155493kannada humorಸಿಇಓ ಯಮಧರ್ಮರಾಯನ ಪಿಂಕ್ ಸ್ಲಿಪ್ ಪುರಾಣ/column/humor/2008/0919-yamaloka-software-company-pink-slip-episode.htmlನೋಡನೋಡುತ್ತಿದ್ದಂತೆ ಯಮಲೋಕದ ಗೆಟಪ್ಪೇ ಬದಲಾಗಲು ಪ್ರಾರಂಭಿಸಿತು. ಬೋಳು ತಲೆ, ಫ್ರೆಂಚ್ ಗಡ್ಡ, ಬ್ಲಾಕ್ ಟೀಶರ್ಟು, ಜೀನ್ಸ್ ಪ್ಯಾಂಟು, ಕಾಲಿಗೆ ಹವಾಯಿ ಚಪ್ಲಿ ಹಾಕ್ಕೊಂಡು ಸಣಕಲ ಕಡ್ಡಿಯಂತಿದ್ದ ಯಮ ಕಣ್ಣು ಮಿಟುಕಿಸುವುದರೊಳಗಾಗಿ ತನ್ನ ಮೂಲರೂಪ ಪಡೆದಿದ್ದ. ತಲೆಯನ್ನೊಮ್ಮೆ ಕೊಡವಿ ಕಿರೀಟ ಧರಿಸಿದ ನೋಡು ಆತನ ಖದರೇ ಬದಲಾಗಿಹೋಯಿತು. ಕಣ್ಣೆಲ್ಲ ಬೆಂಕಿಯ ಉಂಡೆ, ಕಿವಿಯಿಂದ ಬುಸ್ಸನೆ ಹೊಗೆ. ಲೇಖನ 743http://kannada.oneindia.com/img/2009/07/21-yama1e.jpg155493kannada humorಯಮಲೋಕದ ಸಿಇಓ ಯಮಣ್ಣನ ಪೀಕಲಾಟ/column/humor/2008/0912-yamaloka-software-company.htmlಸಾಫ್ಟ್ ವೇರ್ ಕಂಪನಿಯಾಗಿ ನರಕವನ್ನು ಬದಲಾಯಿಸಿದ್ದ ಯಮ ಕಂಪ್ಯೂಟರ್ ಆಪರೇಟ್ ಹೇಗೆ ಮಾಡಬೇಕೆಂದು ತಿಳಿಯದೇ ಚಿಂತಾಕ್ರಾಂತನಾಗಿ ಕುಳಿತಿದ್ದ. ಆತ ಬಳಸುವ ಕಂಪ್ಯೂಟರ್ ಆನ್ ಅಗಿದ್ದೇ ಇಲ್ಲ. ಪವರ್ ಕೇಬಲ್ ಕಿತ್ತುಕೊಂಡು ಬಂದಿತ್ತು. ಯಮನಿಗೆ ಅಷ್ಟೂ ಗೊತ್ತಾಗಿರಲಿಲ್ಲ. ಇಷ್ಟೇ ಅಂತ ಹೇಳಿದೆ. ಪೆಕ್ರನ ಥರಾ ನನ್ನತ್ತ ನೋಡಿ ನಕ್ಕ. ಆಮೇಲೆ ಇದ್ದಕ್ಕಿದ್ದಂತೆ ಯಮನ ಮುಖ ಕಳೆಗುಂದಿತು. ಯಾಕೆ ಯಮಣ್ಣ 873http://kannada.oneindia.com/img/2009/07/21-yama1e.jpg155493kannada humorಮುಂದಿನ ಜನ್ಮದಲ್ಲಿ ಯಡಿಯೂರಪ್ಪ ಟೇಲರ್!/column/humor/2009/0113-monotony-of-laying-foundation-stones.htmlಮಾನ್ಯ ಮುಖ್ಯಮಂತ್ರಿಗಳು ಇದೇ ರೀತಿ ವರ್ತಿಸುತ್ತಿದ್ದರೆ ಅವರಿಗೆ ಅನ್ಯ ಉದ್ಯೋಗವಿಲ್ಲ.* ನಿಜಗುಣಹೊಸ ಯೋಜನೆಗಳಿಗೆ ಕಾಮಗಾರಿ ಆರಂಭವಾಗುವ ಮುಂಚೆ ಸಾಂಕೇತಿಕ ಕಾಮಗಾರಿ ಶಾಸ್ತ್ರ ಮಾಡುವುದು ನಮ್ಮಲ್ಲಿ ರೂಢಿ. ಅಲ್ಲಿ ತಲೆ ಎತ್ತಲಿರುವ ಕಟ್ಟಡ ಮನೆಯಾಗಬಹುದು, ಕಚೇರಿ ಆಗಬಹುದು, ಭವನವಾಗಬಹುದು, ಅಣೆಕಟ್ಟಾಗಬಹುದು, ಶಿಶುವಿಹಾರ ಸ್ಮಾರಕ ಚಿತಾಗಾರವೇ ಆಗಿರಬಹುದು. ಯಾವುದೇ ಆಗಿರಲಿ, ಸುಮೂಹೂರ್ತದಲ್ಲಿ ಧಾರ್ಮಿಕ ವಿಧಿವಿಧಾನಗಳ ರೀತ್ಯ ಯೋಜನೆಗೆ ನಾಂದಿ ಹಾಡುವುದು 34058http://kannada.oneindia.com/img/2009/01/13-cm-varahi-unit1e.jpg155493kannada humorಇಪ್ಪತ್ಯೋಳಕ್ಕೇ ಮೂವತ್ತಾಯ್ತಂದ್ರೆ ಎಂಗೆ ಸಿವಾ?/column/humor/2009/0416-birthday-bash-poornima-bhat-london.htmlಈಗೊಂದು ವಾರದ ಹಿಂದೆ ನಮ್ಮಾಫೀಸಿನಲ್ಲಿ ನಡೆದ ಘಟನೆ ಇದು. ಅದೇ ತಾನೇ ಆಫೀಸ್ ಒಳ ಹೊಕ್ಕು ಎಲ್ಲರೊಂದಿಗೆ 'ಗುಡ್ ಮಾರ್ನಿಂಗ್" ವಿನಿಮಯದಲ್ಲಿದ್ದೆ. ಹಿಂದಿನಿಂದ ಬಂದು ನಿಂತ ಎಲಿಯಟ್ - ನನ್ನ ಮ್ಯಾನೇಜರ್ - ಕ್ಯಾನ್ ವಿ ಹ್ಯಾವ್ ಅ ಕ್ವಿಕ್ ಚ್ಯಾಟ್ ಪೂನಿ" ಅಂತ ಕಿವಿಯಲ್ಲಿ ಉಸುರಿದ. 