ಒಂದು ಪ್ಲೇಟ್ ಭೇಲ್ ಪುರಿಯ ಬೆಲೆ ಎಷ್ಟು? ಇವತ್ತೇ ತಿನ್ನಿ!
ತಳ್ಳೋ ಗಾಡಿಯವನ ಹತ್ತಿರ ಚಾಟ್ ತಿನ್ನುವುದಕ್ಕೆ ಯಾವುದೇ ಶುಭದಿನ ಇರುವುದಿಲ್ಲವಾದರೂ, ವೀಕೆಂಡಲ್ಲಿ ಸಂಜೆ ಹೊತ್ತಲ್ಲಿ ಚಟಪಡಿಕೆ ಶುರುವಾಗುತ್ತದೆ. ಒಂದು ಪ್ಲೈಟು ಪಾನಿ ಪುರಿ, ಮತ್ತೊಂದು ಪ್ಲೇಟು ಸೇವ್ ಪುರಿ, ನಂತರ ಬೈಟು ಭೇಲ್ ಪುರಿ ತಿನ್ನದಿದ್ದರೆ ಬೆಳಿಗ್ಗೆ ತಿಂದಿದ್ದು ಕೆಲವರಿಗೆ ಕರಗುವುದಿಲ್ಲ.
ಕೈಗೆ ಪ್ಲಾಸ್ಟಿಕ್ ಗ್ಲೋವ್ಸ್ ಹಾಕಿಕೊಂಡು ಚಾಟ್ ತಯಾರಿಸಿ ಕೊಡುವವನಿಗಿಂತ ಚಕಚಕನೆ ಈರುಳ್ಳಿ ಕೊಚ್ಚುತ್ತ, ಪಟಪಟನೆ ಟೊಮೆಟೊ ಕತ್ತರಿಸುತ್ತ, ಅಲ್ಯುಮಿನಿಯಂ ಬೋಗುಣಿಯಲ್ಲಿ ಗಿರಗಿರ ಸೌಟು ತಿರುಗಿರುತ್ತ, ಗಾಡಿಯವನ ಕೈಚಳಕದ ಭೇಲ್ ಪುರಿ ತಿನ್ನುವ ಮಜಾನೇ ಬೇರೆ. ಏನಂತೀರಿ? ಅದಕ್ಕೊಂದಿಷ್ಟು ಖಾರ ಹಾಕಿಕೊಂಡು ಮೆದ್ದರೇ... ಆಹಾ!
ನಿಮ್ಮ ಬಾಯಲ್ಲಿ ನೀರು ಬರುತ್ತಿರಬಹುದು. ಭೇಲ್ ಪುರಿ ತಿನ್ನೋಕೆ ಹೊರಟೇ ಬಿಟ್ರಾ? ಸ್ವಲ್ಪ ತಡಕೊಳ್ಳಿ. ಸುರಿಯುವ ಜೊಲ್ಲನ್ನು ಹಂಗೇ ಸೊರ್ ಅಂತ ಹಿಂದಕ್ಕೆಳೆದುಕೊಂಡು, ಚಾಟ್ ಪ್ರಿಯರಿಗೊಬ್ಬರಿಗಾದ ವಿಶೇಷ ಅನುಭವವನ್ನು ಚಪ್ಪರಿಸುತ್ತ ಓದಿಬಿಡಿ. ಇಂಥಾ ವೈರೈಟಿ ಭೇಲ್ ಪುರಿಗಳನ್ನು ನೀವು ಜೀವಮಾನದಲ್ಲಿ ಕೇಳಿರಲಿಕ್ಕಿಲ್ಲ. ರುಚಿಯೂ ಸಖತ್ತು, ಬೆಲೆನೂ ಕಡಿಮೆ! [ಆಸೆಯ ದೋಸೆ ತಿನ್ನಲು ಹೋಗಿ ಮಣ್ಣಾದ ಮೀಸೆ!]

ಒಂದು ಭೇಲ್ಪುರಿ ಗಾಡಿಯವನ ಮೆನು ಹಿಂಗೆ ಇತ್ತು..
