382293bookಮೊಮ್ಮಕ್ಕಳು ಹೇಳಿದ ಅಜ್ಜೀ ಕತೆ/column/gv/2009/0314-ajji-kathe-story-on-grandmother-by-hys.htmlನನ್ನ ಮೊದಲಿನ ಎರಡು ಅಮೇರಿಕಾ ಪ್ರವಾಸಗಳು(2000 ಮತ್ತು 2002) ಅವಿಸ್ಮರಣಿಯವಾಗಲು ಕಾರಣರಾದವರಲ್ಲಿ ಡಾ| ಎಚ್.ವಾಯ್.ರಾಜಗೋಪಾಲ ಒಬ್ಬರು. ನನ್ನ ಎರಡನೆಯ ಪ್ರವಾಸದಲ್ಲಿ ನಾನು ಅವರ ಆತಿಥ್ಯದಲ್ಲಿ ಎರಡು ವಾರ ಫಿಲೆಡೆಲ್ಫಿಯಾದಲ್ಲಿದ್ದೆ. ಅವರ ಅಣ್ಣ ಪ್ರಸಿದ್ಧ ಪತ್ರಕರ್ತ ಎಚ್.ವಾಯ್. ಶಾರದಾ ಪ್ರಸಾದ. ತಮ್ಮ ತಂದೆಯ ಜನ್ಮ ಶತಾಬ್ದಿಯ ನೆನಪಿಗಾಗಿ ಎಂಟು ಮಕ್ಕಳು ಸೇರಿ ಒಂದು ಅಪೂರ್ವ ಪುಸ್ತಕ ಬರೆದಿದ್ದಾರೆ. (ಸಂಗೀತದ 35217http://kannada.oneindia.com/img/2009/03/14-sharadaprasad2.jpg382293bookಹೊತ್ತಿಗೆ ರೂಪದಲ್ಲಿ ಏನ್ ಗುರು ಕಾಫಿ ಆಯ್ತಾ?/column/enguru/2009/0508-enguru-in-book-form.html2007ರಲ್ಲಿ ಬನವಾಸಿ ಬಳಗದ "ಏನ್ ಗುರು ಕಾಫಿ ಆಯ್ತಾ?" ಅಂಕಣಮಾಲೇನಾ ಶುರು ಮಾಡಲಾಯ್ತು. ಇದಕ್ಕೆ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ, ಉತ್ತೇಜನ ನಿಮ್ಮಿಂದ ಸಿಕ್ಕಿದೆ. ಈ ಬರಹಗಳನ್ನು ಬರೀತಾ ಬರೀತಾನೇ ನಮ್ಮ ಚಿಂತನೆಗಳೂ ಸ್ಪಷ್ಟರೂಪ ತೆಗೆದುಕೊಳ್ಳುತ್ತಾ ಸಾಗಿದ್ದು ಸುಳ್ಳಲ್ಲ. ನಿಮ್ಮ ಸಹಕಾರ ಮತ್ತು ಅಭಿಮಾನದಿಂದ ಈ ಬ್ಲಾಗು ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಜನ ಓದುಗರನ್ನು ಮುಟ್ಟಿದೆ.ಆದ್ರೆ ನಾವು 36498http://kannada.oneindia.com/img/2009/05/08-enguru1.jpg382293bookಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು/column/gv/2009/0518-bendre-prose-critical-analysis-narayanacharya.html'ದೇಸಿಯತೆಯಲ್ಲಿ ಬೇರೂರಿ ಅರಳಿದ ದತ್ತ ಪ್ರತಿಭೆ' ಎಂದು ವರ್ಣಿತರಾದ ಸಾಧಕ ಕವಿ ದ.ರಾ.ಬೇಂದ್ರೆ ಅವರ ಕವಿ, ಕಾವ್ಯ ಮತ್ತು ವಿಮರ್ಶೆ ಕುರಿತು 32 ಸೂತ್ರಗಳ ವಿಮರ್ಶಾಗ್ರಂಥವನ್ನು ಡಾ. ಕೆ.ಎಸ್. ನಾರಾಯಣಾಚಾರ್ಯರು ಬರೆದಿದ್ದಾರೆ. ಎರಡು ವರ್ಷಗಳ ಹಿಂದೆ ಬರೆದ ಈ ಗ್ರಂಥ ಈಗ ಬಿಡುಗಡೆಯಾಗುತ್ತಿದೆ. ಈ ಗ್ರಂಥಕ್ಕೆ ಬೇಂದ್ರೆ ಅವರ ಮಗ ವಾಮನ ಬೇಂದ್ರೆ ಅವರು 50 ಪುಟಗಳ 36726http://kannada.oneindia.com/img/2009/05/18-bendre4.jpg382293bookನಾರಾಯಣಾಚಾರ್ಯ ಬರೆದ ಪುಸ್ತಕದ ಪರಿಚಯ (ಭಾಗ 2)/column/gv/2009/0523-book-by-ks-narayanacharya-on-bendre-prose.htmlಬೇಂದ್ರೆಯವರ ಬರವಣಿಗೆಯಲ್ಲಿ ಹುದುಗಿದ್ದ ವಿಮರ್ಶಾ ಸೂತ್ರಗಳನ್ನು ಆಯ್ದ ಶ್ರೇಯಸ್ಸು ನಾರಾಯಣಾಚಾರ್ಯರಿಗೆ ಸಲ್ಲುತ್ತದೆ. ಪ್ರತಿಯೊಂದು ಸೂತ್ರಕ್ಕೂ ನಾರಾಯಣಾಚಾರ್ಯರು 'ಸಾಹಿತ್ಯದ ವಿರಾಟ ಸ್ವರೂಪ' ಗ್ರಂಥದಲ್ಲಿ ದೀರ್ಘವಾದ ವಿದ್ವತ್‌ಪೂರ್ಣವಾದ ವ್ಯಾಖ್ಯಾನವನ್ನು ಬರೆದಿದ್ದಾರೆ. ಪುಸ್ತಕ ಪರಿಚಯದ ಎರಡನೇ ಭಾಗ ಇಲ್ಲಿದೆ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಡಾ| ಕೆ.ಎಸ್. ನಾರಾಯಣಾಚಾರ್ಯರು ಬೇಂದ್ರೆಯವರ "ಸಾಹಿತ್ಯದ ವಿರಾಟ ಸ್ವರೂಪ" ಗ್ರಂಥದಿಂದ 32 ವಿಮರ್ಶಾ ಸೂತ್ರಗಳನ್ನು ಆರಿಸಿದ್ದಾರೆ. ಸಾಹಿತ್ಯದ 36851http://kannada.oneindia.com/img/2009/05/23-ks-narayanacharya2.jpg382293bookಮೇ 31ರಂದು ನಟನದಲ್ಲಿ ರಂಗವಲ್ಲಿಯ ಲೋಕಾರ್ಪಣೆ/literature/book/2009/0529-mandya-ramesh-rangavalli-in-mysuru.htmlಮೈಸೂರು, ಮೇ 29 : ಜನಪ್ರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಬರೆದ 'ರಂಗವಲ್ಲಿ' ಕೃತಿ ಮೇ 31ರ ಭಾನುವಾರ ಸಂಜೆ 5.30ಕ್ಕೆ ರಾಮಕೃಷ್ಣನಗರದ ನಟನ ರಂಗಮಂಟಪದಲ್ಲಿ ಲೋಕಾರ್ಪಣೆಗೊಳ್ಳಲಿದೆ.