'ಕೆಲಸ ಹೋಗುತ್ತಿದೆ ಎಂಬ ಶಾಕಿಂಗ್ ನ್ಯೂಸ್ ಕೊಡ್ತಾ ಇಲ್ಲ 35996http://kannada.oneindia.com/img/2009/04/16-poornima-bhat2.jpg155493kannada humorಇಮಾನ ಒಳ್ಡತಾವ್ ಮೋಯ್ನಿ ಅಡ್ಡಾಕ್ತಳಂತೆ?/column/humor/2009/0423-mohini-or-air-hostess.html* ನಾ ಭಾಸ್ಕರ, ಆಕ್ಲಂಡ್ ತನ್ನ ಭಾಮೈದನ ನೆಲೆಸೂರಾದ ನ್ಯುಜೀಲೆಂಡಿಗೆ ಪ್ರವಾಸ ಹೊರಟಿದ್ದ ರಾಮಣ್ಣ ಮತ್ತು ಅವನ ಬಲಗೈ ಬಂಟ ಬಚ್ಚಪ್ಪ ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ತಪಾಸಣೆಯ ಸಾಲಿನಲ್ಲಿ ನಿಂತಿದ್ದರು. ವಿಮಾನ ಹತ್ತುವುದಕ್ಕೆ ಮುಂಚೆಯೇ ಅವರಿಗೆ ಬೆಂಗಳೂರಿನಿಂದ ಈಗಾಗಲೇ ಬಹಳ ದೂರ ಹೊರಟುಹೋಗಿದ್ದಂತೆ ಭಾಸವಾಗಿಸುತ್ತಿತ್ತು ಅಲ್ಲಿಯ ವಾತಾವರಣ. ಎಲ್ಲೆಡೆ ಲಾಲೂ ಯಾದವ್ ತಮ್ಮಂದಿರಂತಿದ್ದ ಪೇದೆಗಳು, ಐದು 36161http://kannada.oneindia.com/img/2009/04/23-bhaskara-auckland1.jpg136020softwareಸಿಇಓ ಯಮಧರ್ಮರಾಯನ ಪಿಂಕ್ ಸ್ಲಿಪ್ ಪುರಾಣ/column/humor/2008/0919-yamaloka-software-company-pink-slip-episode.htmlನೋಡನೋಡುತ್ತಿದ್ದಂತೆ ಯಮಲೋಕದ ಗೆಟಪ್ಪೇ ಬದಲಾಗಲು ಪ್ರಾರಂಭಿಸಿತು. ಬೋಳು ತಲೆ, ಫ್ರೆಂಚ್ ಗಡ್ಡ, ಬ್ಲಾಕ್ ಟೀಶರ್ಟು, ಜೀನ್ಸ್ ಪ್ಯಾಂಟು, ಕಾಲಿಗೆ ಹವಾಯಿ ಚಪ್ಲಿ ಹಾಕ್ಕೊಂಡು ಸಣಕಲ ಕಡ್ಡಿಯಂತಿದ್ದ ಯಮ ಕಣ್ಣು ಮಿಟುಕಿಸುವುದರೊಳಗಾಗಿ ತನ್ನ ಮೂಲರೂಪ ಪಡೆದಿದ್ದ. ತಲೆಯನ್ನೊಮ್ಮೆ ಕೊಡವಿ ಕಿರೀಟ ಧರಿಸಿದ ನೋಡು ಆತನ ಖದರೇ ಬದಲಾಗಿಹೋಯಿತು. ಕಣ್ಣೆಲ್ಲ ಬೆಂಕಿಯ ಉಂಡೆ, ಕಿವಿಯಿಂದ ಬುಸ್ಸನೆ ಹೊಗೆ. ಲೇಖನ 743http://kannada.oneindia.com/img/2009/07/21-yama1e.jpg136020softwareಯಮಲೋಕದ ಸಿಇಓ ಯಮಣ್ಣನ ಪೀಕಲಾಟ/column/humor/2008/0912-yamaloka-software-company.htmlಸಾಫ್ಟ್ ವೇರ್ ಕಂಪನಿಯಾಗಿ ನರಕವನ್ನು ಬದಲಾಯಿಸಿದ್ದ ಯಮ ಕಂಪ್ಯೂಟರ್ ಆಪರೇಟ್ ಹೇಗೆ ಮಾಡಬೇಕೆಂದು ತಿಳಿಯದೇ ಚಿಂತಾಕ್ರಾಂತನಾಗಿ ಕುಳಿತಿದ್ದ. ಆತ ಬಳಸುವ ಕಂಪ್ಯೂಟರ್ ಆನ್ ಅಗಿದ್ದೇ ಇಲ್ಲ. ಪವರ್ ಕೇಬಲ್ ಕಿತ್ತುಕೊಂಡು ಬಂದಿತ್ತು. ಯಮನಿಗೆ ಅಷ್ಟೂ ಗೊತ್ತಾಗಿರಲಿಲ್ಲ. ಇಷ್ಟೇ ಅಂತ ಹೇಳಿದೆ. ಪೆಕ್ರನ ಥರಾ ನನ್ನತ್ತ ನೋಡಿ ನಕ್ಕ. ಆಮೇಲೆ ಇದ್ದಕ್ಕಿದ್ದಂತೆ ಯಮನ ಮುಖ ಕಳೆಗುಂದಿತು. ಯಾಕೆ ಯಮಣ್ಣ 873http://kannada.oneindia.com/img/2009/07/21-yama1e.jpg136020softwareಇನ್ಫಿಯಲ್ಲಿ ನೇಮಕಾತಿಯಿಲ್ಲ ವೇತನ ಹೆಚ್ಚಳವೂ ಇಲ್ಲ/news/2009/04/15/infosys-no-wage-hike-no-appointments.htmlಬೆಂಗಳೂರು, ಏ. 15 : ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ಲಾಭಾಂಶದಲ್ಲಿ ತುಸು ಹಿನ್ನೆಡೆಯಾಗಿರುವ ಬೆನ್ನ ಹಿಂದೆಯೇ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಟೆಕ್ನಾಲಜೀಸ್ ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.