ಹೊದ್ಕೊಳ್ಳೋಣ ಅಂದ್ರೆ ರಗ್ ಇಲ್ಲಾ ತಬ್ಕೊಳ್ಳೋಣಾ ಅಂದ್ರೆ ಹಗ್ ಇಲ್ಲಾ!

Posted By: ಚಿತ್ರಾ ಬಡಿಗೇರ್
Subscribe to Oneindia Kannada

ಚಳಿ ಚಳಿ ತಾಳೆನು ಈ ಚಳಿಯಾ ಆಹಾ ಓಹೋ..... ಏನ್ರಿ ಇದು ಚಳಿಗಾಲ! ಎಷ್ಟ್ ಚಳಿ ಇದೆ ಅಲ್ವಾ? ಹೋದ್ಸರಿ ಇಷ್ಟ್ ಚಳಿ ಇರ್ಲಿಲ್ಲಪ್ಪಾ. ಇದು ಎಲ್ಲಾ ಸೀಸನ್ ಗೂ ಹೇಳೊಹಳೇ ಮಾತು. ಆದ್ರೂ ಈ ಸಲ ಚಳಿ ಜಾಸ್ತಿನೇ ಇದೆ ಅನ್ಸತ್ತೆ, ಅದ್ಕೆ ಕಾರಣ ನಮ್ ಈ ಬ್ಯಾಚುಲರ್ ಲೈಫ್.

ಏನ್ ಹೇಳೊಣ ಸ್ವಾಮಿ, ಹೊದ್ಕೊಳ್ಳೋಣ ಅಂದ್ರೆ ರಗ್ ಇಲ್ಲಾ.... ತಬ್ಕೊಳ್ಳೋಣಾ ಅಂದ್ರೆ ಹಗ್ ಇಲ್ಲಾ. ದಿಂಬು ಬೇರೆ ಇಲ್ಲಾ ಯಾಕಂದ್ರೆ, ಕೆಲವೊಬ್ರು ಉಲ್ಟಾ ಮಲಗ್ದಾಗ, ಫ್ರೆಂಡ್ಸೆ ನಮಗೆ ದಿಂಬು. ಹಾಗೊ ಹೀಗೊ ನೀಲಿ ಕನಸುಗಳ ಮಧ್ಯೆ ರಾತ್ರಿ ಜಾರಿ ಬೆಳಿಗ್ಗೆ ಬಂದ್ರೂ ಅರಿವು ಆಗದಿರೋ ಕಾಲ ಚಳಿಗಾಲ.

ಆಫೀಸ್ ಹೋಗ್ಬೇಕು ಅನ್ಸೋದು ಪ್ರತಿ ತಿಂಗಳು ಒಂದನೆ ತಾರಿಖು ಬಂದಾಗ ಮಾತ್ರ. ಇನ್ನು ನನ್ನ ಫ್ರೆಂಡ್ಸ್ ಬಗ್ಗೆ ಹೇಳ್ಬೇಕಂದ್ರೆ ಕಂಪ್ಲೀಟ್ ಓತ್ಲಾ! ಫ್ರೆಂಡ್ಸ್ ಗೆ ಕಾಲೇಜ್ ಅಂದ್ರೆ ವರ್ಷಕ್ಕೊಮ್ಮೆ ಬರೋ ಯುಗಾದಿ, ದೀಪಾವಳಿ ಇದ್ದಂಗೆ. ಹಾಲ್ ಟಿಕೆಟ್ ಮತ್ತೆ ಎಗ್ಸಾಮ್ ಬರಿಯಕ್ಕೆ ಅಷ್ಟೆ ಕಾಲೇಜ್ ಗೆ ಹೋಗೋದು. ಅದೂ ಗೂಗಲ್ ಮ್ಯಾಪ್ ನಲ್ಲಿ ಕಾಲೇಜ್ ಹುಡ್ಕೊಂಡು! [ಚಳಿ ತಬ್ಬಿದ ಇಳೆಯ ತೋಳಿನಲ್ಲಿ ಮೈ ನಡುಕ, ಪುಳಕ...]

The winter was not so fierce last year

ಈ ಗ್ಯಾಪ್ ನಲ್ಲಿ ಒಬ್ಬ ಮಾತ್ರ ಈ ಚಳಿಯಲ್ಲೂ ರೆಗ್ಯುಲರ್ ಆಗಿ ಕಾಲೇಜ್ ಗೆ ಹೋಗ್ತಾ ಇದ್ದ. ಎಲ್ಲೋ ಮಿಸ್ ಹೊಡಿತಾ ಇದೆ ಅಂತಾ ಅನ್ಸ್ತು. ಆಮೆಲೆ ಗೊತ್ತಾಯ್ತು, ಇದಕ್ಕೆಲ್ಲಾ ಮಿಸ್ಸೆ ಕಾರಣ ಅಂತಾ. "ಚಳೀಲಿ ಲವರ್ ಇದ್ರೆ ಸೆಳೆತ, ಅದೇ ಬ್ಯಾಚುಲರ್ ಆದ್ರೆ ಬರೀ ಕೆರೆತ".

ಚಳಿಗಾಲದಲ್ಲಿ ನೋಡೊ ಲವರ್, ಹುಣ್ಣಿಮೆಯಲ್ಲಿ ನೋಡೊ ಹೆಣ್ಣು ಎರಡೂ ತುಂಬಾ ಬ್ಯುಟಿಫೂಲ್ ಆಗಿರ್ತಾವೆ. ಯಾಕಂದ್ರೆ ಸಿಚುವೇಶನ್ನೇ ಹಾಗಿರತ್ತೆ ನೋಡಿ. ಏನೋ ಅವನ ವಿಶ್ಯ ಬಿಡಿ ಚಳಿಗಾಲದಲ್ಲಿ ಲವ್ ಮಾಡ್ಕೊಂಡು ಬೆಚ್ಚಗಿದ್ದಾನೆ.

ನನ್ ಕೆಲ್ಸದ ವಿಷ್ಯಕ್ಕೆ ಬಂದ್ರೆ ಎಮ್ ಎನ್ ಸಿ ಆಫೀಸ್ ಜೊತೆಗೆ ಏಸಿ ಬೇರೆ, ಅದೂ ಈ ಚಳೀಲಿ. ಅದರ ಜೊತೆಗೆ ಶಾರ್ಟ್ ಸ್ಕರ್ಟ್ ಹಾಕಿರೋ ಫೀಮೇಲ್ ಕಲೀಗ್ಸ್, ಟೈಟ್ ಪ್ಯಾಂಟ್ ಹಾಕಿರೋ ಲೇಡಿ ಮ್ಯಾನೇಜರ್, ಟೈಟಾಗಿರೊ ಜಾಬು, ಜೊತೆಗೆ ಟೈಟಾಗ್ತಾ ಇರೋ ಜೇಬು. ನಮ್ ಐಟಿ ಹುಡುಗ್ರ ದುಡ್ಡ್ ಟ್ಯಾಕ್ಸ್ ಅಲ್ಲಿ ವೇಸ್ಟ್ ಆದ್ರೆ ಪಾಪ ಹುಡ್ಗೀರ್ ದುಡ್ಡು ವ್ಯಾಕ್ಸ್ ನಲ್ಲಿ ವೇಸ್ಟ್.

"ಗಂಡಸರಿಗೆ ನೋವು ಕೊಡೊ ವಿಷ್ಯ ತೆರಿಗೆ, ಹೆಂಗಸರಿಗೆ ನೋವು ಕೊಡೊ ವಿಷ್ಯ ಹೆರಿಗೆ" ಈ ವಿಷಯಾಂತರ ಯಾಕಪ್ಪಾ ಅಂದ್ರೆ ಸ್ಯಾಲರಿಯಲ್ಲಿ ಅರ್ಧ ಟ್ಯಾಕ್ಸು, ಇನ್ನರ್ಧ ಹುಡ್ಗೀರ್ ಶಾಪಿಂಗ್ ಗೆ ಫಿಕ್ಸು. ಈ ಗ್ಯಾಪಲ್ಲಿ ನಮ್ಮಂತ ಹೈಟೆಕ್ ಬಡಪಾಯಿಗೆ ಟೀ ಕಾಫಿಗೂ ದುಡ್ಡಿರಲ್ಲಾ.