ಡಾ|| ಹಾಲತಿ ಸೋಮಶೇಖರ್ ಅವರ ವಿಸ್ಮಯ ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಕುತೂಹಲ ಸಂಸ್ಥೆ ಲೋಕಾರ್ಪಣೆಗೊಳಿಸಲಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ, ಜನಪ್ರಿಯ ಲೇಖಕ ಡಾ|| ಸಿದ್ಧಲಿಂಗಯ್ಯ ಬಿಡುಗಡೆ 36989http://kannada.oneindia.com/img/2009/05/29-rangavalli-mandya-ramesh1.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ/column/gv/2008/1227-vk-gokak-birth-centenary-memoirs-part2.htmlಕನ್ನಡ ಮತ್ತು ಇಂಗ್ಲಿಷಿನ ಮೇಲಿನ ಅದಮ್ಯ ಪ್ರಭುತ್ವದಿಂದಾಗಿ ಕನ್ನಡನಾಡಿನ ಒಳಗಡೆ ಮತ್ತು ಹೊರಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಹೊರಹೊಮ್ಮಿದ್ದರು. ಇತರ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಬಿಂಬಿಸಿದ್ದರಿಂದ ಕನ್ನಡ ರಾಷ್ಟ್ರದುದ್ದಕ್ಕೂ ಮೆರೆಯುವಂತಾಯಿತು. ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಸ್ಮರಣೆಯ ಎರಡನೆಯ ಭಾಗ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಗೋಕಾಕರ ವಿದ್ಯಾರ್ಥಿ ಜೀವನಕ್ಕೆ ಅವರ ಮದುವೆ 33727http://kannada.oneindia.com/img/2008/12/27-vk-gokak-bendre1.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 3)/column/gv/2009/0117-vinayaka-krishna-gokak-part3.htmlಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಿಎ ಮಾಡಿ ಭಾರತಕ್ಕೆ ಮರಳಿದ ವಿನಾಯಕ ಕೃಷ್ಣ ಗೋಕಾಕ್ ಅವರು ಮಾಡಿಕೊಂಡ ದೊಡ್ಡ ಆಸ್ತಿಯೆಂದರೆ ಅಪಾರ ಶಿಷ್ಯವೃಂದ. ಹೇಮಂತ ಕುಲಕರ್ಣಿ, ಸುಬ್ಬಣ್ಣ ಎಕ್ಕುಂಡಿ, ವಿ.ಜಿ.ಭಟ್ಟ, ಗಾಂಗಾಧರ ಚಿತ್ತಾಲ ಮೊದಲಾದ ಖ್ಯಾತ ಲೇಖಕರು ಗೋಕಾಕರ ಗರಡಿಯಲ್ಲಿ ಪಳಗಿದವರೇ.* ಡಾ|ಜೀವಿ ಕುಲಕರ್ಣಿಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆಂಗ್ಲಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ.(ಆಗ್ಝನ್) ಡಿಗ್ರಿ ಪಡೆದು ವಿಕ್ರಮ ಸಾಧಿಸಿದ ಗೋಕಾಕರು 34120http://kannada.oneindia.com/img/2009/01/17-vk-gokak3e.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 4)/column/gv/2009/0124-vinayaka-krishna-gokak-part4.htmlಮಹರ್ಷಿ ಶ್ರೀ ಅರವಿಂದರ ಕೃತಿಗಳನ್ನು ಅರಗಿಸಿ ಕುಡಿದು ತಮ್ಮ ಜೀವನದಲ್ಲಿ ಹಾಗೂ ಸಾಹಿತ್ಯದಲ್ಲಿ ಅದರ ಬೆಳಕನ್ನು ಹರಡಿದ ಕೆಲವೇ ಶ್ರೇಷ್ಠ ಸಾಹಿತಿಗಳಲ್ಲಿ ಗೋಕಾಕರೂ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕರ ಜನ್ಮಶತಮಾನೋತ್ಸವ ನಿಮಿತ್ತ ಲೇಖನ ಸರಣಿ ಮುಂದುವರಿಯುತ್ತಿದೆ.* ಡಾ|ಜೀವಿ ಕುಲಕರ್ಣಿ1947ರಲ್ಲಿ ಭಾರತಕ್ಕೆ ಸ್ವಾತಂತ್ಯ ದೊರೆತ ನಂತರ ಬರೋಡಾ ಸಂಸ್ಥಾನ ಭಾರತ ಸರಕಾರದಲ್ಲಿ 34269http://kannada.oneindia.com/img/2009/01/24-vk-gokak4.jpg99737gv kulkarniಧಾರವಾಡಕ್ಕೂ ಗೋಕಾಕರಿಗೂ ಬಿಡಲಾರದ ನಂಟು/column/gv/2009/0131-unforgettable-days-of-gokak-in-dharwad.htmlಧಾರವಾಡಕ್ಕೂ ವಿಕೆ ಗೋಕಾಕರಿಗೂ ಬಿಡಲಾರದ ನಂಟು. ಅವರು ಧಾರವಾಡಕ್ಕೆ ಬರುತ್ತಿದ್ದಾರೆಂದು ತಿಳಿದಕೂಡಲೆ ಅಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಗೋಕಾಕರ ಮಹತ್ವದ ಕೃತಿಗಳು ಪ್ರಕಟವಾಗಿದ್ದು ಅವರು ಧಾರವಾಡದಲ್ಲಿದ್ದಾಗಲೇ. ಧಾರವಾಡದಲ್ಲಿನ ಅವರ ಒಡನಾಟ, ವಿದ್ಯಾರ್ಥಿಗಳೊಂದಿಗಿನ ಬಾಂಧವ್ಯ, ಸಾಂಸ್ಕೃತಿಕ ನಗರಿಯಲ್ಲಿ ಕಳೆದ ಅವಿಸ್ಮರಣೀಯ ಗಳಿಗೆಗಳನ್ನು ಜೀವಿ ಕುಲಕರ್ಣಿಯವರು ಇಲ್ಲಿ ಮೆಲುಕು ಹಾಕಿದ್ದಾರೆ. ಗೋಕಾಕ್ ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಲೇಖನ ಸರಣಿಯ ಭಾಗ 34397http://kannada.oneindia.com/img/2009/01/31-vk-gokak4.jpg99737gv kulkarniಗೋಕಾಕರಿಗೆ ಸತ್ಯಸಾಯಿಬಾಬಾ ಅನುಗ್ರಹ/column/gv/2009/0207-vk-gokak-birth-centenary-part-6.htmlಶೈಕ್ಷಣಿಕವಾಗಿ ಮಾತ್ರ ವಿನಾಯಕ ಕೃಷ್ಣ ಗೋಕಾಕರು ಪರೀಕ್ಷೆಗಳನ್ನೆದುರಿಸಲಿಲ್ಲ ಜೀವನದುದ್ದಕ್ಕೂ ಅನೇಕ ಸತ್ವಪರೀಕ್ಷೆಗಳನ್ನು ಅವರು ಎದುರಿಸಿದರು. ಹೋದಲ್ಲೆಲ್ಲ ವಿಜಯಶಾಲಿಯಾದರು, ಗೆಳೆಯರನ್ನು ಸಂಪಾದಿಸಿದರು, ಶಿಷ್ಯಂದಿರನ್ನು ಹುಟ್ಟುಹಾಕಿದರು. ಅವರ ವ್ಯಕ್ತಿತ್ವವೇ ಅಂತಹುದಾಗಿದ್ದು. ಗೋಕಾಕರ ಜೀವನವನ್ನು, ವ್ಯಕ್ತಿತ್ವವನ್ನು ಬಣ್ಣಿಸುವ 'ಜೀವಿ' ಕುಲಕರ್ಣಿಯವರ ಸರಣಿ ಲೇಖನದ ಆರನೇ ಭಾಗ, ಗೋಕಾಕರ ಜನ್ಮಶತಮಾನೋತ್ಸವದ ನಿಮಿತ್ತ.ಗೋಕಾಕರು ಎರಡನೆಯ ಸಲ ಹೈದ್ರಾಬಾದ್‌ಗೆ ತೆರಳಿದ್ದು ಆಕಸ್ಮಿಕವಾಗಿದ್ದರೂ, ಒಂದು ರೀತಿಯಲ್ಲಿ, ಇದು 34531http://kannada.oneindia.com/img/2009/02/07-vk-gokak4.jpg192170ಜೀವಿಶ್ರೀಮದ್ ಭಗವದ್ಗೀತೆಯಲ್ಲಿ ಆರೋಗ್ಯ ಸೂತ್ರಗಳು/column/gv/2008/1116-karma-yoga-dhyana-yoga-in-bhagavad-gita.htmlಭಗವದ್ಗೀತೆಯಲ್ಲಿ ಬರುವ ಹದಿನೆಂಟು ಯೋಗಶಾಸ್ತ್ರಗಳಲ್ಲಿ ಆರೋಗ್ಯ ಕಾಪಾಡಲು ಸೂತ್ರಗಳನ್ನು ಅಳವಡಿಸಲಾಗಿದೆ. ಮಹತ್ವದ ಯೋಗಗಳಾದ ಕರ್ಮಯೋಗ ಮತ್ತು ಧ್ಯಾನಯೋಗ ರೋಗಗಳನ್ನು ವಾಸಿಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಅನಾರೋಗ್ಯವೆಂಬುದು ಹತ್ತಿರ ಕೂಡ ಸುಳಿಯಲಾರದು. * ಡಾ. 'ಜೀವಿ' ಕುಲಕರ್ಣಿ, ಮುಂಬಯಿ ಶ್ರೀಮದ್ ಭಗವದ್ಗೀತೆ ಒಂದು ಯೋಗಶಾಸ್ತ್ರ. ಭವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಕೊನೆಗೆ ಓಂತತ್ಸತ್ ಇತಿ 32800http://kannada.oneindia.com/img/2008/11/bhagavadgita1.jpg192170ಜೀವಿಗೀತೆಯಲ್ಲಿ ಆರೋಗ್ಯ ಸೂತ್ರಗಳು (ಭಾಗ 2)/column/gv/2008/1122-health-tips-in-bhagavad-gita-part2.htmlಮನ ಒಂದು ದೈತ್ಯ ಇದ್ದಹಾಗೆ. ಅದಕ್ಕೆ ಸದಾ ಕೆಲಸ ಇರಬೇಕು. ಇಲ್ಲದಿದ್ದರೆ ಅದು ನಿಮ್ಮ ತಲೆ ತಿನ್ನುತ್ತದೆ. ಎಲ್ಲ ರೋಗಗಳಿಗೂ ಮನವೇ ಕಾರಣವಾಗುತ್ತದೆ. ಕೈಯಲ್ಲಿ ಒಂದು ಜಪಮಾಲೆ ಕೊಡಬೇಕು. ಕೆಲಸವಿಲ್ಲದೇ ಇದ್ದಾಗ ಜಪಮಾಲೆ ಎಣಿಸುತ್ತಿರಬೇಕು. ಕೆಲಸ ಬಂದಾಗ ಜಪ ಬದಿಗಿಟ್ಟು ಕೆಲಸ ಮಾಡಬೇಕು. * ಡಾ. 'ಜೀವಿ' ಕುಲಕರ್ಣಿ, ಮುಂಬಯಿ ನಮ್ಮ ಜೀವನದಲ್ಲಿಯ ಅಧ್ಯಾತ್ಮಿಕ ಹಾಗೂ ಆರೋಗ್ಯದ 32918http://kannada.oneindia.com/img/2008/11/bhagavadgita2.jpg192170ಜೀವಿಎಲೆಮರೆಯ ಚಿತ್ರನಿರ್ದೇಶಕ ಹರ್ಷವರ್ಧನ್ ಕುಲಕರ್ಣಿ/literature/people/2009/0121-lost-and-found-director-harshavardhan.htmlಮುಂಬೈ ಕಡಲ ತೀರದಲ್ಲಿ ಅನಾಥವಾಗಿ ಬಿದ್ದಿದ್ದ ಶತಮಾನದಷ್ಟು ಹಳೆಯ ಬಾಟಲಿಯೊಂದು ವ್ಯಕ್ತಿಯಿಂದ ವ್ಯಕ್ತಿಗೆ ದಾಟುತ್ತ, ಮಾನವನ ದುರಾಸೆ, ವಾಂಛೆ, ಪ್ರೀತಿ, ಆಶಾವಾದಿತನಗಳಿಗೆ ಸಾಕ್ಷಿಯಾಗುವ ಕಥೆಯುಳ್ಳ 'Lost and Found' ಚಲನಚಿತ್ರ ಚಿತ್ರಕಥೆಯಲ್ಲಿನ ನವಿರುತನದಿಂದ, ಅದ್ಭುತ ದಿಗ್ದರ್ಶನದಿಂದ, ಅಷ್ಟೇ ಪಕ್ವವಾದ ಛಾಯಾಗ್ರಹಣದಿಂದ ವಿಶ್ವದಾದ್ಯಂತ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ. ಈ ಚಿತ್ರವನ್ನು ಬರೆದು, ನಿರ್ದೇಶಿಸಿರುವ ಅಪ್ಪಟ ಕನ್ನಡಿಗ ಹರ್ಷವರ್ಧನ್ ಕುಲಕರ್ಣಿ ಅವರ 34205http://kannada.oneindia.com/img/2009/01/24-harshavardhana-kulkarni2.jpg192170ಜೀವಿಮೊಮ್ಮಕ್ಕಳು ಹೇಳಿದ ಅಜ್ಜೀ ಕತೆ/column/gv/2009/0314-ajji-kathe-story-on-grandmother-by-hys.htmlನನ್ನ ಮೊದಲಿನ ಎರಡು ಅಮೇರಿಕಾ ಪ್ರವಾಸಗಳು(2000 ಮತ್ತು 2002) ಅವಿಸ್ಮರಣಿಯವಾಗಲು ಕಾರಣರಾದವರಲ್ಲಿ ಡಾ| ಎಚ್.