ಆರ್ಥಿಕ ಸಂಕಷ್ಟದ ಬಿಸಿ ಇನ್ನೂ ಆರುವ ಲಕ್ಷಣ ಗೋಚರಿಸದ ಕಾರಣ ಇನ್ಫೋಸಿಸ್ ಕಂಪನಿ 2009-10ರ ಹಣಕಾಸು ವರ್ಷದಲ್ಲಿ ತನ್ನ ನೌಕರರಿಗೆ ವೇತನ 35980http://kannada.oneindia.com/img/2009/04/15-mohandas-pai2.jpg136020softwareಪ್ರತಿಭಾ ಪಲಾಯನದಿಂದ ಲಾಭವೋ ನಷ್ಟವೋ?/literature/my-karnataka/2009/0425-brain-drain-swarnagowri-venkatesh.htmlಸುಮಾರು ಇಪ್ಪತ್ತು ವರ್ಷಗಳ ಹಿ೦ದೆ ಪ್ರಸಿದ್ಧ ಕನ್ನಡ ವಾರ ಪತ್ರಿಕೆಯೊದು ಓದುಗರ ಪ್ರತಿಕ್ರಿಯೆಗೆ ಅಹ್ವಾನಿಸಿತ್ತು. ವಿಷಯ; "ಪ್ರತಿಭಾ ಪಲಾಯನ". ಅದರಲ್ಲಿ ಎಷ್ಟು ಜನ ಭಾಗವಹಿಸಿದ್ದರು ಅ೦ದರೆ ಪತ್ರಿಕೆಗೆ ಬರೋಬರಿ ಒಳ್ಳೆ ವ್ಯಾಪಾರ ಆಗಿತ್ತು. ಪ್ರತಿಕ್ರಿಯೆಗೆ ಪ್ರತಿಕ್ರಿಯೆ, ಮತ್ತೆ ಬರೆಯುವುದು, ಮತ್ತೆ ವಾದ-ವಿವಾದ. ಇದೇವಿಷಯ ಮೂರು ನಾಲ್ಕುವಾರ ಓಡಿ ಹಾಕಿಸಿದ ಪ್ರಿ೦ಟೆಲ್ಲಾ ಖರ್ಚಾಯಿತು. ಬಹುಶ ಆಗಿನಕಾಲದಲ್ಲಿ ಇ೦ಟರ್ನೆಟ್ ಇದ್ದಿದ್ದರೆ 36214http://kannada.oneindia.com/img/2009/04/25-swarnagowri-venkatesh1.jpg136020softwareಚಂದ್ರನ ಮೇಲೆ ಸೈಟುಗಳು ಮಾರಾಟಕ್ಕಿವೆ!/column/humor/2009/0520-sites-for-sale-chandrayaan-after-effects.htmlಎ.ಪಿ.ಜೆ.ಅಬ್ದುಲ್ ಕಲಾಂ, ಮಾಧವನ್ ನಾಯರ್, ಯು.ಆರ್.ರಾವ್ ಮತ್ತು ಟಿ.ಕೆ.ಅಲೆಕ್ಸ್ ಈ ನಾಲ್ವರು ಭಾರತದ ಹೆಗ್ಗಳಿಕೆಯ ಚಂದ್ರಯಾನದ ಯಶಸ್ಸಿಗೆ ಕಾರಣರಾದ ನಮ್ಮ ವಿಜ್ಞಾನಿಗಳಲ್ಲಿ ಪ್ರಮುಖರು. ಇವರೆಲ್ಲ ಸೇರಿ ಚಂದ್ರನ ಮೇಲೆ ಎಂಐಪಿ ಎಂಬ ಶೋಧಕ ಉಪಕರಣವನ್ನು ಯಶಸ್ವಿಯಾಗಿ ಇಳಿಸಿದರು. ಭಾರತದ ತ್ರಿವರ್ಣವನ್ನು ಚಂದ್ರನ ಮೇಲೆ ಏರಿಸಿದರು.* ಎಚ್. ಆನಂದರಾಮ ಶಾಸ್ತ್ರೀ,ಬೆಂಗಳೂರುಕೆಲವು ಬುದ್ಧಿವಂತ ರಿಯಲ್ ಎಸ್ಟೇಟ್ ಉದ್ಯಮಿಗಳು ಇದೇ ಅವಕಾಶವೆಂದುಕೊಂಡು 36771http://kannada.oneindia.com/img/2009/05/20-moon-smiling1.jpg83810ಹಾಸ್ಯ ಲೇಖನಸಿಇಓ ಯಮಧರ್ಮರಾಯನ ಪಿಂಕ್ ಸ್ಲಿಪ್ ಪುರಾಣ/column/humor/2008/0919-yamaloka-software-company-pink-slip-episode.htmlನೋಡನೋಡುತ್ತಿದ್ದಂತೆ ಯಮಲೋಕದ ಗೆಟಪ್ಪೇ ಬದಲಾಗಲು ಪ್ರಾರಂಭಿಸಿತು. ಬೋಳು ತಲೆ, ಫ್ರೆಂಚ್ ಗಡ್ಡ, ಬ್ಲಾಕ್ ಟೀಶರ್ಟು, ಜೀನ್ಸ್ ಪ್ಯಾಂಟು, ಕಾಲಿಗೆ ಹವಾಯಿ ಚಪ್ಲಿ ಹಾಕ್ಕೊಂಡು ಸಣಕಲ ಕಡ್ಡಿಯಂತಿದ್ದ ಯಮ ಕಣ್ಣು ಮಿಟುಕಿಸುವುದರೊಳಗಾಗಿ ತನ್ನ ಮೂಲರೂಪ ಪಡೆದಿದ್ದ. ತಲೆಯನ್ನೊಮ್ಮೆ ಕೊಡವಿ ಕಿರೀಟ ಧರಿಸಿದ ನೋಡು ಆತನ ಖದರೇ ಬದಲಾಗಿಹೋಯಿತು. ಕಣ್ಣೆಲ್ಲ ಬೆಂಕಿಯ ಉಂಡೆ, ಕಿವಿಯಿಂದ ಬುಸ್ಸನೆ ಹೊಗೆ. ಲೇಖನ 743http://kannada.oneindia.com/img/2009/07/21-yama1e.jpg83810ಹಾಸ್ಯ ಲೇಖನಯಮಲೋಕದ ಸಿಇಓ ಯಮಣ್ಣನ ಪೀಕಲಾಟ/column/humor/2008/0912-yamaloka-software-company.htmlಸಾಫ್ಟ್ ವೇರ್ ಕಂಪನಿಯಾಗಿ ನರಕವನ್ನು ಬದಲಾಯಿಸಿದ್ದ ಯಮ ಕಂಪ್ಯೂಟರ್ ಆಪರೇಟ್ ಹೇಗೆ ಮಾಡಬೇಕೆಂದು ತಿಳಿಯದೇ ಚಿಂತಾಕ್ರಾಂತನಾಗಿ ಕುಳಿತಿದ್ದ. ಆತ ಬಳಸುವ ಕಂಪ್ಯೂಟರ್ ಆನ್ ಅಗಿದ್ದೇ ಇಲ್ಲ. ಪವರ್ ಕೇಬಲ್ ಕಿತ್ತುಕೊಂಡು ಬಂದಿತ್ತು. ಯಮನಿಗೆ ಅಷ್ಟೂ ಗೊತ್ತಾಗಿರಲಿಲ್ಲ. ಇಷ್ಟೇ ಅಂತ ಹೇಳಿದೆ. ಪೆಕ್ರನ ಥರಾ ನನ್ನತ್ತ ನೋಡಿ ನಕ್ಕ. ಆಮೇಲೆ ಇದ್ದಕ್ಕಿದ್ದಂತೆ ಯಮನ ಮುಖ ಕಳೆಗುಂದಿತು. ಯಾಕೆ ಯಮಣ್ಣ 873http://kannada.oneindia.com/img/2009/07/21-yama1e.jpg83810ಹಾಸ್ಯ ಲೇಖನಎಂಥ ಗಂಟ್ಹಾಕ್ಕೊಂಡಿದಾಳೆ ನೋಡೇ!/mixed-bag/lifestyle/2007/030707hairstyle_lifestyle.htmlಅಂದು ಕಲ್ಪನಾ, ಮಂಜುಳಾರ ತುರುಬಿಗೆ ಮಾರು ಹೋಗದ ಹುಡುಗಿಯರು ಯಾರಿದ್ದಾರೆ? ಕೂದಲು ಉದ್ದವಿದ್ದ ಹುಡುಗಿಯರು, ಸಕಲ ಭಾಗ್ಯ ಪಡೆದವರಂತೆ ಸಂಭ್ರಮಿಸುತ್ತಿದ್ದರು. ಮೊಗ್ಗಿನ ಜಡೆ ಕಂಡ ಹುಡುಗರು ಮೂಲಾಜಿಲ್ಲದೇ, ಸೋತು ಶರಣಾಗುತ್ತಿದ್ದರು. ಆದರೆ ಇಂದು? ಮೊಗ್ಗಿನ ಜಡೆಯೂ ಇಲ್ಲ, ಬರೀ ಜಡೆಯೂ ಇಲ್ಲ! ಇದ್ದ ಪುಡಿ ಕೂದಲು, ಬ್ಯೂಟಿಪಾರ್ಲರ್ ಪಾಲು!ಅನುಶ್ರೀ; ಮಂಗಳೂರುವ್ಹಾ! ಅವಳ ತಲೆಕೂದಲು ನೋಡೇ... - ನಾವು 5980http://kannada.oneindia.com/img/2009/09/16-hair-style1.jpg83810ಹಾಸ್ಯ ಲೇಖನಅತ್ತೆಗೊಂದು ಕಾಲ ಸೊಸೆಗೊಂದು ಕಾಲ/nri/article/2008/1230-walk-the-quarrel-with-my-hubby.htmlಬೇರೆಯವರು ಏನಾದರೂ ಮಾಡಿದಾಗ ನಗುತ್ತೇವೆ ಆದರೆ, ನಮಗೇ ಅಂಥ ಸ್ಥಿತಿ ಬಂದಾಗ ಏನು ಮಾಡಬೇಕು? ಹೌದುರೀ, ಎಲ್ಲರಿಗೂ ಒಂದು ಕಾಲ ಬಂದೇ ಬರತ್ತೆ. ಸುಮ್ಮನೆ ನಕ್ಕು ಸುಮ್ಮನಾಗಬೇಕು ಅಂತಾರೆ ಇಲ್ಲೊಬ್ಬ ಗೃಹಿಣಿ.* ಭಾವನಾ ರಾವ್, ಝೆಕ್ ರಿಪಬ್ಲಿಕ್'ಟೆಲಿಗ್ರಾಫ್" ದಿನಪತ್ರಿಕೆ ಓದ್ತಾ ಇದ್ದೆ, ಒಳಪುಟವೊಂದರಲ್ಲಿದ್ದ ತಲೆಬರಹ ಫಕ್ಕನೆ ಗಮನ ಸೆಳೆಯಿತು- I am becoming my mother-in-law! ಒಂದೇ 33772http://kannada.oneindia.com/img/2008/12/30-bhavana-kiran1.jpg83810ಹಾಸ್ಯ ಲೇಖನನಗೆಹಬ್ಬಕ್ಕಾಗಿ ಹಾಸ್ಯ ಲೇಖನಗಳಿಗೆ ಆಹ್ವಾನ/column/humor/2009/0330-humor-article-write-up-invitation.htmlದಿನನಿತ್ಯದ ಜಂಝಡಗಳನ್ನು ಬದಿಗಿಟ್ಟು ಮನಸು ಹಗುರಾಗಿಸುವಂಥ ದಿನ ಇನ್ನೊಂದೊರೆಡು ದಿನಗಳಲ್ಲಿ ಬರಲಿದೆ. ಏಪ್ರಿಲ್ 1ನ್ನು ಮೂರ್ಖರ ದಿನವನ್ನಾಚರಿಸುವ ಬದಲು 'ನಗೆಹಬ್ಬ'ವನ್ನಾಗಿ ಆಚರಿಸೋಣ. ಗಂಟಿಕ್ಕಿಕೊಂಡ ಹುಬ್ಬುಗಳನ್ನು ತಿಳಿಯಾಗಿಸೋಣ. ಹೊಟ್ಟೆಯಲ್ಲಿಯೇ ಹುದುಗಿಸಿಕೊಂಡ ನಗುವನ್ನು ಮುಖದಲ್ಲಿ ತರಿಸೋಣ.