಕತಲೂನ್ಯ ಸ್ಪೇನ್ ನ ಭಾಗವಾಯಿತು. ಆದಾಕ್ಷಣ ಸ್ಪ್ಯಾನಿಷ್ ಭಾಷೆಯನ್ನು ಈ ಭಾಗದ ಜನತೆಯ ಮೇಲೆ ಹೇರಿಕೆ ಮಾಡಲಾಯಿತು. ಒಂದು ದೇಶ, ಒಂದು ಭಾಷೆಯೆಂಬ ಹುಚ್ಚು ಕಲ್ಪನೆ ಆಗಿನ ಸ್ಪೇನ್ ಮಹಾರಾಜನಿಗೆ ಬಂದಿತ್ತು. ರೊಚ್ಚಿಗೇಳಲು ಇದೊಂದೆ ಸಾಕಿತ್ತು.

ಸರ್ವಾಧಿಕಾರಿಯಿಂದ ಮತ್ತೆ ಅದೇ ಹೇರಿಕೆ

ಸರ್ವಾಧಿಕಾರಿಯಿಂದ ಮತ್ತೆ ಅದೇ ಹೇರಿಕೆ

ಸಾಲದಕ್ಕೆ ಇವರ ಭಾಷೆಯ ಹಳೆ ಗ್ರಂಥಗಳ ಸಂಗ್ರಹಾಲಯವನ್ನು ಸುಟ್ಟು ಹಾಕಲಾಯಿತು. ಸತತವಾಗಿ ಶತಮಾನಗಳ ಕಾಲ ಇದೆಲ್ಲವನ್ನು ಹೋರಾಡಿ ಮತ್ತೆ ಕತಲೂನ್ಯಾಗೆ ಸ್ವಾಯತ್ತತೆಯನ್ನು ಪಡೆಯುವಲ್ಲಿ ಯಶಸ್ವಿಯಾದರು. ನಂತರ ವಿಶ್ವಯುದ್ಧದ ಸಮಯದಲ್ಲಿ ಜೆನರಲ್ ಫ್ರಾನ್ಸಿಸ್ಕೋ ಫ್ರಾಂಕೋ ಎಂಬ ಸರ್ವಾಧಿಕಾರಿ ಮತ್ತೆ ಅದೇ ಹೇರಿಕೆಯನ್ನು ಶುರು ಮಾಡಿ ಕತಲೂನ್ಯಾದ ಅಧ್ಯಕ್ಷನಾದ ಲೂಯಿ ಕಾಂಪನೀಸ್ ನನ್ನು ನಾಝಿ ಗಳ ಸಹಾಯದಿಂದ ಹಿಡಿದು ಗುಂಡು ಹೊಡೆಸಿ ಕೊಲ್ಲಿಸಿದ್ದ.

ಯುರೋಪಿಯನ್ ಇತಿಹಾಸದಲ್ಲಿ ಮೊದಲ ಬಾರಿ ಜನರಿಂದ ಆಯ್ಕೆಯಾದ ನಾಯಕನನ್ನು ಒಬ್ಬ ಸರ್ವಾಧಿಕಾರಿ ಕೊಂದಿದ್ದು. Mont Juic ಅನ್ನೋ ಕೋಟೆಯಲ್ಲಿ ಈ ಘಟನೆ ನಡೆದಿದ್ದು. ಈಗಲೂ ಕತಲೂನ್ಯದ ಸ್ವಾಯತ್ತತೆಯ ಸಂಕೇತವಾಗಿ ಅಲ್ಲಿ ಕೆಂಪು ಹಳದಿ ಬಾವುಟ ಹಾರುತ್ತದೆ. 1977 ರಲ್ಲಿ ಸರ್ವಾಧಿಕಾರ ಕೊನೆಗೊಂಡು ಮತ್ತೆ ಕತಲೂನ್ಯಕ್ಕೆ ಸ್ವಾಯತ್ತತೆ ಸಿಕ್ಕಿತು. ಅವಾಗ್ಲಿಂದಲೂ ಅವರು ಸ್ವತಂತ್ರವಾಗುವುದಕ್ಕೆ ಹೋರಾಡುತ್ತಿದ್ದಾರೆ.

ಅಕ್ಟೋಬರ್ ನಲ್ಲಿ ಬಾರ್ಸಿಲೋನದ ಸ್ವಾತಂತ್ರ್ಯಕ್ಕೆ ಮತ್ತೆ ಚುನಾವಣೆ

ಅಕ್ಟೋಬರ್ ನಲ್ಲಿ ಬಾರ್ಸಿಲೋನದ ಸ್ವಾತಂತ್ರ್ಯಕ್ಕೆ ಮತ್ತೆ ಚುನಾವಣೆ

2001ರಲ್ಲಿ ಆರ್ಥಿಕ ಜರ್ಝರಿತದಿಂದ ಕುಸಿದ ಸ್ಪೇನ್ ಗೆ ಮತ್ತೊಮ್ಮೆ ಸ್ವಾತಂತ್ರ್ಯದ ಬೇಡಿಕೆ ಇಟ್ಟಿದ್ದು ಇವರು. ಈಗ ಅಕ್ಟೋಬರ್ ನಲ್ಲಿ ಬಾರ್ಸಿಲೋನದ ಸ್ವಾತಂತ್ರ್ಯಕ್ಕೆ ಮತ್ತೆ ಚುನಾವಣೆಯಾಗಲಿದೆ. ಪ್ರತಿ ಮನೆಯ ಮೇಲೆ ಈಗಲೂ ಕತಲೂನ್ಯದ ಬಾವುಟವನ್ನು ಕಡ್ಡಾಯವಾಗಿ ಹಾರಿಸುವ ಜನ ಇವರು, ಸ್ಪೇನಿನ ಸಂವಿಧಾನ ದಿವಸದ ರಜಾವನ್ನು ತ್ಯಜಿಸಿ ಕೆಲಸ ಮಾಡುವ, ಎಲ್ಲಿ ಹೋದರೂ ತಾವು ಕತಲಾನ್ ಜನ ಎಂದು ಹೇಳಿಕೊಳ್ಳುವ ಜನ ಇವರು.

ಸ್ವಾತಂತ್ರ್ಯ ಹೋರಾಟದ ಕಥೆ ಹೇಳಬಹುದು

ಸ್ವಾತಂತ್ರ್ಯ ಹೋರಾಟದ ಕಥೆ ಹೇಳಬಹುದು

ಪ್ರಾಯಶಃ ನನ್ನ ಗೆಳತಿ ಎಲೆನಾ ತನ್ನ ಮೊಮ್ಮಕಳಿಗೆ ಕತಲೂನ್ಯದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಕಥೆಯನ್ನು ಹೇಳುತ್ತಾಳೆ ಎಂದು ನಂಬಿದ್ದೇನೆ. ಹಿಂದಿನ ಪೀಳಿಗೆಯವರ ಕೋಪ, ಅಸಹಾಯಕತೆಯನ್ನು ಈಗಿನ ಪೀಳಿಗೆಗೆ ದಾಟಿಸಿ ತಮ್ಮ ಸ್ವಾಯತ್ತೆತೆಯನ್ನು ಕಾಯ್ದುಕೊಂಡಿರುವ ಆ ಜನಕ್ಕೆ ನನ್ನ ನಮನ.

1991ರಿಂದಲೂ ಸರ್ವಾಧಿಕಾರ

1991ರಿಂದಲೂ ಸರ್ವಾಧಿಕಾರ

ನನ್ನ ರೂಮಿನ ಪಕ್ಕದ ರೂಮಿನಲ್ಲಿ ಇದ್ದ ಕಝಾಕಿಸ್ತಾನದ ಹುಡುಗಿಯದ್ದು ಇನ್ನೂ ಬೇರೆಯದೇ ಕಥೆ. 1991ರಿಂದ ಇವಾಗಿನವರೆಗೂ ಒಂದೇ ಸರ್ವಾಧಿಕಾರಿ ಆಳುತ್ತಿದ್ದಾನೆಂದರೆ ನಂಬಲಿಕ್ಕೆ ಆಗುತ್ತದೆಯೇ ? ಅವಳು ಸ್ವಾತಂತ್ರ್ಯಕ್ಕಾಗಿ ಯುರೋಪಿಗೆ ಬಂದಿದ್ದಾಳೆ. ಇವಳ ಕಥೆ ಮತ್ತೊಮ್ಮೆ ಹೇಳುತ್ತೀನಿ. ಸ್ವಾತಂತ್ರ್ಯ ಒಬ್ಬೊಬ್ಬರಿಗೆ ಒಂದೊಂದು ಅರ್ಥ, ಹೋರಾಟ ಅಲ್ವಾ ?

English summary
We are celebrating India independence day. On this occasion here is the story of freedom fight of Katalunia in Spain, Oneindia Kannada columnist Jayanagarada Hudugi explains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more