ವಾಯ್.ರಾಜಗೋಪಾಲ ಒಬ್ಬರು. ನನ್ನ ಎರಡನೆಯ ಪ್ರವಾಸದಲ್ಲಿ ನಾನು ಅವರ ಆತಿಥ್ಯದಲ್ಲಿ ಎರಡು ವಾರ ಫಿಲೆಡೆಲ್ಫಿಯಾದಲ್ಲಿದ್ದೆ. ಅವರ ಅಣ್ಣ ಪ್ರಸಿದ್ಧ ಪತ್ರಕರ್ತ ಎಚ್.ವಾಯ್. ಶಾರದಾ ಪ್ರಸಾದ. ತಮ್ಮ ತಂದೆಯ ಜನ್ಮ ಶತಾಬ್ದಿಯ ನೆನಪಿಗಾಗಿ ಎಂಟು ಮಕ್ಕಳು ಸೇರಿ ಒಂದು ಅಪೂರ್ವ ಪುಸ್ತಕ ಬರೆದಿದ್ದಾರೆ. (ಸಂಗೀತದ 35217http://kannada.oneindia.com/img/2009/03/14-sharadaprasad2.jpgnews"> ಮೊಮ್ಮಕ್ಕಳು ಹೇಳಿದ ಅಜ್ಜಿ ಕಥೆ : ಭಾಗ 2 | Ajji Kathe | Book | HY Rajgopal | GV Kulkarni - ಅಪೂರ್ವ ಪುಸ್ತಕ : ಮೊಮ್ಮಕ್ಕಳು ಹೇಳಿದ ಅಜ್ಜೀ ಕತೆ - Kannada Oneindia

ಮೊಮ್ಮಕ್ಕಳು ಹೇಳಿದ ಅಜ್ಜಿ ಕಥೆ : ಭಾಗ 2

ಪ್ರಚಲಿತ ವಿಚಾರಗಳ ಬಗ್ಗೆ ಬಹಳ ಆಸಕ್ತಿ. ಸಿಟಿ ಪೇಪರ್‌ನಲ್ಲಿ ಏನು ಸಮಾಚಾರ ಎಂದು ದಿನವೂ ಕೇಳಿ ತಿಳಿಯುತ್ತಿದ್ದರು. ಅವರಿಗೆ ಸ್ತ್ರೀಶಿಕ್ಷಣದ ಬಗ್ಗೆ ಪ್ರಗತಿಗಾಮಿ ವಿಚಾರವಿತ್ತಂತೆ. ತಮ್ಮ ಕಾಲದ ವಿಧವೆಯರ ದುಃಸ್ಥಿತಿಯನ್ನು ನೆನೆದು, ಈ ಕಾಲವೇ ವಾಸಿ, ಗಂಡ ಹೋದವರನ್ನು ಹಿಂದಿನಂತೆ ಹಿಂಸಿಸುವುದಿಲ್ಲಮ್ಮ ಎಂದು ಹೇಳುತ್ತಿದ್ದರಂತೆ.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

(ಹಿಂದಿನ ಸಂಚಿಕೆಯಿಂದ)

ಅಜ್ಜಿಯ ಎಂಟು ಮೊಮ್ಮಕ್ಕಳಲ್ಲಿ ನನಗೆ ಚೆನ್ನಾಗಿ ಪರಿಚಯವಿದ್ದ ಇಬ್ಬರಲ್ಲಿ ನಾರಾಯಣ ದತ್ತರು ಒಬ್ಬರು. ಇವರು ಬಹುಕಾಲ ಮುಂಬೈಯಲ್ಲಿ ವಾಸಿಸುದ್ದರು. 'ನವನೀತ' ಎಂಬ ಹಿಂದಿ ಡೈಜೆಸ್ಟ್‌ನ ಸಂಪಾದಕರಾಗಿದ್ದರು. ಪಿ.ಟಿ.ಐ.ಯಲ್ಲಿ ಹಿಂದಿ ಸುದ್ದಿವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಹನ್ನೊಂದು ವರ್ಷದ ಬಾಲಕರಾಗಿದ್ದಾಗ ಉತ್ತರ ಹಿಂದುಸ್ಥಾನದ ಒಂದು ಗುರುಕುಲದಲ್ಲಿ ಬೆಳೆದರು. ಸಂಸ್ಕೃತ ಪಂಡಿತರಾಗಿದ್ದರು. ಹಿಂದಿ ಅವರಿಗೆ ಮಾತೃಭಾಷೆಯಷ್ಟೇ ಸಮೀಪದ್ದಾಗಿತ್ತು. ಕನ್ನಡ ಸಾಹಿತ್ಯದ ಬಗ್ಗೆ ಅವರಿಗೆ ಅಪಾರ ಅಭಿಮಾನವಿತ್ತು. ತೆಲಗು ಲೇಖಕ, ಪ್ರಚಾರಮಾಧ್ಯಮತಜ್ಞ ವನಮಾಲಿ ಎಂಬವರ ಕಚೇರಿಯಲ್ಲಿ ಹಲವಾರು ಸಲ ನಾನು ಅವರನ್ನು ಕಂಡು ಮಾತಾಡಿಸಿದ್ದೆ. ನಾನು ಕಂಡಾಗೊಮ್ಮೆ ವರಕವಿ ಬೇಂದ್ರೆಯವರ ಬಗ್ಗೆ ಅವರು ಕೇಳುತ್ತಿದ್ದರು. ಅವರು ತಮ್ಮ ಲೇಖನದಲ್ಲಿ ಅಜ್ಜಿಯ ಕೆಲವು ಮುಖಗಳ ಪರಿಚಯ ಮಾಡಿಸುತ್ತಾರೆ. ರಜಾದಿನಗಳಲ್ಲಿ ಮೈಸೂರಿಗೆ ಬಂದಾಗ ಅಜ್ಜಿಯೊಡನೆ ಕಳೆದ ದಿನಗಳ ಬಗ್ಗೆ ಬರೆಯುತ್ತಾರೆ. ಸಂಸ್ಕೃತ ಪಂಡಿತನಾಗಿಯೂ ಪಂಚಾಂಗ ಓದಲು ಬಾರದೆ ಇದ್ದುದರ ಬಗ್ಗೆ, ಜ್ಯೋತಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಹೇಳಲು ಬಾರದೇ ಇದ್ದುದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರಂತೆ. ಸೋದರ ರಾಜುಗೆ ಟೈಫೈಡ್ ಆದಾಗ, ಅಜ್ಜಿಯನ್ನು ಕರೆಸಿದಾಗ, ಅವರು ನೀಡಿದ ಧೈರ್ಯದ ಬಗ್ಗೆ ಬರೆಯುತ್ತಾರೆ. ಅಜ್ಜಿಯ ಮಾಮೂಲು ಜಗಳಗಳ ಬಗ್ಗೆಯೂ ಬರೆಯುತ್ತಾರೆ. ಇವರ ತಾಯಿಯ ಸೋದರತ್ತೆಯಾಗಿದ್ದ ಗುಂಡಮ್ಮ ಎರಡು ದಿನಕ್ಕೊಮ್ಮೆ ತಾಯಿಯನ್ನು ನೋಡಲು ಬರುತ್ತಿದ್ದರಂತೆ. ಅದಕ್ಕೆ ಅಜ್ಜಿಯ ಟೀಕೆ ಮಾರ್ಮಿಕವಾಗಿದೆ: "ಗುಂಡಮ್ಮ ಚಳಿಜ್ವರದ ಹಾಗೆ ದಿನ ಬಿಟ್ಟು ದಿನ ಬರ್ತಾಳೆ" ಅಂತ.