ಸ್ನೇಹಿತರೆ, ಇನ್ನೇಕೆ ತಡ, ಮನಸ್ಸು ಹುರಿಯಾಗಿಸಿಕೊಳ್ಳಿ, ಕಂಪ್ಯೂಟರಲ್ಲಿ ನಿಮ್ಮ ಬೆರಳುಗಳ, ಹಾಸ್ಯಪ್ರಜ್ಞೆಯ ಕರಾಮತ್ತನ್ನು ತೋರಿಸಿ. ಕೂಡಲೆ, ನಮಗೆ ನಿಮ್ಮ ಬರಹಗಳನ್ನು ರವಾನಿಸಿ. ಅದಕ್ಕೂ ಮುಂಚೆ 35578http://kannada.oneindia.com/img/2009/03/30-laugh1.jpgnews"> ನಾನು, ನನ್ನ ರೂಂಮೇಟುಗಳು ಮತ್ತು ಒಂದು ಕ್ರೈಂ ಸ್ಟೋರಿ | Crime story | Kannada humor | Pubs in Bengaluru | Guru Kulkarni - ನಾನು, ನನ್ನ ರೂಂಮೇಟುಗಳು ಮತ್ತು ಒಂದು ಕ್ರೈಂ ಸ್ಟೋರಿ - Kannada Oneindia

ನಾನು, ನನ್ನ ರೂಂಮೇಟುಗಳು ಮತ್ತು ಒಂದು ಕ್ರೈಂ ಸ್ಟೋರಿ

Guru Kulkarni, Dharwad
"ಇವತ್ತು ಒಂಭತ್ತು ಕಾಲ್ ಬಂದವು, ಇಡೀ ವಾರದ್ದು ಒಟ್ಟು ಐವತ್ನಾಲ್ಕಾಯಿತು" ಎಂದು ಉತ್ಸಾಹದಲ್ಲಿಯೇ ಹೇಳುತ್ತ ಒಳಬಂದ ನಿರ್ಮಲಕುಮಾರ. ಶುಕ್ರವಾರದ ಸಂಜೆಯ ತೀರ್ಥಯಾತ್ರೆಗೆ ಹೋಗಲು ತಯಾರಾಗುತ್ತಿದ್ದ ನಾನು, ವಿನಾಯಕ ಸಕ್ಕತ್ ಖುಷಿಯಾಗಿ ನಿರ್ಮಲನಿಗೆ ಹೈ-ಫೈ ಮಾಡಿದೆವು. ನಾವು ಮೂರು ಜನ ರೂಂಮೇಟುಗಳು ಸುಮಾರು ದಿನಗಳಿಂದ ಎರಡು ಕಾರ್ಯಕ್ರಮಗಳನ್ನು ನಿಯಮದಂತೆ ನಡೆಸಿಕೊಂಡು ಬರುತ್ತಿದ್ದೇವೆ. ಒಂದು, ಪ್ರತಿ ಶನಿವಾರ ಒಂದು ಹೊಸ ಹನುಮಂತನ ದೇವಸ್ಥಾನ ಹುಡುಕಿಕೊಂಡು ಹೋಗುವುದು, ಹನುಮನಿಗೆ ನಮಿಸಿ, ಪಾಪ ಪರಿಹಾರ ಮಾಡಿಕೊಂಡು ಬರುವುದು. ಗಾಳಿ ಆಂಜನೇಯ, ಕಾರಂಜಿ ಆಂಜನೇಯ, ವಿಜಯನಗರದ ಮಾರುತಿ ದೇವಸ್ಥಾನ, ಹನುಮಂತನಗರದ ರಾಮಾಂಜನೇಯ ಹೀಗೆ ಹಲವು ದೇವಸ್ಥಾನಗಳನ್ನು ಈಗಾಗಲೇ ಸಂದರ್ಶಿಸಿದ್ದೇವೆ, ಹೋಗಬೇಕಾದ ದೇವಸ್ಥಾನಗಳ ಪಟ್ಟಿಯೂ ದೊಡ್ಡದಿದೆ. ನಮ್ಮ ಎರಡನೇ ಕಾರ್ಯಕ್ರಮ, ಒಂದನೆಯದಕ್ಕೆ ಪೂರ್ವ ತಯಾರಿಯಂತಹದು! ಪ್ರತಿ ಶುಕ್ರವಾರ ಸಂಜೆ ಒಂದು ಹೊಸ ಬಾರ್ ಹುಡುಕಿಕೊಂಡು ತೀರ್ಥಯಾತ್ರೆಗೆ ಹೋಗುವುದು!

ಈ ವಾರದ ತೀರ್ಥಕ್ಷೇತ್ರ ಯಾವುದು ಎಂದು ನಾನು ಮತ್ತು ವಿನಾಯಕ ವಿಚಾರಮಾಡುತ್ತಿದ್ದಾಗ ಬಾತ್ ರೂಮಿಗೆ ಹೋಗಿದ್ದ ನಿರ್ಮಲಕುಮಾರ, ಅಲ್ಲಿಂದಲೇ ಕೂಗಿ ಹೇಳಿದ ರಿಂಗರೋಡಿನಲ್ಲಿ ಒಂದು ಹೊಸ ಬಾರ್ ಶುರುವಾಗಿದೆ, ಅಲ್ಲಿಗೇ ಹೋಗೋಣ. ಇವತ್ತಿನ ಎಣ್ಣೆ ಖರ್ಚು ನನ್ನದೇ. ನಾವು ಮೂರು ಜನ ತೀರ್ಥಯಾತ್ರೆಗೆ ಹೋದರೆ, ಯಾತ್ರೆಯ ಒಟ್ಟು ಖರ್ಚನ್ನು ಸಮನಾಗಿಹಂಚಿಕೊಂಡು ಬರೆದಿಟ್ಟು, ತಿಂಗಳಿಗೊಮ್ಮೆ ಲೆಕ್ಕ ಮಾಡುವುದು ನಮ್ಮ ಪದ್ಧತಿಯಾಗಿತ್ತು. ಅಂತಹದರಲ್ಲಿ ನಿರ್ಮಲಕುಮಾರ ಎಣ್ಣೆಯ ಕಾರ್ಯಕ್ರಮವನ್ನು ಪೂರ್ತಿಯಾಗಿ ಪ್ರಾಯೋಜಿಸಲು ತಯಾರಾಗಿರುವುದು ದಾನಶೂರ ಕರ್ಣನ ಪೋಸ್ ಕೊಡುವುದಕ್ಕಲ್ಲ, ಇನ್ ಫ್ಯಾಕ್ಟ್ ನಮ್ಮ ಉಪಕಾರ ಸ್ಮರಣೆಗಾಗಿ!