ಭೇಲ್ ಪುರಿ - ಹತ್ತು ರುಪಾಯಿ
ಸ್ಪೆಷಲ್ ಭೇಲ್ ಪುರಿ - ಹನ್ನೆರಡು ರುಪಾಯಿ
ವೆರಿ ಸ್ಪೆಷಲ್ ಭೇಲ್ಪುರಿ - ಹದಿನೈದು ರುಪಾಯಿ
ಎಕ್ಸ್‌ಟ್ರಾ ಸ್ಪೆಷಲ್ ಭೇಲ್ ಪುರಿ - ಹದಿನಾರು ರುಪಾಯಿ
ಡಬಲ್ ಎಕ್ಸ್‌ಟ್ರಾ ಸ್ಪೆಷಲ್ ಭೇಲ್ ಪುರಿ - ಇಪ್ಪತ್ತು ರುಪಾಯಿ
ಸಂಡೆ ಸ್ಪೆಷಲ್ ಭೇಲ್ ಪುರಿ - ಇಪ್ಪತ್ತೈದು ರುಪಾಯಿ (ರವಿವಾರ ಮಾತ್ರ)
ನಾನು ನೋಡೋಣ ಅಂತಾ ದಿನಾ ಒಂದೊಂದೇ ಟೈಪ್ ಪುರಿ ತಿಂದೆ. ಎಲ್ಲಾದು ಒಂದೇ ಟೇಸ್ಟು... ನಂಗೆ ತಡ್ಕೊಳ್ಳೋಕೆ ಆಗದೆ ಒಂದ್ ದಿನ ಕೇಳಿದೆ "ಏನು ಗುರು ಇವೆಲ್ಲಾ....? ಒಂದೇ ಟೇಸ್ಟು ಆದರೆ ರೇಟ್ ಎಲ್ಲಾ ಬೇರೆ... ಏನು ಡಿಫರೆನ್ಸ್?"
ಅವನು ಹೇಳಿದ.. "ನೋಡಿ ಸಾಮಿ, ಭೇಲ್ ಪುರಿ ಅಂದರೆ ಭೇಲ್ ಪುರಿ.. ಹತ್ತು ರುಪಾಯಿ ಮಾತ್ರ... ಸ್ಪೆಷಲ್ ಭೇಲ್ ಪುರಿ ಅಂದ್ರೆ ಕೊಡೊ ಸ್ಪೂನು ತೊಳದಿರ್ತೀವಿ.. ವೆರಿ ಸ್ಪೆಷಲ್ ಅಂದ್ರೆ ಪ್ಲೇಟು ಮತ್ತೆ ಸ್ಪೂನು ಎರಡು ತೊಳದಿರ್ತೀವಿ.. ಎಕ್ಸ್ಟ್ರಾ ಸ್ಪೆಷಲ್ ಭೇಲ್ ಪುರಿ ಅಂದ್ರೆ ಕೊಡೊ ಮುಂಚೆ ಕೈ ತೊಳದಿರ್ತೀವಿ.. ಡಬಲ್ ಎಕ್ಸ್‌ಟ್ರಾ ಸ್ಪೆಷಲ್ ಭೇಲ್ ಪುರಿ ಅಂದ್ರೆ ಕುಡಿಯೋಕೆ ಕುಡಿಯೋ ನೀರನ್ನೇ ಕೊಡ್ತೀವಿ.. ಅಂತಾ ಹೇಳ್ಬಿಟ್ಟು ಸೈಲೆಂಟ್ ಆದ.
"ಎಲ್ಲಾ ಹೇಳಿಬಿಟ್ಟು ಸಂಡೆ ಸ್ಪೆಷಲ್ ಬಿಟ್ಟುಬಿಟ್ಟೆ.. ಅದನ್ನು ಏನು ಅಂತಾ ಹೇಳಪ್ಪಾ.. " ಅಂದೆ ಕುತೂಹಲ ತಡೆಯಲಾರದೆ.
"ಓ ಅದಾ.. ಆವತ್ತು ನಾನು ಸ್ನಾನ ಮಾಡೋ ದಿನ.. ಅದಕ್ಕೆ ಸಂಡೆ ಮಾತ್ರ ಸಿಗತ್ತೆ..!" [ಕೃಪೆ : ಹರೀಶ ನಾಗರಾಜ ಫೇಸ್ ಬುಕ್ ಪುಟ]
ಇಷ್ಟಕ್ಕೂ ಈ ಚಾಟಿಗೆ ಭೇಲ್ ಪುರಿ ಅನ್ನುವ ಹೆಸರಾದರೂ ಹೇಗೆ ಬಂತು? ಯಾರಿಗಾದರೂ ಗೊತ್ತಾ? ಗೊತ್ತಿದ್ದರೆ ತಿಳಿಸಿ. [ವಿದೇಶಿ ಬ್ರ್ಯಾಂಡಿನ ತೀರ್ಥ, ಸ್ನೇಹಿತರ ಸ್ವಾರ್ಥ]
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications