ಎಲ್ಲರಂತೆ ನಾನೂ ಹಣವನ್ನು ಪ್ರೀತಿಸುತ್ತೇನೆ

ನಿಮಗೆ ಯಾರೆಂದ್ರೆ ಬಲು ಇಷ್ಟ? ವೈಯಕ್ತಿಕವಾಗಿ ಹಾಗೂ ವೃತ್ತಿಯ ದೃಷ್ಟಿಯಿಂದ ಯಾರನ್ನು ಇಷ್ಟಪಡುತ್ತೀರಿ? ಎಂದು ಅನೇಕರು ಕೇಳುತ್ತಾರೆ. ಇದಕ್ಕೆ ನನ್ನ ಉತ್ತರ ಇಷ್ಟೇ- ನಾನು ವೈಯಕ್ತಿಕವಾಗಿ ಹಾಗೂ ವೃತ್ತಿಯಿಂದಾಗಿ ಅನೇಕರನ್ನು ಹಚ್ಚಿಕೊಂಡಿದ್ದೇನೆ. ನನ್ನ ಹುಚ್ಚು, ಸಾಹಸ, ಹವ್ಯಾಸ ಹಾಗೂ ಉದ್ಯಮದ ದೆಸೆಯಿಂದ ನನಗೆ ಹೋದಲ್ಲೆಲ್ಲ ಸ್ನೇಹಿತರೇ, ವರ್ಜಿನ್ ಸಂಸ್ಥೆಯಲ್ಲಿ ಈಗ ವಿಶ್ವದಾದ್ಯಂತ 50 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಊರಿಗೆ ಹೋದರೂ ನಾನು ನಮ್ಮ ಕಚೇರಿಗೆ ಹೋಗಿ, ಸಿಬ್ಬಂದಿ ಜತೆ ಮಾತಾಡುತ್ತೇನೆ. ನನಗೆ ಅತೀವ ಸಮಾಧಾನ ಸಿಗುತ್ತದೆ. ಅವರು ನನ್ನ ವಿಸ್ತರಿತ ಬಾಹುಗಳು. ಸಂಬಳಕ್ಕಾದರೂ ನಾನು ರೂಪಿಸಿದ ಧ್ಯೇಯಕ್ಕಾಗಿ ದುಡಿಯುವವರು. ನನ್ನಲ್ಲಿ ನಂಬಿಕೆ ಹೊಂದಿರುವವರು. ಆ ಮೂಲಕ ನನ್ನ ನಂಬಿಕೆ ಸಾಕಾರಗೊಳಿಸುವವರು.
ನನ್ನ ಸಿಬ್ಬಂದಿ, ಕುಟುಂಬ ಹಾಗೂ ಸ್ನೇಹಿತರಂತೆ ನನಗೆ ಇಷ್ಟವಾಗುವವರೆಂದರೆ ಲಾಕರ್ ಏರ್‌ವೇಸ್ ಸಂಸ್ಥಾಪಕ ಫ್ರೆಡ್ಡಿ ಲಾಕರ್, 27 ವರ್ಷ ಜೈಲುವಾಸ ಅನುಭವಿಸಿದ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ, ದಕ್ಷಿಣ ಆಫ್ರಿಕಾದ ಮೊದಲ ಆಂಗ್ಲಿಕನ್ ಆರ್ಚ್‌ಬಿಶಪ್ ಡೆಸ್ಮಂಡ್ ಟುಟು, ಇಂಗ್ಲಿಷ್ ಮ್ಯೂಸಿಶಿಯನ್, ಗೀತರಚನೆಕಾರ ಹಾಗೂ ಮಾನವೀಯ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ಪೀಟರ್ ಗೇಬ್ರಿಯಲ್, ಬಾಹ್ಯಾಕಾಶ ಕ್ಷೇತ್ರದ ಜೀನಿಯಸ್ ಬರ್ಟ್‌ರುಟಾನ್... ಹೀಗೆ ಅನೇಕರು. ನನಗೆ ಎಲ್ಲ ದೇಶಗಳಲ್ಲೂ ಗೆಳೆಯರಿದ್ದಾರೆ. ಸಾಹಸ, ಬುದ್ಧಿವಂತಿಕೆ, ಲವಲವಿಕೆ, ಮಾನವೀಯ ಸಂಬಂಧಕ್ಕೆ ಬೆಲೆ ಕೊಡುವವರು ಎಲ್ಲಿಯೇ ಇರಲಿ, ಅವರು ಹೇಗೋ ನನಗೆ ಸ್ನೇಹಿತರಾಗುತ್ತಾರೆ. ಅವರಿಂದ ನಾನು ಪ್ರಭಾವಿತನಾಗುತ್ತೇನೆ.
![]() | |
| ಕನಸು ಕಾಣುವುದು ತಪ್ಪಲ್ಲ, ಆದರೆ ನನಸಾಗಿಸದಿರುವುದು : ರಿಚರ್ಡ್ ಬ್ರಾನ್‌ಸನ್ | |
![]() | |
ಪ್ರತಿಯೊಬ್ಬನಿಗೂ ತಾನು ಪಡೆಯುವ ಸಂಬಳ ತೃಪ್ತಿ ಕೊಡುವುದಿಲ್ಲ. ಇನ್ನೂ ಹೆಚ್ಚು ಹಣ ಬೇಕು. ಮನೆ ಇನ್ನಷ್ಟು ದೊಡ್ಡದಿರಬೇಕು, ಇನ್ನೂ ಒಳ್ಳೆಯ ಕಾರು ಬೇಕು ಎಂದೆಲ್ಲ ಅನಿಸುತ್ತದೆ. ಆದರೆ ಅದನ್ನು ಪಡೆಯಲು ನಾನೇನು ಮಾಡಬೇಕು, ನನ್ನ ಆಸೆಯನ್ನು ತೀರಿಸಿಕೊಳ್ಳುವುದು ಹೇಗೆ ಎಂದು ಯೋಚಿಸಿ ಕಾರ್ಯಪ್ರವೃತ್ತರಾಗುವುದಿಲ್ಲ. ಹೇಗೋ ಬದುಕನ್ನು ಸಾಗಿಸುತ್ತಾರೆ ಆದರೆ ಕನಸನ್ನು ಹಾಗೆ ಬೆಚ್ಚಗೆ ಇಟ್ಟುಕೊಂಡು ಒಳಗೊಳಗೇ ಕೊರಗುತ್ತಿರುತ್ತಾರೆ. ಕೊನೆಗೆ ಸಾಯುವಾಗ ಈ ಕೊರಗು ಕೊರಗಾಗಿಯೇ ಇರುತ್ತದೆ. ಎಷ್ಟೋ ಸಲ ಈ ಕೊರಗೇ ಅವರನ್ನು ಸಾಯಿಸುತ್ತದೆ. ನಾನು ಹೇಳೋದೇನೆಂದ್ರೆ ಜೀವನವನ್ನು ಇಡಿಯಾಗಿ ಬದುಕಿ. ಹಾಗೆ ಬದುಕುವ ಎಲ್ಲ ಸಾಧ್ಯತೆಗಳನ್ನು ಈಡೇರಿಸದೇ ಬಿಡಬೇಡಿ. ಕನಸು ಕಾಣುವುದು ತಪ್ಪಲ್ಲ. ಅದನ್ನು ಈಡೇರಿಸಿಕೊಳ್ಳದಿರುವುದು ತಪ್ಪು. ನಿಮಗೆ ನೀವು ಮೋಸ ಮಾಡಿಕೊಳ್ಳಬೇಡಿ. ಹುಸಿ ಕಾರಣ ನೀಡಿ ನಿಮಗೆ ನೀವೇ ನಂಬಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಡಿ. ಈ ಜಗತ್ತು ಹಣವಂತರದು ಮಾತ್ರ ಅಲ್ಲ. ಜಗತ್ತಿನ ವೈಭವಗಳನ್ನು ಸವಿಯಲು ನಿಮಗೆ ಹಣ ಬೇಕಾಗಬಹುದು. ಹಣ ಗಳಿಸದಿರುವಂತೆ ನಿಮಗೆ ನಿರ್ಬಂಧವನ್ನು ಯಾರೂ ಹಾಕುವುದಿಲ್ಲವಲ್ಲಾ?!