ಮೋಹನರಾಮ ಎಂಬ ಮೊಮ್ಮಗ ದೆಹಲಿ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದ ಪ್ರಾಧ್ಯಾಪಕರು. ಕನ್ನಡ ಸಾಹಿತ್ಯದಲ್ಲಿ ಅಭಿರುಚಿಯುಳ್ಳವರು. ಕನ್ನಡದಲ್ಲಿ ಪ್ರಕಟವಾದ ಒಳ್ಳೆಯ ಪುಸ್ತಕ ಓದಿ, ಅವುಗಳನ್ನು ಅಮೇರಿಕೆಯಲ್ಲಿರುವ ಸೋದರ ರಾಜಗೋಪಾಲರಿಗೆ ಕಳಿಸುವರು. (ನಾನು ಅಮೇರಿಕೆಯಲ್ಲಿದ್ದಾಗ ಅವರು ಭೈರಪ್ಪನವರ ಮಂದ್ರ ಕಾದಂಬರಿಯನ್ನು ಕಳಿಸಿದ್ದರು.) ಮೋಹನರಾಮ ಅಜ್ಜಿಯ ನೆನಪನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಬಣ್ಣಿಸುತ್ತಾರೆ. ಬೇಸಿಗೆಯ ರಜೆಯಲ್ಲಿ ನಡೆದ ಒಂದು ಶಿಬಿರದಲ್ಲಿ ಭಾಗವಹಿಸಲು ಮೈಸೂರಿಗೆ ಬಂದಿದ್ದರಂತೆ. ಇವರ ತಾಯಿ ಹಾಗೂ ತಂದೆ ಆಗ ತೀರ್ಥಹಳ್ಳಿಯಲ್ಲಿರುತ್ತಿದ್ದರಂತೆ. ಅಜ್ಜಿ ಮೈಸೂರ ಮನೆಯಲ್ಲಿ ಒಬ್ಬರೆ ಇದ್ದರು. ಒಂದು ಭಾನುವಾರ ತಾವೇ ವಿಶೇಷ ಪಾಕ ತಯಾರಿಸಿ ಗೋವಿಂದರಾಜು ಎಂಬ ಮಿತ್ರನನ್ನು ಊಟಕ್ಕೆ ಕರೆದಿದ್ದರಂತೆ. ತಾವು ಮಾಡಿದ ಅಡುಗೆಯ ರಿಪೋರ್ಟ ಅಜ್ಜಿಗೆ ಕೊಟ್ಟರಂತೆ. ಮಿತ್ರನಿಗೆ ಅಜ್ಜಿಯ ಹದ್ದಿನ ಕಣ್ಣಿನ ಬಗ್ಗೆ ಎಚ್ಚರಿಸಿ ಊಟದ ತಟ್ಟೆ ಊಟವಾದ ಮೇಲೆ ಚೆನ್ನಾಗಿ ತೊಳೆಯಲು ಹೇಳಿದರು. ಸೀಗೆಕಾಯಿ ಹಾಕಿ ತಟ್ಟೆ ಥಳಥಳಿಸುವಂತೆ ತೊಳೆದು ಮಿತ್ರ ಅಜ್ಜಿಗೆ ತೋರಿಸಿ, ನೋಡಿ ಅಜ್ಜಿ ಹೇಗೆ ತೊಳೆದಿದ್ದೇನೆ?' ಎಂದನಂತೆ. ಆಗ ಅಜ್ಜಿ ದೂರದಿಂದಲೇ ಚೆನ್ನಾಗಿ ತೊಳೆದದ್ದನ್ನು ನೋಡಿ ಮೆಚ್ಚಿದ್ದನ್ನು ಹೇಳಿದರೇನೊ ನಿಜ, ಆದರೆ ಅವನ ಎಡಗಾಲಿನ ಕಿರುಬೆರಳ ಮೇಲೆ ಒಂದು ಅನ್ನದ ಒಂದು ಕಾಳು ಉಳಿದಿದೆ (ಮುಸುರೆ), ಅದನ್ನು ತೊಳೆದುಕೊಂಡುಬಾ ಎಂದೂ ಹೇಳಿದ್ದರಂತೆ. ಮಡಿ ಹೆಂಗಸರಿಗೆ ಇಂಥ ಸೂಕ್ಷ್ಮ ದೃಷ್ಟಿ ಸಹಜ ಎನ್ನಿಸುತ್ತದೆ. ಮೋಹನ ರಾಮ ಅವರದು ಪ್ರೇಮವಿವಾಹ. ತಮ್ಮ ಜೊತೆಗೆ ರಿಸರ್ಚ್ ಮಾಡುತ್ತಿದ್ದ ಮಾನಸಿ ಘೋಷ ಎಂಬವಳನ್ನು ಮದುವೆಯಾಗಲು ಹೊರಟಾಗ ಮನೆಯಲ್ಲಿ ವಿರೋಧವಿತ್ತಂತೆ. ನಂತರ ಒಪ್ಪಿಗೆ ದೊರೆತು ಎಲ್ಲ ಸರಿ ಹೋಗಿತ್ತು. ಪತ್ನಿಯೊಂದಿಗೆ ಮೊದಲ ಸಲ ಮೈಸೂರಿಗೆ ಬಂದಾಗ ಇವರ ಬಂಗಾಲಿ ಪತ್ನಿ ಅಜ್ಜಿಗೆ ಬಾಗಿ ಪಾದಸ್ಪರ್ಶ ಮಾಡಿ ನಮಸ್ಕರಿಸಿದಳಂತೆ. ಆಗ ಅಜ್ಜಿ ಹೇಳಿದರು: "ಎಲ್ಲಿ ಬೆಳೆದಿದ್ದರೇನು, ಯಾವ ಜಾತಿಯವಳಾದರೇನು, ಅವಳ ಅಣ್ಣಂದಿರು ಅತ್ತಿಗೆಯವರು ಅವಳಿಗೆ ವಿದ್ಯಾಬುದ್ಧಿ ಕೊಡಿಸಿದ್ದಾರೆ. ಅಹಂಕಾರ ಹೇಳಿಕೊಟ್ಟಲ್ಲ. ದೀರ್ಘ ಸುಮಂಗಲೀ ಭವ." ಈ ಉದ್ಗಾರ ಅಜ್ಜಿಯ ಉದಾರ ಬುದ್ಧಿಯನ್ನು ತೋರಿತ್ತು.

