ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಟ್ಜರ್ಲೆಂಡಲ್ಲಿ ನಾ ಕಂಡ ಐನ್ಸ್ಟೀನ್ ಎಂಬ ಕೌತುಕ!

By ಜಯನಗರದ ಹುಡುಗಿ
|
Google Oneindia Kannada News

ಈ ವಾರ ಜಯನಗರದ ಹಳೆ ನೆನಪುಗಳಿಗಿಂತ ನಾನು ಸ್ವಿಟ್ಜರ್ಲೆಂಡ್ ಗೆ ಹೋದ ಕಥೆ ಬರೆಯೋಣ ಅಂದುಕೊಂಡೆ. ಸ್ವಿಸ್ ನಮ್ಮ ಸಿನೆಮಾದಲ್ಲಿ ತೋರಿಸೋ ಹಾಗೆ ಬೆಟ್ಟದ ಮೇಲೆ, ಮಂಜಿನಲ್ಲಿ ಆಟವಾಡೋದು ಅಂದರೆ ಅದು ನಿಜವಾಗಲೂ ಸ್ವಾರಸ್ಯಕರವಾದ್ದದ್ದಲ್ಲ. ಥೀಸಿಸ್ ಮುಗಿಸಿಕೊಂಡು ರಜೆಗೆ ಅಂತ ಅಲ್ಲಿಗೆ ಹೋದಾಗ ನಾನು ನೋಡಲೇ ಬೇಕು ಅಂದುಕೊಂಡಿದ್ದು ಜಗತ್ತು ಕಂಡ ಅತ್ಯಂತ ದೊಡ್ಡ ಮೇಧಾವಿ ಅಲ್ಬರ್ಟ್ ಐನ್ಸ್ಟೀನ್ ಮ್ಯೂಸಿಯಂ ಮಾತ್ರ.

ಈ ಮೇಧಾವಿ ಜರ್ಮನಿಯವರು, ಎರಡನೇ ವಿಶ್ವ ಯುದ್ಧದಲ್ಲಿ ಅಮೆರಿಕಾಗೆ ಪಲಾಯನ ಮಾಡುವ ಹಾಗೆ ಮಾಡಿದ್ರು ಎಂದು ಜಾಗತಿಕ ಚರಿತ್ರೆಯ ಪುಸ್ತಕದಲ್ಲಿ ಓದಿದ್ರೂ ಸಹ, ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದೇ ಇತ್ತು.

ಕರೆಂಟು ಕೈಕೊಟ್ಟಾಗ ಅಬ್ಬಾ, ಎಷ್ಟು ಮಜಾ ಅಲ್ವಾ?ಕರೆಂಟು ಕೈಕೊಟ್ಟಾಗ ಅಬ್ಬಾ, ಎಷ್ಟು ಮಜಾ ಅಲ್ವಾ?

ಈ ಮ್ಯೂಸಿಯಂ ಬರ್ನ್ ಅನ್ನೋ ನಗರದಲ್ಲಿ ಇದೆ. ಒಂದು ಇಡೀ ಮಹಡಿಯನ್ನು ಐನ್ಸ್ಟೀನ್ ಹಾಗೂ ಯಹೂದಿಯನ್ನರ ಚರಿತ್ರೆಗೆ ಮೀಸಲ್ಲಿಟ್ಟಿದ್ದಾರೆ. ಆಶ್ಚರ್ಯ ಆಗೋದು, ಸಣ್ಣ ಪುಟ್ಟ ಎಲ್ಲಾ ಮಾಹಿತಿಗಳು ಕಲೆಹಾಕಿ ಅದನ್ನ ಶಿಸ್ತು ಬದ್ಧವಾಗಿ ನಮ್ಮಂಥವರಿಗೆ ನೋಡಲು ಅನುವು ಮಾಡಿಕೊಟ್ಟಿದ್ದು.

Exploring Albert Einstein : Life of a Genius

ಸಾಮಾನ್ಯರಲ್ಲಿ ಅಸಮಾನ್ಯವಾಗಿದ್ದ ಐನ್ಸ್ಟೀನ್ ಹೇಗೆ ಜಗತ್ತನ್ನೇ ಬದಲಾಯಿಸುವ ಸಮೀಕರಣ (equation) ಕಂಡು ಹಿಡಿದ್ದದ್ದು, ಅವರಿಗೂ ಹಿಟ್ಲರ್ ಗೂ ಆದ ಚಕಮಕಿಗಳು, ಜಗತ್ತಿನ ನೆಮ್ಮದಿಗಾಗಿ ಹೋರಾಡಿದ್ದು ಎಲ್ಲವನ್ನೂ ಇಲ್ಲಿ ನೋಡಬಹುದು. ನನಗೆ ತುಂಬಾ ಆಸಕ್ತಿದಾಯಕವೆನಿಸಿದ್ದು ಐನ್ಸ್ಟೀನ್ ನ ಬಾಲ್ಯ ಹಾಗೂ ವಿಶ್ವಯುದ್ಧದಲ್ಲಿ ತೆಗೆದುಕೊಂಡ ಅವರ ನಿಲುವುಗಳು.

ಚಿಕ್ಕವರಿದ್ದಾಗ ಕಲಿಕೆಯಲ್ಲಿ ಹಿಂದಿದ್ದರು, ಮಾತಾಡಲೂ ಸಹ ನಿಧಾನ, ಅವರ ಗುರುಗಳು ಈ ಹುಡುಗನಿಂದ ಏನೂ ಸಾಧನೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಬರೆದಿದ್ದ ಪುಸ್ತಕ, ಅತಿ ಕಡಿಮೆ ಅಂಕಗಳನ್ನು ತೆಗೆದುಕೊಂಡ ಅಂಕಪಟ್ಟಿ, ಇವೆಲ್ಲವೂ ಇದ್ದವು. ಒಂದೊಮ್ಮೆ ಆಶ್ಚರ್ಯವಾಗಿತ್ತು, ಜಗತ್ತಿನ ಮಹಾ ಮೇಧಾವಿಗೆ ಸಹ ಇದೇ ತರಹದ ಮಾತುಗಳು ಕೇಳಿ ಬಂದಿದ್ದವು ಎಂದು.

ಅಪ್ಪಾ... ಐ ಲವ್ ಯೂ ಪಾ.. ಅಪ್ಪನೇ ಆಕಾಶದ ಪ್ರತಿರೂಪಅಪ್ಪಾ... ಐ ಲವ್ ಯೂ ಪಾ.. ಅಪ್ಪನೇ ಆಕಾಶದ ಪ್ರತಿರೂಪ

ವಿಶ್ವಯುದ್ಧದಲ್ಲಿ ನಡೆದ ಕಷ್ಟದ ಸಂದರ್ಭವನ್ನು ಅವರು ಎದುರಿಸಿದ್ದು ಎಲ್ಲವು ಒಂದು ಥರಹ ತುಂಬಾ ಆಶ್ಚರ್ಯವಾಗಿ ಕಾಣಿಸಿತ್ತು. ಅವರ ವಯಸ್ಸಿನ ಹುಡುಗರ ಜೊತೆ ಆಟವಾಡದೇ, ಸೈನಿಕನಾಗಬೇಕೆಂಬ ಯಾವ ಗುರಿಯು ಕಾಣದ್ದನ್ನು ಅವರ ತಾಯಿ ನೋಡಿ ಗಾಬರಿಗೊಂಡಿದ್ದರಂತೆ. ನಂತರ ಪೇಟೆಂಟ್ ಆಫೀಸಿನಲ್ಲಿ ಕೆಲಸಕ್ಕೆ ಸೇರಿಕೊಂಡು ಅವರ ವಿಜ್ಞಾನ ಆಳವನ್ನು ತಿಳಿದುಕೊಳ್ಳಲು ಬಯಸಿದ್ದು, ನಿಜವಾಗ್ಲೂ ಮೆಚ್ಚುವಂತಹ ಕೆಲಸ ಅನ್ನುವುದರಲ್ಲಿ ತಪ್ಪೇನಿಲ್ಲ. ಪಠ್ಯಪುಸ್ತಕದಲ್ಲಿ ಸೇರಿಸದಿದ್ದ ಸುಮಾರು ಸಂಗತಿಗಳು ಇಲ್ಲಿದ್ದವು.

Exploring Albert Einstein : Life of a Genius

ಅವರ ತಂದೆಯ ದೊಡ್ಡ ಕಟ್ಟಡ ಉದ್ಯಮದ ಬಗ್ಗೆ, ಅದೆಲ್ಲಾ ನಷ್ಟವಾಗಿ ಬೇರೆ ಉದ್ಯಮ ಮಾಡುವ ಬಗ್ಗೆ, ಅವರ ಧಾರ್ಮಿಕ ನಂಬಿಕೆಯ ಬಗ್ಗೆ ಹಾಗೂ ಪ್ರೇಮದ ಬಗ್ಗೆಯೂ ತಿಳಿದು ನನಗೆ ಮೈ ನವಿರೇಳಿತ್ತು. ದೊಡ್ಡ ಮೇಧಾವಿಯೂ ಸಹ ಸಾಮಾನ್ಯ ಮನುಷ್ಯ ಎಂದು ತಿಳಿದ್ದದ್ದು ಒಮ್ಮೊಮ್ಮೆ ಸಂತೋಷವಾದರೂ, ಎಷ್ಟೆ ಬುದ್ದಿವಂತರೂ ಸಹ ಇಷ್ಟೊಂದು ಸಂದಿಗ್ಧಕ್ಕೆ ಸಿಕ್ಕು ಹಾಕೋತಾರೆ ಎಂದು ತಿಳಿದು ಪೆಚ್ಚಾಯಿತು.

ವ್ಯಕ್ತಿತ್ವ ಬೆಳೆಸಿದ ಕನ್ನಡ ಕಲಿಸಿದ ನನ್ನ ಪ್ರೀತಿಯ ಶಾಲೆವ್ಯಕ್ತಿತ್ವ ಬೆಳೆಸಿದ ಕನ್ನಡ ಕಲಿಸಿದ ನನ್ನ ಪ್ರೀತಿಯ ಶಾಲೆ

ಬರ್ನ್ ನಗರದ ಪೇಟೆಂಟ್ ಕಚೇರಿಯಲ್ಲಿ ಕೆಲ್ಸಕ್ಕಿದ್ದಾಗ Special Theory of Relativityಯನ್ನು ಕಂಡು ಹಿಡಿದಿದ್ದು, ನಂತರ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದು, ನಂತರ ಸ್ವಿಸ್ ದೇಶದ ಪೌರತ್ವವನ್ನು ಪಡೆದಿದ್ದು, ಎರಡನೇ ವಿಶ್ವಯುದ್ಧದಲ್ಲಿ ನಡೆದ ಯಹೂದಿಗಳ ಮಾರಣ ಹೋಮ, ಆ ಸಮಯದಲ್ಲಿ ಅಮೆರಿಕಾಗೆ ಹಾರಿ ಹೊಗಿದ್ದು, ಇವೆಲ್ಲ ಬೆಚ್ಚಿಬೀಳಿಸುವ ಸಂಗತಿಗಳು. ಒಮ್ಮೊಮ್ಮೆ ಭಯ ಆದರು ಆದೀತು. ತಾನೂ ಆ ಮಾರಣ ಹೋಮದಿಂದ ಪಾರಾಗಿ ಬಂದದ್ದಷ್ಟೆ ಅಲ್ಲದೆ, ಅದರಲ್ಲಿ ಸಿಕ್ಕಿಹಾಕಿಕೊಂಡವರ, ಅವರ ಮನೆಯವರ ದುಃಖಕ್ಕೆ ಸ್ಪಂದಿಸಿದ್ದು ಐನ್ಸ್ಟೀನ್ ವಿಶೇಷ. ಅಮೆರಿಕಾದಲ್ಲಿ ಇದ್ದಾಗ ಆಫ್ರಿಕಾ ಅಮೆರಿಕನ್ನರ ಹಕ್ಕುಗಳಿಗಾಗಿ ಹೋರಾಡಿದ್ದು ಕೂಡ ಗಮನಾರ್ಹ ಸಂಗತಿ.

Exploring Albert Einstein : Life of a Genius

ಐನ್ಸ್ಟೀನ್ ತನ್ನ ಹೆಂಡತಿಗೆ ಬರೆದ ಪ್ರೇಮ ಪತ್ರ, ಪ್ರೀತಿಯ ಆರ್ದ್ರತೆ, ಮತ್ತೆ ಮತ್ತೆ ಪ್ರೇಮ ಆಗುವ ಬಗ್ಗೆ ಬರೆದದ್ದು ಎಲ್ಲವು ಕುತೂಹಲಕಾರಿಯಾಗಿತ್ತು. ಕೆಲವೊಮ್ಮೆ ದೊಡ್ಡವರ ಖಾಸಗಿ ಸಂಗತಿಯನ್ನ ತಿಳಿದುಕೊಳ್ಳದೆ ಇರುವುದೇ ಉತ್ತಮ ಎಂಬ ಮಾತನ್ನು ಸಾರಿ ಸಾರಿ ಹೇಳುವುದು ಸತ್ಯವೇ. ಇಸ್ರೇಲಿನ ಅಧ್ಯಕ್ಷ ಪದವಿಯ ಆಹ್ವಾನ ಬಂದಾಗ "ನನಗೆ ಅದರ ಅರ್ಹತೆ ಇಲ್ಲ ಹಾಗೂ ಅದಕ್ಕೆ ವಯಸ್ಸು ಇಲ್ಲ" ಎಂದು ಹೇಳಿದ್ದರು ಈ ಮಹಾನುಭಾವರವರು.