ಜೀವನದಲ್ಲಿ ಹಣವೊಂದೇ ಮುಖ್ಯ ಅಲ್ಲ' ಎಂದು ನಿಮಗೆ ನೀವು ನಂಬಿಸಿಕೊಳ್ಳುತ್ತೀರಿ. ಹಣವಂತರನ್ನು ಕಂಡು ಕರುಬುತ್ತೀರಿ. ಇಲ್ಲಿ ಹಣವನ್ನು ಸಾಧನೆಗೂ ಹೋಲಿಸಬಹುದು. ನನ್ನ ಅಪ್ಪ-ಅಮ್ಮ ನನಗಾಗಿ ವಿದ್ಯೆ, ಸಂಸ್ಕಾರ ನೀಡಿದ್ದನ್ನು ಬಿಟ್ಟರೆ ಏನನ್ನೂ ಕೊಡಲಿಲ್ಲ, ಕೂಡಿಡಲಿಲ್ಲ. ಆದರೆ ನನಗೆ ಹಣ, ಸಾಧನೆ, ಖ್ಯಾತಿ ಗಳಿಸಬೇಕೆಂಬ ತೆವಲು, ಗುಂಗು ಇತ್ತು. ಅದಕ್ಕಾಗಿ ಕಾರ್ಯತತ್ಪರನಾದೆ. ಕಟ್ಟಿದರೆ ಮಹಲನ್ನೇ ಕಟ್ಟಬೇಕು, ಇಡಿಯಾಗಿಯೇ ಬದುಕಬೇಕು ಎಂದು ಬ್ರಿಟನ್‌ನಲ್ಲಿಯೇ ಅತ್ಯಂತ ಅಪರೂಪವಾದ ನೆಕರ್ ಐಲ್ಯಾಂಡ್'ನ್ನು ಖರೀದಿಸಿದೆ. 74 ಎಕರೆ ದ್ವೀಪವೇ ನನ್ನ ಸಾಮ್ರಾಜ್ಯ. ಈ ದ್ವೀಪವನ್ನು 175,000 ಪೌಂಡ್ ನೀಡಿ ಖರೀದಿಸಿದೆ. ಆಗ ನನಗೆ ಬರೀ 28 ವರ್ಷ! ಈ ದ್ವೀಪದಲ್ಲಿ ನನ್ನ ಅತಿಥಿಗಳಿಗಾಗಿ 28 ರೂಮುಗಳಿವೆ. ಬಾಡಿಗೆಗೂ ರೂಮುಗಳನ್ನು ನೀಡುತ್ತೇನೆ. ಒಂದು ದಿನಕ್ಕೆ 25 ಲಕ್ಷ ರೂ. ಬಾಡಿಗೆ! ನಾನು ಅನುಭವಿಸುವ ಸುಖವನ್ನು ಇತರರೂ ಅನುಭವಿಸಬಹುದು. ಮನುಷ್ಯನಿಗೆ ಬದುಕಲು ತುಂಡುಭೂಮಿ ಇದ್ರೆ ಸಾಕು, ಕೊನೆಗೂ ಬೇಕಾಗಿರುವುದು ಆರಡಿ ನಾಲ್ಕಡಿ ತಾನೆ ಎಂದು ಹೇಳುವವರ ಜತೆ ನಾನು ವಾದ ಮಾಡುವುದಿಲ್ಲ, ಅದು ವೇಸ್ಟ್ ಆಫ್ ಟೈಮ್. ನನ್ನನ್ನು ನೋಡಿ ಸಂತಸಪಡಿ, ಕರುಬಬೇಡಿ. ನನ್ನ ಹಾಗೇ ಯಾರೂ ಬೇಕಾದರೂ ಆಗಬಹುದು. ಅದೇನು ಮಹಾ ಅಲ್ಲ. ಹಾಗೆ ಅಂದುಕೊಂಡು ಮಾತ್ರ ಕಾಲಕಳೆಯಬೇಡಿ. ಸಾಧನೆಯ ಶಿಖರದಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ. ಸಿಗುತ್ತೀರಿ ತಾನೆ?
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ














Click it and Unblock the Notifications