ಕಸ್ತೂರಿ ಸುಬ್ರಮಣ್ಯಂ ಅವರು ಬರೆಯುತ್ತಾರೆ, ನಮ್ಮ ಅಜ್ಜಿ ಒಂದು ಶತಮಾನದಷ್ಟು ಹಳೆಯ ಕಾಲದವರಾದರೂ ಹೊಸ ವಿಚಾರದಲ್ಲಿ ಅಪಾರ ಕುತೂಹಲ. ಪ್ರಚಲಿತ ವಿಚಾರಗಳ ಬಗ್ಗೆ ಬಹಳ ಆಸಕ್ತಿ. ಸಿಟಿ
ಪೇಪರ್‌ನಲ್ಲಿ ಏನು ಸಮಾಚಾರ ಎಂದು ದಿನವೂ ಕೇಳಿ ತಿಳಿಯುತ್ತಿದ್ದರು. ಅವರಿಗೆ ಸ್ತ್ರೀಶಿಕ್ಷಣದ ಬಗ್ಗೆ ಪ್ರಗತಿಗಾಮಿ ವಿಚಾರವಿತ್ತಂತೆ. ತಮ್ಮ ಕಾಲದ ವಿಧವೆಯರ ದುಃಸ್ಥಿತಿಯನ್ನು ನೆನೆದು, ಈ ಕಾಲವೇ ವಾಸಿ, ಗಂಡ ಹೋದವರನ್ನು ಹಿಂದಿನಂತೆ ಹಿಂಸಿಸುವುದಿಲ್ಲಮ್ಮ ಎಂದು ಹೇಳುತ್ತಿದ್ದರಂತೆ. ಕಲಾಭಿಮಾನ, ಹಾಡುಗಾರಿಕೆ, ನೃತ್ಯ ಇವುಗಳು ಸಂಪ್ರದಾಯಸ್ಥ ಕುಟುಂಬಗಳಲ್ಲಿ ಸಲ್ಲವು ಎಂಬ ನಂಬುಗೆ ಬಲವಾಗಿದ್ದ ಕಾಲದಲ್ಲಿ ಅಜ್ಜಿಗೆ ಸಂಗೀತವೆಂದರೆ ಪ್ರಾಣವಾಗಿತ್ತು. ಆರತಿ ಹಾಡು, ಹಸೆಗೆ ಕರೆಯುವ ಹಾಡು, ಉರುಟಣೆ ಹಾಡು, ಬೀಗರನ್ನು ಹಂಗಿಸುವ ಹಾಡು ಇತ್ಯಾದಿ ನೂರಾರು ಹಾಡುಗಳು ಅಜ್ಜಿಯ ಭಂಡಾರದಲ್ಲಿದ್ದವಂತೆ. 'ನನ್ಗೆ ಬರುವ ಹಾಡುಗಳನ್ನು ಕಲಿಯಿರಿ, ನನ್ನೊಂದಿಗೆ ಅವು ಕಣ್ಮರೆಯಾದಾವು' ಎನ್ನುತ್ತಿದ್ದರಂತೆ. ಅಜ್ಜಿಯ ಮಾತಿನ ವರಸೆ ಸ್ವಾರಸ್ಯಕರವಾಗಿತ್ತಂತೆ. ಅವರ ಮಾತಿನಲ್ಲಿ ನೂರಾರು ಗಾದೆಗಳು ನಾಣ್ನುಡಿಗಳು ನುಸುಳುತ್ತಿದ್ದವಂತೆ. ಎರಡನೆಯ ದೊಡ್ದಮ್ಮನಿಗೆ, ನೀನು ಲಾಯರ್ ಹೆಂಡತಿಯಾದರೆ ನಾನು ಲಾಯರ್ ತಾಯಿ ಕಣೇ ಎಂದು ದಬಾಯಿಸುತ್ತಿದ್ದರಂತೆ.

ಎಚ್.ವೈ.ರಾಜಗೋಪಾಲ ಅವರು ಬಹಳ ವಿವರವಾಗಿ ಅಜ್ಜಿಯ ಬಗ್ಗೆ ಬರೆಯುತ್ತಾರೆ. ಇವರು ಹತ್ತೊಂಬತ್ತು ವರ್ಷ ಅಜ್ಜಿಯ ಜೊತೆಗಿದ್ದರು. ಕೆಲ ಕಾಲ ಅಜ್ಜಿ ಬೇರೆ ರೂಮ್ ಮಾಡಿಕೊಂಡಿದ್ದರ ಬಗ್ಗೆಯೂ ಬರೆಯುತ್ತಾರೆ. 1942ರಲ್ಲಿ ಗಾಂಧೀಜಿಯವರ ಕ್ವಿಟ್ ಇಂಡಿಯಾ ಚಳವಳಿ ಮೈಸೂರನ್ನೂ ತಲುಪಿದಾಗ ಹಿರಿಯ ಅಣ್ಣ ಶೌರಿ ಕಾಲೇಜು ವಿದ್ಯಾರ್ಥಿಯಾಗಿದ್ದ. ಅವನೂ ಭಾಗವಹಿಸಿದ್ದ. ಅವನನ್ನು ಪೋಲೀಸರು ಹಿಡಿದುಕೊಂಡು ಹೋದರು ಎಂಬ ಸುದ್ದಿ ಕೇಳಿ ಅಜ್ಜಿಗೆ ಕಳವಳವಾಗಿತ್ತಂತೆ. ಮೊಮ್ಮಗನನ್ನು ಬೇಡಿಹಾಕಿ ಕರೆದುಕೊಂಡು ಹೋದರೇನು ಎಂದು ಅಜ್ಜಿ ಕೇಳಿದ್ದರು. ಇತರ ಕೈದಿಗಳಂತೆ ಬೇಡಿಹಾಕಿ ಎಳೆದುಕೊಂಡು ಹೋಗದೇ ಮರ್ಯಾದೆಯಾಗಿ ವ್ಯಾನಿನಲ್ಲಿ ಕರಕೊಂಡು ಹೋದರು ಎಂಬ ಸುದ್ದಿ ತಿಳಿದಾಗ ಅಜ್ಜಿಯ ಕಳವಳ ದೂರವಾಗಿತ್ತಂತೆ. ಅಜ್ಜಿಯ ಮಾತಿನ ವೈಖರಿಯ ಬಗ್ಗೆ ಬರೆಯುತ್ತಾರೆ. ಅವರು ನಿಧಾನವಾಗಿ ಏಳುತ್ತಿದ್ದರು, ಊಟಕೂಡ ನಿಧಾನ. ಇದನ್ನು ಟೀಕಿಸುತ್ತ ಗುಂಡವ್ವ ಅಂದಿದ್ದರಂತೆ, "ಅಜ್ಜಿ, ನಿಮ್ಮ ಊಟ ಇಷ್ಟು ನಿಧಾನವಾಗುತ್ತದಲ್ಲ, ದೇಹ ಹೇಗೆ ತಡೆಯುತ್ತದೆ?" ಆಗ ಅಜ್ಜಿ ಕೊಟ್ಟ ಮಾರ್ಮಿಕ ಉತ್ತರ ಹೀಗಿತ್ತಂತೆ, "ನಮ್ಮ ದೇಹ ಒಂದು ವೀಣೆ ಇದ್ದ ಹಾಗೆ, ಅದು ನುಡಿಸಿದಂತೆ ನುಡಿಯುತ್ತೆ." ಅಜ್ಜಿಯ ಅಪಾರ ಜ್ಞಾಪಕಶಕ್ತಿಯ ಬಗ್ಗೆ, ಅವರ ಸಂಗೀತ ಪ್ರೇಮದ ಬಗ್ಗೆ ಬರೆಯುತ್ತಾರೆ. ಒಬ್ಬ ಹಾಡುಗಾರರಿಗೆ ತಮ್ಮ ಫರ್‌ಮಾಯಿಶ್ ಎಂದು ಆ ದಿನಗಳಲ್ಲಿ ತಾವು ರೇಡಿಯೊದಲ್ಲಿ ಕೇಳಿದ್ದ ಮೂಕೇಶನ ಟೂಟೇನಾ ದಿಲ್ ಟೂಟೇನಾ ಸಿನೇಗೀತ ಹಾಡಲು ಕೇಳಿದ್ದರಂತೆ. ಅಜ್ಜಿಗೆ ಮೂರು ಜನ ಗಂಡುಮಕ್ಕಳು. ಅವಳಿಂದಾಗಿ ಎಲ್ಲರಿಗೂ ಸಂಗೀತದಲ್ಲಿ ಒಲವು ಮೂಡಿತ್ತಂತೆ. ಇವರ ತಂದೆಯನ್ನು(ನರಸಿಂಹಂ ಅವರನ್ನು) ದೇವಡು ಎಂದು ಕರೆಯುತ್ತಿದ್ದರಂತೆ. ದೇವಡು, ಈ ಹಾಡಿನಲ್ಲಿ ಹೀಗಂತಾರಲ್ಲ, ಅದರ ಅರ್ಥವೇನು? ಎಂದು ಕೇಳುತ್ತಿದ್ದರಂತೆ. ಅಜ್ಜಿ ಇವರ ತಂದೆಯ ಮನೆಯಲ್ಲೇ ಹೆಚ್ಚಾಗಿ ವಾಸಿಸುತ್ತಿದ್ದರಂತೆ. ಅದಕ್ಕೆ ಅವರು ಕೊಡುವ ಕಾರಣ ಮೋಜಿನದಾಗಿತ್ತು. ಇವರ ತಂದೆ ಮಗುವಾಗಿದ್ದಾಗ ಆರು ವರ್ಷ ಮೊಲೆಹಾಲು ಕುಡಿದಿದ್ದರಂತೆ. (ತಾಯಿಯ ಮೊಲೆಹಾಲು ದೀರ್ಘಕಾಲ ಕುಡಿದ ಮಕ್ಕಳು ಹೆಚ್ಚು ರೋಗನಿರೋಧಕ ಶಕ್ತಿ ಪಡೆದಿರುತ್ತಾರಂತೆ. ಇದು ವೈಜ್ಞಾನಿಕವಾಗಿ ಸಿದ್ಧವಾಗಿದೆಯಂತೆ. ಮತ್ತೂರ ಕೃಷ್ಣಮೂರ್ತಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಇದರ ಪ್ರಸ್ತಾಪ ಮಾಡುತ್ತ ತಾವು ಮೂರು ವರ್ಷದ ಬಾಲಕನಾಗಿರುವವರೆಗೆ ತಮ್ಮ ತಾಯಿಯ ಹಾಲು ಕುಡಿದ ಬಗ್ಗೆ ಬರೆಯುತ್ತಾರೆ. ನರಸಿಂಹಂ ಅವರು ಆರು ವರ್ಷ ತಾಯಿಯ ಹಾಲು ಕುಡಿದಿದ್ದರು ಎಂದರೆ ಅವರದು ಒಂದು ವಿಕ್ರಮವೆಂದೇ ಹೇಳಬೇಕು.) ಅಜ್ಜಿ ಇವರ ತಂದೆಯ ಬಳಿಯಲ್ಲೇ ಹೆಚ್ಚುಕಾಲ ಇದ್ದರು ಎಂಬುದರ ಪ್ರಸ್ತಾಪ ಮಾಡುತ್ತ, ಅಜ್ಜಿ ಹೇಳುತ್ತಿದ್ದರಂತೆ, "ದೇವಡು, ನೀನೇ ಉಳಿದವರೆಲ್ಲರಿಗಿಂತ ನನ್ನ ಋಣ ತಿಂದಿರುವವನು, ಅದಕ್ಕೇ ನೀನೇ ನೋಡಿಕೊಳ್ಳಬೇಕು ನನ್ನ." (ಹೆಚ್ಚು ವರ್ಷ ಹಾಲು ಕುಡಿಸಿದ್ದನ್ನು ಇಲ್ಲಿ ನೆನೆಯುತ್ತಿದ್ದರು). ಅಜ್ಜಿ ವೈದ್ಯದಲ್ಲಿ ನಿಪುಣರು ಎಂಬ ವಿಷಯ ಪ್ರಸ್ತಾಪಿಸಿ ಅವರು ಖರ್ಜೂರದ ವೈದ್ಯಕೀಯ ಗುಣಗಳನ್ನು ಅರಿತಿದ್ದರೆಂದು ಬರೆಯುತ್ತ ಒಮ್ಮೆ ಹುಳಿಯಲ್ಲೇ ಖರ್ಜೂರ ಬೇಯಿಸಿ ಸೇವಿಸಿದ್ದ ಬಗ್ಗೆ ಬರೆಯುತ್ತಾರೆ.

