ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡುವ ಕಾಪಾಡುವ ಮುದ್ದಿಸುವ ಮುದ್ದಿಸಿಕೊಳ್ಳುವ 'ಕಾಳ'! ಐ ಲವ್ ಯೂ!

By ಜಯನಗರದ ಹುಡುಗಿ
|
Google Oneindia Kannada News

ಫೇಸ್ಬುಕ್ಕಿನ ಜಗತ್ತು ಬಹಳ ವರ್ಣಮಯವಾದ್ದದ್ದು. ಇಲ್ಲಿ ಹೊಸ ಹೊಸ ವಿಷಯಗಳು ಸಿಗುತ್ತಾ ಇರುತ್ತದೆ. ಖ್ಯಾತ ಕವಯಿತ್ರಿ ಕಮಲಾ ಮೇಡಂ ನನಗೆ ಪರಿಚಯವಾದ್ದದ್ದು ಅಲ್ಲಿಂದಲೇ. ಅವರು ಮಾತಾಡೋದು ಕೇಳಿದಾಗಲ್ಲೆಲ್ಲಾ "ಛೇ ನನಗೂ ಕನ್ನಡ ಮೇಡಂ ಹೀಗೇ ಇದ್ದಿದ್ರೆ ನಾನು ಇಂಜಿನಿಯರಿಂಗ್ ಕಡೆ ತಲೆನೇ ಹಾಕ್ತಿರ್ಲಿಲ್ಲ" ಅಂತ ಸುಮಾರು ಬಾರಿ ಅನ್ನಿಸಿದ್ದಿದ್ದೆ. ನಮ್ಮಂಥ ಪುಟಾಣಿ ಬರಹಗಾರರನ್ನೂ, ನಮ್ಮ ಪೀಳಿಗೆಯವರನ್ನು ಬಹಳ ಚೆನ್ನಾಗಿ ಮಾತನಾಡಿಸಿ ಯಾವ ಹಮ್ಮು ಬಿಮ್ಮೂ ಇಲ್ಲದೆ ಇರುವವರು.

ಅವರ 'ನೆತ್ತರಲ್ಲಿ ನೆಂದ ಚಂದ್ರ', 'ಮಾರಿಬಿಡಿ' ಇವೆಲ್ಲವನ್ನ ಬಹಳ ಗಹನವಾಗಿ ಓದಿದ್ದರೂ ಹೊಸ ಪುಸ್ತಕ 'ಕಾಳ ನಾಮ ಚರಿತೆ'ಯ ಬಿಡುಗಡೆಯೆಂದಾಗ ಒಂದು ನಿಮಿಷ ಹಾ ಎಂದುಕೊಂಡೆ. ಕಾಳನನ್ನ ಇಷ್ಟೊಂದು ಪ್ರೀತಿಸೋದಕ್ಕೆ ಕಾರಣವೇನು ಎಂದು.

ಕನಸುಗಳು ನನಸಾಗುತ್ತವೆ, ಕಾಣುವ ಧೈರ್ಯವಿದ್ದರೆ ಮಾತ್ರ! ಕನಸುಗಳು ನನಸಾಗುತ್ತವೆ, ಕಾಣುವ ಧೈರ್ಯವಿದ್ದರೆ ಮಾತ್ರ!

ನನಗೋ ನಾಯಿ ಎಂದರೆ ವಿಪರೀತ ಭಯ. ಎಷ್ಟೆಂದರೆ ನನ್ನ ಡಾಕ್ಟರ್ ಗೆಳತಿ "ನಿನಗೆ ಸೈನೋಫೋಬಿಯಾ" ಎಂದು ಬರೆದುಕೊಡುವಷ್ಟು. ಚಿಕ್ಕವಳಿದ್ದಾಗ ಸೈಕಲ್ ಕಲೀತಿದ್ದಾಗ ಬೀದಿನಾಯಿಯ ಬಾಲದ ಮೇಲೆ ಸೈಕಲ್ ಓಡಿಸಿ ಅದು ನನ್ನನ್ನ ಕಚ್ಚೋದಕ್ಕೆ ಜಯನಗರ 9ನೇ ಬಡಾವಣೆಯಿಂದ 4ನೇ ಟಿ ಬ್ಲಾಕಿನವರೆಗೆ ಅಟ್ಟಿಸಿಕೊಂಡು ಬಂದಿತ್ತು.

Are you Cynophogic? Dont worry, dogs love you more than yourself

ಅದಾದ ನಂತರ ಯಾವುದೇ ನಾಯಿಯನ್ನ ನೋಡಿದರೂ ಕಾಲ್ಲಲ್ಲಿ ಸಣ್ಣ ನಡುಕ, ಮೈ ಬೆವರೋದು, ಎದೆ ಢವಢವ ಮತ್ತೆ ಏದುಸಿರು ಬಂದೇ ಬರೋದು. ಬೆಳಗಿನ ನಡಿಗೆಯಲ್ಲಿ ರಸ್ತೆ ಆ ತುದಿಯಲ್ಲಿ ನಾಯಿ ಕಂಡರೆ ಪಕ್ಕನೆ ಹಿಂದಿರುಗಿ ಬೇರೆ ರಸ್ತೆಗೆ ಹೋಗುತ್ತಿದ್ದೆ. ಸೈಕಲ್ ದೂ ಅದೇ ಕಥೆ. ರಸ್ತೆಯಲ್ಲಿ ನಡೆಯುವಾಗ ನಾಯಿ ಅಡ್ಡ ಬಂದರೆ ಕಡ್ಡಾಯವಾಗಿ ಯಾರು ನನ್ನ ಪಕ್ಕ ಇರುತ್ತಾರೋ ಅವರ ಕೈ ಹಿಡಿದೇ ಮುಂದೆ ಹೋಗುತ್ತಿದ್ದದ್ದು. ನನ್ನ ಆಪ್ತ ಗೆಳೆಯ ಗೆಳತಿಯರೆಲ್ಲರೂ ಶ್ವಾನ ಪ್ರೇಮಿಗಳೇ, ನನಗೋ ವಿಪರೀತ ಭಯ.

ಹಳೆತನ ಬಿಟ್ಟು ಹೊಸತನಕ್ಕೆ ತೆರೆದುಕೊಂಡಿರುವ ಅಜ್ಜಿಯರು ಹಳೆತನ ಬಿಟ್ಟು ಹೊಸತನಕ್ಕೆ ತೆರೆದುಕೊಂಡಿರುವ ಅಜ್ಜಿಯರು

ನಮ್ಮಂತಹ ಸಂಪ್ರದಾಯಸ್ಥ ಮನೆಗಳಲ್ಲಿ ನಾಯಿಯನ್ನ ಮನೆಯ ಒಳಗಡೆ ಬಿಡುತ್ತಿರಲಿಲ್ಲ. ಅದರಿಂದ ನಮ್ಮ ಮನೆಯಲ್ಲಿ ನಾಯಿ ಸಾಕುವ ಯಾವ ಲಕ್ಷಣವೂ ಕಾಣುತ್ತಿರಲ್ಲಿಲ್ಲ. ನನ್ನ ತಂಗಿಗೆ ವಿಪರೀತ ಆಸೆ. ರಸ್ತೆಯಲ್ಲಿ ಬರುವ ಮರಿಗಳನ್ನ ಮಾತಾಡಿಸಿ ಮುದ್ದು ಮಾಡಿ ಮನೆಗೆ ಕರೆತರುತ್ತಿದ್ದಳು. ಅಮ್ಮ "ನಿಮ್ಮೆಲ್ಲರನ್ನ ಸಾಕೋದೇ ಜಾಸ್ತಿ, ಆಗಲ್ಲ" ಎಂದು ಹೇಳುತ್ತಿದ್ದಳು. ಅವಳು ಇನ್ನೂ ಮನೆಯಲ್ಲಿ ಪ್ರಯತ್ನ ಮಾಡುತ್ತಲೇ ಇದ್ದಾಳೆ. ಸೋ ನಾನು ಈ ನೆವದಲ್ಲಿ ಬಚಾವ್ ಆದೆ.