ಈ ಚಳೀಲಿ ಕ್ಯಾಫೆಟೇರಿಯಾಗೆ ಹೋಗಿ ಹಾಟ್ ಕಾಫಿ ಕುಡಿತಾ ಹಾಟ್ ಹುಡ್ಗಿರ್ನಾ ನೋಡೊಣಾ ಅಂದ್ರೆ ದುಡ್ಡೂ ಇಲ್ಲಾ ಜೊತೆಗೆ ಚೇಂಜು, ನೋಟು ಸಮಸ್ಯೆ ಬೇರೆ. ಹೇಗೂ ಫ್ರೀ ಜಿಯೊ ಸಿಮ್ಮು ಟಾಕಿಂಗ್ ವಾಕಿಂಗ್ ಮಾಡ್ತಾ ನನ್ನ ಕ್ರಶು!... [ಭೂಮಿ ಸುತ್ತಾ ಸುತ್ತಿದ್ರೆ.. ಸಿಗಬಹುದಾ ಒಂದು ಮುತ್ತು?]

The winter was not so fierce last year

ಒನ್ ಸೈಡ್ ಡವ್ ಜೊತೆ ಮಾತಾಡೊಣಾ ಅಂದ್ರೆ ಈ ಚಳಿಗೆ ನೆಟ್ ವರ್ಕ್ ಬೇರೆ ಜಾಮರ್ ನಲ್ಲಿ ಜಾಮು. ಇನ್ನೇನು ಡೆಸ್ಕಿಗೆ ಬಂದು ಕೆಲ್ಸ ಶುರು ಹಚ್ಕೊಳ್ಳೋಣಾ ಅಂದ್ರೆ, ಚಳಿಗೆ ಡೊರ್ ಒಪನ್ ಆಗ್ತಾ ಇಲ್ಲಾ... ಚಳಿಗೆ ....ಊದ್ಕೋಳ್ಳತ್ತೆ ಅಂತಾ ಗೊತ್ತಿತ್ತು. ಆದ್ರೆ ಕಟ್ಗೇನೂ ಈ ರೇಂಜಿಗೆ ಊದ್ಕೊಂಡು ನಮ್ಮನ್ನ ಈ ರೀತಿ ಟಾರ್ಚರ್ ಕೊಡತ್ತೆ ಅಂತಾ ಗೊತ್ತಿರ್ಲಿಲ್ಲಾ.

ಅಂತೂ ಇಂತೂ ಸೀಟಿಗೆ ಬಂದು ಕೂರುವಷ್ಟರಲ್ಲಿ ನಮ್ಮ್ ಇಂಟರ್ನ್ಯಾಷನಲ್ ಕ್ಲೈಂಟ್ ಕಾಲ್ ಸ್ಟಾರ್ಟ್ ಆಯ್ತು. ನಂಗಿಲ್ಲಿ ಚಳಿಗೆ ನೇಚರ್ಸ್ ಕಾಲ್ ಸ್ಟಾರ್ಟ್ ಆಯ್ತು. ಆದ್ರೂ ಹೇಗೋ ಮ್ಯಾನೇಜ್ ಮಾಡಿ ಕೂತ್ಕೊಂಡೆ. ಮೀಟಿಂಗ್ ಶುರು ಆಯ್ತು, ಅಮೆರಿಕಾ ಕ್ಲೈಂಟು, ಏನೂ ಗೊತ್ತಾಗ್ದೆ ನಾನಿಲ್ಲಿ ಸೈಲೆಂಟು... ಗ್ಯಾಪಲ್ಲಿ ಚಳಿಗೆ ಮೈಯೆಲ್ಲಾ ಕೆರ್ದು ಕೆರ್ದು ಸಾಕಾಯ್ತು.