ಏನಾಗಿತ್ತು ಅಂದ್ರೆ, ಕಳೆದ ವಾರದ ತೀರ್ಥಯಾತ್ರೆಯಲ್ಲಿ ತೀರ್ಥ ಒಳ ಸೇರಿದ ತಕ್ಷಣ ನಿರ್ಮಲ ಕುಮಾರನ ಹೊಟ್ಟೆಯಲ್ಲಿದ್ದ ದುಃಖ ಹೊರ ಬರತೊಡಗಿತ್ತು. ಅವನ ಹೊಸ ಬಾಸು ಬೀರ್ ತ್ರಿಪಾಠಿ ನಿರ್ಮಲಕುಮಾರನಿಗೆ ಸುಖಾಸುಮ್ಮನೆ ಕಿರಿಕಿರಿ ಕೊಡತೊಡಗಿದ್ದನಂತೆ. ಕೋಡ್‌ನಲ್ಲಿ ಕಮೆಂಟ್ ಬರದಿಲ್ಲಾ ಅಂತಾ, ಕಮೆಂಟ್ ಬರೆದಿದ್ದರೆ, ಅದರ ಇಂಗ್ಲೀಷು ಸರಿ ಇಲ್ಲಾ ಅಂತ, ಹೀಗೆ ಯಾವುದಾದರೂ ಕಾರಣಕ್ಕೆ ನಿರ್ಮಲಕುಮಾರನನ್ನು ಕರೆದು ಕಿರಿಕಿರಿಮಾಡುತ್ತಿದ್ದನಂತೆ. ನಿರ್ಮಲಕುಮಾರ ಅದನ್ನೆನೋ ಹೇಗೋ ತಡೆದುಕೊಂಡಿದ್ದ. ಬೀರ್ ತ್ರಿಪಾಠಿ ತನ್ನ ಜೊತೆ ಶುಕ್ರವಾರದ ಸಂಜೆಗಳಲ್ಲಿ ಎಣ್ಣೆ ಹೊಡೆಯಲು ಬರುವವರಿಗೆ annual appraisalನಲ್ಲಿ ಹೆಚ್ಚಿನ ರೇಟಿಂಗ್ ಕೊಟ್ಟು ಉಳಿದವರಿಗೆ ಕಮ್ಮಿ ಕೊಡುತ್ತಾನೆ ಎಂಬ ಮಾತು ಜಾರಿಯಲ್ಲಿತ್ತು. ನಿರ್ಮಲಕುಮಾರ ಅದಕ್ಕೇನು ತಲೆ ಕೆಡೆಸಿಕೊಂಡಿರಲಿಲ್ಲ. ಅವನ ಮುಖ ನೋಡ್ತಾ ಸೋಡಾ ಹಾಕ್ದೆ ಕುಡಿದರೂ, ಕಿಕ್ ಸಿಗಲ್ಲಾ ಎಂದು ನಿರ್ಮಲ ನಮ್ಮ ರೂಢಿಯ ಕಾರ್ಯಕ್ರಮದೊಂದಿಗೆ ಅಂಟಿಕೊಂಡಿದ್ದ.

ಆದರೆ ಅದೀಗ ಚಿಗುರೊಡೆಯುತ್ತಿದ್ದ ತನ್ನ ಮತ್ತು ಸಹೋದ್ಯೋಗಿ ನೀತಾಳ ಸ್ನೇಹಕ್ಕೆ ಬೀರ್ ತ್ರಿಪಾಠಿ ಕಲ್ಲು ಹಾಕಲು ಶುರುಮಾಡಿದ್ದು ನಿರ್ಮಲಕುಮಾರನ ದುಃಖಕ್ಕೆ ಮೂಲವಾಗಿತ್ತು. ನೀತಾಳ ಜೊತೆ ಒಂದೆರಡು ಮಾತನಾಡಬೇಕೆಂದು ನಿರ್ಮಲಕುಮಾರ ಅವಳ ಕ್ಯುಬಿಕಲ್ಲಿಗೆ ಹೋದ ತಕ್ಷಣ, ಬೀರ್ ಅಲ್ಲಿ ಪ್ರತ್ಯಕ್ಷನಾಗಿ ನಿರ್ಮಲಕುಮಾರನಿಗೆ ಹಾ, ಆ ಬಗ್ ಪರಿಹಾರ ಆಯ್ತಾ ? ಈ ಡಿಸೈನ್ ಡಾಕ್ಯುಮೆಂಟ್ ನನಗೆ ಕಳುಹಿಸಿದ್ದೀಯಾ? ಎಂದು ಏನಾದರು ನೆವ ಹುಡುಕಿ ಅವನನ್ನು ಅಲ್ಲಿಂದ ಓಡಿಸಿ ತಾನು ನೀತಾಳ ಜೊತೆ ಲಲ್ಲೆ ಹೊಡೀತಾ ನಿಲ್ಲುತ್ತಿದ್ದನಂತೆ.