ಆದರೆ ನನ್ನ ಗೆಳತಿ ಅನುಶ್ರೀ ಮನೆಯಲ್ಲಿ ಒಂದಲ್ಲ ಎರಡು ನಾಯಿ ಇರುತ್ತಿತ್ತು. ಮೊಬೈಲ್ ಇಲ್ಲದ ಕಾಲದಲ್ಲಿ ಅವಳ ಮನೆಗೆ ಹೋಗಬೇಕಾದರೆ ಅವಳ ಲ್ಯಾಂಡ್ಲೈನಿಗೆ ಕರೆ ಮಾಡಿ "ಪ್ಲೀಸ್ ನಾಯಿ ಕಟ್ಟಾಕೆ" ಎಂದು ತಿಳಿಸಿ ಮನೆಗೆ ಹೋಗುತ್ತಿದ್ದೆ. ಆ ನಾಯಿಗಳು ನನ್ನನ್ನ ನೋಡಿದರೇ ಬೊಗಳುತ್ತಿದ್ದವು. ಒಂದು ಲಕ್ಷ ಸರ್ತಿ ಅವಳ ಮನೆಗೆ ಹೋಗಿದ್ದರೂ ಅದಕ್ಕೆ ಅಡ್ಜಸ್ಟ್ ಆಗಿರಲ್ಲಿಲ್ಲ. ಅವರಮ್ಮ "ಒಮ್ಮೆ ಹೋಗಿ ಮುಟ್ಟಿ, ಮುದ್ದು ಮಾಡು ಸರಿ ಹೋಗತ್ತೆ" ಅಂತಿದ್ರು. ಆ ಜೊಲ್ಲೆಲ್ಲಾ ಯಾವನಿಗ್ ಬೇಕು ಅಂತ ನೋಡಿದ್ರೂ ನೋಡದೇನೆ ಓಡಿಹೋಗ್ತಿದ್ದೆ. ಫ್ಲಪ್ಫಿ ಮತ್ತು ಟೈಗರ್ ನಮ್ಮ ಥರಹವೇ ಮೊಸರನ್ನ, ಬ್ರೆಡ್ ತಿನ್ನುತ್ತಿತ್ತು. ಜೊತೆಗೆ ಅವಳ ಮನೆ ಮಾತು ತಮಿಳನ್ನು ಅರ್ಥ ಮಾಡಿಕೊಳ್ಳುತ್ತಿತ್ತು. ಇವಳಿಗೆ ಬೇಜಾರಾದಾಗೆಲ್ಲಾ ಅರ್ಥ ಮಾಡಿಕೊಂಡು ಹತ್ತಿರ ಬರುತ್ತಿತ್ತು. ಇದೇನಪ್ಪಾ ಲೂಸ್ ಥರಾ ಎಂದು ನಾನು ಹೌಹಾರಿದ್ದೆ.

Are you Cynophogic? Dont worry, dogs love you more than yourself

ಪಕ್ಕದ ಮನೆಯ ರೇಶ್ಮಾಳ ಹತ್ತಿರ ಟಾಮಿ ಎಂಬ ಬೀದಿನಾಯಿ ಇತ್ತು. ಅದು ನಮ್ಮ ಕಾವಲುನಾಯಿಯಾಗಿತ್ತು. ಹೆಣ್ಣುಮಕ್ಕಳು ರಸ್ತೆಯಲ್ಲಿ ಸಂಜೆ ಆಟವಾಡುವಾಗ ಕೆಲವು ಪೋಲಿ ಗಂಡುಮಕ್ಕಳು ಸುಮ್ಮನೆ ನೋಡೋದಕ್ಕೆ ನಿಂತಿರುತ್ತಿದ್ದರು. ಅವರೆಲ್ಲರನ್ನು ಓಡಿಸಿ ಮತ್ತೆ ಬರದೇ ಇರೋಹಾಗೆ ಮಾಡುತ್ತಿದ್ದದ್ದು ಟಾಮಿಯೊಂದೆ. ಅದರೂ ಯಥಾಪ್ರಕಾರ ಅವಳ ಮನೆಗೆ ಹೋಗೋ ಮುಂಚೆ ನಾನು ಕೆಳಗಿಂದಲೇ "ಟಾಮಿನ ಹಿಡ್ಕೋ" ಎಂದು ಕಿರುಚಿ ಮೆಟ್ಟಲು ಹತ್ತುತ್ತಿದ್ದೆ. ಸುಮಾರು ಸರ್ತಿ ಮುಟ್ಟೋದಕ್ಕೆ ಹತ್ತಿರ ಹೋಗಿ ಎದೆ ಢವಢವ ಬಡಿಸುಕೊಂಡು ಇನ್ನೇನ್ ನನಗೆ ಹಾರ್ಟ್ ಅಟ್ಯಾಕ್ ಆಗೋಗತ್ತೆ ಎಂದುಕೊಂಡು ಅಲ್ಲೇ ಕುಸಿದುಕೂತಿದ್ದಿದ್ದೆ.