ಎಲ್ಲಾ ಕಾಲದಲ್ಲೂ ಒಂದೊಂದು ಕಷ್ಟ. ಬೇಸ್ಗೆಯಲ್ಲಿ ಬೆವ್ರು ಸೋರತ್ತೆ, ಮಳೆಗಾಲದಲ್ಲಿ ಮೂಗು ಸೋರತ್ತೆ, ಚಳಿಗಾಲದಲ್ಲಿ ಅದೂ ಈ ಮೀಟಿಂಗ್ ನಲ್ಲಿ ನನ್ನ ಕಿವಿ ಸೋರ್ತಾ ಇದೆ. ಹಾಗೋ ಹೀಗೋ ಎಲ್ಲಾರ ಕಡೆ ಉಗ್ಸ್ಕೊಂಡು ನನ್ನ ಮೀಟಿಂಗ್ ಮುಗುಸ್ದೆ. ನಂತರ ಮಾಡಿದ ಮೊದ್ಲನೇ ಕೆಲ್ಸನೇ ರೆಸ್ಟ್ ರೋಮಿಗೆ ಹೋಗಿದ್ದು. [ಸಿಕ್ಕು ಬಿಟ್ಲು ನನ್ನ ಮೈನಾ... ಚಲ್ ಮೇರೆ ಲೂನಾ!]

The winter was not so fierce last year

ಟೈಮ್ ಎಷ್ಟು ಪಕ್ಕಾ 420 ಅಂದ್ರೆ ನನ್ನ ಒನ್ ಸೈಡ್ ಡವ್ ಬೇರೆ ಈಗ್ಲೇ ಕಾಲ್ ಮಾಡ್ಬೇಕಾ? ಈ ನೆಟ್ ವರ್ಕ್ ಸಿಗ್ಬಾರದ್ ಜಾಗದಲ್ಲೆ ಸಿಗತ್ತೆ ನೋಡಿ. ಒನ್ ಸೈಡ್ ನಾ ಟು ಸೈಡ್ ಮಾಡ್ಕೊಬೇಕು ಅಂತಾ ಮಾತಾಡ್ಬೆಕೋ? ಇಲ್ಲಾ ಬಂದ್ ಕೆಲ್ಸ ಮುಗ್ಸ್ ಬೇಕೋ ಗೊತ್ತಾಗ್ಲಿಲ್ಲಾ. ಎಲ್ಲಾ ಭಾವನೆಗಳು ಮುಖ್ಯ ಅಂತಾ ಎರಡೂ ಒಟ್ಟಿಗೆ ಮಾಡಕ್ಕೆ ಹೋದೆ.

ಅಲ್ಲೆ ಆಯ್ತು ಲವ್ ಹೊಗೆ. ಹೇಗೊ ಭಾರ ಇಳಿಸಿ ಹೊರಗೆ ಬಂದ್ರೆ ಮ್ಯಾನೇಜರ್ ಮೀಟಿಂಗ್ ರಿಪೊರ್ಟ್ ರೆಡಿ ಮಾಡು ಅನ್ನೊದಾ? ಈ ಚಳಿಗಾಲದ ಕೆರೆತಕ್ಕೆ ಕರಿಯರ್ ಮೇಲೂ ಕಾನ್ಸನ್ಟ್ರೇಶನ್ ಮಾಡಕ್ಕೆ ಆಗ್ದೆ... ಈ ಕಡೆ ಕ್ರಶ್ ಮೇಲೂ ಕಾನ್ಸನ್ಟ್ರೇಶನ್ ಮಾಡಕ್ಕೆ ಆಗದೆ ನನ್ನ ಜೀವನ ಆಗಿದೆ ಥಂಡಿಯಲ್ಲಿ ಕಾಡಿಸುವ ತಿಂಡಿ (ಕೆರೆತ)..... [ವಿಶೇಷ ಕಥೆ : ಟಪ್ ಟಪ್ ಬುದ್ಧಿಸ್ಟ್ ಸೆಂಟರ್ (ಭಾಗ 1)]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Winter means tight hug of lover, sound sleep, hot coffee, super hot gossip, bachelor life... and so on. A humourous write up Chitra Badiger.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