ಬಹಳ ಮೇಧಾವಿ ಜನರಲ್ಲಿ ನಾನು ಕಂಡು ಬಂದಿದ್ದು ಒಂದೇ. ಅವರಿಗೆ ಏನು ತಿಳಿದಿದೆ ಅನ್ನುವುದಕ್ಕಿಂತ ಏನು ತಿಳಿದಲ್ಲ ಅನ್ನುವುದರ ಬಗ್ಗೆ ಹೆಚ್ಚಾಗಿ ಅರಿವಿರತ್ತೆ. ಪ್ರಿಂನ್ಸ್ಟನ್ ವಿಶ್ವವಿದ್ಯಾಲಯದಲ್ಲಿದ್ದಾಗ ಅಮೆರಿಕಾ ಹಿರೋಶಿಮಾ ನಾಗಸಾಕಿ ಮೇಲೆ ಮಾಡಿದ್ದ ದುರಂತಕ್ಕೆ ಅಲ್ಲಿನ ಪತ್ರಿಕೆಗಳೆಲ್ಲ ಅವರೇ ಹೊಣೆ ಎಂದು ಬರೆದಾಗ, ನನ್ನ ಕಾಣಿಕೆ e = m*c*c ಒಂದೇ ಎಂದು ತಿಳಿಸಿ ಬಹಳ ಬೇಜಾರು ಮಾಡಿಕೊಂಡಿದ್ದರು.

Exploring Albert Einstein : Life of a Genius

ಈ ಮ್ಯೂಸಿಯಂನಲ್ಲಿ ನಾನು ರಬಿಂದ್ರನಾಥ್ ಟ್ಯಾಗೋರರು ಐನ್ಸ್ಟೀನ್ ರನ್ನು ಭೇಟಿ ಮಾಡಿದ್ದ ವಿವರ, ಭಾರತದವರ ಬಗ್ಗೆಗಿನ ನಂಟನ್ನು ಹುಡುಕಿದ್ದರೂ ಸಿಗಲ್ಲಿಲ್ಲ. ಪೂರ್ತಿ ಅವರವರ ಚರಿತ್ರೆಯಲ್ಲಿ ಮುಳುಗಿದ್ದದ್ದು ಸಹ್ಯವನ್ನಿಸಲ್ಲಿಲ್ಲ. ನಮ್ಮ ಮೇಧಾವಿಗಳ ಬಗ್ಗೆ ನಾನು ಇಷ್ಟೊಂದು ಚೆನ್ನಾಗಿ ತಿಳಿಯಲ್ಲಿಕ್ಕೆ ಸಾಧ್ಯವಿಲ್ಲ ಎಂಬುದು ಖೇದದ ಸಂಗತಿ. ಕೊನೆಯಲ್ಲಿ ಐನ್ಸ್ಟೀನ್ ಸತ್ತಾಗ ಅವರ ವೈದ್ಯ ಅವರ ಮೆದುಳನ್ನು ಮನೆಯವರಿಗೆ ಹೇಳದೇ ಸಂಶೋಧನೆಗಾಗಿ ಕಾಯ್ದಿರಿಸಿದ್ದು ಎಲ್ಲವೂ ವಿಚಿತ್ರವಾಗಿ ಕಂಡಿತ್ತು.

ಒಟ್ಟಿನಲ್ಲಿ ನಾನು ಅಪ್ಪ (ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ) ಇಬ್ಬರೂ ಇಂತಹ ಡೊಡ್ಡ ಮನುಷ್ಯನ ಬಗ್ಗೆ ತಿಳಿದು ಖುಷಿಯಾದೆವು. ಕಡೆಗೆ ನಾವು ನೆನೆಸಿಕೊಂಡು ಬಂದಿದ್ದು ಒಂದೆ, ಕುತೂಹಲದಿಂದ ಮನುಷ್ಯ ಏನು ಬೇಕಾದರೂ ಆಗಬಹುದೆಂದು.

English summary
Albert Einstein was a German-born theoretical physicist. Einstein developed the theory of relativity, one of the two pillars of modern physics. Meghana Sudhindra visited the Albert Einstein museum in Bern and finds out many interesting things about him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X