ಚಿಂಟೂ ಜೊತೆ ಬೆಳೆಯಲಿದೆ ಮಕ್ಕಳ ನಂಟು!
"ಇದು ನಮ್ಮ ಏರಿಯಾ" ಅಂತ ಚಿಕ್ಕಮಕ್ಕಳ ಕಲರವದ ಹೊಸ ಜಾಹೀರಾತನ್ನು ನೀವು ಟಿ.ವಿಯಲ್ಲಿ ನೋಡ್ತಿರಬಹುದು, ಅದೇ ಗುರು! ಕನ್ನಡದ ಹೊಸವಾಹಿನಿ ಶುರುವಾಗಿದೆಯೆಲ್ಲಾ ಚಿಂಟೂ ಟಿ.ವಿ ಅಂತ, ಅದರ ಜಾಹೀರಾತು ಅದು. ಯಾವ್ದಪ್ಪಾ ಈ ಚಿಂಟೂ ಟಿ.ವಿ. ಅಂತೀರಾ?
ಇದು ಸನ್ ಟಿ.ವಿಯ ಹೊಸವಾಹಿನಿ, ದಿನದ 24 ಗಂಟೆಯೂ ಕನ್ನಡದಲ್ಲಿ ಕಾರ್ಯಕ್ರಮಗಳನ್ನು ಕೊಡುತ್ತದಂತೆ. ಇದನ್ನು ಚಿಕ್ಕಮಕ್ಕಳಿಗೆ ಅಂತ ಮಾಡಿದಾರಂತೆ. ಇದರಲ್ಲಿ ಬರೀ ಕಾರ್ಟೂನುಗಳದ್ದೇ ರಾಜ್ಯಭಾರ. ಕನ್ನಡದಲ್ಲಿ ಬರೋ ಈ ಚಾನೆಲ್ ಕರ್ನಾಟಕದಲ್ಲಿ ಕಾರ್ಟೂನ್ ನೆಟವರ್ಕ್, ಪೋಗೊ ಮುಂತಾದ ವಾಹಿನಿಗಳಿಗೆ ಸಡ್ಡು ಹೊಡೆಯೊಕ್ಕೆ ಅಂತಲೇ ತಯಾರಾಗಿ ಬಂದಿದೆ.
ಇನ್ಮುಂದೆ ಟಾಮ್ ಅಂಡ್ ಜೆರ್ರಿ ಚೆಲ್ಲಾಟ ಕನ್ನಡದಲ್ಲೇ!
ಹೌದೂ ಗುರು! ಇನ್ಮುಂದೆ ಟಾಮ್ ಮತ್ತು ಜೆರ್ರಿಗಳ ಚಿನ್ನಾಟವಿರಲೀ, ಸೂಪರ್ ಮ್ಯಾನಿನ ಹಾರಾಟವಿರಲೀ, ಸ್ಪೈಡರ್ ಮ್ಯಾನಿನ ತೂಗಾಟವಿರಲೀ ಎಲ್ಲಾನೂ ಕನ್ನಡದಲ್ಲಿ ನೋಡಬೌದು. ಡೊರಾ, ಪೋಕಿಮಾನ್, ಗಾಡ್ಜೀಲ್ಲಾ, ಪವರ್ ಪಫ್ ಗರ್ಲ್ಸ ಅನ್ನೋ ಕಾರ್ಟುನ್ಗಳು ಕನ್ನಡ ಮಾತನಾಡುತ್ತೆ. ಯಾಕಂದ್ರೆ ಚಿಂಟು ಟಿ.ವಿ. ಸಂಪೂರ್ಣ ಕನ್ನಡವಾಹಿನಿ.
ಇದುವರೆಗೂ ಕಾರ್ಟೂನುಗಳ ನಿಜವಾದ ಸವಿಯನ್ನು ಸಂಪೂರ್ಣವಾಗಿ ಸವಿಯಕ್ಕೆ ತೊಡಕಾಗಿದ್ದ "ಕನ್ನಡದಲ್ಲಿಲ್ಲ, ಅದಕ್ಕೇ ಪೂರ್ತಿ ಅರ್ಥವಾಗ್ತಿಲ್ಲಾ" ಅನ್ನೋ ಕೊರತೆ ಇನ್ಮುಂದೆ ಇದರಿಂದಾಗಿ ಅಳಿಯುತ್ತೆ. "ಕನ್ನಡಿಗರೂ ಉನ್ನತ ಗುಣಮಟ್ಟದ ವಿಶ್ವದರ್ಜೆಯ ಕಾರ್ಟೂನುಗಳನ್ನು ಸೃಷ್ಟಿಸೋ ಅನಿಮೇಷನ್ ತಂತ್ರಜ್ಞಾನದಲ್ಲಿ ಪರಿಣಿತಿ ಸಾಧಿಸಬೇಕು" ಅನ್ನೋ ಮಾತಿನ ಜೊತೆಯಲ್ಲೇ ಕನ್ನಡಿಗರ ಮನರಂಜನೇನಾ ಕನ್ನಡದಲ್ಲೇ ಪಡ್ಯೋದು ನಮ್ಮ ಮೂಲಭೂತ ಹಕ್ಕು ಅನ್ನೋದನ್ನೂ ಈ ವಾಹಿನಿ ಸಾರುತ್ತಾ ಇದೆ ಗುರು!(ಸ್ನೇಹಸೇತು: ಏನ್ಗುರು?)












Click it and Unblock the Notifications