ಒಂದೊಂದೆ ಸಿಪ್ ತಗೋಳ್ತಾ ನಿರ್ಮಲಕುಮಾರ ತನ್ನ ಮನದಲ್ಲಿನ ದುಃಖವನ್ನು ಹೊರಹಾಕ್ತಾ ಇದ್ದುದನ್ನು ಕೇಳ್ತಾ ಕುಳಿತಿದ್ದ ವಿನಾಯಕನಿಗೆ ಒಂದು ಐಡಿಯಾ ಬಂದಿತು. ತನ್ನ ಗ್ಲಾಸಿನಲ್ಲಿದ್ದುದನೆಲ್ಲಾ ಬಾಟಂ-ಅಪ್ ಮಾಡಿ, ನೀನೊಂದು ಕೆಲಸಾ ಮಾಡು, ಪೇಪರಿನಲ್ಲಿ ಜಯನಗರ ನಾಲ್ಕನೇ ಬ್ಲಾಕಿನಲ್ಲಿ ಒಂದು ಸಿಕ್ಸ್ಟಿ-ಫಾರ್ಟಿ ಸೈಟು ಮಾರಾಟಕ್ಕಿದೆ, ಚದುರಡಿಗೆ ಕೇವಲ ಎರಡು ಸಾವಿರ ಎಂದು ಅಡ್ವರ್ಟೈಸ್ ಹಾಕಿ ಬೀರ್‌ನ ಮೋಬೈಲ್ ನಂಬರ್ ಕೊಟ್ಟು ಬಿಡು. ಇನ್ನೊಂದು ವಾರ ಅವನ ಮೊಬೈಲಿಗೆ ತೆರಪಿಲ್ಲದೇ ಫೋನ್ ಬರ್ತಾ ಇರ್ತಾವೆ, ನಿನ್ನ ತಂಟೆಗೆ ಅವನು ಬರೋದೇ ಇಲ್ಲ ಎಂದು ವಿನಾಯಕ ತನ್ನ ಐಡಿಯಾವನ್ನು ಹೇಳಿದ. ವಿನಾಯಕನದು ಕ್ರೈಮ್ ಶಾಸ್ತ್ರದಲ್ಲಿ ಅದ್ವೀತಿಯ ತಲೆ. ಚಿಕ್ಕಂದಿನಿಂದಲೇ ಸ್ಪೈ, ಡಿಟೆಕ್ಟಿವ್, ಪೋಲಿಸ್ ನ್ಯೂಸ್ ಪತ್ರಿಕೆಗಳನ್ನೂ, ನರಸಿಂಹಯ್ಯ, ಸುದರ್ಶನ ದೇಸಾಯಿ, ಅನಂತರಾಮ್ ಇತ್ಯಾದಿ ಪತ್ತೇದಾರಿ ಸಾಹಿತಿಗಳ ಸಾಹಿತ್ಯ ಓದಿ, ಅರಗಿಸಿಕೊಂಡ ತಲೆ. ಆಷ್ಟಲ್ಲದೇ ಈಗೀಗ ಟೀವಿಯಲ್ಲಿ ಬರುವ ಕ್ರೈಂ ಸ್ಟೋರಿ, ಕ್ರೈಂ ಡೈರಿ, ವಾರಂಟ್, ಅರೆಸ್ಟ್ ಇತ್ಯಾದಿ ಎಲ್ಲ ಕಾರ್ಯಕ್ರಮಗಳನ್ನು ನೋಡಿ ಅಪ್‌ಡೇಟ್ ಆದ ತಲೆ. ಸರಿ ಮತ್ತಿನ್ನೇನು, ಐಡಿಯಾ ಸರ್ವಾನುಮತದಿಂದ ಒಪ್ಪಿಗೆಯಾಯ್ತು.

ನಾವು ಮೂವರಲ್ಲಿ ಅವರಿಬ್ಬರು ತೀರ್ಥ ತಗೋಳ್ತಾರೆ, ನಾನೊಬ್ಬ ಮಾತ್ರ ಇಲ್ಲ. ಸುಮಾರು ಸಲ ನನ್ನನ್ನು ಹೇಡಿ, ಅಂಜುಬುರುಕ ಎಂದು ಕಿಚಾಯಿಸಿದ್ದಾರಾದರೂ, ನಾನು ಕುಡಿಯದೇ ಇರೋದು ಅವರಿಗೆ ವರವೇ ಆಗಿದೆ. ಮುಖ್ಯವಾಗಿ ಕುಡಿದು ಚಿತ್ ಆದ ಅವರಿಬ್ಬರನ್ನು, ಅವರ ಜೇಬುಗಳ ಸಮೇತ, ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಬರುವವ ಸಿಕ್ಕಿದ್ದಾನೆ! ಅದಲ್ಲದೇ ಕುಡಿದಾಗ ಅವರಲ್ಲಿ ಬರುವ ಅನೇಕ ಸಾಹಸೀ ಐಡಿಯಾಗಳನ್ನು ಅದುಮಿ ಅದರಿಂದಾಗುವ ಅನೇಕ ಅಡ್ಡಪರಿಣಾಮಗಳನ್ನೂ ನಾನು ತಪ್ಪಿಸಿದ್ದೇನೆ. ಆದರೆ ಅವತ್ತು ವಿನಾಯಕನ ಐಡಿಯಾವನ್ನು ನಾನು ವಿರೋಧಿಸಿರಲಿಲ್ಲ. ಬೀರ್‌ನನ್ನು ಸ್ವಲ್ಪ ಆಟ ಆಡಿಸಿದರೆ ಒಳ್ಳೆಯದೆ ಎಂದುಕೊಂಡಿದ್ದೆ. ಯಾಕೆಂದರೆ ಅದೇ ಕಂಪನಿಯಲ್ಲಿ ಕೆಲಸ ಮಾಡುವ ನನಗೂ ಬೀರ್‌ನ ಚರಿತ್ರೆ ಹೊಸದಾಗಿರಲಿಲ್ಲ.

ಬೀರ್ ತ್ರಿಪಾಠಿ, ಅಂದರೆ ಬೀರೇಂದ್ರ ತ್ರಿಪಾಠಿ, ಉತ್ತರ ಭಾರತದ ಕಡೆಯವನು. ಹುಂಬತನ, ದೊಡ್ಡ ದನಿ, ಚಮಚಾಗಿರಿಯೇ ಮೂರ್ತಿವೆತ್ತಂತಿದ್ದಾನೆ. ಎಂಟೋ ಹತ್ತೋ ವರುಷ ಅಮೇರಿಕೆಯಲ್ಲಿದ್ದು, ಬಹಳಷ್ಟು ದುಡ್ಡು-ಕಾಸು ಮಾಡಿಕೊಂಡು ಬಂದಿದ್ದಾನೆ. ಬೆಂಗಳೂರಿನ ರೀಯಲ್ ಎಸ್ಟೇಟ್ ಧಂದೆಯಲ್ಲಿ ಬಹಳಷ್ಟು ಆಟ ಆಡಿ, ಅದರಲ್ಲೂ ದುಡ್ಡು ದುಡಿದಿದ್ದಾನೆ. ಇಂತಹ ಬೀರ್‌ನಿಗೆ ಇರುವ ದೊಡ್ಡ ಕೆಟ್ಟಗುಣವೆಂದರೆ ಹುಡುಗಿಯರನ್ನು ಕಂಡೊಡನೆ ಜೊಲ್ಲು ಸುರಿಸುವುದು. ಆ ಕಾರಣಕ್ಕಾಗಿಯೇ ಅವನು ಕಂಪನಿಯಲ್ಲಿ ಸುಳಿ ಸುಮಾರು ಎಂದು ಕುಖ್ಯಾತನಾಗಿರುವುದು. ಸಾಫ್ಟ್‌ವೇರು ಕಂಪನಿಯಲ್ಲಿ ಕೆಲಸ ಮಾಡಬೇಕೆಂದರೆ ಎಫೀಸಿಎಂಟ್, ಎಥಿಕಲ್, ಪ್ರೊಫೆಶನಲ್ ಇತ್ಯಾದಿ ಇತ್ಯಾದಿ ಗುಣಗಳಿರಬೇಕಲ್ವಾ, ಅಂತ ಕೇಳ್ತಾ ಇದಿರಾ? ಮಣ್ಣಂಗಾಟಿ, ಸಾಫ್ಟ್‌ವೇರು ಕಂಪನಿ ಅಂದರೆ ಅದೇನು ಜಗತ್ತು ಬಿಟ್ಟು ಬೇರೆ ಇರುತ್ತಾ? ಉಳಿದ ಜಗತ್ತಿನಲ್ಲಿದ್ದಂತೆ ಅಲ್ಲಿಯೂ ಸುಳ್ಳರು, ಸೋಮಾರಿಗಳು, ಹೆಣ್ಣುಬಾಕರು ಎಲ್ಲ ಇದಾರೆ. ಅದೇ ರೀತಿ ವಶೀಲಿಬಾಜಿ, ಸ್ವಜನ ಪಕ್ಷಪಾತ ಎಲ್ಲಾ ಅಲ್ಲಿಯೂ ಇದೆ!