ನೀರಜ ಅಚ್ಯುತರಾವ್ ಎಂಬ ಮೊಮ್ಮಗಳು ಅಜ್ಜಿಯ ಬಗ್ಗೆ ಬರೆದ ಲೇಖನ ಬಹಳ ಸ್ವಾರಸ್ಯಕರವಾಗಿದೆ. ಇದು ಅವರ ಜೀವನದ ಕೊನೆಯ ದಿನಗಳ ಚಿತ್ರಣವನ್ನೂ ನೀಡುತ್ತದೆ. ಅಜ್ಜಿ ಕನ್ನಡ, ತೆಲುಗು, ಸಂಸೃತ, ಮರಾಠಿ, ಹಿಂದಿ ಹಾಡುಗಳನ್ನು ಹಾಡುತ್ತಿದ್ದರಂತೆ. ಹೆಂಗಳೆಯರು ಹೊಸ ಊರಿಗೆ ಹೋದರೆ ಒಂದು ಸೀರೆ ಕೊಂಡು ತರುವಂತೆ ಅಜ್ಜಿ ಹೊಸ ಊರಿಗೆ ಹೋದಾಗ ಒಂದು ಹೊಸ ಹಾಡು ಕಲಿತು ಬರುತ್ತಿದ್ದರಂತೆ. ಮೈಸೂರು ಅರಮನೆ ಬ್ಯಾಂಡಿನ ಬಹುಭಾಷೆ ಬೆರೆತ ಹಾಡು ಅವರ ಜ್ಞಾಪಕದಲ್ಲಿತ್ತಂತೆ. ಅಜ್ಜಿ ಚಿಕ್ಕವರಾಗಿದ್ದಾಗ ವಾಗ್ಗೇಯಕಾರ ಮೈಸೂರು ಸದಾಶಿವರಾಯರನ್ನು ಕಂಡಿದ್ದರು, ಅವರ ಹಾಡುಗಳನ್ನು ಕಲಿತಿದ್ದರು. ಸಂಗೀತ ಕಲಾಭಿವರ್ಧಿನಿ ಸಭೆಯವರು ಮೈಸೂರು ಸದಾಶಿವರಾಯರ ಕೃತಿಗಳು ಎಂಬ ಪುಸ್ತಕವನ್ನು ಪ್ರಕಟಿಸಿದಾಗ ಅಜ್ಜಿಯ ಸ್ಮರಣೆಯಲ್ಲಿದ್ದ ಎರಡು ಅಪೂರ್ವ ಹಾಡುಗಳು ಆ ಪುಸ್ತಕದಲ್ಲಿ ಪ್ರಕಟವಾಗಿದ್ದವು. ಆ ಪುಸ್ತಕ ಪ್ರಕಟವಾದ ಎಷ್ಟೋ ವರ್ಷಗಳ ನಂತರ (1960ರಲ್ಲಿ) ಒಂದು ದಿನ ಮಗನನ್ನು ಕರೆದು, "ದೇವಡು, ಒಂದು ಪೆನ್ನು ಕಾಗದ ತೆಗೆದುಕೊಂಡು ಬಾ ಬೇಗ. ನನಗೆ ಸದಾಶಿವರಾಯರ ಹಾಡೊಂದು ಜ್ಞಾಪಕಕ್ಕೆ ಬಂದಿದೆ. ಮತ್ತೆ ಅದು ಮರೆತು ಹೋಗುವುದರಲ್ಲಿ ಬರೆದುಕೋ" ಎಂದರಂತೆ. ಅವರು ಬರೆದುಕೊಂಡರು. ಅದುವೆ ಕಾಲವರ್ಧಿನಿ ರಾಗದ 'ಪಾಹಿಪಾಹಿ ಶ್ರೀ ಗಜಾನನಾ' ಎಂಬ ಕೃತಿ. ಆ ವರ್ಷ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ವಾರ್ಷಿಕೋತ್ಸವದಲ್ಲಿ ಇದನ್ನು ಹಾಡಲು ಅವಕಾಶ ಬೇಡಿ ಪತ್ರ ಬರೆದಿದ್ದರಂತೆ. ಅಕಾಡೆಮಿಯವರು ಸಂತೋಷದಿಂದ ಒಪ್ಪಿದ್ದರಂತೆ. ಆದರೆ ಅದೇ ಡಿಸೆಂಬರ್ ತಿಂಗಳಲ್ಲಿ 97 ವರ್ಷದ ಅವರ ತಾಯಿ (ಅಜ್ಜಿ) ತೀರಿಹೋದರು, ಅವರಿಗೆ ಮದ್ರಾಸಿಗೆ ಹೋಗಲು ಸಾಧ್ಯವಾಗಲಿಲ್ಲವಂತೆ. ಮುಂದೆ ಆ ಅಪೂರ್ವ ಕೃತಿಯು ದಿ ಜರ್ನಲ್ ಆಫ್ ಮ್ಯುಸಿಕ್ ಅಕಾಡೆಮಿಯಲ್ಲಿ, A Rare and Unpublished Kriti of Mysore Sadashiva Rao ಎಂಬ ಲೇಖನದೊಂದಿಗೆ ಪ್ರಕಟವಾಯಿತಂತೆ.

ಅಜ್ಜಿಯ ಕೊನೆಯ ಸಂದೇಶ ಅವರ ಆಶೀರ್ವಾದವಾಗಿತ್ತು. ನಮ್ಮ ಬಂಧುಗಳು ಯಾರ್ಯಾರಿದ್ದಾರೋ, ಕೊಟ್ಟಮನೆ, ತಂದ ಮನೆ, ಎಲ್ಲರಿಗೂ ನನ್ನ ಆಶೀರ್ವಾದ ತಿಳಿಸಿಬಿಡಿ. ನಮ್ಮ ನೆಂಟರೆಲ್ಲರ ಪೈಕಿ ನಾನೇ ಹಿರಿಯವಳು. ನನಗಿಂತ ಎಲ್ಲರೂ ಕಿರಿಯರು. ಎಲ್ಲರೂ ಚೆನ್ನಾಗಿರಲಿ. ಎಲ್ಲರಿಗೂ ನನ್ನ ಆಶೀರ್ವದಗಳು." ಅಜ್ಜಿ ಕೊನೆಯ ಉಸಿರು ಎಳೆದಾಗ ಒಂದು ನಿಧಿಯನ್ನು ಕಳೆದುಕೊಂಡ ಅನುಭವ ಸಂಬಂಧಿಕರಿಗೆ ಆಪ್ತರಿಗೆ ಆದುದರಲ್ಲಿ ಸಂದೇಹವಿಲ್ಲ. ಈ ಪುಸ್ತಕ ಓದುತ್ತಿರುವಂತೆ ನಾನೊಂದು ಹಳೆಯ, ಆದರೂ ಹೊಚ್ಚ ಹೊಸ ಪ್ರಪಂಚದಲ್ಲಿದ್ದಂತೆ ಭಾಸವಾಯಿತು. ಇಂಥದೊಂದು ಪುಸ್ತಕ ಓದಲು ಎರವಲುಕೊಟ್ಟ ಮಿತ್ರ ಶ್ರೀನಿವಾಸ ರಾವ್‌ಗೆ ನಾನು ಉಪಕೃತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+