ಸ್ವಲ್ಪ ಹೊತ್ತು ಮಹಾರಾಣಿಯಾಗಿಸುವ ವಿಭಿನ್ನ ಪ್ರಪಂಚ! ಸ್ವಲ್ಪ ಹೊತ್ತು ಮಹಾರಾಣಿಯಾಗಿಸುವ ವಿಭಿನ್ನ ಪ್ರಪಂಚ!

ಇವಿಷ್ಟು ಅನುಭವದ ನಂತರವೇ ಬಾರ್ಸಿಲೋನಾದಲ್ಲಿ ನನ್ನ ಮನೆಯಲ್ಲಿ ಕಂಡ ಪುಟಾಣಿ ನಾಯಿ ಮರಿಯ ಆಟ. ನಾನು ಅಲ್ಲಿ ಹೋಗೋದಕ್ಕೆ ಅಪಾರ್ಟ್ಮೆಂಟ್ ಬುಕ್ ಮಾಡಿದ ನಂತರ ನನ್ನ ಮನೆ ಒಡತಿ "ವೀ ಹ್ಯಾವೇ ಡಾಗ್" ಎಂದು ಫೋಟೋ ಕಳಿಸಿದಳು. ನಾನು ಫ್ಲೈಟೇ ಹತ್ತಲ್ಲ ಎಂದು ಕೂತಿದ್ದೆ. ಅಪ್ಪ ಅಷ್ಟೆಲ್ಲಾ ದುಡ್ಡು ಖರ್ಚಾಗಿದೆ, ಏನಾಗಲ್ಲ ಅಂದ್ರು. ಕರ್ಮ ಎಂದು ಮನೆಗೆ ಹೋದೆ. ಆ ಮರಿ ನನ್ನ ಕಾಲೆಲ್ಲಾ ನೆಕ್ಕಿ ಅಧ್ವಾನ ಮಾಡಿಬಿಟ್ಟಿತು. ಹೋಗಿ ಹೋಗಿ 5 ಸರ್ತಿ ನೀರು, ಸೋಪು, ಡೆಟಾಲ್, ಇನ್ನ್ಯಾವ ಸಾಬೂನು ಸಿಕ್ಕಿತೋ ಎಲ್ಲದರಲ್ಲೂ ತೊಳೆದುಕೊಂಡೆ.

ರಾತ್ರಿ ಬಾಗಿಲು ಹಾಕಿ, ಚಿಲಕ ಹಾಕಿ, ಅದಕ್ಕೊಂದು ಸ್ಟೂಲ್ ಅಡ್ಡ ಇಟ್ಟು ಮಲಗುತ್ತಿದ್ದೆ, ಅದೇನಾದ್ರೂ ಒಳಗೆ ಬಂದ್ರೆ ಎಂದು. ಆಮೇಲೆ ಆ ಮರಿಯನ್ನ ಸಾಕೋದಕ್ಕೆ ಜಾಗ ಸಣ್ಣದು ಎಂದು ಸರ್ಕಾರದವರೇ ತೆಗೆದುಕೊಂಡು ಹೋದರು. ಮಿಕಿ ಅಂತೂ ಸಣ್ಣ ಮಗುವಿನ ಹಾಗೆ ಎಲ್ಲರ ಹತ್ತಿರ ಪ್ರೀತಿ ಅಪೇಕ್ಷೆ ಪಡುತ್ತಿತ್ತು. ಮನೆ ಒಡತಿಗೂ ನಾನು ಮನೆಗೆ ಬರುವ ಮುಂಚೆ "ಪ್ಲೀಸ್ ಟೈ ದ ಡಾಗ್" ಎಂದು ಸಂದೇಶ ಕಳುಹಿಸಿಯೇ ಬರುತ್ತಿದ್ದೆ. ಇಂತಹ ನನ್ನ ಸೈನೋಫೋಬಿಯಾವನ್ನು ಕಂಡು ಬಾರ್ಸಿಲೋನಾದ ಗೆಳೆಯನೊಬ್ಬ, "ಆರಾಮಾಗಿ ನೀನು ನಿನ್ನ ಕೈ ಹಿಡಿದುಕೊಳ್ಳೋ ಹಾಗೆ ಮಾಡ್ಬೋದು, ಆ ಕಡೆಯಿಂದ ನಾಯಿ ಕಂಡರೆ ಸಾಕು ಬಂದು ಕೈ ಹಿಡ್ಕೊತ್ಯಾ ಅಲ್ವಾ?" ಎಂದು ಛೇಡಿಸುತ್ತಿದ್ದ. ಹೇಗಾದರೂ ಮಾಡಿ ಈ ಭಯವನ್ನ ಹೋಗಲಾಡಿಸಲೇಬೇಕೆಂದು ಪಣ ತೊಟ್ಟೆ. ಸೋತೆ.