ಮರುದಿನ ಬೆಳಿಗ್ಗೆ ನನಗೆ ಗಂಟು ಬಿದ್ದು, ಲಿಂಗ ಮೆಚ್ಚಿ ಅಹುದು ಅಹುದು ಎನ್ನುವಂತಹ ಜಾಹಿರಾತು ಬರೆಸಿಕೊಂಡು ಹೋಗಿ, ನಿರ್ಮಲಕುಮಾರ ಒಂದು ಪತ್ರಿಕೆಗೆ ಕೊಟ್ಟು ಬಂದ. ಅದರಿಂದ ವಾರವಿಡೀ ಬೀರ್‌ನ ಮೋಬೈಲು ರಿಂಗಣಿಸುತ್ತಿತ್ತು, ಮತ್ತು ನಿರ್ಮಲಕುಮಾರ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ತನ್ನ ಪ್ರೇಮಪಯಣದಲ್ಲಿ ಇನ್ನೆರಡು ಹೆಜ್ಜೆ ಮುಂದಿಟ್ಟಿದ್ದ. ಐಡಿಯಾವನ್ನು ಕೊಟ್ಟು ಮತ್ತು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಅವನಿಗೆ ಸಾಥ್ ಕೊಟ್ಟದ್ದಕ್ಕಾಗಿ ನಿರ್ಮಲಕುಮಾರ ನಮಗೆ ಪಾರ್ಟಿ ಕೊಟ್ಟು ಋಣಸಂದಾಯ ಮಾಡ್ತಾ ಇದ್ದ.

ಪ್ರತೀ ದಿನ ಬೆಳ್ಳಂ ಬೆಳಿಗ್ಗೇನೆ ಎದ್ದು ಜಾಗಿಂಗ್ ಹೋಗುವ ನಿರ್ಮಲಕುಮಾರ, ಹಿಂದಿನ ರಾತ್ರಿಯ ಗುಂಡಿನ ಪ್ರಭಾವದಿಂದ ಇನ್ನೂ ಮಲಗೇ ಇದ್ದ. ಕೆಲಸದವಳು ಬಂದು ತನ್ನ ಕೀಲಿಕೈಯಿಂದ ಬಾಗಿಲು ತೆಗೆದು ಅಡಗಿ ಮನೆಯಲ್ಲಿ ತಿಂಡಿಯ ತಯಾರಿ ನಡೆಸಿದ್ದಳು. ನಾನಿನ್ನೂ ಚಾದರು ಹೊದ್ದುಕೊಂಡು, ನಿನ್ನೆ ರಾತ್ರಿಯ ಕನಸಲ್ಲಿ ಬಂದವಳು ಸಾನಿಯಾಳೋ ಅಥವಾ ಸೆರೆನಾಳೊ ಎಂಬ ಕನ್‌ಫ್ಯೂಷನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ನಡೆಸಿದ್ದೆ. ಅಷ್ಟರಲ್ಲಿ ಪೇಪರಿನವನು ಬೀಸಿ ಒಗೆದ ದಿನಪತ್ರಿಕೆ ನನ್ನ ಹಾಸಿಗೆಯ ಮೇಲೆಯೇ ಬಂದು ಬಿತ್ತು. ಏನಿದೆ ಎಂದು ಮುಖಪುಟ ತೆರೆದು ನೋಡಿದರೆ ದೊಡ್ಡ ಅಕ್ಷರಗಳಲ್ಲಿ ಸಾಫ್ಟ್‌ವೇರ್ ಉದ್ಯೋಗಿಯ ಭೀಕರ ಕೊಲೆ ಎಂಬ ಸುದ್ದಿ. ನಗರದ ಪ್ರತಿಷ್ಠಿತ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಕೆಲಸ ಮಾಡುವ ಬೀರ್ ಉರ್ಫ್ ಬೀರೇಂದ್ರ ತ್ರಿಪಾಠಿ ಎಂಬುವರನ್ನು ದುಷ್ಕರ್ಮಿಗಳು ನಿನ್ನೆ ಸಂಜೆ ಭೀಕರವಾಗಿ ಕೊಲೆ ಮಾಡಿದ್ದಾರೆ. ಕೊಲೆಯಾಗಿರುವ ಬೀರೇಂದ್ರ ತ್ರಿಪಾಠಿ ಜಯನಗರದ ವಿವಾದಿತ ನಿವೇಶನವನ್ನು ಮಾರಿಸಿಕೊಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ಆ ಸಂಬಂಧವಾಗಿ ಕೆಲ ಬಿಲ್ಡರುಗಳೊಂದಿಗೆ ಅವರ ಚಕಮಕಿಯಾಗಿ, ಅದು ಈ ಕೊಲೆಯಲ್ಲಿ ಪರ್ಯಾವಸನಗೊಂಡಿದೆ ಎಂದು ಹೇಳಲಾಗಿದೆ ಎಂದು ಬರೆದಿದ್ದನ್ನು ಓದುತ್ತಾ ನಾನು ಚಾದರದಲ್ಲಿಯೇ ಬೆವರತೊಡಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+