ಮಿಮಿಕ್ರಿ ವಿಶೇಷ: ಕನ್ನಡ ಸೆಲೆಬ್ರಿಟಿಗಳ ಜತೆ ರಾಜ್ಯೋತ್ಸವ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 03: ಕನ್ನಡ ನಾಡಿನ ಹಿರಿಮೆಯನ್ನು ತಮ್ಮ ಕಲೆಯ ಮೂಲಕ ಎಲ್ಲೆಡೆ ಪಸರಿಸಿ, ಕಣ್ಮುಂದೆ ಮಿಂಚಿ ಕನಸಲ್ಲೂ ಕಾಡೋ ನಟರು, ವಿಶಿಷ್ಟ ವಿಭಿನ್ನ ಮ್ಯಾನರಿಸಂಗಳ ಕಲಾವಿದರು ಒಂದೆಡೆ ಸೇರಿ ಸಮಸ್ತ ರಾಜ್ಯದ ಜನತೆಗೆ ರಾಜ್ಯೋತ್ಸವದ ಶುಭ ಕೋರಿದರೆ ಹೇಗೆ? ಎಂಬ ಕಲ್ಪನೆಯನ್ನು ಜಯಂತ್ ಪಿ ಬೆಳ್ಳೂರು ಅವರು ಮಿಮಿಕ್ರಿ ಮೂಲಕ ನಿಮ್ಮ ಮುಂದಿಡುತ್ತಿದ್ದಾರೆ.

ಡಾ. ರಾಜ್ ಕುಮಾರ್ ಅಭಿನಯದ 'ಮಯೂರ' ಚಿತ್ರದ ಮಾರುದ್ದ ಡೈಲಾಗನ್ನು ಸ್ಯಾಂಡಲ್ ವುಡ್ ಸ್ಟಾರ್ ಗಳು ಹೇಳಿದರೆ ಹೇಗಿರುತ್ತೆ ಎಂಬುದನ್ನು ಜಯಂತ್ ತೋರಿಸಿಕೊಟ್ಟಿದ್ದಾರೆ. [ಹಾಸ್ಯ : 'ಕಾವು' ಏರಿದ ಚರ್ಚೆಯಲ್ಲಿ ಜನನಾಯಕರು]

Kannada Rajyotsava with Sandalwood actors Mimicry Jayanth P Bellur

ಮಯೂರ ಚಿತ್ರದ 'ಹೊಂಚು ಹಾಕಿ, ಸಂಚು ಮಾಡಿ...' ಸಂಭಾಷಣೆಯ ಡಾ ಶಿವಕುಮಾರ್ ಅವರ ನೈಜ ಮಾತಿನ ವರಸೆಯಲ್ಲಿ, ಆರ್ಮುಗ ರವಿಶಂಕರ್ ಅವರ ಅಬ್ಬರ ಶೈಲಿಯಲ್ಲಿ, ಬಾಲಕೃಷ್ಣ ಅವರ ರಾಗ ಏಳುವ ಕಂಠದಲ್ಲಿ, ಧೀರೇಂದ್ರ ಗೋಪಾಲ್ ಅವರ ಕಂಚಿನ ಕಂಠದಂತೆ, ನಮಸ್ಕಾರ ಕಣ್ಣಣೋ ಟೆನ್ನಿಸ್ ಕೃಷ್ಣ ಹಾಗೂ ಡೈಲಾಗ್ ಕಿಂಗ್ ಸಾಯಿಕುಮಾರ್ ರೀತಿ ಘರ್ಜನೆ, ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ರೋಷಾವೇಷದ ಮಾದರಿಯಲ್ಲಿ ಈ ಡೈಲಾಗ್ ಕೇಳಬಹುದು.

ನವೆಂಬರ್ 28ರಂದು ಕನ್ನಡ ಯುಕೆ ಅವರು ಆಂಗ್ಲರ ನಾಡಿನಲ್ಲಿ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವದ ಬಗ್ಗೆ ಮಾಹಿತಿ ಕೂಡಾ ಇದೆ. ಈ ವಿಡಿಯೋ ನಿಮಗೂ ಇಷ್ಟವಾದರೆ, ಲೈಕ್ ಮಾಡಿ, ಹಂಚಿಕೊಳ್ಳಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada Rajyotsava with Sandalwood actors Mimicry. Jayanth P Bellur's take on how it would have been if various sandalwood stars had rendered the famous dialogue of the Dr. Rajkumar movie Mayura.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