Are you Cynophogic? Dont worry, dogs love you more than yourself

ಜೂನ್ ತಿಂಗಳಲ್ಲಿ ಅಪ್ಪನ ಮಾತುಕತೆ ಸ್ಪರ್ಶಳ ಮನೆಯಲ್ಲೇ ನಡೆಯಿತು. ಕಾಳ ಅಲ್ಲೂ ಇದ್ದ. "ಏನಮ್ಮಾ ಮಾಡೋದು" ಅಂತ ನಾನು ಅಮ್ಮ ಮುಖ ಮುಖ ನೋಡಿಕೊಂಡೇ ಮೆಟ್ಟಿಲು ಹತ್ತಿದ್ವಿ. ಕಾಳ ಬಂದು ಮಾತಾಡಿಸಿದ, ಗಡಗಡ, ಏದುಸಿರು ಶುರುವಾಯ್ತು. ಎಲ್ಲರ ಮುಂದೆ ನನ್ನ ಸ್ಟುಪಿಡಿಟಿ ಬೇಡ ಎಂದುಕೊಂಡು ಮನಸ್ಸು ತಡೆದುಕೊಂಡೆ.

ಹಬ್ಬಿದಾ ಮಲೆ ಮಧ್ಯದೊಳಗೆ ಅರ್ಭುತಾನೆಂದೆಂಬ ವ್ಯಾಘ್ರಹಬ್ಬಿದಾ ಮಲೆ ಮಧ್ಯದೊಳಗೆ ಅರ್ಭುತಾನೆಂದೆಂಬ ವ್ಯಾಘ್ರ

ಅವತ್ತು ಹೇಗೋ ಸಂಭಾಳಿಸಿದೆ. ಅದೇ ಪಕ್ಕ ಬಂದಾಗ ಸ್ವಲ್ಪ ಢವಢವ ಕಡಿಮೆಯಾಯ್ತು. ಭಯಾನಕ ಮನುಷ್ಯರ ಪಕ್ಕವೇ, ಅವರ ವಿಕಾರಗಳನ್ನೇ ತಡೆದುಕೊಂಡಿದ್ದೇನಂತೆ ಇನ್ನು ಈ ಭಯ ಖಂಡಿತಾ ಹೋಗಲಾಡಿಸುತ್ತೇನೆ ಎಂದು ಸುಮ್ಮನೇ ಕೂತೆ. ಆ 3 ಘಂಟೆಗಳು ನನ್ನ ಭಯವನ್ನ ಹೋಗಲಾಡಿಸಿತು. 3 ತಿಂಗಳ ನಂತರ ಈ ಕಾರ್ಯಕ್ರಮದಲ್ಲಿ ಕಾಳನನ್ನ ನಾನೇ ಮಾತಾಡಿಸಿದೆ ಮುದ್ದು ಮಾಡಿದೆ, ನನ್ನ ಪಕ್ಕದಲ್ಲಿ ಕೂತ ಹಂಪ ಸಾರ್ ನನ್ನ ಹಾಗೆ ಮುಖ ಮಾಡಿದ್ದು ನೋಡಿ, ಇನ್ನೊಂದಿಷ್ಟು ದಿವಸ ಸಾರ್ ಏನಾಗಲ್ಲ ನಾನೂ ಬದಲಾಗಿದ್ದೀನಿ ನೋಡಿ ಅಂದೆ.

ಇದು ಓದಿದ ನಂತರ ಅನುಶ್ರೀ, ರೇಷ್ಮಾ, ಆರಾಧನಾ, ಮಾಧುರ್ಯ ಮತ್ತು ಆದಿತ್ಯ ಹೌಹಾರಿ ಬೆಚ್ಚಿಬಿದ್ದು ನಮ್ಮ ಮನೆಗೆ ನಾಯಿ ತಂದುಕೊಟ್ಟರೂ ಆಶ್ಚರ್ಯವಿಲ್ಲ.

English summary
Are you Cynophogic? Don't worry, a dog is the only thing on earth that loves you more than you love yourself. Meghana Sudhindra shares her story how she overcame the fear of dog in her weekly Kannada column Jayanagarada Hudugi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X